ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತ ದರ್ಶನ ಪುನರುಜ್ಜಿವನ ಯುಗದಲ್ಲಿ ವಿಜ್ಞಾನದ ಪ್ರಗತಿಗೆ ಯಾವ ಪ್ರೋತ್ಸಾಹವೂ ದೊರೆತಿರಲಿಲ್ಲ. ಒಂದು ರೀತಿಯಲ್ಲಿ ಜನರು ವಿಜ್ಞಾನದಿಂದ ವಿಮುಖರಾಗಿದ್ದರು. ವಿಶ್ವವಿದ್ಯಾನಿಲಯಗಳಲ್ಲಿ ಏರ್ಪಡಿ ಸಿದ ಪುರಾತನ ಸಾಹಿತ್ಯ ಸಂಸ್ಕೃತಿಗಳ ಸಾಂಪ್ರದಾಯಿಕ ಅಭ್ಯಾಸ ಕ್ರಮವು ವಿಜ್ಞಾನದ ಅಭ್ಯಾಸಕ್ಕೆ ಅಡ್ಡಿಯಾಗಿ ಅದರ ಮುಖ್ಯಜ್ಞಾನವೂ ತಿಳಿಯದಾಯಿತು. ಕೋಪರ್ನಿಕಸ್, ಗೆಲಿಲಿಯೊ, ನ್ಯೂಟನ್ರ ಸಂಶೋಧನೆಗಳಾಗಿ, ಒಳ್ಳೆಯದೂರದರ್ಶಕ ಯಂತ್ರಗಳನ್ನು ಕಂಡು ಹಿಡಿದಿದ್ದರೂ ಹದಿನೆಂಟನೆಯ ಶತಮಾನದ ಮಧ್ಯಭಾಗದವರೆಗೆ ಇಂಗ್ಲೆಂಡಿನ ಅನೇಕ ವಿದ್ಯಾವಂತರು ಭೂಮಿ ತನ್ನ ಸುತ್ತ ತಿರುಗು ಇದೆ, ಸೂರನ ಸುತ್ತಲೂ ತಿರುಗುತ್ತದೆ ಎಂದರೆ ನಂಬುತ್ತಿರಲಿಲ್ಲ. ಗ್ರೀಕ್ ಮತ್ತು ಲ್ಯಾಟಿನ್ ಗ್ರಂಥ ಗಳನ್ನು ಓದಿ ಎಲ್ಲವೂ ಭೂಮಿಯ ಸುತ್ತ ಎಂಬ ಟಾಲೆಮಿಯ ಅಭಿಪ್ರಾಯಕ್ಕೆ ಅಂಟಿಕೊಂಡಿದ್ದರು. ಹತ್ತೊಂಭತ್ತನೆಯ ಶತಮಾನದ ಇಂಗ್ಲೆಂಡಿನ ಪ್ರಸಿದ್ದ ರಾಜಕಾರಣಿಯಾದ ಗ್ಲಾಡ್‌ಸ್ಟನ್ ತುಂಬ ಪ್ರತಿಭಾ ಶಾಲಿಯಾದರೂ ವಿಜ್ಞಾನದ ಗಂಧವೂ ಅವನಿಗೆ ಇರಲಿಲ್ಲ, ಅದರ ಮೇಲೆ ಆತನಿಗೆ ವಿಶ್ವಾಸವೂ ಇರಲಿಲ್ಲ. - ಪ್ರಪಂಚದ ಇಂದಿನ ಜೀವನವೇ ವಿಜ್ಞಾನದ ಉಪಯೋಗದಿಂದ ನಡೆಯುತ್ತಿದೆ ಎಂದು ತಿಳಿ ದಿದ್ದರೂ, ಅದರ ಉಪಯೋಗದಿಂದ ತಾವೇ ಸ್ವತಃ ಸಾಮೂಹಿಕ ಕೊಲೆ ಮತ್ತು ವಿನಾಶಕೃತ್ಯಗಳಲ್ಲಿ ಉದ್ಯುಕ್ತರಾಗಿದ್ದರೂ ಇಂಡಿಯದಲ್ಲಿ ಮಾತ್ರವಲ್ಲದೆ ಎಲ್ಲ ದೇಶಗಳ ರಾಜಕಾರಣಿಗಳು ಮತ್ತು ಸಾರ್ವ ಜನಿಕ ನಾಯಕರನೇಕರಿಗೆ ವಿಜ್ಞಾನದ ಅರಿವೂ ಇಲ್ಲ; ವಿಜ್ಞಾನ ಪದ್ಧತಿಯೂ ತಿಳಿಯದು. ಏನೆ ಆಗಲಿ ಪುನರುಜ್ಜಿವನ ಯುಗದಿಂದ ಯೂರೋಪಿನ ಮನಸ್ಸು ತನ್ನ ಹಳೆಯ ಬಂಧನ ಗಳನ್ನು ಕಳಚಿಕೊಂಡಿತ್ತು; ಅದರ ಅನೇಕ ಪೂರ್ವದ ಆರಾಧ್ಯ ವಸ್ತುಗಳನ್ನು ತ್ಯಜಿಸಿತ್ತು. ಪುನರುಜ್ಜಿ ವನಕಾಲದ ಪ್ರಭಾವದಿಂದಲೋ ಬೇರೆ ಇತರ ಕಾರಣದಿಂದಲೋ ವಿಚಾರಪರ ದೃಷ್ಟಿಯು ಬಂದಿತ್ತು; ಕಾಲ್ಪನಿಕ ಅಸ್ಪಷ್ಟ ಭಾವನೆಗಳ ಮೇಲೂ, ಅರ್ಥಶೂನ್ಯ ಅಧಿಕಾರ ದರ್ಪಕ್ಕೂ ವಿರೋಧವೆದ್ದಿತ್ತು. * ಮಾನವನ ಶಕ್ತಿ ಮಾರ್ಗವೂ, ಜ್ಞಾನಮಾರ್ಗವೂ ಸವಿಾಪ ಇವೆ. ಒಂದರಂತೆ ಇನ್ನೊಂದು ಆದರೆ ಭಾವನಾ ಪ್ರಪಂಚವನ್ನೇ ನಂಬುವ ದುರಭ್ಯಾಸದ ಬದಲು ವಿಜ್ಞಾನವನ್ನು ಪ್ರಯೋಗದ ತಳಹದಿಯ ಮೇಲೆ ಆರಂಭಿಸಿ ಕಟ್ಟುವುದೂ ಪ್ರಾಯೋಗಿಕ ಜ್ಞಾನದ ಆಧಾರದ ಮೇಲೆಯೇ ವಿಜ್ಞಾನ ಭಾವನೆ ಯನ್ನು ರೂಪಿಸಿ ನಿರ್ಧರಿಸುವುದೂ ಕ್ಷೇಮ ” ಎಂದು ಫ್ರಾನ್ಸಿನ್ ಬೇಕನ್ ಹೇಳಿದ್ದಾನೆ. ಪುನಃ ಏಳ ನೆಯ ಶತಮಾನದಲ್ಲಿ “ ಅಧಿಕಾರ ಪೂಜೆಯೂ ಹಳೆಯ ಕಾಲದ ಅಭಿಪ್ರಾಯವನ್ನೇ ವೇದವಾಕ್ಯ ವನ್ನಾಗಿ ನಂಬಿ ಆಲೋಚನೆಗಳನ್ನು ರೂಪಿಸುವ ಅಭ್ಯಾಸವೂ ಸತ್ಯದ ಕೊಲೆಯನ್ನು ಮಾಡಿ ಜ್ಞಾನದ ಪರಮ ಶತ್ರುಗಳಾಗಿವೆ. ಏಕೆಂದರೆ ಈಗಲೂ ಇಂದಿನ ಅನೇಕರಲ್ಲಿ ಯಾವ ಮಟ್ಟದವರೇ ಇರಲಿ ಇಂದಿನ ಕಾರಣಬದ್ದ ಯೋಚನೆಗಿಂತ ಹಿಂದಿನವರ ತೀರ್ಮಾನಕ್ಕೆ ಹೆಚ್ಚು ಬೆಲೆಕೊಡುವ ಮೂಢ ನಂಬಿಕೆಯು ಬೆಳೆದು ಬಿಟ್ಟಿದೆ. ಅವರ ಕಾಲವು ನಮಗಿಂತ ಬಹುದೂರದ್ದು; ಅವರ ಗ್ರಂಥಗಳ ಮೇಲೆ ಸಮಕಾಲೀನರದಾಗಲಿ, ಉತ್ತರಾಧಿಕಾರಿಗಳದಾಗಲಿ ಯಾವ ಬಗೆಯ ಹತೋಟಿಯೂ ಇಲ್ಲದೆ ಯಾರ ಕಣ್ಣೂ ಬೀಳದಷ್ಟು ದೂರವಾಗಿವೆ. ಹಳೆತಾದಷ್ಟೂ ಸತ್ಯಕ್ಕೆ ಸಮಾನ ಎಂಬ ಭಾವನೆ ಬಲಿಯುತ್ತಿದೆ. ಈರೀತಿ ನಾವು ಸತ್ಯಾನ್ವೇಷಣೆಯ ಮಾರ್ಗದಿಂದ ದೂರವಾಗಿ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದೇವೆ.” ಎಂದು ಸರ್ ಥಾಮಸ್ ಟ್ರಾನ್ ಹೇಳಿದ್ದಾನೆ. ಅಕ್ಷರನ ಕಾಲವಾದ ಹದಿನಾರನೆಯ ಶತಮಾನದಲ್ಲಿ ಮಾನವ ಜೀವನದಲ್ಲಿ ಒಂದು ಕ್ರಾಂತಿ ಯನ್ನು ಉಂಟುಮಾಡಿದ ಬಲಕ್ರಿಯಾಶಾಸ್ತ್ರವು (dynamics) ಯೂರೋಪಿನಲ್ಲಿ ಹುಟ್ಟಿತು. ಈ ಸಂಶೋಧನೆಯಿಂದ ಯಾರೋಪ್ ಮೊದಲು ನಿಧಾನವಾದರೂ ಕ್ರಮೇಣ ಅತಿವೇಗದಿಂದ ಮುಂದು ವರಿದು ಹತ್ತೊಂಭತ್ತನೆಯ ಶತಮಾನದಲ್ಲಿ ಎಲ್ಲರಿಗೂ ಮುಂದೆ ಬಂದು ಒಂದು ಹೊಸ ಪ್ರಪಂಚವನ್ನೇ ಸೃಷ್ಟಿಸಿತು. ಪ್ರಕೃತಿ ಶಕ್ತಿಯನ್ನು ಅಧೀನಮಾಡಿಕೊಂಡು ಈ ರೀತಿ ಯುರೋಪ್ ಮುಂದುವರಿಯು ತಿದ್ದಾಗ ಏಷ್ಯ ಇನ್ನೂ ನಿಸ್ತೇಜನಾದ ಹೆಳವನಂತೆ ಮಾನವನ ದುಡಿತ ಮತ್ತು ಶ್ರಮದಿಂದ ಹಳೆಯ ಜಾಡಿನಲ್ಲೇ ತೆವಳುತ್ತಿತ್ತು.