________________
ಹೊಸ ಸಮಸ್ಯೆಗಳು ಸತ್ವಹೀನರೂ ಆಗಿದ್ದುದರಿಂದ ಕೊಳ್ಳೆ ಹೊಡೆಯುವುದು ಬಹಳ ಸುಲಭವಾಯಿತು. ನಾದಿರ್ ಷಹ ಮರಾಠರನ್ನು ಎದುರಿಸಲೇ ಇಲ್ಲ, ಅವನ ಸುಲಿಗೆಯಿಂದ ಮರಾಠರಿಗೆ ಸಹಾಯವಾಯಿತು. ಕ್ರಮೇಣ ಅವರು ಪಂಜಾಬಿಗೂ ಹರಡಿದರು. ಮರಾಠರ ಅಭ್ಯುದಯವು ಮೂರ್ತಿವೆತು, ನಾದಿರಷಾನ ಕೊಳ್ಳೆಯಿಂದ ಎರಡು ಪರಿಣಾಮಗಳಾದವು. ಮೊಗಲ ರಾಜರ ಅಧಿಕಾರಬಲ ಮತ್ತು ಶಕ್ತಿಯ ಹುರುಳನ್ನು ಬೈಲಿಗೆಳೆದನು. ಅಲ್ಲಿಂದ ಮುಂದೆ ಅವರು, ಯಾರು ಬಲಿಷ್ಠರಾಗಿ ಅಧಿ ಕಾರ ನಡೆಸಲು ಸಮರ್ಥರಿದ್ದರೋ ಅವರ ಕೈಗೊಂಬೆಗಳಾಗಿ ರಾಜಶವಗಳಾದರು. ನಾದಿರ್ ಷಾ ಬರುವ ಹೊತ್ತಿಗೇನೆ ದುರ್ಬಲರಾಗಿದ್ದರು. ಅವನು ಬಂದು ಅವರನ್ನು ಪೂರೈಸಿದನು. ಆದರೂ ಸಂಪ್ರದಾಯ ಬಲದಿಂದ ಪ್ಲಾಸಿ ಕದನದವರೆಗೂ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯವರು ಮತ್ತು ಇನ್ನೂ ಅನೇಕರು ಅವರ ಗೌರವಾರ್ಥವಾಗಿ ಇನ್ನೂ ಕಾಣಿಕೆಗಳನ್ನು ಕಳುಹಿಸುತ್ತಿದ್ದರು: ಅನಂತ ರವೂ ಬಹಳ ಕಾಲದವರೆಗೂ ಈಸ್ಟ್ ಇಂಡಿಯ ಕಂಪೆನಿಯು ದೆಹಲಿ ಚಕ್ರವರ್ತಿಯ ಪ್ರತಿನಿಧಿ ಎಂದೇ ಕೆಲಸಮಾಡಿತು. ೧೮೩೫ರವರೆಗೆ ಆತನ ಹೆಸರಿನಲ್ಲಿಯೇ ನಾಣ್ಯಗಳನ್ನು ಅಚ್ಚು ಹಾಕಿಸುತ್ತಿತ್ತು. ಎರಡನೆಯ ಪರಿಣಾಮವೆಂದರೆ ಆಫ್ಘಾನಿಸ್ಥಾನವು ಇಂಡಿಯದಿಂದ ಪ್ರತ್ಯೇಕವಾದುದು. ಸಹ ಸ್ರಾರು ವರ್ಷಗಳಿಂದ ಭಾರತದ ಒಂದು ಭಾಗವಾಗಿದ್ದ ಆಫ್ಘಾನಿಸ್ಥಾನವು ಈಗ ಪ್ರತ್ಯೇಕವಾಗಿ ನಾದಿರ್ ಷಾನ ರಾಜ್ಯದ ಒಂದು ಭಾಗವಾಯಿತು. ಕೆಲವು ದಿನಗಳ ತರುವಾಯ ನಾದಿರ್ ಷಾನ ಅಧಿಕಾರಿಗಳೇ ಆತನನ್ನು ಕೊಲೆಮಾಡಿದರು. ಆಫ್ಘಾನಿಸ್ಥಾನವು ಸ್ವತಂತ್ರ ರಾಷ್ಟವಾಯಿತು. ನಾದಿರ್ ಷಾನ ಮುತ್ತಿಗೆಯಿಂದ ಮರಾಠರ ಶಕ್ತಿಯು ಸ್ವಲ್ಪವೂ ಕುಗ್ಗಲಿಲ್ಲ ; ಪಂಜಾಬಿನಲ್ಲಿ ಮುಂದುವರಿಯುತ್ತಲೇ ಇದ್ದರು. ಆದರೆ ೧೭೬೧ರಲ್ಲಿ ಪಾನಿಪತ್ಯದಲ್ಲಿ ಆಫ್ಘಾನಿಸ್ಥಾನದ ದೊರೆಯಾದ ಅಹಮದ್ ಷಾ ದುರಾನಿಯ ಕೈಯಲ್ಲಿ ಮರಾಠರಿಗೆ ದೊಡ್ಡ ಸೋಲಾಯಿತು. ಮರಾಠ ಸೈನ್ಯದ ಉತ್ತಮ ಯೋಧರೆಲ್ಲರೂ ಈ ಯುದ್ಧದಲ್ಲಿ ಮಡಿದರು ; ಮರಾಠರ ಚಕ್ರಾಧಿಪತ್ಯದ ಕನಸೂ ಒಡೆದು ನುಚ್ಚು ನೂರಾಯಿತು, ಕ್ರಮೇಣ ಚೇತರಿಸಿಕೊಂಡು ಪುಣೆಯ ಪೇಳ್ವೆಯ ನೇತೃತ್ವದಲ್ಲಿ ಒಂದು ಬಗೆಯ ಸಂಯುಕ್ತ ಪದ್ದತಿಗೆ ಒಳಪಟ್ಟ ಕೆಲವು ಸ್ವತಂತ್ರ ರಾಜ್ಯಗಳನ್ನು ಕಟ್ಟಿದರು. ಅದರಲ್ಲಿ ಗ್ವಾಲಿ ಯರ್‌ನ ಸಿಂಧ್ಯ, ಇಂದೂರಿನ ಹೋಳ್ಳಿ, ಬರೋಡೆಯ ಗಾಯಕವಾಡರು ಮುಖ್ಯರು. ಪಶ್ಚಿಮ ಮತ್ತು ಮಧ್ಯ ಭಾರತದ ಬಹು ಭಾಗವು ಸಂಯುಕ್ತ ರಾಜ್ಯಾಡಳಿತಕ್ಕೆ ಅಧೀನವಾಗಿತ್ತು. ಆದರೆ ಭಾರತ ದಲ್ಲಿ ಇಂಗ್ಲಿಷ್ ಕಂಪೆನಿಯು ಒಂದು ಪ್ರಬಲ ರಾಜ್ಯಶಕ್ತಿಯಾಗುತ್ತಿದ್ದಾಗ ಪಾನಿಪತ್ಯದಲ್ಲಿ ಅಹಮ್ಮದ್ ಷಾನ ಕೈಯಲ್ಲಾದ ಸೋಲಿನಿಂದ ಮರಾಠರ ಶಕ್ತಿಯು ಬಹಳ ಕುಂದಿತು. ಬಂಗಾಲದಲ್ಲಿ ಕೈವನು ರಾಜದ್ರೋಹ ಮತ್ತು ಸ್ಪಷ್ಟನೆ ಪತ್ರಗಳಿಂದಲೂ, ಅತ್ಯಲ್ಪ ಯುದ್ದ ದಿ೦ದಲೂ ೧೭೫೨ರಲ್ಲಿ ಪ್ಲಾಸಿ ಕದನವನ್ನು ಗೆದ್ದನು, ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಆರಂಭದ ದಿನವೆಂದು ಆ ದಿನವು ಪ್ರಸಿದ್ದಿ ಯಾಯಿತು, ಆ ಆರಂಭದ ಕಹಿ ನೆನಪು ಇನ್ನೂ ಹೋಗಿಲ್ಲ. ಸ್ವಲ್ಪ ಕಾಲದಲ್ಲಿ ಇಂಗ್ಲಿಷರು ಬಂಗಾಲ ಮತ್ತು ಬೀಹಾರ್ ಎಲ್ಲವನ್ನೂ ಆಕ್ರಮಿಸಿದರು. ಈ ಆಕ್ರಮಣದ ಮೊದಲನೆಯ ಫಲವೆಂದರೆ ಈ ಎರಡು ಪ್ರಾಂತ್ಯಗಳಲ್ಲಿನ ೧೭೭೦ರ ಘೋರ ಕ್ಷಾಮ. ವಿಶೇಷ ಜನ ಬಾಹುಳ್ಯವುಳ್ಳ ವಿಶಾಲವಾದ ಫಲವತ್ತಾದ ಈ ಎರಡು ಪ್ರಾಂತ್ಯಗಳಲ್ಲಿ ಮೂರನೆಯ ಒಂದು ಭಾಗದಷ್ಟು ಜನರು ಮರಣಹೊಂದಿದರು. - ಪ್ರಪಂಚದ ಪ್ರಾಬಲ್ಯಕ್ಕಾಗಿ ಪರಸ್ಪರ ನಡೆದ ಯುದ್ಧದ ಒಂದು ಭಾಗವಾಗಿ ಫ್ರೆಂಚರಿಗೂ ಬ್ರಿಟಿಷರಿಗೂ ದಕ್ಷಿಣ ಭಾರತದಲ್ಲಿ ನಡೆದ ಯುದ್ಧದಲ್ಲಿ ಇಂಗ್ಲಿಷರು ಜಯಶಾಲಿಗಳಾಗಿ ಫ್ರೆಂಚರನ್ನು ಭಾರತದಿಂದ ಹೊರನೂಕಿದರು. ಭಾರತದಿಂದ ಫ್ರೆಂಚರು ಹೊರಟು ಹೋದಮೇಲೆ ರಾಜ್ಯಾಧಿಕಾರಕ್ಕಾಗಿ ಪೈಪೋಟಿ ನಡೆಸುವವರು ಮೂರು ಜನರು ಉಳಿದರು. ಸಂಯುಕ್ತ ಮಹರಾಷ್ಟ್ರ, ದಕ್ಷಿಣದಲ್ಲಿ ಹೈದರಾಲಿ ಮತ್ತು ಬ್ರಿಟಿಷರು. ಪ್ಲಾಸಿ ಕದನವನ್ನು ಗೆದ್ದು ಬಂಗಾಲ ಮತ್ತು ಬಿಹಾರದಲ್ಲಿ ಬೇರೂರಿ ಹರಡಿದ್ದರೂ ಭಾರತದಲ್ಲಿ ಬ್ರಿಟಿಷರು