ಈ ಪುಟವನ್ನು ಪ್ರಕಟಿಸಲಾಗಿದೆ
೨೯೮
ಭಾರತ ದರ್ಶನ

ಗುಜರಾತಿಗಳು, ಮತ ಅಥವ ಮತಾಂತರ ಇದಕ್ಕೆ ಅಡ್ಡಿ ಬರಲಿಲ್ಲ. ಹದಿಮೂರು ಶತಮಾನಗಳ ಹಿಂದೆ ಗುಜರಾತಿಗೆ ಬಂದು ನೆಲೆಸಿದ ಪಾರಸಿ ಜನರು ಈಗ ಗುಜರಾತರೇ, ಅವರು ಆಡುವ ಭಾಷ ಗುಜರಾತಿ, ಮುಸಲ್ಮಾನರಲ್ಲಿ ಕೈಗಾರಿಕೆ ಮತ್ತು ವಾಣಿಜ್ಯದಲ್ಲಿ ಮುಂದುವರಿದವರೆಂದರೆ ಸೋಜಾ ಗಳು, ಮಮನ್ ಮತ್ತು ಬೊಹರಾಗಳು, ಇವರೆಲ್ಲ ಹಿಂದೂ ಧರ್ಮದಿಂದ ಮತಾಂತರ ಹೊಂದಿ ದವರು. ಆದರೆ ಎಲ್ಲರೂ ಕಾಥೇವಾಡ, ಕಚ್ ಅಥವ ಗುಜರಾತದಿಂದ ಬಂದವರು. ಈ ಗುಜರಾತಿ ಗಳು ಕೈಗಾರಿಕೆ ಮತ್ತು ವಾಣಿಜ್ಯದಲ್ಲಿ ಮುಂದಾಳುತನ ವಹಿಸಿರುವುದು ಭಾರತದಲ್ಲಿ ಮಾತ್ರವಲ್ಲ, ಅವರು ಬರ, ಸಿಂಹಳ ದ್ವೀಪ, ಪೂರ್ವ ಆಫ್ರಿಕ, ದಕ್ಷಿಣ ಆಫ್ರಿಕ ಮತ್ತು ಇತರ ದೇಶ ವಿದೇಶ ಗಳಿಗೂ ಹರಡಿದ್ದಾರೆ.

ರಾಜಪುತಾನದ ಮಾಗ್ವಾಡಿಗಳು ಒಳನಾಡಿನ ವ್ಯಾಪಾರ ಮತ್ತು ಹಣಕಾಸಿನ ಆಡಳಿತವನ್ನು ತಮ್ಮ ಕೈಯಲ್ಲಿಟ್ಟುಕೊಂಡು ಭಾರತದ ಎಲ್ಲ ಮುಖ್ಯ ನಗರಗಳಲ್ಲೂ ಹರಡಿದ್ದ ರು. ದೊಡ್ಡ ಬಂಡ ವಾಳಗಾರರೂ ಆಗಿದ್ದರು, ಹಳ್ಳಿಗಳಲ್ಲಿ ಸಣ್ಣ ಸರಾಫಿ ಕೆಲಸ ನಡೆಸುತ್ತಿದ್ದರು. ಪ್ರಸಿದ್ಧ ಮಾಗ್ವಾಡಿ ಬಂಡವಾಲಗಾರನೊಬ್ಬ ಒಂದು ಹುಂಡಿ ಕೊಟ್ಟರೆ ಭಾರತದಲ್ಲಿ ಮಾತ್ರವಲ್ಲದೆ ಹೊರದೇಶಗಳಲ್ಲಿ ಅದಕ್ಕೆ ಮನ್ನಣೆ ಇತ್ತು. ಮಾಲ್ವಾಡಿಗಳು ಈಗಲೂ ಭಾರತದ ಮುಖ್ಯ ಬಂಡವಾಳಗಾರರಾಗಿ ಈಚೆಗೆ ಕೈಗಾರಿಕೆಯಲ್ಲೂ ಪ್ರಮುಖ ಪಾತ್ರವಹಿಸಿದಾರೆ.

ವಾಯವ್ಯದಲ್ಲಿ ಸಿಂಧಿಗಳು ಬಹುಕಾಲದಿಂದ ವ್ಯಾಪಾರದಲ್ಲಿ ತೊಡಗಿದಾರೆ, ಷಿಕಾರಿಪುರ ಅಥವ ಹೈದರಾಬಾದ್ ನಗರಗಳನ್ನು ತಮ್ಮ ಕೇಂದ್ರ ಮಾಡಿಕೊಂಡು ಮಧ್ಯ ಮತ್ತು ಪಶ್ಚಿಮ ಏಷ್ಯ ಮತ್ತು ಇತರ ಕಡೆ ಹರಡಿ ತಮ್ಮ ವ್ಯಾಪಾರವನ್ನು ಅಭಿವೃದ್ಧಿಗೊಳಿಸಿದರು. ಈಗ (ಅಂದರೆ ಯುದ್ದಕ್ಕೆ ಮುಂಚೆ) ಒಬ್ಬಿಬ್ಬರು ಸಿಂಧಿ ವರ್ತಕರಿಲ್ಲದ ಬಂದರು ಯಾವುದೂ ಪ್ರಪಂಚದಲ್ಲಿ ಇಲ್ಲ. ಕೆಲವು ಪಂಜಾಬಿಗಳು ಸಹ ವಂಶಪಾರಂಪಯ್ಯ ವ್ಯಾಪಾರಿಗಳಾಗಿದಾರೆ.

