ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹೊಸ ಸಮಸ್ಯೆಗಳು ಹೀಗಾಗಲು ಕಾರಣವೇನು ? ಒಂದೇ ಕೂಗು ಕೇಳಬೇಕೆಂದರೆ ಏಷ್ಯ ಬಹು ವಿಶಾಲವಾದುದು ಮತ್ತು ಬಹು ವಿಧವಾದುದು. ಪ್ರತಿಯೊಂದು ದೇಶವನ್ನೂ, ಅದರಲ್ಲೂ ಚೀನಾ, ಇಂಡಿಯಗಳಂಥ ದೇಶಗಳನ್ನು ಪ್ರತ್ಯೇಕವಾಗಿಯೇ ವಿಚಾರಮಾಡಬೇಕು. ಚೀನಾ ಆಗಲೂ ಮತ್ತು ಅನಂತರವೂ ಸುಸಂಸ್ಕೃತವಿತ್ತು. ಅಲ್ಲಿನ ಜನರು ಯುರೋಪಿಯನರ ಜೀವನಕ್ಕಿಂತ ಹೆಚ್ಚು ಸುಸಂಸ್ಕೃತ ಜೀವನ ನಡೆಸುತ್ತಿದ್ದರು, ಹೊರಗೆ ನೋಡಿದರೆ ಭಾರತದಲ್ಲಿ ಸಹ ಝಗ ಝಗಿಸುವ ರಾಜಾಸ್ಥಾನವಿತ್ತು. ವ್ಯಾಪಾರ ವಿನಿಮಯ, ಕೈಗಾರಿಕೆ, ಕುಶಲವಿದ್ಯೆಗಳು ಅಭಿವೃದ್ಧಿಗೊಂಡಿದ್ದವು. ಭಾರತೀಯನು ಯಾರಾದರೂ ಆಗ ಯೂರೋಪಿಗೆ ಹೋಗಿದ್ದರೆ ಯುರೋಪಿನ ಜೀವನವನ್ನು ಕಂಡು ಶುದ್ಧ ಒರಟು ಜೀವನವೆಂದು ಹೇಳುತ್ತಿದ್ದನು. ಆದರೂ ಯೂರೋಪಿನಲ್ಲಿ ಕಾಣಬರುತ್ತಿದ್ದ ಚಲನ ಶಕ್ತಿಯು ಭಾರತದಲ್ಲಿ ಪೂರ್ಣವಾಗಿ ಅಡಗಿಹೋಗಿತ್ತು. ಹೊರಗಿನ ದಾಳಿಗಿ೦ತ ಒಳಗಿನ ನ್ಯೂನತೆಯೇ ನಾಗರಿಕತೆಯ ನಾಶಕ್ಕೆ ಮುಖ್ಯ ಕಾರಣ, ತನ್ನ ಕಾರವನ್ನು ತಾನು ಸಾಧಿಸಿ ಮುಂದುವರಿಯುವ ಪ್ರಪಂಚಕ್ಕೆ ಯಾವ ಹೊಸ ಕಾಣಿಕೆಯನ್ನೂ ಕೊಡಲು ಶಕ್ತಿ ಇಲ್ಲದೆ ನಾಶವಾಗಬಹುದು ; ಅಥವ ಅನಾಗರಿಕತೆಯ ಜನರು ಸತ್ವಹೀನರಾಗಿ ಜವಾ ಬ್ದಾರಿಯ ಹೊರೆಯನ್ನು ನಿರ್ವಹಿಸಲು ಅಶಕ್ತರಾಗಿ ಅವರ ನಾಗರಿಕತೆಯು ನಾಶಹೊಂದಬಹುದು ; ಅಥವ ಒಂದು ಹಂತದವರೆಗೆ ಪ್ರಗತಿದಾಯಕವಾಗಿದ್ದ ಸಮಾಜ ಸಂಸ್ಕೃತಿಯು ಮುಂದಿನ ಪ್ರಗತಿಗೆ ಆತಂಕವಾಗಬಹುದು. ಆ ಆತಂಕವನ್ನು ನಿರ್ಮೂಲಮಾಡದೆ ಅಥವ ಆ ಸಂಸ್ಕೃತಿಯ ಮೂಲಗುಣ ದಲ್ಲಿ ವ್ಯತ್ಯಾಸವಾಗದೆ ಪ್ರಗತಿಯು ಸಾಧ್ಯವಾಗುವುದಿಲ್ಲ. ಭಾರತೀಯ ನಾಗರೀಕತೆಯ ಅವನತಿಯು ತುರ್ಕಿ ಮತ್ತು ಆಫ್ಘನ್ ದಂಡಯಾತ್ರೆಗಳಿಗೆ ಮೊದಲೇ ಆರಂಭವಾಯಿತು. ದಂಡೆತ್ತಿ ಬಂದ ಈ ಹೊಸ ಜನರೊಂದಿನ ಘರ್ಷಣೆಯಿಂದ, ಅವರ ಹೊಸ ಭಾವನೆಗಳಿಂದ ಪ್ರಾಚೀನ ಭಾರತದ ಮೇಲೆ ಹೊಸ ಸಾಮಾಜಿಕ ಪರಿವರ್ತನೆ ಏನಾದರೂ ಆಯಿತೆ ; ಮಾನಸಿಕ ಶೃಂಖಲೆಗಳನ್ನು ಕಿತ್ತೊಗೆದು, ನವಚೈತನ್ಯವನ್ನೇನಾದರೂ ಹೊರಸೂಸಿತೆ ? ಸ್ವಲ್ಪ ಮಟ್ಟಿನ ಪರಿವರ್ತನೆ ಏನೋ ಆಯಿತು, ಕಲೆ, ವಾಸ್ತು ಶಿಲ್ಪ, ಚಿತ್ರಕಲೆ, ಸಂಗೀತ ಮತ್ತು ಜೀವನರೀತಿಯಲ್ಲಿ ಬದಲಾವಣೆಗಳಾದವು. ಆದರೆ ಆಳವಾದ ಪರಿವರ್ತನೆ ಯಾವುದೂ ಆಗ ಲಿಲ್ಲ. ಮೇಲೆ ಮೇಲೆ ಮಾತ್ರ ಸ್ವಲ್ಪ ವ್ಯತ್ಯಾಸವಾಗಿ ಸವ್ರಜರಚನೆಯು ಮಾತ್ರ ಮೊದಲಿನಂತೆಯೆ ಉಳಿಯಿತು. ಕೆಲವು ಸಂದರ್ಭಗಳಲ್ಲಿ ಇನ್ನೂ ಕಠಿಣವಾಯಿತು. ಆಫ್ಘನರಲ್ಲಿ ಹೊಸ ಸುಧಾರಣೆಯ ನೀತಿ ಯಾವುದೂ ಇರಲಿಲ್ಲ. ಅವರದು ಪಾಳೆಗಾರಿಕೆಯ ಶ್ರೀಮಂತಿಕೆ, ಭಾರತದಲ್ಲಿ ಯೂರೋಪಿನ ಶ್ರೀಮಂತರಂತೆ ಶ್ರೀಮಂತಿಕೆ ಇರಲಿಲ್ಲ. ಆದರೆ ಭಾರತದ ರಕ್ಷಣೆಗೆ ಬೆನ್ನು ಮೂಳೆಯಂತೆ ಇದ್ದ ರಾಜ ಪುತ್ರ ಮನೆತನಗಳವರು ಒಂದು ರೀತಿಯ ಶ್ರೀಮಂತಿಕೆಯವರು. ಮೊಗಲರು ಒಂದು ತರಹ ಶ್ರೀಮಂತಿಕೆಯವರಾದರೂ ಕೇಂದ್ರದಲ್ಲಿ ಪ್ರಬಲನಾದ ರಾಜನಿದ್ದನು. ರಾಜಪುತಾನದ ಶ್ರೀಮಂತಿ ಕೆಯು ಈ ಪ್ರಭುತ್ವದ ವಶವಾಯಿತು, ಅಕ್ಷರನು ಪ್ರಪಂಚದ ಇತರ ಭಾಗಗಳಲ್ಲಿ ಏನು ನಡೆಯುತ್ತಿದೆ ಎಂದು ತನ್ನ ಸೂಕ್ಷ್ಮದೃಷ್ಟಿ ಯನ್ನು ಆಕಡೆ ತಿರುಗಿಸಿದ್ದರೆ ಸಮಾಜ ಸುಧಾರಣೆಗೆ ಒಳ್ಳೆಯ ತಳಪಾಯವನ್ನು ಹಾಕಬಹುದಾಗಿತ್ತು. ಆದರೆ ಆತನು ತನ್ನ ಚಕ್ರಾಧಿಪತ್ಯವನ್ನು ಬಲಪಡಿಸುವುದರಲ್ಲೇ ನಿರತನಾದನು. ಮತಾಂತರಗೊಳಿ ಸಲು ಹಾತೊರೆಯುತ್ತಿದ್ದ ಇಸ್ಲಾಂ ಧರ್ಮವನ್ನು, ಜನರ ರಾಷ್ಟ್ರೀಯ ಧರ್ಮ ಮತ್ತು ಸಂಪ್ರದಾಯ ಗಳನ್ನು ಸಮನ್ವಯಗೊಳಿಸಿ ರಾಷ್ಟ್ರದ ಐಕ್ಯತೆಯನ್ನು ಹೇಗೆ ಸಾಧಿಸಬೇಕೆಂಬುದೇ ಅವನ ಸಮಸ್ಯೆ ಯಾಯಿತು. ಧರ್ಮಕ್ಕೆ ಕಾರಣಬದ್ದ ವಿವರಣೆಯನ್ನು ಕೊಡುತ್ತಿದ್ದನು. ಭಾರತೀಯ ರಂಗದಲ್ಲಿ ಸ್ವಲ್ಪ ಮಾರ್ಪಾಡನ್ನೂ ಮಾಡುವಂತೆ ಕಂಡಿತು. ಇತರ ಎಲ್ಲ ಕಡೆಗಳಂತೆ ಈ ನೇರವಾದ ಮಾರ್ಗ ದಲ್ಲಿ ಅವನು ಕೃತಕೃತ್ಯನಾಗಲಿಲ್ಲ. ಆದ್ದರಿಂದ ಭಾರತದ ಸಮಾಜ ರಚನೆಯನ್ನು ಸಡಲಿಸಲು ಅಕ್ಷರನಿಗೂ ಸಾಧ್ಯವಾಗಲಿಲ್ಲ. ಆತನ ತ