ಈ ಪುಟವನ್ನು ಪ್ರಕಟಿಸಲಾಗಿದೆ
೨೯೨
ಭಾರತ ದರ್ಶನ.

ಈ ಹಳೆಯ ದುರಂತವನ್ನೆಲ್ಲ ಜ್ಞಾಪಿಸಿಕೊಳ್ಳಲು ಅಸಹ್ಯವೆನಿಸುವುದು ನಿಜ. ಆದರೆ ಆ ದುರಂತ ಕಥೆಯ ಹಿಂದಿನ ಮನೋಭಾವನೆ ಆ ಕಥೆಯೊಂದಿಗೇ ಮುಗಿಯಲಿಲ್ಲ. ಜೀವಂತವಾಗಿಯೇ " ಉಳಿಯಿತು, ಸಂಕಟ ಸಮಯ ಬಂದಾಗ ಅಥವ ಜ್ಞಾನ ತಪ್ಪಿ ಬುದ್ಧಿ ಭ್ರಮಿಸಿದಾಗ ಪುನಃ ಪುನಃ ಹೆಡೆ ಎತ್ತಿದೆ. ಅಮೃತಸರ ಮತ್ತು ಜಲಯನವಾಲಾಬಾಗ್ ಕಥೆ ಪ್ರಪಂಚಕ್ಕೆ ಗೊತ್ತಿದೆ; ಆದರೆ ಸಿಪಾಯಿ ದಂಗೆಯಿಂದ ಈಚೆಗೆ ನಡೆದ ಅನೇಕ ವಿಷಯಗಳು ಬೆಳಕಿಗೆ ಬಂದಿಲ್ಲ. ನಮ್ಮ ಕಾಲದ ಈಚಿನ ದಿನಗಳ ಅನೇಕ ವಿಷಯಗಳೂ ಮತ್ತು ಜನರ ಮನಸ್ಸಿನ ಮೇಲೆ ಅವುಗಳ ಪರಿಣಾಮವೂ ಪ್ರಪಂಚಕ್ಕೆ ತಿಳಿದಿಲ್ಲ. ಸಾಮ್ರಾಜ್ಯತ್ವವೂ, ಒಂದು ಜನಾಂಗದ ಮೇಲೆ ಇನ್ನೊ೦ದು ಜನಾಂಗದ ಅಧಿಕಾರವೂ ಬಹಳ ಹಾನಿಕರ, ಅದರಂತೆ ಜನಾಂಗ ದ್ವೇಷವೂ ಬಹಳ ವಿನಾಶಕಾರಕ, ಆದರೆ ಸಾಮ್ರಾಜ್ಯ ಮತ್ತು ಜನಾಂಗ ದ್ವೇಷ ಎರಡೂ ಸೇರಿದರೆ ಭಯಂಕರ ಪರಿಣಾಮ ಖಂಡಿತ ; ಕೊನೆಗೆ ಸಂಬಂಧಪಟ್ಟವರೆಲ್ಲರ ಅಧಃಪತನವೂ ನಿಶ್ಚಯ. ತನ್ನ ಅತ್ಯುನ್ನತ ಪ್ರತಿಷ್ಠೆಯ ಪದವಿಯಿಂದ ಪತನ ಹೊಂದಲು ಇಂಗ್ಲೆಂಡಿನ ಸಾಮ್ರಾಜ್ಯ ದಾಹವೂ ಜನಾಂಗ ವೈರವೂ ಎಷ್ಟರಮಟ್ಟಿಗೆ ಕಾರಣ ಎಂಬುದನ್ನೂ ಮತ್ತು ಇಂಗ್ಲೆಂಡಿನ ಸಾರ್ವಜನಿಕ ಜೀವನವು ಮಲಿನಗೊಂಡು ಇತಿಹಾಸ ಮತ್ತು ಸಾಹಿತ್ಯದ ನೀತಿಯನ್ನು ಹೇಗೆ ಮರೆಯಿತು ಎಂಬುದನ್ನು ನಿರ್ಧರಿಸುವ ಕೆಲಸವು ಮುಂದಿನ ಇತಿಹಾಸಕಾರನಿಗೆ ಸೇರಿದ್ದು.

