ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹೊಸ ಸಮಸ್ಯೆಗಳು ಪೋರ್ಚುಗೀಸರು ಅನಂತರ ಆಂಗ್ಲರು ಅವನ್ನು ಯೂರೋಪಿನಿಂದ ತಂದರು. ಅದು ಶ್ರೀಮಂತರ ಭೋಗ ಸಾಮಗ್ರಿ ಎಂಬ ಭಾವನೆ ಇತ್ತು. ಸಾಮಾನ್ಯ ಜನರು ಸೂರ್ಯಬಿಂಬದ ಸಹಾಯದಿಂದಲೋ, ಮರಳು ಮತ್ತು ನೀರಿನ ಘಟಕೆ' ಗಳಿಂದಲೋ ಕಾಲವನ್ನು ನಿರ್ಣಯಿಸುತ್ತಿದ್ದರು. ಈ ಗಡಿಯಾರ ಗಳ ತಯಾರಿಯನ್ನು ಅರಿತುಕೊಳ್ಳುವ ಪ್ರಯತ್ನ ಏಕೆ ಮಾಡಲಿಲ್ಲ ? ಇಲ್ಲಿಯೇ ತಯಾರಿಸುವ ಯೋಜನೆಯನ್ನೂ ಕೈಗೊಳ್ಳಲಿಲ್ಲ. ಭಾರತದಲ್ಲಿ ಅನೇಕ ಕುಶಲ ಕರ್ಮಿಗಳೂ, ಉದ್ಯೋಗ ನಿಪುಣರೂ ಇದ್ದರೂ ಯಂತ್ರಗಳಲ್ಲಿನ ಈ ಆಸಕ್ತಿ ಶೂನ್ಯತೆಯನ್ನು ಕಂಡು ಆಶ್ಚರ್ಯ ಪಡಬೇಕಾಗುತ್ತದೆ. ಈ ಕಾಲದಲ್ಲಿ ಈ ರೀತಿ ನಿರ್ಮಾಣ ಶಕ್ತಿಯ ಮತ್ತು ಸಂಶೋಧನ ಮನೋಪ್ರವೃತ್ತಿಯ ಅಭಾವ ವನ್ನು ಕಾಣುವುದು ಭಾರತದಲ್ಲಿ ಮಾತ್ರವಲ್ಲ. ಪಶ್ಚಿಮ ಮತ್ತು ಮಧ್ಯ ಏಷ್ಯದಲ್ಲೆಲ್ಲ ಈ ಮಾನಸಿಕ ಕ್ಷಯರೋಗವು ಉಲ್ಬಣಿಸಿತ್ತು. ಚೀನಾ ವಿಷಯ ನನಗೆ ತಿಳಿಯದು. ಪ್ರಾಯಶಃ ಅಲ್ಲಿಯೂ ಈ ಬಗೆಯ ಒಂದು ಸ್ಥಂಭನರೋಗ ಹರಡಿರಬೇಕು. ಭಾರತ ಮತ್ತು ಚೀನಾದೇಶಗಳೆರಡರಲ್ಲೂ ಆರಂಭದ ಯುಗಗಳಲ್ಲಿ ವಿಜ್ಞಾನವು ಅನೇಖ ಶಾಖೆಗಳಲ್ಲಿ ಬಹಳ ಮುಂದುವರಿದಿತ್ತು. ಹಡಗು ನಿರ್ಮಾಣ ಮತ್ತು ವಿಶಾಲ ಪ್ರಪಂಚದ ವ್ಯಾಪಾರ ಇವುಗಳ ಅವಶ್ಯಕತೆಗಳಿಂದ ಯಂತ್ರೋಪಕರಣಗಳನ್ನು ಉತ್ತಮಗೊಳಿಸುವುದಕ್ಕೂ ಪ್ರೋತ್ಸಾಹದೊರೆಯುತ್ತಿತ್ತು. ಈದೇಶಗಳಲ್ಲಾಗಲಿ, ಇತರ ದೇಶಗಳ ಲ್ಲಾಗಲಿ ಆಗಿನ ಕಾಲದಲ್ಲಿ ಯಾವದೊಡ್ಡ ಯಂತ್ರ ನಿರ್ಮಾಣವೂ ಆಗಲಿಲ್ಲ. ಈ ದೃಷ್ಟಿಯಿಂದ ಹದಿ ನೈದನೆಯ ಶತಮಾನದ ಪ್ರಪಂಚಕ್ಕೂ, ಅದಕ್ಕೆ ಸಾವಿರ ಅಥವ ಎರಡು ಸಾವಿರ ವರ್ಷಗಳ ಹಿಂದಿನ ಪ್ರಪಂಚಕ್ಕೂ ಯಾವ ವ್ಯತ್ಯಾಸವೂ ಇಲ್ಲ.

