ಈ ಪುಟವನ್ನು ಪರಿಶೀಲಿಸಲಾಗಿದೆ
ಹೊಸ ಸಮಸ್ಯೆಗಳು
೨೧೧

ಜೇಡನ ಪೊರೆಯಂತೆ ಇರುತ್ತಿದ್ದಿತೆಂದೂ ಬಣ್ಣಿಸಿದ್ದಾನೆ. ಮಾರ್ಕೊಪೋಲೋ ಇನ್ನೂ ಒಂದು ಆಶ್ಚರ್ಯದ ವಿಷಯವನ್ನು ತಿಳಿಸುತ್ತಾನೆ. ಅರೇಬಿಯಾ ಮತ್ತು ಪರ್ಷಿಯದಿಂದ ದಕ್ಷಿಣ ಭಾರತಕ್ಕೆ ಕುದುರೆಗಳನ್ನು ವಿಶೇಷ ಸಂಖ್ಯೆಯಲ್ಲಿ ಆಮದು ಮಾಡುತ್ತಿದ್ದರು. ದಕ್ಷಿಣ ಇಂಡಿಯದ ಹವಾಮಾನವು ಕುದುರೆ ಸಾಕಲು ಉತ್ತಮವಿರಲಿಲ್ಲ. ಕುದುರೆಗಳ ಉಪಯೋಗ ಸೈನ್ಯದಲ್ಲಿ ಹೆಚ್ಚಾಗಿ ಇತ್ತು. ಕುದುರೆ ಸಾಕುವ ಉತ್ತಮ ಕೇಂದ್ರಗಳು ಮಧ್ಯ ಮತ್ತು ಪಶ್ಚಿಮ ಏಷ್ಯದಲ್ಲಿದ್ದವು. ಪ್ರಾಯಶಃ ಮಧ್ಯ ಏಷ್ಯ ಜನಾಂಗಗಳ ಉತ್ತಮ ಯುದ್ದ ನೈಪುಣ್ಯತೆಗೆ ಇದೂ ಕಾರಣವಿರಬಹುದು. ಚಂಗಿಸ್ ಖಾನನ ಮೊಗಲರು ಉತ್ತಮ ಅಶ್ವಾರೋಹಿಗಳಾಗಿದ್ದರು. ಕುದುರೆಗಳೆಂದರೆ ಅವರಿಗೆ ಪ್ರಾಣ. ತುರ್ಕಿಯ ವರೂ ಒಳ್ಳೆಯ ಕುದುರೆಸವಾರರು, ಅರಬ್ಬಿ ಜನರ ಕುದುರೆಗಳ ಮಮತೆಯು ಲೋಕವಿಖ್ಯಾತವಿದೆ. ದಕ್ಷಿಣ ಮತ್ತು ಪಶ್ಚಿಮ ಭಾರತದಲ್ಲಿ, ಮುಖ್ಯವಾಗಿ ಕಾಥೇವಾಡದಲ್ಲಿ, ಕೆಲವು ಒಳ್ಳೆಯ ಕುದುರೆಸಾಕುವ ಸ್ಥಾನಗಳಿವೆ. ರಜಪೂತರಿಗೆ ತಮ್ಮ ಕುದುರೆಗಳೆಂದರೆ ಜೀವ, ಒಳ್ಳೆಯ ಕುದುರೆಗಾಗಿಯೇ ಅನೇಕ ಸಣ್ಣ ಯುದ್ದಗಳಾಗಿವೆ. ದೆಹಲಿ ಸುಲ್ತಾನನೊಬ್ಬ ರಜಪೂತ ಸೇನಾನಿಯೊಬ್ಬನ ಕುದುರೆಯನ್ನು ನೋಡಿ ಮೆಚ್ಚಿ ಕುದುರೆಯನ್ನು ಕೇಳಿದನಂತೆ, ಆದರಾ ಸೇನಾನಿಯು ಲೂದಿರಾಜನಿಗೆ “ ರಜಪೂತನಿಂದ ಮರುವಸ್ತುಗಳನ್ನು ನೀನು ಕೇಳಬಾರದು : ಅವನ ಕುದುರೆ, ಅವನ ಹೆಂಡತಿ ಮತ್ತು ಅವನ ಕತ್ತಿ.” ಎಂದು ಹೇಳಿ ಕುದುರೆಯನ್ನು ಓಡಿಸಿಕೊಂಡು ಹೋದನಂತೆ, ಆ ಮೇಲೆ ಒಂದು ಯುದ್ದವೇ ಆಯಿತು.

ಹದಿನಾಲ್ಕನೆಯ ಶತಮಾನದ ಕೊನೆಯಲ್ಲಿ ತುರ್ಕಿಯ ಅಥವ ತುರ್ಕಿ ಮಂಗೋಲರ ತೈಮೂರನು ಉತ್ತರದಿಂದ ದಂಡೆತ್ತಿ ಬಂದು ದೆಹಲಿಯ ಸುಲ್ತಾನರನ್ನು ಸದೆಬಡಿದನು. ಆತನು ಇ೦ಡಿಯದಲ್ಲಿ ಕೆಲವು ತಿಂಗಳು ಮಾತ್ರ ಇದ್ದನು. ದೆಹಲಿಗೆ ಬಂದವನೇ ಹಿಂದಿರುಗಿದನು. ಆದರೆ ತನ್ನ ದಾರಿ ಯುದ್ದಕ್ಕೂ ಕೊಂದ ಜನರ ತಲೆಬುರುಡೆಗಳ ರಾಶಿಯನ್ನು ಒಟ್ಟ ಭಯೋತ್ಪಾದನೆ ಮಾಡಿದನು. ದೆಹಲಿನಗರವೇ ಒಂದು ಸ್ಮಶಾನವಾಯಿತು. ಅದೃಷ್ಟವಶಾತ್ ಅವನು ಮುಂದುವರಿಯಲಿಲ್ಲ. ಪಂಜಾ ಬಿನ ಕೆಲವು ಭಾಗವೂ ದೆಹಲಿಯ ಅವನ ಈ ಕ್ರೂರಧಾಳಿಗೆ ಸಿಕ್ಕಿದವು.

ಈ ಸ್ಮಶಾನ ನಿದ್ರೆಯಿಂದ ಎಚ್ಚರಗೊಳ್ಳಲು ದೆಹಲಿಗೆ ಬಹಳ ಕಾಲ ಬೇಕಾಯಿತು. ಎಚ್ಚತ್ತಾ ಗಲೂ ಸಾಮ್ರಾಜ್ಯದ ರಾಜಧಾನಿಯಾಗಿ ಉಳಿಯಲಿಲ್ಲ. ತೈಮೂರನ ದಂಡಯಾತ್ರೆಯಿಂದ ಆ ಸಾಮ್ರಾಜ್ಯವು ಪುಡಿಪುಡಿಯಾಗಿತ್ತು; ದಕ್ಷಿಣದಲ್ಲಿ ಕೆಲವು ಸ್ವತಂತ್ರ ರಾಜ್ಯಗಳಿದ್ದವು. ಇದಕ್ಕೂ ಮುಂಚೆಯೇ ಹದಿನಾಲ್ಕನೆಯ ಶತಮಾನದ ಆದಿಯಲ್ಲಿ ಎರಡು ದೊಡ್ಡ ರಾಜ್ಯಗಳು ಹುಟ್ಟಿದ್ದವು. ಗುಲ್ಬರ್ಗದ ಬಹಮನಿ ರಾಜ್ಯ, ವಿಜಯನಗರದ ಹಿಂದೂ ರಾಜ್ಯ, ಗುಲ್ಬರ್ಗ ಪುನಃ ಐದು ರಾಜ್ಯ ಗಳಾಗಿ ಒಡೆಯಿತು. ಅಹಮದ್‌ನಗರ ಅದರಲ್ಲಿ ಒಂದು. ೧೪೯೦ರಲ್ಲಿ ಅಹಮದ್ ನಗರ ರಾಜ್ಯವನ್ನು