ಸಂಪಾದಕನಿರಲಿ, ಪ್ರಾಂತ್ಯದ ಪ್ರಮುಖ ಅಧಿಕಾರಿ ಇರಲಿ, ಸಿಂಹಾಸನದಮೇಲಿನ ವೈಸರಾಯ್ ಇರಲಿ, ರಾಜ್ಯಗಳನ್ನು ಗೆದ್ದು ಆಳಲು ದೇವರು ನಮ್ಮನ್ನು ಸೃಷ್ಟಿಸಿದ್ದಾನೆ. ತಾವು ಆಳರಸರ ಕುಲದವರು ಎಂದು ಭಾರತದಲ್ಲಿರುವ ಪ್ರತಿಯೊಬ್ಬ ಆಂಗ್ಲಯನ ದೃಢನಂಬಿಕೆಗೆ ಈ ಮಸೂದೆಯು ದ್ರೋಹಮಾಡುತ್ತದೆ” ಎಂದು ಹೇಳಿದ್ದಾನೆ.
೮. ಬ್ರಿಟಿಷ್ ಆಡಳಿತದ ಕೌಶಲ್ಯ-ಏರುಪೇರುಗಳ ಸಮತೋಲನ
೧೮೫೭-೫೮ರ ಕ್ರಾಂತಿಯಲ್ಲಿ ರಾಷ್ಟ್ರೀಯ ಭಾವನೆಯ ಜನ ಕೆಲವರಿದ್ದರೂ ಮುಖ್ಯ ಅದು ಪಾಳೆಯಗಾರರ ದಂಗೆಯಾಗಿತ್ತು. ಆದರೂ ದೇಶೀಯ ರಾಜರುಗಳೂ, ಇತರ ಪಾಳೇಗಾರರೂ ತಾಟಸ್ಥ ಉಳಿದುದರಿಂದ ಮತ್ತು ಕೆಲವರು ಪ್ರತ್ಯಕ್ಷ ಇಂಗ್ಲಿಷರಿಗೆ ಸಹಾಯ ಮಾಡಿದ್ದರಿಂದ ಆ ದಂಗೆಯನ್ನು ಅಡಗಿಸಲು ಬ್ರಿಟಿಷರಿಗೆ ಸಾಧ್ಯವಾಯಿತು. ದಂಗೆ ಸೇರಿದವರೆಲ್ಲ ಬ್ರಿಟಿಷರ ನೀತಿಯಿಂದ ತಮ್ಮ ರಾಜ್ಯವನ್ನೂ ಅಧಿಕಾರವನ್ನೂ ಕಳೆದುಕೊಂಡವರು ಮತ್ತು ಕಳೆದುಕೊಳ್ಳುವುದು ಅನಿವಾರ ಎಂದು ಭಾವಿಸಿದ್ದವರು. ಬ್ರಿಟಿಷರು ಮೊದಲು ಸ್ವಲ್ಪ ಅನುಮಾನಿಸಿ ಕೊನೆಗೆ ಕ್ರಮೇಣ ದೇಶೀಯ ರಾಜರನ್ನೆಲ್ಲ ನಿರ್ನಾಮಮಾಡಿ ನೇರವಾದ ಬ್ರಿಟಿಷ್ ಆಡಳಿತವನ್ನೆ ಸ್ಥಾಪಿಸಬೇಕೆಂದು ತೀರ್ಮಾನ ಮಾಡಿದ್ದರು. ದಂಗೆಯ ಪರಿಣಾಮವಾಗಿ ಈ ಕಾವ್ಯ ನೀತಿ ವ್ಯತ್ಯಾಸವಾಗಿ ದೇಶೀಯ ರಾಜರುಗಳಲ್ಲದೆ ತಾಲೂಕುದಾರರಿಗೂ, ದೊಡ್ಡ ಜಮೀನುದಾರರಿಗೂ ಪ್ರೋತ್ಸಾಹ ದೊರೆಯಿತು. ಈ ಪಾಳಗಾರರು ಮತ್ತು ರಾಜರುಗಳ ಸಹಾಯದಿಂದ ಜನರನ್ನು ಹತೋಟಿಯಲ್ಲಿಟ್ಟು ಕೊಳ್ಳುವುದು ಸುಲಭವೆಂದು ಭಾವಿಸಿದರು. ಅಯೋಧ್ಯೆಯ ಈ ತಾಲೂಕುದಾರರುಗಳು ಮೊಗಲ್ ಚಕ್ರಾಧಿಪತ್ಯದ ತೆರಿಗೆ ವಸೂಲುದಾರರಾಗಿದ್ದರು. ಮೊಗಲ್ ಚಕ್ರವರ್ತಿಗಳು ದುರ್ಬಲರಾದಮೇಲೆ ಇವರೇ ಅಲ್ಲಿನ ಜಾನುದಾರರಾದರು. ಕೆಲವರು ನುಸುಳಿಕೊಳ್ಳಲು ಅನುಕೂಲವಾಗುವಂತೆ ವರ್ತಿಸಿದರೂ ಇವರೆಲ್ಲರೂ ದಂಗೆಯಲ್ಲಿ ಭಾಗವಹಿಸಿದರು. ಅವರೆಲ್ಲ ದಂಗೆಕೋರರಾದರೂ “ ರಾಜಭಕ್ತಿಯನ್ನು ತೋರಿಸಿ ತಮ್ಮ ಸೇವೆ ಮಾಡುವುದಾದರೆ” ಪುನಃ ಜಮೀನುದಾರಿಯನ್ನು ಉಳಿಸಿಕೊಟ್ಟು ಸಹಾಯ ಮಾಡುವುದಾಗಿ ಬ್ರಿಟಿಷ್ ಅಧಿಕಾರವರ್ಗವು ಮುಂದೆ ಬಂದಿತು. ಈ ರೀತಿ ಅಯೋಧ್ಯೆಯ ಒಡೆಯರು ಎಂದು ಹೆಮ್ಮೆ ಪಡುತ್ತಿದ್ದ ತಾಲೂಕುದಾರರು ಬ್ರಿಟಿಷ್ ಆಡಳಿತದ ಆಧಾರ ಸ್ತಂಭಗಳಾದರು.
