ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ووو ಭಾರತ ದರ್ಶನ ೧೩. ಮರಾಠರೂ ಮತ್ತು ಸ್ವಾಮ್ಯಕ್ಕಾಗಿ ಬ್ರಿಟಿಷರ ಹೋರಾಟವೂ : ಬ್ರಿಟಿಷರ ವಿಜಯ ೧೭೦೭ ರಲ್ಲಿ ಅವರಂಗಜೇಬನ ಮರಣದನಂತರ ನೂರುವರ್ಷಗಳ ಕಾಲ ಭಾರತದಲ್ಲಿ ನಾಡಿನ ಸ್ವಾಮ್ಯಕ್ಕಾಗಿ ಜಟಿಲವೂ, ಬಹುಮುಖವೂ ಆದ ಹೋರಾಟಗಳು ನಡೆದವು. ಮೊಗಲ್ ಚಕ್ರಾಧಿ ಪತ್ಯವು ಬೇಗ ನುಚ್ಚು ನೂರಾಯಿತು, ಸಾಮ್ರಾಜ್ಯದ ರಾಜ ಪ್ರತಿನಿಧಿಗಳೂ, ಗವರ್ನರುಗಳೂ ಬಹುಮಟ್ಟಿಗೆ ಸ್ವತಂತ್ರರಾದರು. ಮೊಗಲ್ ಸಂತತಿಯ ದೆಹಲಿಯ ರಾಜರುಗಳು ದುರ್ಬಲರೂ, ಇತರರ ಕೈಗೊಂಬೆಗಳೂ ಆಗಿದ್ದರೂ ಮೊಗಲ್ ಚಕ್ರವರ್ತಿಗಳ ವಂಶೀಕರ ಗೌರವ ಇನ್ನೂ ಸ್ವಲ್ಪ ಉಳಿದಿದ್ದ ಕಾರಣ ನಾಮ ಮಾತ್ರ ಪರಮಾಧಿಕಾರವು ಅವರಲ್ಲಿಯೇ ಉಳಿದಿತ್ತು. ಈ ಅಧೀನ ರಾಜ್ಯಗಳಿಗೂ ನಿಜವಾದ ಶಕ್ತಿ ಇರಲಿಲ್ಲ. ಆದರೆ ಪರಮಾಧಿಕಾರ ಸ್ಥಾಪನೆಯಲ್ಲಿ ಉದ್ಯುಕ್ತರಾದವರಿಗೆ ಕೆಲವರು ಸಹಾಯಕರಾದರು ಇನ್ನು ಕೆಲವರು ಅಡ್ಡಿ ಬಂದರು. ದಕ್ಷಿಣದಲ್ಲಿ ಸ್ಥಾನ ಪ್ರಾಮುಖ್ಯತೆ ದೊರೆಯಿತು. ಕೊನೆಕೊನೆಗೆ ಇದರಲ್ಲೂ ಹುರುಳಿಲ್ಲದೆ ಆತನೂ ಸಹ ಬಾಹ್ಯ ಶಕ್ತಿಗಳ ಕೈಗೊಂಬೆಯಾದನು. ಯಾವ ಕಷ್ಟ ಕ್ಕೂ, ಅಪಾಯಕ್ಕೂ ಸಿಕ್ಕದೆ ಪರರ ಸಂಕಟಸಮಯವನ್ನು ದುರುಪಯೋಗಪಡಿಸಿ ಲಾಭಪಡೆ ಯುವ ಕುಯುಕ್ತಿಯು ಆ ಸಂಸ್ಥಾನದ ನೀತಿಯಾಯಿತು. ” ಮೇಲೇಳಲಾಗದಷ್ಟು ಅನೀತಿ, ನಿಶ್ಯಕ್ತಿ. . . . . ಆದ್ದರಿಂದ ಅಧೀನತೆಯಲ್ಲಿ ಮುಳುಗುವ ಅನಿವಾರ” ಎಂದು ಸರ್ ಜಾನ್‌ಡೋರ್ ಹೈದರಾಬಾದ್ ವಿಷಯವಾಗಿ ಹೇಳಿದ್ದಾನೆ. ಮರಾಠರು ನೈಜಾಮನನ್ನು ತನಗೆ ಕಪ್ಪ ಕೊಡುವ ಅಧೀನ ಪಾಳೆಯಗಾರನೆಂದು ಭಾವಿಸಿದ್ದರು. ಇದರಿಂದ ತಪ್ಪಿಸಿಕೊಂಡು ಸ್ವತಂತ್ರನಾಗಲು ಯತ್ನಿ ಸಿದಾಗ ಕೂಡಲೆ ಸದೆಬಡೆದು ಆತನ ದುರ್ಬಲ ಪುಕ್ಕಲು ಸೇನೆಯನ್ನು ಓಡಿಸಿದರು. ಆಗತಾನೆ ಪ್ರಾಬಲ್ಯಕ್ಕೆ ಬರುತ್ತಿದ್ದ ಬ್ರಿಟಿಷ್ ಈಸ್ಟ್ ಇಂಡಿಯ ಕಂಪೆನಿಯನ್ನು ನೈಜಾಮನು ಮರೆಹೊಕ್ಕನು. ಅವರ ನೆರಳಿನಲ್ಲಿ ಒಬ್ಬ ಸಂಸ್ಥಾನಾಧೀಶನಾದನು. ಮೈಸೂರಿನ ಟಿಪೂ ಸುಲ್ತಾನನನ್ನು ಬ್ರಿಟಿಷರು ಸೋಲಿಸಿದಾಗ ಮೈ ಅಲುಗಾಡಿಸದೆ ಹೈದರಾಬಾದು ತನ್ನ ರಾಜ್ಯವನ್ನು ವಿಸ್ತರಿಸಿ ಕೊಂಡಿತು. - ೧೭೮೪ರಲ್ಲಿ ವಾರನ್ ಹೇಸ್ಟಿಂಗ್ಸ್ ನೈಜಾಮನ ವಿಷಯ ಬರೆಯುತ್ತ “ ಆತನ ರಾಜ್ಯ ಸಣ್ಣದು, ಉತ್ಪತ್ತಿಯೇ ಇಲ್ಲ; ಆತನ ಸೈನ್ಯಬಲವು ತೃಣಪ್ರಾಯವಿದೆ, ತನ್ನ ಜೀವನದಲ್ಲಿ ಯಾವಾಗಲೂ ಧೈರ್ಯವನ್ನು ತೋರಿಸಿದವನಲ್ಲ, ಸಾಹಸದ ಮನೋಭಾವವೇ ಆತನಲ್ಲಿಲ್ಲ. ತನ್ನ ನೆರೆಹೊರೆಯವರಲ್ಲಿ ಯುದ್ಧವನ್ನು ಎಬ್ಬಿಸಿ, ತಾನು ಯಾರಕಡೆಯೂ ಯಾವ ಯುದ್ಧದಲ್ಲಿ ಭಾಗವಹಿಸದೆ ಅವರ ದೌರ್ಬ ಲ್ಯವನ್ನೂ ಕಷ್ಟ ಸಮಯವನ್ನೂ ಉಪಯೋಗಿಸಿಕೊಂಡು ಲಾಭ ಪಡೆಯುವುದೇ ಸದಾ ಆತನ ಮುಖ್ಯ ನೀತಿಯಾಗಿದೆ. ಯುದ್ಧ ಅನಿವಾರವೆಂದ ಸಮಯದಲ್ಲಿ ತಪ್ಪಿಸಿಕೊಳ್ಳಲು ಯಾವ ಕೆಲಸ ಮಾಡುವು ದಕ್ಕೂ ಹೇಸುವುದಿಲ್ಲ” ಎಂದು ಹೇಳಿದ್ದಾನೆ.* ಹದಿನೆಂಟನೆಯ ಶತಮಾನದಲ್ಲಿ ಭಾರತದಲ್ಲಿ ರಾಜ್ಯಾಧಿಕಾರ ಪಡೆಯಲು ನಿಜವಾಗಿ ಪ್ರಯತ್ನ ಮಾಡಿದ ಶಕ್ತಿಗಳೆಂದರೆ ನಾಲ್ಕು; ಎರಡು ಭಾರತೀಯ ಎರಡು ವಿದೇಶೀ, ಭಾರತೀಯರಲ್ಲಿ ದಕ್ಷಿಣದಲ್ಲಿ ಹೈದರಾಲಿ ಮತ್ತು ಆತನ ಮಗ ಟಿಪೂ ಸುಲ್ತಾನ್ ಮತ್ತು ಮರಾಠರು, ವಿದೇಶೀಯರಲ್ಲಿ ಫ್ರೆಂಚರು ಮತ್ತು ಬ್ರಿಟಿಷರು. ಇವರಲ್ಲಿ ಮೊದಲನೆಯ ಅರ್ಧಶತಮಾನದಲ್ಲಿ ಮರಾಠರು ಹಿಂದೂಸ್ಥಾನದಲ್ಲೆಲ್ಲ ದಿಗ್ವಿಜಯಹೊಂದಿ ಪ್ರಾಬಲ್ಯ ಪಡೆದು ಮೊಗಲ್ ಚಕ್ರಾಧಿಪತ್ಯಕ್ಕೆ ಉತ್ತರಾಧಿಕಾರಿಗಳಾಗುವುದು ಅನಿವಾರವೆಂದು ತೋರಿತು. ೧೭೩೦ ರಲ್ಲೇ ಅವರ ಸೈನ್ಯಗಳು ದೆಹಲಿಯ ಹೆಬ್ಬಾಗಿಲಿಗೆ ಬಂದವು. ಅವರನ್ನು ಎದುರಿಸುವವರೇ ಇರಲಿಲ್ಲ. ಆಗತಾನೇ ೧೭೩೯ ರಲ್ಲಿ ವಾಯವ್ಯ ಪ್ರಾಂತ್ಯದ ಒಬ್ಬ ದಂಗೆಕೋರನು ದೆಹಲಿಯ ಮೇಲೆ ಬಿದ್ದು ಜನರನ್ನು ಕೊಂದು ಕೊಳ್ಳೆ ಹೊಡೆದು ಮಯೂರ ಸಿಂಹಾಸನವನ್ನೂ ಅಪಾರ ಐಶ್ವರವನ್ನೂ ದೋಚಿ ಕೊಂಡು ಹೋದನು. ದೆಹಲಿಯ ಸಿಂಹಾಸನಾಧೀಶರು, ಯುದ್ಧದ ಅನುಭವವಿಲ್ಲದ ಹೇಡಿಗಳೂ, ಥಾಮ್ಸ ನ್ರ 14 The making of the Indian Princes” (1943) ಎಂಬ ಗ್ರಂಥದಿಂದ