ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತ ದರ್ಶನ ಬಲಾತ್ಕಾರವಾಗಿ ಮತಾಂತರಗೊಳಿಸಿದಾಗ ಮಾತ್ರವಲ್ಲದೆ, ವ್ಯಕ್ತಿಗಳಾಗಲಿ, ಜಾತಿಗಳಾಗಲಿ, ಮತಾಂತರವಾದಾಗ ಯಾವ ಗಲಭೆಯೂ ಆಗುತ್ತಿರಲಿಲ್ಲ. ಬಂಧುಗಳೋ, ಸ್ನೇಹಿತರೋ, ನೆರೆಯವರೊ ಅಸಮಾಧಾನಪಟ್ಟಿರಬಹುದು. ಆದರೆ ಹಿಂದೂ ಸಮಾಜವು ಅದಕ್ಕೆ ಯಾವ ಪ್ರಾಮುಖ್ಯತೆಯನ್ನೂ ಕೊಡಲಿಲ್ಲ. ಈ ಅಲಕ್ಷ ಮನೋಭಾವಕ್ಕೆ ಪ್ರತಿಯಾಗಿ ಈಗ ಇಸ್ಲಾ ಧರ್ಮಕ್ಕಾಗಲಿ, ಕ್ರೈಸ್ತಮತಕ್ಕೆ ಆಗಲಿ ಯಾರಾದರೂ ಮತಾಂತರ ಹೊಂದಿದರೆ ಜನರು ಉದ್ವೇಗಗೊಂಡು ದಂಗೆ ಏಳುತ್ತಾರೆ, ಕೋಮುವಾರು ಚುನಾವಣಾ ಪದ್ಧತಿಯೂ, ರಾಜಕೀಯ ವಿಷಯಗಳೂ ಅದಕ್ಕೆ ಕಾರಣ. ಪ್ರತಿಯೊಂದು ಮತಾಂತರವೂ ಆ ಕೋಮಿನ ಸಂಖ್ಯೆಯನ್ನು ಹೆಚ್ಚಿಸಿ, ದಾಮಾಷ ಪ್ರತಿನಿಧಿತ್ವವನ್ನೂ, ರಾಜಕೀಯ ಪ್ರಭಾವವನ್ನೂ ಹೆಚ್ಚಿಸುತ್ತದೆಂಬ ಭಾವನೆ ಇದೆ. ಜನಗಣತೆಯಲ್ಲಿ ಸುಳ್ಳು ಸಂಖ್ಯೆಗಳನ್ನು ಸೇರಿ ಸಲು ಸಹ ಪ್ರಯತ್ನ ನಡೆದಿದೆ. ಈ ರಾಜಕೀಯ ಕಾರಣಗಳಲ್ಲದೆ ಹಿಂದೂಗಳಲ್ಲದವರನ್ನು ಹಿಂದೂ ಧರ್ಮಕ್ಕೆ ಸೇರಿಸಿಕೊಳ್ಳುವ ಯತ್ನವೂ ಈಗ ಹಿಂದೂ ಧರ್ಮದಲ್ಲಿ ನಡೆದಿದೆ. ಇದು ಹಿಂದೂ ಧರ್ಮದ ಮೇಲೆ ಇಸ್ಲಾಂ ಧರ್ಮವು ಮಾಡಿರುವ ಮುಖ್ಯ ಪ್ರಭಾವ. ಈ ಪ್ರಭಾವದ ಫಲವಾಗಿ ಹಿಂದೂ ಮುಸ್ಲಿಮರಲ್ಲಿ ಘರ್ಷಣೆಗಳೂ ಆಗಿವೆ. ಸನಾತನಿಹಿಂದೂಗಳು ಈ ಮತಾಂತರವನ್ನು ಒಪ್ಪುವುದಿಲ್ಲ. ಅನೇಕ ಕಾಲ ಈ ರೀತಿ ಮತಾಂತರವಾದ್ದರಿಂದ ಕಾಶ್ಮೀರದಲ್ಲಿ ಶೇಕಡ ೯೫ ರಷ್ಟು ಜನ ಹಿಂದೂಗಳು ಮುಸ್ಲಿಮರಾದರು, ಆದರೂ ಅವರು ತಮ್ಮ ಹಳೆಯ ಹಿಂದೂ ಸಂಪ್ರದಾಯಗಳನ್ನು ಇಟ್ಟು ಕೊಂಡರು. ೧೯ ನೆಯ ಶತಮಾನದ ಮಧ್ಯಭಾಗದಲ್ಲಿ ಈ ರೀತಿ ಮತಾಂತರ ಹೊಂದಿದವರ ನೇಕರು ಪುನಃ ಹಿಂದೂ ಧರ್ಮವನ್ನು ಅವಲಂಬಿಸಲು ಸಿದ್ದರಿದಾರೆಂದು ಅಲ್ಲಿನ ಹಿಂದೂ ರಾಜನಿಗೆ ತಿಳಿಯಿತು. ಆ ರೀತಿ ಮಾಡಲು ಸಾಧ್ಯವೇ ಎಂದು ತಿಳಿಯಲು ಕಾಶಿಯ ಪಂಡಿತರಲ್ಲಿಗೆ ಒಂದು ನಿಯೋಗ ಗೋಷ್ಠಿ ಯನ್ನು ಕಳುಹಿಸಿದನು. ಪಂಡಿತರುಗಳು ಈ ಮತಾಂತರಕ್ಕೆ ಒಪ್ಪದ ಕಾರಣ ಅದು ಅಲ್ಲಿಗೇನೆ ಮುಕ್ತಾಯವಾಯಿತು. ಹೊರಗಿನಿಂದ ಭಾರತಕ್ಕೆ ಬಂದ ಮುಸಲ್ಮಾನರು ಯಾವ ಹೊಸ ಕಾರ್ಯ ಕುಶಲತೆಯನ್ನೂ, ರಾಜಕೀಯ ಆರ್ಥಿಕ ರಚನೆಯನ್ನೂ ತರಲಿಲ್ಲ. ಮುಸಲ್ಮಾನರೆಲ್ಲ ಸಹೋದರರೆಂಬ ಧಾರ್ಮಿಕ ಮನೋಭಾವವಿದ್ದರೂ ವರ್ಗಿಕರಣವೂ ನವಾಬಗಿರಿಯೂ ಅವರಲ್ಲಿ ಬಹಳ ಇತ್ತು. ಕಾರ್ಯ ನೀತಿಯಲ್ಲಿ ವಸ್ತು ನಿರ್ಮಾಣ ಕಾಠ್ಯದಲ್ಲಿ ಕೈಗಾರಿಕೋದ್ಯಮಗಳನ್ನು ಏರ್ಪಡಿಸುವುದರಲ್ಲಿ ಭಾರತ ಕ್ಕಿಂತ ಬಹಳ ಹಿಂದೆ ಇದ್ದರು, ಆದ್ದರಿಂದ ಭಾರತದ ಆರ್ಥಿಕ ಜೀವನದಮೇಲೂ ಸಮಾಜ ಜೀವ ನವದಮೇಲೂ ಯಾವ ಮಹತ್ಪರಿಣಾಮವೂ ಆಗಲಿಲ್ಲ. ಹಿಂದಿನಂತೆ ಜೀವನವು ಮುಂದುವರಿಯಿತು, ಹಿಂದುಗಳು ಮುಸ್ಲಿಮರು ಇಬ್ಬರೂ ಅದರಲ್ಲಿ ಹೊಂದಿಕೊಂಡರು. ಸ್ತ್ರೀಯರ ಸ್ಥಿತಿಯು ಬಹಳ ಅವನತಿಗಿಳಿಯಿತು, ಹತ್ತೊಂಭತ್ತನೆಯ ಶತಮಾನದ ಇಂಗ್ಲೀಷ್ ಶಾಸನಕ್ಕಿಂತ ಉತ್ತಮವಿದ್ದರೂ ಹಿಂದೂಶಾಸನ ಪದ್ಧತಿಯಂತೆ ಸಹ ಆಸ್ತಿಯ ವಿಭಾಗದಲ್ಲಿ ಕುಟುಂಬ ಜೀವನದಲ್ಲಿ ಹಿಂದೂ ಮಹಿಳೆಯರಿಗೆ ನ್ಯಾಯವು ದೊರೆತಿರಲಿಲ್ಲ. ಈ ಆಸ್ತಿ ಹಂಚಿಕೆಯ ಶಾಸನವೆಲ್ಲ ಆಸ್ತಿಯು ಕುಟುಂಬದಿಂದ ಹೊರಗೆ ಹೋಗಬಾರದೆಂದು ಕುಟುಂಬರಕ್ಷಣೆಗಾಗಿ ಗಂಡಸರು ಮಾಡಿದ ಶಾಸನಗಳು. ಮದುವೆಯಾದೊಡನೆ ಸ್ತ್ರೀಯ ಮನೆತನವೇ ಬೇರೆಯಾಗುತ್ತಿತ್ತು. ಆರ್ಥಿಕ ದೃಷ್ಟಿ ಯಲ್ಲಿ ಸ್ತ್ರೀಯು ತಂದೆ, ಗಂಡ ಅಥವ ಮಗನ ಅಧೀನಳಾದರೂ ತನ್ನ ಸ್ವಂತ ಹಕ್ಕಿನ ಮೇಲೆ ಆಸ್ತಿ ಪಡೆಯುವ ಅಧಿಕಾರವಿತ್ತು. ಅನೇಕ ವಿಧದಲ್ಲಿ ಆಕೆಗೆ ಮತ್ಯಾದೆಯೂ, ಗೌರವವೂ ಇತ್ತು; ಸಾಮಾ ಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಸ್ವಾತಂತ್ರವೂ ಇತ್ತು. ಭಾರತೀಯ ಇತಿಹಾಸದಲ್ಲಿ ಮಹಾ ಮೇಧಾವಿಗಳೂ, ದಾರ್ಶನಿಕರೂ, ರಾಜ್ಯಾಡಳಿತನಡೆಸಿದವರೂ, ಯೋಧರೂ ಆದ ಅನೇಕ ಮಹಿಳೆಯರ ಹೆಸರುಗಳು ಪ್ರಸಿದ್ದ ಇವೆ. ಕ್ರಮೇಣ ಈ ಸ್ವಾತಂತ್ರವು ಕಡಮೆಯಾಯಿತು. ಇಸ್ಲಾಂ ಧರ್ಮದ ಪ್ರಕಾರ ಹೆಂಗಸಿಗೆ ಆಸ್ತಿಯ ಮೇಲೆ ಹೆಚ್ಚು ಅಧಿಕಾರವಿದ್ದರೂ ಅದರಿಂದ ಹಿಂದೂ ಮಹಿಳೆಯರ ಸ್ಥಿತಿಯು ಉತ್ತಮಗೊಳ್ಳಲಿಲ್ಲ. ಹಿಂದೂ ಮುಸ್ಲಿಂ ಮಹಿಳೆಯರಿಬ್ಬರ ಮೇಲೂ ಅದರಲ್ಲೂ