ಈ ಪುಟವನ್ನು ಪರಿಶೀಲಿಸಲಾಗಿದೆ
೨೧೦
ಭಾರತ ದರ್ಶನ

ಕೀಯ ಆಡಳಿತವೂ ಆರ್ಥಿಕ ನೀತಿಯೂ ದೇಶದ ಹೊರಗೆ ಬಹುದೂರದಿಂದ ನಿರ್ಧರವಾಗಲು ಆರಂಭವಾದದ್ದು ದೇಶದ ಇತಿಹಾಸದಲ್ಲಿ ಇದೇ ಮೊದಲು. ಭಾರತವು ಆಧುನಿಕ ಕಾಲದ ಒಂದು ಅಧೀನ ರಾಷ್ಟ್ರವಾಯಿತು. ತನ್ನ ದೊಡ್ಡ ಇತಿಹಾಸ ಪರಂಪರೆಯಲ್ಲಿ ಮೊಟ್ಟ ಮೊದಲು ಅದು ಪರದಾಸ್ಯಕ್ಕೆ ಸಿಕ್ಕಿತು.

ಇಂಡಿಯ ದೇಶದ ಮೇಲಿನ ಘಜ್ಜಿ ಮಹಮ್ಮದನ ದಂಡಯಾತ್ರೆಯು ಪರಕೀಯ ತುರ್ಕಿ ದಂಡ ಯಾತ್ರೆಯು ನಿಜ, ಸ್ವಲ್ಪ ಕಾಲ ಪಂಜಾಬ್ ಇಂಡಿಯದಿಂದ ಪ್ರತ್ಯೇಕವೂ ಆಯಿತು. ಹನ್ನೆರಡನೆಯ ಶತಮಾನದ ಕೊನೆಯಲ್ಲಿ ಬಂದ ಆ ಪ್ರನರ ವಿಷಯವು ಬೇರೆ ಇತ್ತು. ಭಾರತೀಯರಂತೆ ಅವರೂ ಇಂಡೋ-ಆರರ ಜನಾಂಗದ ಬುಡಕಟ್ಟಿಗೆ ಸೇರಿದವರು. ನಿಜವಾಗಿ ನೋಡಿದರೆ ಆಫ್ಘಾನಿಸ್ಥಾನ ಇಂಡಿಯದೇಶದ ಒಂದು ಭಾಗವಾಗಿತ್ತು. ಅವರ ಭಾಷೆಯಾದ ಸಷ್ಟೋ ಸಂಸ್ಕೃತ ಮೂಲದಿಂದ ಜನಿಸಿದ್ದು, ಭಾರತೀಯ ಸಂಸ್ಕೃತಿಯ ಸ್ಮಾರಕಗಳು ಮತ್ತು ಅವಶೇಷಗಳು-ಅದರಲ್ಲೂ ಮುಖ್ಯ ವಾಗಿ ಬೌದ್ದ ಕಾಲದವು-ಆಫ್ಘಾನಿಸ್ಥಾನದಲ್ಲಿರುವಷ್ಟು ಇ೦ಡಿಯದಲ್ಲಾಗಲಿ ಇಂಡಿಯದ ಹೊರಗೆ ಆಗಲಿ ಬೇರೆಲ್ಲಿಯೂ ಇಲ್ಲ. ಆಫ್ಘನರನ್ನು ಇಂಡೋ-ಆಫ್ಘನರೆಂದು ಕರೆಯಬೇಕಾದ್ದೇ ಸಹಜ. ಕಾಶ್ಮೀರದ ಪರ್ವತಕಣಿವೆಗಳ ಜನರು ಉಷ್ಣ ಪ್ರದೇಶದ ಮೈದಾನಗಳ ಜನರಿಗಿಂತ ಭಿನ್ನರಿರುವಂತೆ ಆಫೈನರಿಗೂ ಇಂಡಿಯದ ಮೈದಾನ ಪ್ರದೇಶದ ಜನರಿಗೂ ಭಿನ್ನತೆ ಇದೆ. ಈ ವ್ಯತ್ಯಾಸವಿದ್ದರೂ ಭಾರತೀಯ ವಿದ್ವತ್ತು ಮತ್ತು ಸಂಸ್ಕೃತಿಗೆ ಕಾಶ್ಮೀರವು ಒಂದು ಮುಖ್ಯ ಕೇಂದ್ರವಾಗಿದೆ. ತುಂಬ ಸುಸಂಸ್ಕೃತರೂ, ಕೃತಕ ಆಡಂಬರದ ಜೀವಿಗಳೂ ಆದ ಅರಬ್ಬಿ ಮತ್ತು ಪಾರಸಿ ಜನರಿಗೂ ಆಪ್ಪನ ರಿಗೂ ಸಹ ವ್ಯತ್ಯಾಸವಿತ್ತು. ತಮ್ಮ ಪರ್ವತವೇಗದಂತೆ ಕಠಿಣರೂ ಕ್ರೂರಿಗಳೂ ಇದ್ದರು. ಅಚಲ ಧರ್ಮಶ್ರದ್ದೆ ಯು ಇತ್ತು, ಬೌದ್ಧಿಕ ಪ್ರಯತ್ನದಲ್ಲಿ, ಮಾನಸಿಕ ಸಾಹಸಗಳಲ್ಲಿ ಆಸಕ್ತಿ ಇಲ್ಲದ ಯೋಧರಾ ಗಿದ್ದರು. ದಂಗೆ ಎದ್ದ ಜನರನ್ನು ಹತ್ತಿಕ್ಕುವದರಲ್ಲಿ ವಿಜಯೋನ್ಮತ್ತರಂತೆ ಆರಂಭದಲ್ಲಿ ಕ್ರೂರಿಗಳೂ ಕಠಿಣಹೃದಯರೂ ಆಗಿದ್ದರು.

ಆದರೆ ಸ್ವಲ್ಪ ಕಾಲದಲ್ಲಿ ಅವರೂ ಸೌಮ್ಯ ಸ್ವಭಾವ ತಾಳಿದರು, ಇಂಡಿಯ ಅವರ ನೆಲೆವೀಡಾ ಯಿತು. ಮಹಮ್ಮದನ ಕಾಲದ ದೂರದ ಘಜ್ಜೆ ಯ ಬದಲು ದೆಹಲಿ ಅವರ ರಾಜಧಾನಿಯಾಯಿತು. ಅವರ ಪೂರ್ವದ ನಾಡಾದ ಆಫ್ಘಾನಿಸ್ಥಾನವು ಅವರ ರಾಜ್ಯದ ಎಲ್ಲೆ ಯಲ್ಲಿಯೇ ಇತ್ತು. ಅವರೂ ಬಹು ಬೇಗ ಭಾರತೀಯರಾಗಿ ಇಲ್ಲಿಯೇ ಅನೇಕರನ್ನು ಮದುವೆಯಾದರುಅವರಲ್ಲಿ ಪ್ರಸಿದ್ದ ರಾಜನಾದ ಅಲ್ಲಾ ಉದ್ದೀನ್ ಖಿಲ್ಲಿ ಒಬ್ಬ ಹಿಂದುಮಹಿಳೆಯನ್ನು ಮದುವೆಯಾದನು. ಆತನ ಮಗನೂ ಅದೇ ರೀತಿ ಮಾಡಿದನು. ಅನಂತರ ಕೆಲವು ಅರಸರು ಕುತುಬುದಿನ್ ಐಬಕ್, ರಜಿಯಾ ಬೇಗಂ ಮತ್ತು ಅಲ್ಲ ಮಿಷ್ ತುರ್ಕಿಯವರಾಗಿದ್ದರು. ಆದರೆ ಅಧಿಕಾರಿಗಳು, ಸೈನಿಕರು, ಎಲ್ಲರೂ ಮುಖ್ಯವಾಗಿ ಅಪ್ಪನರೇ ಇದ್ದರು. ದೆಹಲಿನಗರವು ಸಾಮ್ರಾಜ್ಯದ ರಾಜಧಾನಿಯಾಗಿ ಅಭಿವೃದ್ಧಿಗೆ ಬಂದಿತು. ಮೊರಾಕೊದಿಂದ ಹೊರಟು ಕೈರೊ, ಕಾನ್ಸ್ಟಾಂಟಿನೋಪಲ್, ಚೀನಾವರೆಗೆ ಪ್ರವಾಸಮಾಡಿ ಅನೇಕ ಮಹಾನಗರಗಳನ್ನು ನೋಡಿದ ಇಬನ್ ಬಟೂಟ ಹದಿನಾಲ್ಕನೆಯ ಶತಮಾನದಲ್ಲಿ ದೆಹಲಿಯನ್ನು ವರ್ಣಿಸುತ್ತ “ ಪ್ರಪಂಚದ ಮಹಾನಗರಗಳಲ್ಲಿ ಒಂದು ” ಎಂದು ಉತ್ತೇಕ್ಷೆಮಾಡಿದ್ದಾನೆ.

ದೆಹಲಿಯ ಸುಲ್ತಾನರು ದಕ್ಷಿಣದ ಕಡೆ ವಿಸ್ತರಿಸಿದರು. ಚೋಳರಾಜ್ಯವು ಹೀನಸ್ಥಿತಿಗೆ ಬಂದಿತ್ತು. ಅದರ ಸ್ಥಾನದಲ್ಲಿ ವಿಶೇಷ ಸಮುದ್ರ ಬಲವುಳ್ಳ ಪಾಂಡ್ಯರು ಮಧುರೆಯನ್ನು ತಮ್ಮ ರಾಜಧಾನಿಯ ನ್ನಾಗಿ ಮಾಡಿಕೊಂಡು ಪೂರ್ವ ತೀರದ ಕಾಯಾಲದಲ್ಲಿ ದೊಡ್ಡ ಬಂದರನ್ನು ಕಟ್ಟಿಕೊಂಡು ಉನ್ನತ ಸ್ಥಿತಿಯಲ್ಲಿದ್ದರು. ರಾಜ್ಯ ಸಣ್ಣದಾದರೂ ದೊಡ್ಡ ವ್ಯಾಪಾರ ಕೇಂದ್ರವಾಗಿತ್ತು. ಮಾರ್ಕೊಪೋಲೋ ಚೀನಾದಿಂದ ಹಿಂದಿರುಗುವಾಗ ಎರಡು ಬಾರಿ ೧೨೮೮ರಲ್ಲಿ ಮತ್ತು ೧೨೯೩ರಲ್ಲಿ ಭೇಟಿಕೊಟ್ಟು “ ಮಹಾ ಗಂಭೀರನಗರ” ಎಂದೂ, ಅರೇಬಿಯಾ, ಚೀನಾ ದೇಶಗಳ ಅನೇಕ ಹಡಗುಗಳಿಂದ ಬಂದರು ತುಂಬಿರು ಕೈಂದೂ ವರ್ಣಿಸಿದ್ದಾನೆ. ಪೂರ್ವತೀರದಲ್ಲಿ ತಯಾರುಮಾಡುತ್ತಿದ್ದ ನಯವಾದ ಹತ್ತಿಯ ಬಟ್ಟೆಯ