ಕಂಡು ಕೇಳದ ಅನಾಮಧೇಯ ಹಿಟ್ಲರ್ ಜರ್ಮನಿಯ “ ಫುಹರರ್ ಆದಂದಿನಿಂದ ನಾಜಿಗಳ ಕುಲಶ್ರೇಷ್ಠತೆಯ ತತ್ವದ ವಿಷಯ ಮತ್ತು ಅವರ ಜನಾಂಗದ್ವೇಷದ ವಿಷಯ ಬಹಳ ಕೇಳಿದ್ದೇವೆ, ಈ ತತ್ವವನ್ನು ಎಲ್ಲರೂ ಖಂಡಿಸಿದ್ದಾರೆ. ಮಿತ್ರರಾಷ್ಟ್ರಗಳ ನಾಯಕರು ಈಗಲೂ ಖಂಡಿಸುತ್ತಿದ್ದಾರೆ. ಜೀವಶಾಸ್ತ್ರಜ್ಞರು ಕುಲಶ್ರೇಷ್ಠತೆ ಎನ್ನುವುದು ಒಂದು ಭ್ರಮೆ, ಶ್ರೇಷ್ಠ ಕುಲ ಎನ್ನುವುದು ಯಾವುದೂ ಇಲ್ಲ ಎಂದು ಸಾರಿದ್ದಾರೆ. ನಾಜಿಗಳ ಆಡಳಿತ ಆದರ್ಶವೆಲ್ಲ ಕುಲಶ್ರೇಷ್ಠತೆಯನ್ನು ಅವಲಂಬಿಸಿದೆ. ಅವರ ಆಡಳಿತರಚನೆಯ ಆ ತತ್ವದಮೇಲೆ ಬೆಳೆಯಿತು. ಸಾಮ್ರಾಜ್ಯ ತತ್ವಕ್ಕೂ ಈ ಕುಲಶ್ರೇಷ್ಠತೆಯ ಭಾವನೆಯೇ ಮೂಲ. ಅಧಿಕಾರದಲ್ಲಿರುವವರು ಮುಚ್ಚು ಮರೆ ಇಲ್ಲದೆ ಈ ತತ್ವವನ್ನು ಸಾರುತ್ತ ಬಂದರು. ಮಾತಿಗಿಂತ ಆಚರಣೆಯಲ್ಲಿ ಅವಕ್ಕೆ ಇನ್ನೂ ಹೆಚ್ಚು ಪ್ರಾಶಸ್ತ್ರ ದೊರೆಯಿತು. ಪೀಳಿಗೆಯಿಂದ ಪೀಳಿಗೆಗೆ ವರ್ಷಗಳ ಮೇಲೆ ವರ್ಷಗಳು ಕಳೆದರೂ ಭಾರತವನ್ನೂ, ಭಾರತೀಯರ ವ್ಯಕ್ತಿತ್ವವನ್ನೂ ಅವಹೇಳನಮಾಡಿ, ಅವಮಾನಪಡಿಸಿ ತುಚ್ಛವಾಗಿ ಕಂಡರು, ಇಂಗ್ಲಿಷರು ಸಾಮ್ರಾಟ ಜನಾಂಗದವರು, ನಮ್ಮನ್ನು ದಾಸ್ಯದಲ್ಲಿಟ್ಟು ಆಳಲು ದೇವದತ್ತ ಅಧಿಕಾರ ಅವರಿಗಿದೆ ಎಂದು ನಮಗೆ ಬುದ್ದಿ ಹೇಳುತ್ತಿದ್ದರು. ನಾವೇನಾದರೂ ಉಸಿರೆತ್ತಿದರೆ “ಸಾಮ್ರಾಜ್ಯ ಜನಾಂಗದ ವ್ಯಾಘ್ರನಖಗಳನ್ನು" ತೋರಿಸುತ್ತಿದ್ದರು. ಭಾರತೀಯನಾಗಿ ಇದನ್ನೆಲ್ಲ ಬರೆಯಲು ನನಗೇ ನಾಚಿಕೆಯಾಗುತ್ತದೆ. ಅವನ್ನೆಲ್ಲ ನೆನಸಿಕೊಂಡರೆ ಮನಸ್ಸು ನೋಯುತ್ತದೆ; ಇಷ್ಟು ದಿನಗಳು ಈ ಅಧೋಗತಿಯನ್ನು ಸಹಿಸಿಕೊಂಡಿದ್ದೆವಲ್ಲ ಎಂದು ಇನ್ನೂ ಹೆಚ್ಚು ನೋವಾಗುತ್ತದೆ. ಪರಿಣಾಮ ಏನೆ ಅಗಲಿ ನಮ್ಮ ಜನ ಅದನ್ನು ಅನುಭವಿಸಿದ್ದಕ್ಕಿಂತ ಯಾವುದಾದರೂ ಬಗೆಯಲ್ಲಿ ಪ್ರತಿಭಟಿಸಿದ್ದರೆ ಚೆನ್ನಾಗಿತ್ತು ಎಂದು ಅನಿಸುತ್ತದೆ. ಆದರೂ ಭಾರತೀಯರೂ, ಆ೦ಗ್ಲೀಯರೂ ಇಬ್ಬರೂ ಇಂಗ್ಲೆಂಡ್ ಮತ್ತು ಇಂಡಿಯಗಳ ಮಧ್ಯೆ ಇರುವ ಈ ಮಾನಸಿಕ ಹಿನ್ನೆಲೆಯನ್ನು ಅರಿತುಕೊಳ್ಳುವುದು ಉತ್ತಮ. ಮಾನಸಿಕ ಧರ್ಮವೇ ಮುಖ್ಯವಾದುದು. ಜನತೆಯ ಸ್ಮರಣಶಕ್ತಿಯೂ ದೀರ್ಘಕಾಲವಿರುತ್ತದೆ.

ಭಾರತದಲ್ಲಿ ಇಂಗ್ಲಿಷರ ಭಾವನೆ ಏನಿತ್ತು, ಯಾವ ರೀತಿ ನಡೆದುಕೊಂಡರು ಎನ್ನುವುದನ್ನರಿಯಲು ಇನ್ನೊಂದು ಮಾದರಿಯ ಉದಾಹರಣೆ ಸಾಕು, ೧೮೮೩ ರಲ್ಲಿ ಇಬ್ಬರ್ ಮಸೂದೆಯ ವಿರೋಧ ಚಳುವಳಿಯ ಕಾಲದಲ್ಲಿ ಅಂದಿನ ಇಂಡಿಯ ಸರಕಾರದ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಸೆಟನ್ ಕೆರ್ "ಉನ್ನತಪದವಿಯಲ್ಲಿರಲಿ, ಕೆಳಮಟ್ಟದವನಿರಲಿ, ಸಣ್ಣ ಬಂಗಲೆಯೊಳಗಿನ ತೋಟದ ಮಾಲೀಕನ ಸಹಾಯಕ ಅಧಿಕಾರಿ ಇರಲಿ, ಮುಖ್ಯ ನಗರಗಳ ದೊಡ್ಡ, ವೃತ್ತಪತ್ರಿಕಾ