ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅಂಕ

೨೯೭

ಕ್ರಮೇಣ ನಿಧಾನವಾಗಿ ಕೈಗಾರಿಕಾ ಪ್ರಗತಿಯು ಆರಂಭವಾಯಿತು. ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೊಸ ಚಳವಳಿಯು ಜನ್ಮತಾಳಿತು. ಭಾರತದಲ್ಲಿ ಈ ಪುನರುಜ್ಜಿವನವು ಎರಡು ಬಗೆಯಲ್ಲಿ ಆಯಿತು; ಪಾಶ್ಚಾತ್ಯದ ಕಡೆಗೆ ನೋಡಿದುದು ಮಾತ್ರವಲ್ಲದೆ ತನ್ನ ನಿಜಸ್ಥಿತಿ ಮತ್ತು ಹಿಂದಿನ ಇತಿಹಾಸದ ಕಡೆಗೂ ದೃಷ್ಟಿ ಬೀರಿತು.

ಭಾರತದಲ್ಲಿ ರೈಲುಮಾರ್ಗ ಏರ್ಪಟ್ಟಂದಿನಿಂದ ಕೈಗಾರಿಕಾಯುಗವು ನಿಶ್ಚಿತವಾಯಿತು, ಅದು ವರೆಗೆ ಎಲ್ಲಿ ನೋಡಿದರೂ ಬ್ರಿಟನ್ನಿಂದ ಬಂದ ನಯಮಾಲುಗಳೇ ಕಾಣುತ್ತಿದ್ದವು. ಭಾರತದ ಕೈಗಾ ರಿಕಾ ಪ್ರಗತಿಯನ್ನು ತಡೆಗಟ್ಟಲು ಯಂತ್ರಗಳ ಆಮದಿನ ಮೇಲೆ ಹೇರಿದ್ದ ಸುಂಕವನ್ನು ೧೮೬೦ರಲ್ಲಿ ತೆಗೆಯಲಾಯಿತು. ಬ್ರಿಟಿಷರ ಬಂಡವಾಳದಿಂದ ದೊಡ್ಡ ಕೈಗಾರಿಕೆಗಳು ಬೆಳೆಯಲು ಆರಂಭ ವಾಯಿತು. ಮೊದಲು ಆರಂಭವಾದುದು ಬಂಗಾಲದ ಸೆಣಬಿನ ಕೈಗಾರಿಕೆ, ಅದರ ಕೇಂದ್ರ ಸ್ಕಾಟ್ಲಂಡಿನ ದಂಡಿ ನಗರದಲ್ಲಿ ಅನೇಕ ವರ್ಷಗಳನಂತರ ಭಾರತೀಯರ ಬಂಡವಾಳ ಮತ್ತು ಮಾಲಿಕತನಗಳಿಂದ ಮುಂಬೈ ಮತ್ತು ಅಹಮದಾಬಾದ್ ನಗರಗಳಲ್ಲಿ ಹತ್ತಿ ಬಟ್ಟೆಯ ಗಿರಣಿಗಳು ಆರಂಭವಾದವು. ಗಣಿಗಳ ಕೈಗಾರಿಕೆ ಆರಂಭವಾದುದು ಎಲ್ಲಕ್ಕೂ ಕೊನೆಗೆ, ಭಾರತದಲ್ಲಿ ಬ್ರಿಟಿಷ್ ಸರಕಾರದ ಕಿರುಕುಳಗಳು ತಪ್ಪಲಿಲ್ಲ. ಭಾರತದಲ್ಲಿ ತಯಾರಾದ ಹತ್ತಿ ಬಟ್ಟೆ ಲಾಂಕಶೈರ್ ಬಟ್ಟೆಗಳ ಮೇಲೆ ಭಾರತದಲ್ಲಿ ಪೈಪೋಟಿ ಮಾಡಬಾರದೆಂದು ಸುಂಕ ಹೇರಿದರು, ಇಪ್ಪತ್ತನೆಯ ಶತಮಾನದ ವರೆಗೆ ಭಾರತ ಸರಕಾರದಲ್ಲಿ ಕೃಷಿ, ವಾಣಿಜ್ಯ ಮತ್ತು ಕೈಗಾರಿಕೆಯ ಇಲಾಖೆಗಳೇ ಇರಲಿಲ್ಲವೆಂದ ಮೇಲೆ ಬ್ರಿಟಿಷ್ ಸರಕಾರವು ನಡೆಸಿದ್ದು ಪೊಲೀಸ್ ರಾಜ್ಯವೆನ್ನಲು ಬೇರೆ ಸಾಕ್ಷ ಬೇಕಿಲ್ಲ. ಭಾರತದಲ್ಲಿನ ವ್ಯವಸಾಯ ಅಭಿವೃದ್ಧಿಗೆಂದು ಅಮೆರಿಕನ್ ಪ್ರವಾಸಿಯೊಬ್ಬ ಹಣವನ್ನು ದಾನಮಾಡಿ. ದ್ದರಿಂದ ಕೇಂದ್ರ ಸರಕಾರವು ಒಂದು ವ್ಯವಸಾಯ ಶಾಖೆ ಆರಂಭಿಸಬೇಕಾಯಿತು. ಅನಂತರ ಕೆಲವು ದಿನಗಳಮೇಲೆ ೧೯೦೫ರಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಶಾಖೆಗಳು ಆರಂಭವಾದವು. ಆದರೂ ಈ ಇಲಾಖೆಗಳು ಮಾಡಿದ ಕೆಲಸ ಅತ್ಯಲ್ಪವಿತ್ತು. ಕೈಗಾರಿಕೆಯು ಅಭಿವೃದ್ಧಿಯಾಗದಂತೆ ಎಲ್ಲ ಕೃತಕ ತೊಂದರೆಗಳನ್ನೂ ತಂದೊಡ್ಡಿ ದೇಶದ ಆರ್ಥಿಕ ಅಭಿವೃದ್ಧಿಗೆ ತಡೆಮಾಡಿದರು.