ಕಟ್ಟಿದ ಅಹಮ್ಮದ್ ನಿಜಾಮ ಷಾ ಬಹಮನಿದೊರೆಗಳ ಮಂತ್ರಿಗಳಲ್ಲೊಬ್ಬನಾದ ನಿಜಾಮ್ ಉಲ್ಮುಲ್ ಭೈರಿಯ ಮಗ. ಈ ರೀತಿ ಅಹಮ್ಮದ್ ನಗರ ಸಂತತಿಯು ದೇಶೀಯ ಸಂತತಿ, ಅಹಮ್ಮದ್ ನಗರದ ನಾಯಕಿಯಾದ ಚಾಂದ್ ಬೀಬಿಯು ಮಿತ್ರ ರಕ್ತದವಳು, ದಕ್ಷಿಣದ ಎಲ್ಲ ಮುಸ್ಲಿಂ ರಾಜ್ಯ ಗಳೂ ದೇಶೀ ರಾಜ್ಯಗಳು, ಭಾರತೀಯ ರಾಜ್ಯಗಳು,

ತೈಮೂರನು ದೆಹಲಿಯನ್ನು ಲೂಟಿಮಾಡಿದಮೇಲೆ ಉತ್ತರ ಹಿಂದೂಸ್ಥಾನವು ಬಲಹೀನವಾಗಿ ಒಡೆದು ಹೋಗಿತ್ತು. ದಕ್ಷಿಣ ಇಂಡಿಯ ಸ್ವಲ್ಪ ಶಕ್ತಿಯುತವಿತ್ತು. ಇವುಗಳಲ್ಲೆಲ್ಲ ಬಲಿಷ್ಠವಾದುದು ವಿಜಯನಗರ ಸಾಮ್ರಾಜ್ಯ. ಈ ರಾಜ್ಯಕ್ಕೆ ಮತ್ತು ಅದರ ರಾಜಧಾನಿಗೆ ಉತ್ತರದಿಂದ ಅನೇಕ ಹಿಂದೂ ನಿರಾಶ್ರಿತರು ಬಂದರು. ಆಗ ಬರೆದ ಗ್ರಂಥಗಳಿಂದ ಆ ನಗರವು ಬಹಳ ಸಂಪದ್ಯುಕ್ತವೂ ಸುಂದರವೂ ಇತ್ತೆಂದು ತಿಳಿಯುತ್ತದೆ. “ ಪ್ರಪಂಚದಲ್ಲೆಲ್ಲ ಇದರಂತೆ ಇನ್ನೊಂದು ನಗರವನ್ನು ಕೇಳಲೂ ಸಾಧ್ಯವಿಲ್ಲ ನೋಡಲೂ ಸಾಧ್ಯವಿಲ್ಲ.” ಎ೦ದು ಮಧ್ಯ ಏಷ್ಯದ ಅಬ್ದುಲ್‌ರಜಾಕ್ ಹೇಳುತ್ತಾನೆ. ಪೇಟೆಗಳಿಗಾಗಿ ಸುಂದರವಾದ ಮಂಟಪಗಳೂ, ಅಂಗಡಿಸಾಲುಗಳೂ ಇದ್ದವು. ಅವುಗಳೆಲ್ಲಕ್ಕೂ ಎತ್ತರದಲ್ಲಿ ರಾಜನ ಅರಮನೆಯು ಇತ್ತು. ಈ ಅರಮನೆಯ ಸುತ್ತಲೂ ಕಡೆದ ಕಲ್ಲಿನಿಂದ ಥಳಥಳಿಸುವ ಅನೇಕ ನಾಲೆಗಳಲ್ಲಿ