ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೊನೆಯ ಅಂಕ ರಾಮಮಹನರಾಯನ ವೃತ್ತಪತ್ರಿಕೋದ್ಯಮಕ್ಕೂ ಆತನ ಸಮಾಜ ಸುಧಾರಣಾಕಾರಕ್ಕೂ ನಿಕಟಸಂಬಂಧವಿತ್ತು. ಆತನ ಸಂಯೋಜಕದೃಷ್ಟಿಯೂ ಮತ್ತು ಸರ್ವ ಸಮ್ಮಷ್ಟಿಯ ಸನಾತನ ಸಂಪ್ರದಾಯ ಶರಣರಿಗೆ ಸರಿಬೀಳದೆ ಆತನ ಸುಧಾರಣಾ ಕಾರ್ಯಕ್ಕೆ ಅವರು ಉಗ್ರವಾಗಿ ಪ್ರತಿ ಭಟಿಸಿದರು. ಆದರೆ ಆತನಿಗೂ ಪ್ರಬಲ ಪ್ರೋತ್ಸಾಹಕರಿದ್ದರು. ಬಂಗಾಳದ ಸುಧಾರಣಾ ಪ್ರಗತಿ ಯಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಠಾಕೂರ ವಂಶದವರೇ ಮುಖ್ಯರು. ದೆಹಲಿಯ ಚಕ್ರವರ್ತಿಯ ಪರವಾಗಿ ರಾಮಮೋಹನನು ಇಂಗ್ಲೆಂಡಿಗೆ ಹೋಗಿ ೧೮೩೦ ರ ಸುಮಾರಿನಲ್ಲಿ ಬ್ರಿಸ್ಟಲ್ ನಲ್ಲಿ ಕಾಲವಾದನು. ರಾಮಮೋಹನರಾಯ್, ಠಾಕೂರರು, ಮತ್ತು ಇತರರು ಸ್ವಪ್ರಯತ್ನದಿಂದ ಕಲಿತವರು. ಆಗ ಇಂಗ್ಲಿಷ್ ಶಾಲೆಗಳಾಗಲಿ, ಕಾಲೇಜುಗಳಾಗಲಿ ಇರಲಿಲ್ಲ; ಭಾರತೀಯರಿಗೆ ಇಂಗ್ಲಿಷ್ ಕಲಿಸ ಬಾರದೆಂಬುದೇ ಸರ್ಕಾರದ ನೀತಿಯಾಗಿತ್ತು. ೧೭೮೧ ರಲ್ಲಿ ಸಂಸ್ಕೃತ ಅಭ್ಯಾಸಕ್ಕಾಗಿ ಹಿಂದೂ ಕಾಲೇಜನ್ನೂ, ಅರಬ್ಬಿ ಭಾಷೆಯನ್ನು ಕಲಿಸಲು ಕಲ್ಕತ್ತ ಮದ್ರಸವನ್ನೂ ಸರ್ಕಾರವು ಕಲ್ಕತ್ತೆ ಯಲ್ಲಿ ಆರಂಭಿಸಿತು. ೧೭೯೧ ರಲ್ಲಿ ಕಾಶಿಯಲ್ಲಿ ಸಂಸ್ಕೃತ ಕಾಲೇಜ್ ಆರಂಭವಾಯಿತು. ಪ್ರಾಯಶಃ ೧೮೨೦ ರ ಸುಮಾರಿನಲ್ಲಿ ಕೆಲವು ಕ್ರೈಸ್ತ ಪ್ರಚಾರಕ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸಲಾರಂಭಿಸಿದರು, ೧೮೨೦ ರ ಸುಮಾರಿನಲ್ಲಿ ಇಂಗ್ಲಿಷ್ ಕಲಿಸಬೇಕೆಂದು ಸರಕಾರದ ಕೆಲವು ಅಧಿಕಾರಿಗಳು ಅಭಿಪ್ರಾಯ ಪಟ್ಟ ರೂ ಅದನ್ನು ವಿರೋಧಿಸಿದರು. ಆದರೆ ಪ್ರಾಯೋಗಿಕವಾಗಿ ದೆಹಲಿಯ ಅರಬ್ಬಿ ಶಾಲೆಯಲ್ಲಿ ಮತ್ತು ಕಲ್ಕತ್ತೆಯ ಕೆಲವು ಶಾಲೆಗಳಲ್ಲಿ ಇಂಗ್ಲಿಷ್ ತರಗತಿಗಳನ್ನು ಆರಂಭಿಸಿದರು. ಕಟ್ಟಕಡೆಗೆ ೧೮೩೫ ರಲ್ಲಿ ಮೆಕಾಲೆಯ ಅಭಿಪ್ರಾಯದಂತೆ ಶಿಕ್ಷಣ ಕ್ರಮದಲ್ಲಿ ಇಂಗ್ಲಿಷ್ ವಿದ್ಯಾಭ್ಯಾಸಕ್ಕೆ ಬೆಂಬಲ ದೊರೆತು ಕಲ್ಕತ್ತೆಯಲ್ಲಿ ಪ್ರೆಸಿಡೆನ್ಸಿ ಕಾಲೇಜ್ ಆರಂಭವಾಯಿತು. ೧೮೫೭ ರಲ್ಲಿ ಕಲ್ಕತ್ತ, ಮುಂಬಯಿ ಮದರಾಸ್ ವಿಶ್ವವಿದ್ಯಾನಿಲಯಗಳು ಜನ್ಮತಾಳಿದವು. ಭಾರತೀಯರಿಗೆ ಇಂಗ್ಲಿಷ್ ಕಲಿಸಬಾರ ದೆಂಬ ಬ್ರಿಟಿಷ್ ಸರಕಾರದ ಅಭಿಪ್ರಾಯದಂತೆ ಬೇರೆ ಕಾರಣಗಳಿಗಾಗಿ ಆಂಗ್ಲರಿಗೆ ಸಂಸ್ಕೃತ ಕಲಿಸ ಬಾರದೆಂದು ಬ್ರಾಹ್ಮಣ ವಿದ್ವಾಂಸರ ಅಭಿಪ್ರಾಯ ವಿತ್ತು, ಬಹುಭಾಷಾ ಪಂಡಿತನೂ, ವಿದ್ವಾಂಸನೂ ಆದ ಸರ್ ವಿಲಿಯಮ್ ಜೋನ್ಸ್ ಸುಪ್ರೀಮ್ ಕೋರ್ಟಿನ ನ್ಯಾಯಾಧೀಶನಾಗಿ ಭಾರತಕ್ಕೆ ಬಂದೆ ಡನೆ ಸಂಸ್ಕೃತ ಕಲಿಯಬೇಕೆಂದು ಆಸೆಪಟ್ಟನು. ವಿಶೇಷ ಬಹುಮಾನ ಕೊಡುತ್ತೇವೆಂದರೂ ಬೇಕಿಲ್ಲದ ಪರಕೀಯರಿಗೆ ತಮ್ಮ ಪವಿತ್ರ ಭಾಷೆಯನ್ನು ಕಲಿಸಲು ಬ್ರಾಹ್ಮಣರು ಯಾರೂ ಮುಂದೆ ಬರಲಿಲ್ಲ. ಕೊನೆಗೆ ಜೋನ್ಸ್ ಒಬ್ಬ ಬ್ರಾಹ್ಮಣೇತರ ವೈದ್ಯನೊಬ್ಬನ ಸಹಾಯದಿಂದ ಅವನು ಹೇಳಿದ ವಿಚಿತ್ರ ಕಠಿಣ ನಿರ್ಬಂಧಗಳಿಗೆ ಒಪ್ಪಿ ಸಂಸ್ಕೃತ ಕಲಿತನು. ಭಾರತದ ಪ್ರಾಚೀನ ಭಾಷೆಯನ್ನು ಕಲಿಯಲು ಅವನ ಜ್ಞಾನದಾಹ ಅಷ್ಟು ತೀವ್ರವಿದ್ದುದರಿಂದ ಎಲ್ಲ ನಿರ್ಬಂಧಗಳಿಗೂ ಒಪ್ಪಿದನು. ಸಂಸ್ಕೃತ ಸಾಹಿತ್ಯ ದಿಂದ ಅದರಲ್ಲೂ ಪ್ರಾಚೀನ ಭಾರತೀಯ ನಾಟಕಗಳ ಪರಿಚಯದಿಂದ ಮುಗ್ಧನಾದನು. ಸಂಸ್ಕೃತ ಸಾಹಿತ್ಯ ಸಂಪತ್ತು ಯೂರೋಪಿಗೆ ಪ್ರಥಮ ಪರಿಚಯವಾದದ್ದು ಲೇಖನ ಮತ್ತು ಅನುವಾದಗಳಿಂದ. ೧೭೮೪ ರಲ್ಲಿ ಜೋನ್ಸ್ ಬಂಗಾಳದ ಏಷಿಯಾಟಿಕ್ ಸೊಸೈಟಿಯನ್ನು ಸ್ಥಾಪಿಸಿದನು. ಅದೇ ಮುಂದೆ ರಾಯಲ್ ಏಷಿಯಾಟಿಕ್ ಸೊಸೈಟಿಯಾಯಿತು. ಭಾರತವು ತನ್ನ ಪ್ರಾಚೀನ ಸಾಹಿತ್ಯದ ಪುನರ್ದ ರ್ಶನಕ್ಕಾಗಿ ಜೋನ್ಸ್ ಮತ್ತು ಇತರ ಯೂರೋಪಿಯನ್ ವಿದ್ವಾಂಸರಿಗೆ ಅಪಾರ ಋಣಿಯಾಗಿದೆ. ಅನಾದಿಯಿಂದ ಅದರ ಪರಿಚಯವಿತ್ತೆಂಬುದು ನಿಜ; ಆದರೆ ಆ ಪರಿಚಯ ಕೆಲವು ವಿದ್ವನ್ಮಂಡಲಿ ಗಳಲ್ಲಿ ಮಾತ್ರವಿತ್ತು ; ಮತ್ತು ಪಾರಸಿ ಭಾಷೆಯ ಪ್ರಾಬಲ್ಯದಿಂದ ಜನರ ಮನಸ್ಸು ಸಂಸ್ಕೃತ ಸಾಹಿತ್ಯ ದಿಂದ ದೂರವಾಗಿತ್ತು. ಹಳೆಯ ಕರಡು ಪ್ರತಿಗಳನ್ನು ಹುಡುಕುವುದರಲ್ಲಿ ಅನೇಕ ಅಪರಿಚಿತ ಗ್ರಂಥಗಳು ಹೊರಗೆ ಬಂದವು; ಆಧುನಿಕ ವಿಮರ್ಶನಾ ಪದ್ಧತಿಯ ವಿದ್ವತ್ತಿನಿಂದ ಈ ರೀತಿ ಹೊರ ಬಿದ್ದ ಅಪಾರ ಸಾಹಿತ್ಯಕ್ಕೆ ಒಂದು ನೂತನ ಹಿನ್ನೆಲೆಯು ದೊರೆಯಿತು,