  • ಯೂರೋಪಿನ ಮಧ್ಯಕಾಲದ ಅಂಧಕಾರ ಯುಗದಲ್ಲಿ ಪ್ರಯೋಗ ವಿಜ್ಞಾನದಲ್ಲಿ ಬಹಳ ಮುಂದುವರಿದು ವಿಶೇಷ ಜ್ಞಾನವನ್ನು ಸಂಪಾದಿಸಿದ್ದ ಅರಬ್ಬಿ ಜನರು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಂಡು ಹಿಂದೆ ಬಿದ್ದಿದ್ದರು. ಮೊಟ್ಟಮೊದಲು ಏಳನೆಯ ಶತಮಾನದಲ್ಲಿ ಗಡಿಯಾರಗಳನ್ನು ಅರಬ್ಬಿ ಜನರೇ ತಯಾರಿಸಿದರು. ಡಮಾಸ್ಕಸ್ ಗಡಿಯಾರವು ಪ್ರಸಿದ್ದಿಯಾಗಿತ್ತು. ಹರೂನ್-ಅಲ್ರಷೀದ್ ಕಾಲದಲ್ಲಿ ಬಾಗ್ದಾದಿನ ಗಡಿಯಾರವೂ ಪ್ರಸಿದ್ದಿ ಯಾಗಿತ್ತು. ಅರಬ್ಬಿ ಜನರ ಅವನತಿಯೊಂದಿಗೆ ಗಡಿಯಾರ ತಯಾರಿಸುವ ಕಲೆಯೂ ಆ ದೇಶದಿಂದ ಮಾಯವಾಯಿತು. ಯೂರೋಪಿನ ಕೆಲವು ದೇಶ ಗಳಲ್ಲಿ ಮಾತ್ರ ಉಳಿದು ಅಲ್ಲಲ್ಲಿ ಗಡಿಯಾರಗಳು ದೊರೆಯುತ್ತಿದ್ದವು.
  • ಕ್ಯಾಕ್ಟನ್ಗಿಂತ ಮೊದಲು ಸ್ಪೇನಿನ ಮೂರ್-ಅರಬ್ಬಿ ಜನರು ಮರದ ಅಚ್ಚುಗಳಿಂದ ಮುದ್ರಣಮಾಡುತ್ತಿದ್ದರು. ಸರಕಾರದ ಆಜ್ಞೆಗಳ ಪ್ರತಿಮಾಡಲು ಅದನ್ನು ಉಪಯೋಗಿಸುತ್ತಿದ್ದರು. ಈ ಅಚ್ಚುಗಳಿಂದಲ್ಲದೆ ಮುದ್ರಣ ಕಲೆಯು ಮುಂದುವರಿದಂತೆ ಕಾಣುವುದಿಲ್ಲ, ಅನಂತರ ಅದೂ ಮಾಯ ವಾಯಿತು, ಯೂರೋಪ್ ಮತ್ತು ಪಶ್ಚಿಮ ಏಷ್ಯದಲ್ಲಿ ಪ್ರಬಲ ಸಾಮ್ರಾಜ್ಯ ಶಕ್ತಿಯಾಗಿದ್ದ ಆಟೋಮನ್ ತುರ್ಕಿಯವರು, ತಮ್ಮ ಬಾಗಿಲ ಎದುರಿನಲ್ಲೇ ಯೂರೋಪಿನಲ್ಲಿ ಅನೇಕ ಗ್ರಂಥಗಳು ಮುದ್ರಣವಾಗುತ್ತಿದ್ದರೂ, ಅನೇಕ ಶತಮಾನಗಳವರೆಗೆ ಮುದ್ರಣಕಲೆಯನ್ನು ಅಲಕ್ಷ ಮಾಡಿದರು. ಪ್ರಾಯಶಃ ಈ ವಿಷಯ ತಿಳಿದಿರಲೇ ಬೇಕು, ಆದರೂ ಆ ಸಂಶೋಧನೆಯ ಉಪಯೋಗಪಡೆಯುವ ಆಸಕ್ತಿ ಇರಲಿಲ್ಲ. ತಮ್ಮ ಪವಿತ್ರ ಗ್ರಂಥವಾದ ಖುರಾನನ್ನು ಮುದ್ರಣಮಾಡುವುದು ಒಂದು ಮಹಾ ಪಾಪವೆಂದು ಭಾವಿಸಿದ್ದರಿಂದ ಮುದ್ರಣವು ಧರ್ಮ ಬಾಹಿರವೆಂಬ ಭಾವನೆಯೂ ಇತ್ತು. ಮುದ್ರಣ ವಾದ ಹಾಳೆಗಳನ್ನು ದುರುಪಯೋಗಪಡಿಸಬಹುದು, ತುಳಿಯಬಹುದು, ಕಸದ ಕುಪ್ಪೆಗೆ ಎಸೆಯು ಬಹುದು. ಈಜಿಪ್ಟ್ ನಲ್ಲಿ ಮುದ್ರಣಮಂದಿರವನ್ನು ಮೊದಲು ಸ್ಥಾಪಿಸಿದವನು ನೆಪೋಲಿಯನ್, ಅಲ್ಲಿಂದ ಕ್ರಮೇಣ ನಿದಾನವಾಗಿ ಅದು ಅರಬ್ಬಿದೇಶಗಳಿಗೆ ಹರಡಿತು.

ತನ್ನ ಹಿಂದಿನ ಪ್ರಯತ್ನಗಳಿಂದ ಏಷ್ಯ ಆಯಾಸಗೊಂಡು ಕ್ರಿಯಾಶೂನ್ಯವಾಗಿದ್ದಾಗ ಯೂರೋಪು ಅನೇಕ ರೀತಿಯಲ್ಲಿ ಒಂದು ನವಯುಗದ ಮುಂಬೆಳಗಿನಲ್ಲಿ ನಿಂತಿತ್ತು. ಒಂದು ಹೊಸ ಸ್ಫೂರ್ತಿ, ಹೊಸಬಾಳಿನ ತಳಮಳವು ಎದ್ದು ಅನೇಕ ಸಾಹಸಿಗರನ್ನು ಸಮುದ್ರಗಳಾಜಿ ಕರೆದೊ ಮೈ ತು. ಯೂರೋಪಿನ ಭಾವಜೀವಿಗಳ ಮನಸ್ಸು ಹೊಸ ದಾರಿಗಳಲ್ಲಿ ಪ್ರವೇಶಮಾಡಿತು,