ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹೊಸ ಸಮಸ್ಯೆಗಳು ೨೩೫ ವಾಯವ್ಯ ಮೂಲೆಯಿಂದ ಬಂದ ದಂಡಯಾತ್ರಿಕರ ಸಂಪರ್ಕ ಮತ್ತು ಇಸ್ಲಾಂ ಧರ್ಮದ ಪ್ರಭಾವವು ಭಾರತದ ಮೇಲೆ ವಿಶೇಷ ಪರಿಣಾಮ ಮಾಡಿತು. ಹಿಂದೂ ಸಮಾಜದಲ್ಲಿ ಒದಗಿದ್ದ ಮೂಢ ಸಂಪ್ರದಾಯಗಳನ್ನು ಎತ್ತಿ ತೋರಿಸಿ ಬೈಲಿಗೆಳೆದಿತು. ಜಾತಿಯ ಕಾಠಿಣ್ಯತೆ, ಅಸ್ಪೃಶ್ಯತೆ, ಮಡಿವಂತಿಕೆ ಅಸಹನೀಯವಾಗಿತ್ತು. ಹಿಂದೂಧರ್ಮದಲ್ಲಿ ಸಮಾನ ಅವಕಾಶದ ಕನಸು ಸಹ ಕಾಣದ ಅನೇಕರಿಗೆ ಇಸ್ಲಾ೦ಧರ್ಮದ ಭ್ರಾತೃತ್ವ ಮತ್ತು ಸರ್ವಸಮಾನತೆಯ ಆದರ್ಶವು ಮುಕ್ತದ್ವಾರವಾಯಿತು. ಈ ಆದರ್ಶಗಳ ಘರ್ಷಣೆಯಿಂದ ಧಾರ್ಮಿಕ ಐಕ್ಯತೆಯ ಹೊಸ ಧರ್ಮವಿಕಸನಗಳಾದವು. ಅನೇಕರು ಮತಾ೦ತರವನ್ನೂ ಹೊಂದಿದರು. ಈ ಮತಾಂತರಗಳು ಮುಖ್ಯವಾಗಿ ಬಂಗಾಳದ ಕನಿಷ್ಠ ಜಾತಿಯವ ರಲ್ಲೇ ಹೆಚ್ಚು. ಉತ್ತಮ ಜಾತಿಯವರಲ್ಲಿ ಸಹ ಕೆಲವರು ನಿಜವಾದ ಧರ್ಮವಿಶ್ವಾಸದಿಂದಲೋ ಅಥವ ರಾಜಕೀಯ ಆರ್ಥಿಕ ಕಾರಣಗಳಿಂದಲೋ ಮತಾಂತರ ಹೊಂದಿದರು. ಆಳುವ ರಾಜರ ಧರ್ಮಾನ ಲಂಬನೆಯಿಂದ ಕೆಲವು ಅನುಕೂಲಗಳಿದ್ದವು. ಇಷ್ಟೆಲ್ಲ ಮತಾಂತರಗಳಾದರೂ ಶಾಖೋಪಶಾಖೆಯ ಹಿಂದೂ ಧರ್ಮವು ಭದ್ರವಾಗಿ, ಆತ್ಮ ವಿಶ್ವಾಸವುಳ್ಳದಾಗಿ ರಾಷ್ಟ್ರದ ಪ್ರಧಾನ ಧರ್ಮವಾಗಿಯೇ ಉಳಿಯಿತು. ಉತ್ತಮ ಜಾತಿಯವರಿಗೆ ತಮ್ಮ ಆದರ್ಶ ಮತ್ತು ಭಾವನೆಗಳ ಸರ್ವಶ್ರೇಷ್ಠತೆಯಲ್ಲಿ ಪೂರ್ಣ ವಿಶ್ವಾಸವಿತ್ತು ; ಮತ್ತು ದರ್ಶನ ಮತ್ತು ತತ್ವ-ಶಾಸ್ತ್ರಗಳ ಸಮಸ್ಯೆಗಳ ದೃಷ್ಟಿಯಿಂದ ಇಸ್ಲಾಂ ಧರ್ಮದ ಭಾವನೆಯು ಅಪಕ್ವ ಭಾವನೆಯಂದು ತಿಳಿದಿದ್ದರು. ಇಸ್ಲಾಂ ಧರ್ಮದ ಏಕದೇವತಾ ಭಾವನೆಯು ಹಿಂದೂ ಧರ್ಮದಲ್ಲಿಯೇ ಇದ್ದು ಏಕತ್ವ ವಾದದ ಆಧಾರದ ಮೇಲೆಯೇ ಪ್ರಮುಖ ಹಿಂದೂದರ್ಶನವನ್ನು ಕಟ್ಟಲಾಗಿತ್ತು. ಸುಲಭವೂ, ಲೋಕ ಪ್ರಿಯವೂ ಆದ ಯಾವ ಪೂಜಾ ಪದ್ದತಿಯನ್ನಾಗಲಿ ಅನುಸರಿಸಲು ಎಲ್ಲರಿಗೂ ಅವಕಾಶವಿತ್ತು. ವೈಷ್ಣವ ಧರ್ಮವನ್ನವಲಂಬಿಸಿ ತನ್ನ ಆರಾಧ್ಯ ಮೂರ್ತಿಯ ಚರಣಾರವಿಂದಗಳಲ್ಲಿ ತನ್ನ ಭಕ್ತಿಯ ಕಾಣಿಕೆಯನ್ನು ಸುರಿದು ಆತ್ಮತೃಪ್ತಿ ಪಡೆಯಬಹುದಿತ್ತು. ಅಥವ ತಾತ್ವಿಕ ದೃಷ್ಟಿ ಯವನಾದರೆ ಜಟಿಲ ತತ್ವಶಾಸ್ತ್ರ ಮತ್ತು ದರ್ಶನಗಳ ಉನ್ನತ ಪ್ರಪಂಚದಲ್ಲಿ ವಿಹರಿಸಬಹುದಾಗಿತ್ತು. ಹಿಂದೂಗಳ ಸಮಾಜರಚನೆಯಲ್ಲಿ ಸಮಷ್ಟಿ ಜೀವನಕ್ಕೆ ಪ್ರಾಮುಖ್ಯತೆ ಇದ್ದರೂ ಧಾರ್ಮಿಕ ಭಾವನೆ ಎಲ್ಲವೂ ವೈಯಕ್ತಿಕವಾಗಿತ್ತು, ತಾವು ಮತಾಂತರವನ್ನೂ ಮಾಡುತ್ತಿರಲಿಲ್ಲ; ತಮ್ಮಲ್ಲಿ ಕೆಲವರು ಮತಾಂತರ ಹೊಂದಿದರೂ ಲಕ್ಷಮಾಡುತ್ತಿರಲಿಲ್ಲ. ತಮ್ಮ ಸಮಾಜರಚನೆ ಅಥವ ಜೀವನದ ವಿಷಯದಲ್ಲಿ ಯಾರಾದರೂ ಪ್ರವೇಶಿಸಿದರೆ ಸಹಿಸುತ್ತಿರಲಿಲ್ಲ. ಬೇರೊಂದು ಪಂಗಡಕ್ಕೆ ಇಷ್ಟ ಬಂದ ರೀತಿಯಲ್ಲಿ ಜೀವನ ನಡೆಸಲು ಎಲ್ಲರಿಗೂ ಪೂರ್ಣ ಸ್ವಾತಂತ್ರ್ಯವಿತ್ತು. ಸಾಮಾನ್ಯವಾಗಿ ಇಸ್ಲಾಂ ಧರ್ಮವನ್ನು ಅವಲಂಬಿಸಿದವರೆಲ್ಲರೂ ಒಟ್ಟೋಟ್ಟಿಗೆ ಕುಲಕ್ಕೆ ಕುಲವೇ ಸೇರುತ್ತಿದ್ದರು. ಜಾತಿಯ ಕಟ್ಟು ಆಷ್ಟು ಬಲ ವಾಗಿತ್ತು. ಉತ್ತಮ ಜಾತಿಯವರಲ್ಲಿ ಒಬ್ಬೊಬ್ಬರೇ ಸೇರುತ್ತಿದ್ದರು. ಆದರೆ ಕನಿಷ್ಠ ಜಾತಿಯವರು ಸೇರಿ ದಾಗ ಕುಲಕ್ಕೆ ಕುಲವೇ ಅಥವ ಗ್ರಾಮಕ್ಕೆ ಗ್ರಾಮವೇ ಸೇರುತ್ತಿತ್ತು. ಇದರಿಂದ ಪೂಜಾ ಪದ್ಧತಿ ಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಕುಲಪದ್ದತಿಗಳೂ, ಜೀವನವೂ ನಾಶವಾಗಲಿಲ್ಲ. ಕೆಲವು ಕಸಬು ಗಳಲ್ಲಿ ಕೆಲಸಗಳಲ್ಲಿ ಮುಸ್ಲಿಮರೇ ಹೆಚ್ಚಾಗಿರುವುದಕ್ಕೆ ಇದೇ ಮುಖ್ಯ ಕಾರಣ. ಕೆಲವು ಕಡೆ ನೇಕಾರರು ಸಂಪೂರ್ಣವಾಗಿ ಮುಸ್ಲಿಮರು. ಜೋಡುವ್ಯಾಪಾರಿಗಳೂ, ಕಸಾಯಿ ಅಂಗಡಿಯವರೂ ಮುಸ್ಲಿಮರು. ದರ್ಜಿ ಕೆಲಸದಲ್ಲಿ ಇನ್ನೂ ಅನೇಕ ಉದ್ಯೋಗಗಳಲ್ಲಿ ಕುಶಲ ಕರ್ಮಗಳಲ್ಲಿ ಮುಸ್ಲಿಂರೇ ಹೆಚ್ಚು ಇದ್ದಾರೆ, ಕುಲಪದ್ದತಿಯು ನಾಶವಾದ್ದರಿಂದ ಅನೇಕರು ಇತರ ಉದ್ಯಮಗಳಲ್ಲಿ ತೊಡಗಿ ಕುಲವೃತ್ತಿಯ ವ್ಯತ್ಯಾಸಗಳನ್ನು ಕಡಮೆ ಮಾಡಿದ್ದಾರೆ. ಬ್ರಿಟಿಷರ ಆಳ್ವಿಕೆಯಲ್ಲಿ ಆರಂಭದಲ್ಲಿ ಉದ್ದೇಶಪೂರ್ವಕ ವಾಗಿಯೂ, ಅನಂತರ ಸಾಮ್ರಾಜ್ಯದ ಆರ್ಥಿಕ ನೀತಿಯ ದೃಷ್ಟಿಯಿಂದಲೂ ಭಾರತದ ಗ್ರಾಮ ಕೈಗಾರಿಕೆ ಮತ್ತು ಉದ್ಯೋಗಗಳನ್ನು ನಾಶಮಾಡಿದ್ದರ ಫಲವಾಗಿ ಅನೇಕ ಕಾರೇಗಾರರು, ಕುಶಲ ಕರ್ಮಿಗಳು ಮುಖ್ಯವಾಗಿ ಬಹುಜನ ನೇಕಾರರು ತಮ್ಮ ಜೀವನೋಪಾಯವನ್ನು ಕಳೆದುಕೊಂಡರು. ಈ ಪೆಟ್ಟನ್ನು ಸಹಿಸಿಕೊಂಡು ಉಳಿದವರು ವ್ಯವಸಾಯಗಾರರಾದರು ; ಭೂಮಿಯಿಲ್ಲದ ಕೂಲಿಗಳಾಗಿಯೋ ತನ್ನ ಬ೦ಧುಗಳ ಗೇಣುದ್ದದ ಭೂಮಿಯನ್ನು ಉಳುಮೆ ಮಾಡಿಯೋ ಜೀವಿಸಬೇಕಾಯಿತು,