ಈ ಪುಟವನ್ನು ಪ್ರಕಟಿಸಲಾಗಿದೆ
ಕೊನೆಯ ಅಂಕ
೨೯೯

ಪ್ರಮುಖಪಾತ್ರ ವಹಿಸಿದ್ದಾರೆ. ಇದು ಜಾತಿಪದ್ಧತಿಯ ಪರಿಣಾಮವೂ, ಹುಟ್ಟು, ಕಸಬಿನ ರಕ್ತಗತ ಗುಣವೊ, ಸಂಪ್ರದಾಯದ ಹಿಡಿತವೊ ಅಥವ ಅವೆಲ್ಲದರ ಪ್ರಭಾವವೂ ನಿರ್ಧರಿಸುವುದು ಕಷ್ಟ. ಬ್ರಾಹ್ಮಣರು ಮತ್ತು ಕ್ಷತ್ರಿಯರು ವ್ಯಾಪಾರಕ್ಕೆ ಹೆಚ್ಚು ಬೆಲೆಕೊಡಲಿಲ್ಲ. ಶ್ರೀಮಂತಿಕೆ ಅಪೇಕ್ಷಣೀಯ ವಾದರೂ, ಹಣವೇ ತಕ್ಕ ಪ್ರತಿಫಲ ಎಂದು ಭಾವಿಸಲಿಲ್ಲ, ಭೂಮಿಯ ಒಡೆತನಕ್ಕೆ ಸಮಾಜದಲ್ಲಿ ಗೌರವವಿತ್ತು; ಆಸ್ತಿವಂತನಿರಲಿ ಇಲ್ಲದಿರಲಿ ವಿದ್ವತ್ತು ಮತ್ತು ಜ್ಞಾನಕ್ಕೆ ತುಂಬ ಗೌರವವಿತ್ತು, ಬ್ರಿಟಿಷರ ಆಡಳಿತದಲ್ಲಿ ಸರಕಾರದ ನೌಕರಿಗೆ ಹೆಚ್ಚು ಗೌರವ, ಭದ್ರತೆ ಮತ್ತು ಪ್ರತಿಷ್ಠೆ ದೊರೆಯಿತು. ಕ್ರಮೇಣ ಇಂಡಿಯನ್ ಸಿವಿಲ್ ಸರ್ವಿಸ್ಗೆ ಭಾರತೀಯರನ್ನು ಸೇರಿಸಿಕೊಳ್ಳಲು ಆರಂಭಿಸಿದೊಡನೆ ಅದೊಂದು ಇಂದ್ರಪದವಿಯಾಗಿ ಪ್ರತಿಯೊಬ್ಬ ಇಂಗ್ಲಿಷ್ ವಿದ್ಯಾವಂತನಿಗೆ ಸ್ವರ್ಗಸಮಾನವಾ ಯಿತು. ಆ ಇಂದ್ರಲೋಕ ಲಂಡನ್ ನಗರದ - ವೈಟ್ ಹಾಲ್ 'ನ ಒಂದು ಛಾಯೆ, ಉದ್ಯಮಗಳಲ್ಲಿ ಕೆಲವು ನ್ಯಾಯವಾದಿಗಳಿಗೆ ಅಪಾರ ಹಣಗಳಿಸಲು ಅವಕಾಶದೊರೆತುದರಿಂದ ನ್ಯಾಯವಾದಿಗಳಿಗೂ ಒಳ್ಳೆಯ ಗೌರವಪ್ರತಿಷ್ಠೆಗಳು ದೊರೆತು ಯುವಕರು ಆ ಕಡೆ ಒಲಿದರು, ರಾಜಕೀಯ ಮತ್ತು ಸಾಮಾಜಿಕ ಸುಧಾರಣೆಗಳಲ್ಲಿ ಈ ಯುವಕರು ಮುಖ್ಯ ಪಾತ್ರವಹಿಸುವುದು ಅನಿವಾರವಾಯಿತು.

