ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

• ಕೊನೆಯ ಅಂಕ

h ಹಿಂದಿನ ಕಥೆಯಾದಾಗ ಮಾತ್ರ ಅದು ಸಾಧ್ಯ. ಎಂದಿನವರೆಗೆ ಇಂದಿನ ಜೀವನಕ್ಕೆ ಆ ಚಿತ್ರದ ಸಂಬಂಧ ಉಳಿದು ಅದು ಸದಾ ನಮ್ಮ ಸ್ಮತಿಪಥಕ್ಕೆ ಬರುತ್ತದೆಯೋ ಮತ್ತು ಆ ಘಟನೆಗಳ ಹಿನ್ನೆಲೆಯು ಇನ್ನೂ ಜೀವಂತ ಇದ್ದು ಪದೇ ಪದೇ ತನ್ನ ಹೆಡೆಯನ್ನು ಎತ್ತುತ್ತದೆಯೋ ಅಲ್ಲಿಯ ವರೆಗೆ ಆ ಚಿತ್ರ ಅಳಿಸುವುದೂ ಇಲ್ಲ, ಜನತೆಯ ಮೇಲಿನ ಅದರ ಪರಿಣಾಮ ಮಾಸುವುದೂ ಇಲ್ಲ. ಆ ಚಿತ್ರವನ್ನು ಅಳಿಸಲು ಮಾಡುವ ಪ್ರಯತ್ನಗಳಿಂದ ನಾಶವಾಗುವ ಬದಲು ಮನಸ್ಸಿನ ಅಂತರಾಳ ದಲ್ಲಿ ಅದು ಇನ್ನೂ ಬೇರು ಬಿಡುತ್ತದೆ. ಸ್ವಾಭಾವಿಕವಾಗಿ ಕಾಲಕ್ರಮೇಣ ಅದರ ಪರಿಣಾಮ ಸ್ವಲ್ಪ ಕಡಮೆಯಾಗಬಹುದು. ಈ ದಂಗೆ ಮತ್ತು ಅದನ್ನು ಅಡಗಿಸಿದ ರೀತಿಯ ವಿಷಯದಲ್ಲಿ ಅನೇಕ ಸುಳ್ಳು ಮತ್ತು ವಿಕೃತ ಇತಿಹಾಸಗಳು ಹುಟ್ಟಿವೆ. ಭಾರತೀಯರ ಕಲ್ಪನೆ ಏನಿತ್ತೆಂಬುದು ಮುದ್ರಣವಾಗುವಂತಿಲ್ಲ. ಈಗ ಮೂವತ್ತು ವರ್ಷಗಳ ಕೆಳಗೆ ಸಾವರ್ ಕರ್ “ ಭಾರತದ ಸ್ವಾತಂತ್ರ್ಯ ಸಮರದ ಇತಿಹಾಸ” ಎಂಬ ಗ್ರಂಥವನ್ನು ಬರೆದರು. ಮರುಕ್ಷಣದಲ್ಲೇ ಅದನ್ನು ಮುಟ್ಟುಗೋಲು ಹಾಕಲಾಯಿತು ; ಈಗಲೂ ಬಹಿಷ್ಕೃತವೇ ಇದೆ. ಕೆಲವು ಸತ್ಯನಿಷ್ಠ ಪ್ರಾಮಾಣಿಕ ಇಂಗ್ಲಿಷ್ ಚರಿತ್ರಕಾರರು ಆಗ ಬೃಹದಾಕಾರ ವಾಗಿ ಹರಡಿದ್ದ ಜನಾಂಗ ದ್ವೇಷ ಮತ್ತು ರಕ್ತ ದಾಹವನ್ನು ಸ್ವಲ್ಪ ಚಿತ್ರಿಸಲು ಒಮ್ಮೊಮ್ಮೆ ಪ್ರಯತ್ನ ಪಟ್ಟಿದ್ದಾರೆ. ಕೇ ಮತ್ತು ಮಾಲೆಸನ್ರ “ ದಂಗೆಯ ಇತಿಹಾಸ” ಥಾಮಸನ್ ಮತ್ತು ಗ್ಯಾರೆಟ್ಟರ * ಭಾರತದಲ್ಲಿ ಬ್ರಿಟಿಷರ ಉನ್ನತಿ ಮತ್ತು ಅವನತಿ” ಎಂಬ ಗ್ರಂಥಗಳಲ್ಲಿನ ವಿವರಗಳನ್ನು ಓದಿದರೆ ಅಸಹ್ಯವೆನಿಸುತ್ತದೆ. * ಬ್ರಿಟಿಷ್ ಪರ ಯುದ್ಧ ಮಾಡದ ಪ್ರತಿಯೊಬ್ಬ ಭಾರತೀಯನೂ ಹೆಂಗಸರು ಮತ್ತು ಮಕ್ಕಳನ್ನು ಕೊಲೆ ಮಾಡುವ ಪಾತಕಿಯಾದ ... ಅನೇಕರು ನಮ್ಮ ಹಿತೈಷಿಗಳಿದ್ದರೂ ದೇಹ ಲಿಯ ನಿವಾಸಿಗಳನ್ನೆಲ್ಲ ಸಾಮೂಹಿಕ ಕೊಲ್ಲಬೇಕೆಂದು ಆಜ್ಞೆಯಾಯಿತು” ಎಂದಿದ್ದಾರೆ. ತೈಮೂರ್ ಮತ್ತು ನಾದಿರ್‌ಷಾನ ದಿನಗಳನ್ನು