ಈ ದಂಗೆಯು ಭಾರತದ ಕೆಲವು ಪ್ರದೇಶಗಳನ್ನು ಮಾತ್ರ ಹರಡಿದ್ದ ರೂ ಇಡೀ ಭಾರತವನ್ನ ಕಲಕಿತ್ತು. ಬ್ರಿಟಿಷ್ ಆಡಳಿತ ವರ್ಗದ ಬೇರನ್ನು ಸಡಿಲಿಸಿತ್ತು. ತಮ್ಮ ಆಡಳಿತ ವರ್ಗವನ್ನೆಲ್ಲ ಪುನಃ ಭದ್ರಗೊಳಿಸಲು ಆರಂಭಿಸಿದರು. ಭಾರತದ ಆಡಳಿತವು ಈಸ್ಟ್ ಇಂಡಿಯ ಕಂಪನಿಯಿಂದ ಬ್ರಿಟಿಷ್ ದೊರೆಯ ಅಂದರೆ ಪಾರ್ಲಿಮೆಂಟಿನ ವಶಕ್ಕೆ ಬಂದಿತು. ದಂಗೆ ಎದ್ದ ಭಾರತದ ಸೈನ್ಯವನ್ನು ಹೊಸರೀತಿಯಲ್ಲಿ ಪುನರಚಿಸಲಾಯಿತು, ಆಗಲೇ ಭದ್ರವಾಗಿ ಬೇರೂರಿದ ಬ್ರಿಟಿಷ್ ಆಡಳಿತ ನೀತಿಯನ್ನು ಇನ್ನೂ ಸ್ಪಷ್ಟ ಪಡಿಸಿ, ದೃಢಪಡಿಸಿ ಉದ್ದೇಶಪೂರ್ವಕವಾಗಿ ಕಾರ್ಯರೂಪಕ್ಕೆ ತಂದರು. ಬ್ರಿಟಿಷರ ಆಳರಸರ ನೆರವನ್ನೇ ನಂಬಿದ ಪದವೀಧರರ ಸ್ಪಷ್ಟನೆ ಮತ್ತು ಪೋಷಣೆ, ವಿವಿಧ ಪಂಗಡಗಳನ್ನು ಒಂದರಮೇಲೊಂದನ್ನು ಎತ್ತಿಗಟ್ಟಿ ಸಮತೂಕಮಾಡುವುದು, ಅವರಲ್ಲಿ ಪರಸ್ಪರ ಅನೈಕ್ಯತೆಯನ್ನೂ ವಿರೋಧವನ್ನೂ ಬೆಳೆಸುವುದು ಇವೇ ಆ ನೀತಿಯ ಮುಖ್ಯ ಸೂತ್ರಗಳು.
ಈ ರೀತಿ ಸೃಷ್ಟಿಸಿ ಪ್ರೋತ್ಸಾಹಿಸಿದ ಪಧವೀಧರರಲ್ಲಿ ರಾಜರು ಮತ್ತು ದೊಡ್ಡ ಜಮೀನು ದಾರರುಗಳು ತಳಹದಿಯಾದರು. ಬ್ರಿಟಿಷ್ ಆಡಳಿತಗಾರರನ್ನೇ ಇನ್ನೂ ಹೆಚ್ಚು ಅವಲಂಬಿಸಿದ ಇನ್ನೊಂದು ಹೊಸಪಂಗಡ ಪ್ರಾಮುಖ್ಯತೆ ಪಡೆಯಿತು:- ಸರ್ಕಾರದ ಆಡಳಿತದ ಕೆಳದರ್ಜೆಯ ಅಧಿಕಾರಗಳಲ್ಲಿದ್ದ ಭಾರತೀಯ ನೌಕರರು, ಭಾರತೀಯರನ್ನು ಆಡಳಿತವರ್ಗದಲ್ಲಿ ತೆಗೆದುಕೊಳ್ಳ ಬೇಕೆಂದು ಮನ್ನೂ ಬಹಳ ಹೋರಾಡಿದನು. ಮೊದಲು ಅನಿರ್ವಾಹಪಕ್ಷದಲ್ಲಿ ಮಾತ್ರ ಸೇರಿಸಿಕೊಳ್ಳುತ್ತಿದ್ದರು. ಆದರೆ ನೌಕರಿಯಲ್ಲಿದ್ದ ಭಾರತೀಯರು ಬ್ರಿಟಿಷರ ಆಡಳಿತವನ್ನೇ ಪೂರ್ಣ