ನ್ಯಾಯವಾದಿಗಳಲ್ಲಿ ಬಂಗಾಲಿಗಳೇ ಮೊದಲಿಗರು. ಕೆಲವರು ತುಂಬ ಪ್ರತಿಭಾಶಾಲಿಗಳಾಗಿ ಖ್ಯಾತಿಗಳಿಸಿ ಆ ಉದ್ಯಮಕ್ಕೊಂದು ಪ್ರತಿಷ್ಠೆ ತಂದರು. ರಾಜಕೀಯ ಮುಖಂಡತ್ವವೂ ಅವರದೇ ಆಯಿತು. ಅಭಿರುಚಿ ಇಲ್ಲದೆಯೋ ಅಥವ ಬೇರೆ ಕಾರಣಗಳಿಂದಲೋ ಕೈಗಾರಿಕಾ ಪ್ರಗತಿಯ ಕಡೆ ಅವರ ದೃಷ್ಟಿ ಬೀಳಲಿಲ್ಲ. ಇದರ ಪರಿಣಾಮವಾಗಿ ದೇಶದ ಜೀವನದಲ್ಲಿ ಕೈಗಾರಿಕೋದ್ಯಮ ಮುಂದು ವರಿದು ಪ್ರಮುಖಪಾತ್ರ ವಹಿಸಿ ತನ್ನ ಪ್ರಭಾವವನ್ನು ರಾಜಕೀಯದ ಮೇಲೆ ಬೀರಿದಾಗ ಬಂಗಾಲ ರಾಜಕೀಯ ಕ್ಷೇತ್ರದ ತನ್ನ ನಾಯಕತ್ವ ಕಳೆದುಕೊಂಡಿತು. ಸರಕಾರದ ನೌಕರರಾಗಿ ಅಥವ ಬೇರೆ ಕೆಲಸಗಳಿಗಾಗಿ ಪರ ಪ್ರಾಂತ್ಯಗಳಿಗೆ ಹರಡುತ್ತಿದ್ದ ಬಂಗಾಲಿಗಳ ಮೊದಲಿನ ಪ್ರವಾಹವು ನಿಂತು ಪರಪ್ರಾಂತ್ಯಗಳಿಂದ ಬಂಗಾಲಕ್ಕೆ, ಮುಖ್ಯ ಕಲ್ಕತ್ತ ನಗರಕ್ಕೆ ಜನರು ಬಂದು ಅಲ್ಲಿನ ವ್ಯಾಪಾರ ಮತ್ತು ಕೈಗಾರಿಕೋದ್ಯಮಗಳಲ್ಲಿ ಪ್ರವೇಶಮಾಡುವ ಹೊಸ ಪ್ರವಾಹ ಆರಂಭವಾಯಿತು. ಬ್ರಿಟಿಷ್ ಬಂಡವಾಳ ಮತ್ತು ಕೈಗಾರಿಕೆಗೆ ಕಲ್ಕತ್ತ ಮೊದಲಿನಿಂದಲೂ ಕೇಂದ್ರವಾಗಿತ್ತು. ಈಗಲೂ ಇಂಗ್ಲಿಷ್ ಮತ್ತು ಸ್ಕಾಚ್ ಜನರು ಅಲ್ಲಿನ ವ್ಯಾಪಾರದಲ್ಲಿ ಪ್ರಬಲರಾಗಿದ್ದಾರೆ. ಆದರೆ ಈಚೆಗೆ ಮಾಗ್ವಾಡಿಗಳು ಗುಜರಾತಿಗಳು ಅವರನ್ನು ಮಾರಿಸುತ್ತಿದ್ದಾರೆ. ಕಲ್ಕತ್ತೆಯ ಚಿಲ್ಲರೆ ವ್ಯಾಪಾರ ಸಹ ಬಂಗಾಲಿಗಳಲ್ಲ ದವರ ಕೈಲಿದೆ. ಕಲ್ಕತ್ತ ನಗರದ ಸಹಸ್ರಗಟ್ಟಲೆ ಟ್ಯಾಕ್ಸಿ ಡ್ರೈವರುಗಳೆಲ್ಲರೂ ಸೀಖರು ಮತ್ತು ಪಂಜಾಬಿಗಳು.