ಜ್ಞಾಪಕಕ್ಕೆ ತಂದವು. ಆದರೆ ಕಾಲ ಮತ್ತು ಸಂಖ್ಯಾಬಾಹುಳ್ಯ ದಲ್ಲಿ ಬ್ರಿಟಿಷರ ದೌರ್ಜನ್ಯ ಅವರೆಲ್ಲರನ್ನೂ ಮಾರಿಸಿತು. ಲೂಟಿಮಾಡಲು ಒಂದು ವಾರ ಕಾಲಾವ ಕಾಶ ದೊರೆತರೆ ಅದು ಒಂದು ತಿಂಗಳ ಕಾಲ ನಡೆದು ಜೊತೆಗೆ ಸಾಮೂಹಿಕ ಕೊಲೆಯ * ನಡೆಯಿತು. ನನ್ನ ಸ್ವಂತ ನಗರವಾದ ಅಲಹಾಬಾದ್ ನಗರದಲ್ಲಿ, ಇಲಾಹಾಬಾದ್ ಜಿಲ್ಲೆಯಲ್ಲಿ ಮತ್ತು ಸುತ್ತಲಿನ ಪ್ರದೇಶದಲ್ಲಿ ಜನರಲ್ ಸೀಲ್ ತೀರ್ಪು ಕೊಟ್ಟು ತನ್ನ ರಕ್ತ ಪಿಪಾಸೆಯನ್ನು ಪೂರೈಸಿ ಕೊಂಡನು. ಸೈನಿಕರೂ ಮತ್ತು ಅಧಿಕಾರಿಗಳೂ ಮರಣ ದಂಡನೆ ವಿಧಿಸುತ್ತ ವಯಸ್ಕ ಹೆಂಗಸು ಮಕ್ಕಳು ಎಂದು ಏನನ್ನೂ ನೋಡದೆ ಭಾರತೀಯರನ್ನು ಕೊಲೆ ಮಾಡುತ್ತಿದ್ದರು. ಈ ದಂಗೆ ಎದ್ದವರ ಜೊತೆಯಲ್ಲಿ ಮುದುಕರೂ, ಹೆಂಗಸರೂ, ಮಕ್ಕಳೂ ಬಲಿಯಾಗುತ್ತಿದ್ದಾರೆ” ಎಂದು ಗೌರರ್ ಬರೆದ ಪತ್ರಗಳು ಬ್ರಿಟಿಷ್ ಪಾರ್ಲಿಮೆಂಟಿನ ದರಗಳಲ್ಲಿ ಇನ್ನೂ ದೊರೆಯುತ್ತವೆ. ಉದ್ದೇಶಪಟ್ಟು ಅವರನ್ನು ಗಲ್ಲಿಗೇರಿಸುತ್ತ ಇರಲಿಲ್ಲ. ಊರಿಗೆ ಊರನ್ನೆ ಸುಟ್ಟು ಬಿಡುತ್ತಿದ್ದರು; ಒಮ್ಮೊಮ್ಮೆ ಗುಂಡಿಟ್ಟು ಕೊಲ್ಲುತ್ತಿದ್ದರು. ಜನರ ಕೊಲೆಗೆಂದು ಸ್ವಯಂಸೇವಕರ ತಂಡಗಳು ಜಿಲ್ಲೆ ಯೊಳಗೆ ನುಗ್ಗಿದವು. ಅನುಭವ ವಿಲ್ಲದಿದ್ದರೂ ಕಟುಕರ ಕೆಲಸಕ್ಕೆ ಜನರ ಅಭಾವವಿರಲಿಲ್ಲ. ಒಬ್ಬ ಧನ್ಯಾತ್ಮನು “ಮಾವಿನ ಮರದಿಂದ ಶೂಲಕ್ಕೆ ಹಾಕಿದೆ. ಆನೆಯ ಮೇಲಿಂದ ತಳ್ಳಿ, ಕೊಂದು ಹಾಕಿದೆ. ಹಗ್ಗಕ್ಕೆ ಕಟ್ಟಿ ನೇತು ಹಾಕಿದೆ. 8 ರ ಆಕಾರದಲ್ಲಿ ಹೆಣಗಳನ್ನು ಜೋಡಿಸಿ ಕಲಾಸೃಷ್ಟಿ ಮಾಡಿದೆ ಎಂದು ಹೆಮ್ಮೆ ಪಡುತ್ತಿದ್ದನಂತೆ. ಕಾನ್ಸುರ, ಲಖನೌ ಮತ್ತು ಎಲ್ಲ ಕಡೆಯಲ್ಲೂ ಇದೇ ಭೀಕರ ಚಿತ್ರ, ಬ್ರಿಟಿಷರು ಕೃತಜ್ಞತೆಯಿಂದ ತಮ್ಮ ಜನರಲ್ ನೀಲ್ಗೆ ಭಾರತದ ವೆಚ್ಚದಿಂದ ಕಟ್ಟಿದ ಸ್ಮಾರಕ ಪ್ರತಿಮೆ ಅಂದಿನಿಂದ ಇಂದಿನ ವರೆಗೆ ಒಂದೇ ರೀತಿ ನಡೆದು ಬರುತ್ತಿರುವ ಬ್ರಿಟಿಷ್ ಆಡಳಿತ ನೀತಿಯ ನಿಜವಾದ ಚಿಹ್ನೆಯಾಗಿ ಈಗಲೂ ನಮ್ಮನ್ನು ಮೂದಲಿಸುತ್ತಿದೆ. ಸೆಳೆದ ಕತ್ತಿಯ ನಿಕಲ್ಸನ್ ಪ್ರತಿಮೆ ಇನ್ನೂ ಹಳೆಯ ದೆಹಲಿಯಲ್ಲಿ ಭಯೋತ್ಪಾದನೆ ಮಾಡುತ್ತಿದೆ.