ದೇಶದ ಅಸಂಖ್ಯಾತ ಜನರು ಕಡು ಬಡತನದಲ್ಲಿ ಸಿಲುಕಿ ಇನ್ನೂ ಕೃಶರಾಗುತ್ತಿದ್ದರೂ ಮೇಲೆ ಕೆಲವರು ಮಾತ್ರ ನೂತನ ಸನ್ನಿವೇಶಗಳನ್ನು ಉಪಯೋಗಿಸಿಕೊಂಡು ಅಪಾರ ಹಣ ಗಳಿಸಿದರು. ರಾಜಕೀಯ ಸುಧಾರಣೆಯನ್ನು ಕೇಳಿದರೂ, ತಮ್ಮ ಬಂಡವಾಳದ ಉಪಯೋಗಕ್ಕೆ ಅವಕಾಶ ಕೇಳಿದವರೂ ಈ ಅಲ್ಪ ಸಂಖ್ಯೆಯ ಜನರೇ, ರಾಜಕೀಯ ರಂಗದಲ್ಲಿ ೧೮೮೫ರಲ್ಲಿ ಅಖಿಲಭಾರತ ರಾಷ್ಟ್ರೀಯ ಮಹಾಸಭೆ ಜನ್ಮತಾಳಿತು, ವಾಣಿಜ್ಯ ಮತ್ತು ಕೈಗಾರಿಕೆ ಬೆಳೆದುದು ಬಹು ನಿಧಾನವಾಗಿ, ಶತಮಾನಗಳಿಂದ ವಂಶಪಾರಂಪರವಾಗಿ ವಾಣಿಜ್ಯ ಮತ್ತು ವ್ಯಾಪಾರ ನಡೆಸುತ್ತಿದ್ದವರೇ ಕೈಗಾರಿಕೆ ಯಲ್ಲಿ ಪ್ರವೇಶಿಸಿದ್ದು ಒಂದು ವಿಶೇಷ, ಹತ್ತಿ ಬಟ್ಟೆಯ ಕೈಗಾರಿಕಾ ಕೇಂದ್ರವಾದ ಅಹಮದಾಬಾದ್ ಮೊಗಲರ ಕಾಲದಲ್ಲಿ ಮತ್ತು ಅದಕ್ಕೂ ಮುಂಚೆ ಒಂದು ದೊಡ್ಡ ವ್ಯಾಪಾರ ಮತ್ತು ಕೈಗಾರಿಕಾ ಕೇಂದ್ರವಾಗಿತ್ತು, ಅಲ್ಲಿನ ವರ್ತಕರು ವಿದೇಶಗಳಿಗೆ ನಯಮಾಲುಗಳನ್ನು ರಫ್ತು ಮಾಡುತ್ತಿದ್ದರು, ಆಫ್ರಿಕ ಮತ್ತು ಪರ್ಷಿಯಕೊಲ್ಲಿಯ ಸಮುದ್ರ ವ್ಯಾಪಾರಕ್ಕೆ ಅಹಮದಾಬಾದ್ ವರ್ತಕರು ತಮ್ಮ ಸ್ವಂತ ಹಡಗುಗಳನ್ನೇ ಉಪಯೋಗಿಸುತ್ತ ಇದ್ದರು. ಹತ್ತಿರವೇ ಇದ್ದ ಭಡೋಚ ಬಂದರು ಗ್ರೀಕ್ ರೋಮನರ ಕಾಲದಿಂದಲೂ ಪ್ರಸಿದ್ಧ ವಿದೆ.

ಗುಜರಾತ, ಕಾಥೇವಾಡ ಮತ್ತು ಕಚ್ ಜನರು ಪ್ರಾಚೀನಕಾಲದಿಂದಲೂ ವ್ಯಾಪಾರ, ಕೈಗಾರಿಕ ವಾಣಿಜ್ಯ ಮತ್ತು ಸಮುದ್ರವ್ಯಾಪಾರದಲ್ಲಿ ಪ್ರಸಿದ್ದಿ ಪಡೆದಿದ್ದರು. ಭಾರತದಲ್ಲಿ ಅನೇಕ ಬದಲಾವಣೆಗಳಾದವು; ಆದರೆ ಇವರು ಹೊಸ ಸನ್ನಿವೇಶಗಳಿಗೆ ಅಳವಡಿಸಿಕೊಂಡು ತಮ್ಮ ಹಳೆಯ ವ್ಯಾಪಾರ ಮುಂದುವರಿಸಿದರು. ಕೈಗಾರಿಕೆ ಮತ್ತು ವಾಣಿಜ್ಯದ ಪ್ರಮುಖ ವ್ಯಕ್ತಿಗಳಲ್ಲಿ ಕೆಲವರು

21