ಭಾರತೀಯ ಕೈಗಾರಿಕೆ, ವಾಣಿಜ್ಯ, ಲೇವಾದೇವಿ ಮತ್ತು ವಿಮಾ ಉದ್ಯಮಗಳಿಗೆ ಮುಂಬೈ ನಗರವು ಮುಖ್ಯ ಕೇಂದ್ರಸ್ಥಾನವಾಯಿತು. ಈ ಎಲ್ಲ ಚಟುವಟಿಕೆಗಳಲ್ಲಿ ಪಾರಸಿಗಳು, ಮಾಲ್ವಾಡಿ ಗಳು, ಗುಜರಾತಿಗಳು ಮುಂದಾಳುಗಳಾದರು, ಮಹಾರಾಷ್ಟ್ರದವರು ಅಥವ ಮರಾಠರು ಈ ಕಾವ್ಯ ಚಟುವಟಿಕೆಯಲ್ಲಿ ಭಾಗವಹಿಸಿರುವುದು ಅತ್ಯಲ್ಪ. ಮುಂಬೈ ನಗರ ಪ್ರಪಂಚಕ್ಕೆಲ್ಲ ಸೇರಿದ ಒಂದು ದೊಡ್ಡ ನಗರ, ಮರಾಠಿಗಳ ಮತ್ತು ಗುಜರಾತಿಗಳ ಜನಸಂಖ್ಯೆಯೇ ಹೆಚ್ಚು. ಮಹಾರಾಷ್ಟರು ವಿದ್ದ ತಿನಲ್ಲಿ ಕುಶಲ ವಿದ್ಯೆಗಳಲ್ಲಿ ಮುಂದುವರಿದಿದ್ದಾರೆ, ಅವರು ಒಳ್ಳೆಯ ಸೈನಿಕರು; ಅನೇಕರು ಹತ್ತಿಯ ಗಿರಣಿಗಳಲ್ಲಿ ಕೆಲಸಮಾಡುವವರು, ಕಷ್ಟ ಸಹಿಷ್ಣುಗಳು ಮತ್ತು ಗಟ್ಟಿಗರು. ಆದರೆ ಮಹಾರಾಷ್ಟ್ರದಲ್ಲಿ ಬಡತನ ಹೆಚ್ಚು, ಶಿವಾಜಿಯ ಸಾಹಸಗಳಲ್ಲಿ ಮತ್ತು ಅವರ ಪೂರ್ವಿಕರ ಶೌರ ಸಾಧನಗಳಲ್ಲಿ ಬಹು ಹಮ್ಮೆಯುಳ್ಳವರು, ಗುಜರಾತಿಗಳು ಮೃದುಶರೀರಿಗಳು, ನಯಶೀಲರು, ಧನವಂತರು; ವ್ಯಾಪಾರ ವಾಣಿಜ್ಯ ವಿಷಯಗಳಲ್ಲಿ ಪಳಗಿದವರು. ಈ ವ್ಯತ್ಯಾಸಗಳಿಗೆ ಪ್ರಾಯಶಃ ಭೌಗೋಲಿಕ ಕಾರಣಗಳಿರ ಬಹುದು; ಏಕೆಂದರೆ ಮಹಾರಾಷ್ಟ್ರದೇಶ ಬೋಳಾದ, ಪರುಷವಾದ, ಬೆಟ್ಟಗುಡ್ಡಗಳಿಂದಾವೃತವಾದ ಪ್ರಾಂತ, ಗುಜರಾತಾದರೋ ಸಂಪತ್ಸಮೃದ್ಧವಾದ ಫಲವತ್ತಾದ ದೇಶ.