ಮದರಾಸಿನ ಚೆಟ್ಟಿಯಾರರು ಬಹು ಪುರಾತನ ಕಾಲದಿಂದ ವರ್ತಕಶ್ರೇಷ್ಠರೂ, ಧನಕೋಠಿ ಗಳೂ ಆಗಿದ್ದಾರೆ. ಸಂಸ್ಕೃತದ “ಶ್ರೇಷ್ಠಿ” ಎಂಬ ಶಬ್ದ “ಚೆಟ್ಟ” ಎಂದಾಗಿದೆ. ಶ್ರೇಷ್ಠ ಎಂದರೆ ವಣಿಕ ಸಂಘದ ಪ್ರಮುಖ ಎಂದು, ಮದರಾಸಿನ “ಚೆಟ್ಟಿಯಾರ್” ರು ದಕ್ಷಿಣ ಭಾರತದಲ್ಲಿ ಮಾತ್ರ ವಲ್ಲದೆ ಬರದೇಶದ ಮೂಲೆಮೂಲೆಯ ಹಳ್ಳಿಗಳಲ್ಲಿ ಸಹ ಹರಡಿ ವ್ಯಾಪಾರದಲ್ಲಿ ಮುಖ್ಯ ಪಾತ್ರ ವಹಿಸಿದಾರೆ.

ಪ್ರತಿಯೊಂದು ಪ್ರಾಂತ್ಯದಲ್ಲಿ ವ್ಯಾಪಾರ ಮತ್ತು ವಾಣಿಜ್ಯವು ಬಹುಮಟ್ಟಿಗೆ ವಂಶ ಪಾರಂಪಯ್ಯ ವ್ಯಾಪಾರಿಗಳಾಗಿದ್ದ ವೈಶ್ಯರ ಕೈಯಲ್ಲಿತ್ತು. ಚಿಲ್ಲರೆ ವ್ಯಾಪಾರ, ಸಗಟು ವ್ಯಾಪಾರ ಮತ್ತು ಲೇವಾದೇವಿ ಎಲ್ಲವೂ ಅವರ ಕೈಯಲ್ಲಿತ್ತು. ಪ್ರತಿಯೊಂದು ಹಳ್ಳಿಯಲ್ಲೂ ಒಂದು ವೈಶ್ಯರ ಅಂಗಡಿ ಇದ್ದು ಹಳ್ಳಿಗಾಡಿನ ಜನರ ಜೀವನದ ಆವಶ್ಯಕತೆಗೆ ಬೇಕಾದ ಸಾಮಾನುಗಳನ್ನೆಲ್ಲ ಒದಗಿ ಸುತ್ತ ಲೇವಾದೇವಿ ನಡೆಸುತ್ತ ಲಾಭದಾಯಕ ಜೀವನ ನಡೆಸುತ್ತಿದ್ದರು. ಗ್ರಾಮಾಂತರದ ಲೇವಾದೇವಿ ಎಲ್ಲವೂ ಈ ವೈಶ್ಯ ಅಥವ ಬನಿಯಗಳ ಕೈಯಲ್ಲಿತ್ತು. ಈ 'ಬನಿಯ'ಗಳು ವಾಯವ್ಯ ಪ್ರಾಂತ್ಯದ ಗುಡ್ಡ ಗಾಡಿನ ಜನರ ಮಧ್ಯೆಯೂ ಮತ್ತು ಇತರ ಸ್ವತಂತ್ರ ದೇಶಗಳಿಗೂ ಹರಡಿ ಅಲ್ಲಿ ಅವರಿಗೆ ಬೇಕಾದುದನ್ನೆಲ್ಲ ಒದಗಿಸುತ್ತಿದ್ದರು. ಬಡತನ ಹೆಚ್ಚಿದಂತೆ ವ್ಯವಸಾಯಗಾರರ ಸಾಲದ ಹೊರೆಯೂ ಹೆಚ್ಚಿತ್ತು. ಭೂಮಿ ಎಲ್ಲವೂ ಬಂಡವಲಗಾರರಿಗೆ ಪರಾಧೀನವಾಗಿ, ಅವರ ಕೈ ಸೇರಿ ಕೊನೆಗೆ ಅವರೇ ಭೂಮಿಯ ಮಾಲಿಕರೂ ಆದರು.

ಅನೇಕ ಹೊಸಬರು ಬೇರೆ ಬೇರೆ ವ್ಯಾಪಾರೋದ್ಯಮಗಳಲ್ಲಿ ಪ್ರವೇಶಮಾಡಿದಂತೆ ವ್ಯಾಪಾರ, ವಾಣಿಜ್ಯ ಮತ್ತು ಲೇವಾದೇವಿಗಳನ್ನು ನಡೆಸುತ್ತಿದ್ದ ಪಂಗಡಗಳಿಗೂ ಇತರರಿಗೂ ಮೊದಲು ಇದ್ದ ವ್ಯತ್ಯಾಸ ಮಾಯವಾಗುತ್ತ ಬಂದಿತು. ಆದರೆ ಹಳಬರೂ ತಮ್ಮ ವ್ಯವಹಾರ ಬಿಡದೆ ಈಗಲೂ