________________
ಹೊಸ ಸಮಸ್ಯೆಗಳು ಹೆಚ್ಚಾಗಿ ಮುಸ್ಲಿಂ ಮಹಿಳೆಯರಲ್ಲಿ ಆದ ಅನಿಷ್ಟ ಪರಿಣಾಮವೆಂದರೆ ಸ್ತ್ರೀಯರನ್ನು ಪ್ರತ್ಯೇಕಿಸುವ ಪರ್ದಾ ಪದ್ಧತಿಯ ಕಾಠಿಣ್ಯತೆ, ಉತ್ತರ ಹಿಂದೂಸ್ಥಾನದ ಮತ್ತು ಬಂಗಾಳದ ಶ್ರೀಮಂತರಲ್ಲಿ ಇದು ಬಹಳ ಹರಡಿತು. ಆದರೆ ಪಶ್ಚಿಮ ಮತ್ತು ದಕ್ಷಿಣ ಭಾರತಗಳು ಈ ದುಷ್ಪರಿಣಾಮಕ್ಕೆ ಬಲಿ ಬೀಳ ಲಿಲ್ಲ. ಉತ್ತರದಲ್ಲಿ ಸಹ ಇದು ಜನಸಾಮಾನ್ಯರಲ್ಲಿ ಆಚರಣೆಗೆ ಬರದೆ ಶ್ರೀಮಂತರಲ್ಲಿ ಮಾತ್ರ ಆಚರಣೆಯಲ್ಲಿತ್ತು. ಸ್ತ್ರೀಯರಿಗೆ ಈಗ ವಿದ್ಯಾಭ್ಯಾಸದ ಸೌಕರವೇ ಇಲ್ಲವಾಗಿ ಮನೆಯೇ ಅವರ ಸೆರೆಯಾಗಿ ಕಾರರ೦ಗವಾಯಿತು.* ಆತ್ಮ ವಿಕಾಸಕ್ಕೆ ಬೇರೆ ಅವಕಾಶವಿಲ್ಲದೆ ಸಂಕುಚಿತ ಬಂಧನದ ಜೀವನವು ಅವರ ಪಾಲಿಗೆ ಬಂದಿತು. ಪಾತಿವೃತ್ಯವೇ ಪರಮಧರ್ಮ ಅದಿಲ್ಲದಿರುವುದು ಮಹಾ ಪಾಪ ಎಂದು ಬೋಧಿಸಲಾಯಿತು. ಇದು ಮಾನವ ಕಲ್ಪಿತ ಶಾಸನವಾದರೂ, ತನಗೆ ಮಾತ್ರ ಮನುಷ್ಯ ಇದನ್ನು ಅನ್ವಯಮಾಡಿಕೊಳ್ಳಲಿಲ್ಲ, ಜಹಾಂಗೀರನ ಕಾಲದಲ್ಲಿ ತುಲಸೀದಾಸನು ಬರೆದ ಪ್ರಸಿದ್ಧ ಕಾವ್ಯನಾದ ಹಿಂದಿ ರಾಮಾಯಣದಲ್ಲಿ ಆತನು ಕೊಟ್ಟಿರುವ : ಸ್ತ್ರೀ ' ಚಿತ್ರವು ಬಹಳ ಅನ್ಯಾಯದ ವಿರೋಧ ಭಾವನೆಯ ಚಿತ್ರ. ಭಾರತದ ಮುಸ್ಲಿಂಮರೆಲ್ಲರೂ ಹಿಂದೂ ಧರ್ಮದಿಂದ ಮತಾಂತರ ಹೊಂದಿದವರೆಂಬ ಕಾರಣ ದಿಂದಲೋ, ಪರಸ್ಪರ ಸಂಪರ್ಕದಿಂದ ಹಿಂದೂಗಳಲ್ಲ ಮುಸ್ಲಿಂರಲ್ಲೂ ಒಂದೇ ಬಗೆಯ ನಡತೆ, ಅಭ್ಯಾಸಗಳು, ಜೀವನ ರೀತಿ ಕಲಾಭಿರುಚಿಗಳು, ಅದರಲ್ಲೂ ಉತ್ತರಹಿಂದೂ ಸ್ಥಾನದಲ್ಲಿ ಸಂಗೀತ, ಚಿತ್ರಕಲೆ, ವಾಸ್ತು ಶಿಲ್ಪ, ಆಹಾರ, ಉಡುಪು ಮತ್ತು ಸಾಮಾನ್ಯ ಆಚರಣೆಗಳಲ್ಲಿ ಒಂದೇ ಬಗೆಯ ಆಭಿ ರುಚಿಗಳು ಬೆಳೆದವು. ಒಂದೇ ಜನಾಂಗದವರಂತೆ, ಪರಸ್ಪರ ಹಬ್ಬಗಳಲ್ಲಿ, ಉತ್ಸವಗಳಲ್ಲಿ ಭಾಗ ವಹಿಸುತ್ತ ಒಂದೇ ಭಾಷೆಯನ್ನು ಮಾತನಾಡುತ್ತ ಒ೦ದೇ ರೀತಿಯಲ್ಲಿ ಜೀವನ ನಡೆಸುತ್ತ, ಒಂದೇ ಬಗೆಯ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತ ಶಾಂತರೀತಿಯಿಂದ ಒಟ್ಟಿಗೆ ಜೀವನ ನಡೆಸಿದರು. ಶ್ರೀಮಂತರು ಮತ್ತು ಜಾನುದಾರರು ಅವರ ಇತರ ಅನುಯಾಯಿಗಳು ರಾಜಸಭೆಯಿಂದ ಪ್ರೇರೇ ಪಣೆ ಪಡೆಯುತ್ತಿದ್ದರು. (ಅವರಿಗೆ ಭೂಮಿಯ ಒಡೆತನ ಯಾವುದೂ ಇರಲಿಲ್ಲ. ಗುತ್ತಿಗೆಯನ್ನೂ ವಸೂಲು ಮಾಡುತ್ತಲಿರಲಿಲ್ಲ. ಕೆಲವು ಭಾಗದ ಮೇಲೆ ರಾಜನಿಗೆ ಬರಬೇಕಾದ ಕಂದಾಯವನ್ನು ವಸೂಲು ಮಾಡಿಕೊಂಡು ಉಪಯೋಗಿಸುವ ಹಕ್ಕು ಮಾತ್ರ ಅವರದಾಗಿತ್ತು. ಈ ಹಕ್ಕು ಆಜೀವ ಪಠ್ಯ೦ತ ಮಾತ್ರ ಇರುತ್ತಿತ್ತು.) ಅವರ ಜೀವನವು ಬಹಳ ಕೃತಕ ಆಡಂಬರದ ಜೀವನವಾಗಿತ್ತು. ಒಂದೇ ರೀತಿಯ ಆಹಾರ, ಉಡುಪು, ಕಲಾಭಿರುಚಿ, ಸೈನ್ಯ ಶಿಕ್ಷಣ, ಬೇಟೆ, ಶೌರ್, ಆಟವಿನೋದ ಗಳನ್ನು ಅವರೆಲ್ಲರಲ್ಲೂ ನೋಡಬಹುದಾಗಿತ್ತು. ಪೋಲೋ ಆಟವು ಬಹಳ ಮೆಚ್ಚುಗೆಯ ಆಟವಾ ಗಿತ್ತು. ಆನೆಯ ಯುದ್ಧಗಳು ಲೋಕ ರಂಜಕವಾದವು. ಜಾತಿ ಪದ್ದತಿಯು ಸಮಷ್ಟಿ ಜೀವನಕ್ಕೆ ವಿರೋಧವಿದ್ದರೂ ಈ ಎಲ್ಲ ಸಂಪರ್ಕಗಳಿಂದ ಸಮಷಿ ಜೀವನವೂ ಬೆಳೆಯಿತು, ಬಹಳ ಅಪರೂಪವಾಗಿ ವಿನಾ ಪರಸ್ಪರ ವಿವಾಹಗಳು ಆಗುತ್ತಿರಲಿಲ್ಲ. ಆಗಲೂ ಪರಸ್ಪರ ಸಂಬಂಧ ಏರ್ಪಡದೆ ಹಿಂದೂ ಸ್ತ್ರೀಯರು ಮುಸ್ಲಿಮರಾಗುತ್ತಿದ್ದರು. ಪರಸ್ಪರ ಊಟ ಉಪಚಾರಗಳು ಇರುತ್ತಿರಲಿಲ್ಲ. ಇದರಲ್ಲಿ ಅಷ್ಟು ಕಟ್ಟು ನಿಟ್ಟು ಇರುತ್ತಿರಲಿಲ್ಲ. ಸ್ತ್ರೀಯರು ಪ್ರತ್ಯೇಕಿಸಲ್ಪಟ್ಟಿದ್ದ ಕಾರಣ ಸಾಮಾಜಿಕ ಜೀವನವು ಬೆಳೆಯಲಿಲ್ಲ. ಮುಸ್ಲಿಮರಲ್ಲಿ ಪರ್ದಾ ಬಹಳ ಕಠಿನವಿದ್ದುದರಿಂದ ಈ ತೊಂದರೆ ಅವರಲ್ಲಿ ಇನ್ನೂ ಹೆಚ್ಚು ಇತ್ತು. ಹಿಂದೂ ಮತ್ತು ಮುಸಲ್ಮಾನ್ ಪುರುಷರು ಪರಸ್ಪರ ಸೇರುತ್ತಿದ್ದರೂ, ಹಿಂದೂ ಮುಸ್ಲಿಂ ಸ್ತ್ರೀಯರಿಬ್ಬರಿಗೂ ಆ ಅವಕಾಶವಿರಲಿಲ್ಲ. ಶ್ರೀಮಂತ ಮನೆತನಗಳ ಮತ್ತು ಉತ್ತಮ ಜಾತಿಯ ಹಿಂದೂ ಮುಸ್ಲಿ೦ ಸ್ತ್ರೀಯರಿಗೆ ಪರಸ್ಪರ ಪರಿ ಚಯವಿಲ್ಲದೆ ದೂರವಿದ್ದು ಪ್ರತ್ಯೇಕ ಭಾವನೆಯಲ್ಲೇ ಬೆಳೆದರು.
- ಆದಾಗ್ಯೂ ಈ ಕಾಲದಲ್ಲೂ ವಿದ್ವನ್ಮಣಿಗಳೂ ಶ್ರೇಷ್ಠ ಆಡಳಿತಗಾರರೂ ಆದ ಆನೇಕ ಮಹಿಳೆಯರ ಹೆಸರುಗಳಿವೆ, ಹದಿನೆಂಟನೆಯ ಶತಮಾನದಲ್ಲಿ ಲಕ್ಷ್ಮಿ ದೇವಿಯು “ ಮಿತಾಕ್ಷರ ” ಹಿಂದೂ ಧರ್ಮಶಾಸ್ತ್ರದ ಮೇಲೆ ಒಂದು ಉತ್ಕೃಷ್ಟ ಟೀಕಾ ಗ್ರಂಥವನ್ನು ಬರೆದಿದ್ದಾಳೆ,