________________
೨೮೨ ಭಾರತ ದರ್ಶನ ಯುಕ್ತ ವಿಜ್ಞಾನ ವಿಷಯಗಳನ್ನು ವಿದ್ಯಾಭ್ಯಾಸಕ್ರಮದಲ್ಲಿ ಸೇರಿಸಬೇಕೆಂದು ಒತ್ತಾಯಮಾಡಿ ಗೌರರ್ ಜನರಲ್ಗೆ ಪತ್ರ ಬರೆದನು, ಆತನು ಮಹಾವಿದ್ವಾಂಸನೂ, ಸಂಶೋಧಕನೂ ಮಾತ್ರವಲ್ಲದೆ ಉನ್ನತ ಸಮಾಜ ಸುಧಾರಕ ನಾಗಿದ್ದನು. ಬಾಲ್ಯದಲ್ಲಿ ಇಸ್ಲಾಂ ಧರ್ಮವೂ, ಅನಂತರ ಕ್ರೈಸ್ತಮತವೂ ಆತನಮೇಲೆ ವಿಶೇಷ ಪರಿಣಾಮ ಮಾಡಿದ್ದರೂ ತನ್ನ ಮೂಲಧರ್ಮವನ್ನು ಬಿಡಲಿಲ್ಲ, ಆದರೆ ಧರ್ಮದ ಹೆಸರಿನಲ್ಲಿ ನಡೆ ಯುತ್ತಿದ್ದ ದುವ್ಯಾಪಾರಗಳನ್ನೂ, ದುರುಪಯೋಗವನ್ನೂ ವಿರೋಧಿಸಿ ಹಿಂದೂಧರ್ಮವನ್ನು ಸುಧಾರಿಸಲು ಪ್ರಯತ್ನ ಪಟ್ಟನು. - ಸತಿ ಪದ್ದತಿಯನ್ನು ಬ್ರಿಟಿಷ್ ಸರಕಾರವು ನಿಲ್ಲಿಸಲು ಆತನ ಹೋರಾಟವೇ ಕಾರಣ, ಸತಿ ಅಥವ ಸಹಗಮನ ಪದ್ದತಿಯು ಎಲ್ಲ ಕಡೆಯಲ್ಲಿ ಆಚರಣೆಯಲ್ಲಿರಲಿಲ್ಲ. ಉನ್ನತವರ್ಗದ ಸ್ವಲ್ಪ ಜನರಲ್ಲಿ ಮಾತ್ರ ಆಚರಣೆಯಲ್ಲಿತ್ತು, ಯಜಮಾನನು ಸತ್ತಾಗ ಆತನನ್ನೇ ಅವಲಂಬಿಸಿದ್ದ ಪರಿವಾರದವರು ಮತ್ತು ಸೇವಕರು ಆತನೊಂದಿಗೆ ಸಾಯುವ ಪದ್ದತಿಯು ಸಿಥಿಯನ್ ಟಾರ್ಟರರಲ್ಲಿ ಅನುಷ್ಠಾನದಲ್ಲಿತ್ತು. ಪ್ರಾಯಶಃ ಅವರಿಂದಲೇ ಭಾರತಕ್ಕೂ ಬಂದು 'ಸತಿ' ಪದ್ದ ತಿಯು ಆರಂಭವಾಗಿರಬೇಕು. ಪ್ರಾಚೀನ ಸಂಸ್ಕೃತ ಸಾಹಿತ್ಯದಲ್ಲಿ 'ಸತಿ'ಯನ್ನು ನಿಷೇಧಿಸಲಾಗಿದೆ. ಅದನ್ನು ನಿಲ್ಲಿಸಬೇಕೆಂದು ಅಕೃರ್ ಬಹಳ ಪ್ರಯತ್ನ ಪಟ್ಟನು. ಮರಾಠರು ಸಹ ಅದನ್ನು ವಿರೋ ಧಿಸಿದರು. ಭಾರತೀಯ ವೃತ್ತ ಪತ್ರಿಕೆಯನ್ನು ಸ್ಥಾಪಿಸಿದ ಮೊದಲಿಗರಲ್ಲಿ ರಾಮಮೋಹನರಾಯನೂ ಒಬ್ಬ. ೧೭೮೦ರಿಂದ ಈಚೆಗೆ ಆಂಗ್ಲರು ಭಾರತದಲ್ಲಿ ಅನೇಕ ವೃತ್ತ ಪತ್ರಿಕೆಗಳನ್ನು ಪ್ರಕಟಿಸಿದರು. ಸರಕಾರ ವನ್ನು ಕಟುವಾಗಿ ಟೀಕೆ ಮಾಡುತ್ತಿದ್ದದ್ದರಿಂದ ಸರಕಾರದ ವಿರೋಧವನ್ನು ಕಟ್ಟಿಕೊಂಡು ಪ್ರಬಲ ಸರಕಾರದ ಹತೋಟಿಗೆ ಅವರು ಗುರಿಯಾಗಬೇಕಾಯಿತು. ಭಾರತದಲ್ಲಿ ವೃತ್ತ ಪತ್ರಿಕಾ ಸ್ವಾತಂತ್ರ್ಯ ಕ್ಯಾಗಿ ಮೊದಲು ಹೋರಾಡಿದವರು ಆಂಗ್ಲರು, ಅವರಲ್ಲಿ ಜೇಮ್ಸ್ ಸಿಲ್ಕ್ ಬಕಿಂಫ್ಯಾಮ್ ಎಂಬಾತ ನನ್ನು ಗಡೀಪಾರು ಮಾಡಿದರು. ಭಾರತೀಯರು ಸ್ವಂತ ಸಂಪಾದಕರಾಗಿ ಮುದ್ರಣಮಾಡಿದ ಮೊದಲ ವೃತ್ತಪತ್ರಿಕೆ ಹೊರಟಿದ್ದು ೧೮೧೮ರಲ್ಲಿ. ಅದೇ ವರ್ಷ ಶ್ರೀರಾಮಪುರದ ಬ್ಯಾಪ್ಟಿಸ್ಟ್ ಮತ ಪ್ರಚಾರಕರು ಬಂಗಾಳಿಯಲ್ಲಿ ಹೊರಡಿಸಿದ ಮಾಸಪತ್ರಿಕೆ ಮತ್ತು ವಾರಪತ್ರಿಕೆಗಳೇ ಭಾರತೀಯ ಭಾಷೆಯೊಂದರಲ್ಲಿ ಹೊರಟ ಮೊದಲನೆಯ ವೃತ್ತ ಪತ್ರಿಕೆಗಳು. ಅನಂತರ ಕಲ್ಕತ, ಮದ್ರಾಸ್, ಮತ್ತು ಮುಂಬೈ ನಗರಗಳಲ್ಲಿ ವೃತ್ತ ಪತ್ರಿಕೆಗಳೂ ವಾರ ಮತ್ತು ಮಾಸಿಕ ಪತ್ರಿಕೆಗಳೂ ಮೇಲಿಂದ ಮೇಲೆ ಹೊರಬಿದ್ದವು. ಈ ಹೊತ್ತಿಗೆ, ಅನೇಕ ಏರಿಳಿತಗಳಿಂದ ಇಂದಿನವರೆಗೂ ಸತತವಾಗಿ ನಡೆದು ಬಂದಿರುವ ವೃತ್ತಪತ್ರಿಕಾ ಸ್ವಾತಂತ್ರ್ಯದ ಹೋರಾಟವು ಆರಂಭವಾಯಿತು. ವಿಚಾರಣೆಯಿಲ್ಲದೆ ಸೆರೆಮನೆಯಲ್ಲಿಡ ಬಹುದಾದ ಕ್ರೂರಶಾಸನವು ಕಡತಕ್ಕೇರಿದ್ದು ೧೮೧೮ರಲ್ಲಿ. ಈ ಶಾಸನ ಇನ್ನೂ ಆಚರಣೆಯಲ್ಲಿದೆ. ೧೨೬ ವರ್ಷಗಳಾದಾಗ್ಯೂ ಅದರ ಅಧಿಕಾರ ವ್ಯಾಪ್ತಿಯಲ್ಲಿ ಇನ್ನೂ ಅನೇಕರು ಸೆರೆಮನೆಯಲ್ಲಿ ಕೊಳೆಯುತ್ತಿದ್ದಾರೆ. ರಾಮಮೋಹನರಾಯ್ ಅನೇಕ ವೃತ್ತಪತ್ರಿಕೆಗಳ ಸಂಬಂಧ ಇಟ್ಟುಕೊಂಡಿದ್ದ. ಬಂಗಾಲಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಒಂದು ದ್ವಿಭಾಷಾಪತ್ರಿಕೆಯನ್ನೂ, ದೇಶಾದ್ಯಂತ ಪ್ರಚಾರವಾಗಲೆಂದು. ಆಗ ಭಾರತದ ಉನ್ನತ ವರ್ಗದ ಭಾಷೆಯಾಗಿದ್ದ ಪಾರಸಿಯಲ್ಲಿ ಒಂದು ವಾರಪತ್ರಿಕೆಯನ್ನೂ ಹೊರಡಿಸಿದನು. ೧೮೨೩ರಲ್ಲಿ ವೃತ್ತಪತ್ರಿಕೆಗಳ ಹತೋಟ ಶಾಸನಕ್ಕೆ ಬಲಿಯಾಗಿ ಆ ಪತ್ರಿಕೆ ನಿಂತು ಹೋಯಿತು, ರಾಮಮೋಹನನೂ, ಇತರರೂ ಆ ಶಾಸನವನ್ನು ತೀವ್ರ ವಿರೋಧಿಸಿ ಇಂಗ್ಲೆಂಡಿನ ದೊರೆಗೆ ಒಂದು ದೂರು ಸಹ ಕಳುಹಿಸಿದರು.