ಈ ಪುಟವನ್ನು ಪ್ರಕಟಿಸಲಾಗಿದೆ
೩೦೪
ಭಾರತ ದರ್ಶನ

ಆರಂಭದಲ್ಲಿ ವ್ಯಕ್ತಿತ್ವ ಮತ್ತು ಸ್ವಾತಂತ್ರದ ವಿಕಾಸಕ್ಕೆ ಅವಶ್ಯಕವೂ, ಯೋಗ್ಯವೂ ಆದ ಜಾತಿ ಪದ್ದತಿಯು ತನ್ನ ಉದ್ದೇಶಕ್ಕೆ ಪ್ರತಿಯಾಗಿ ಅವನತಿಗೊಂಡು ದೊಡ್ಡ ಪೆಡಂಭೂತವಾಗಿ ಜನತೆ ಯನ್ನು ತುಳಿಯಲಾರಂಭಿಸಿತು, ಜಾತಿಯು ಒಂದು ಸಾಮಾಜಿಕ ವ್ಯವಸ್ಥೆಯಾಗಿತ್ತು. ಧರ್ಮಕ್ಕೂ ಜಾತಿಗೂ ಯಾವ ಸಂಬಂಧವೂ ಇರಲಿಲ್ಲ, ಇರಬೇಕಾದ್ರೂ ಇಲ್ಲ. ಕಾಲಪರಿವರ್ತನೆಗೊಂಡಂತೆ ಸಮಾಜ ವ್ಯವಸ್ಥೆಯ ವ್ಯತ್ಯಾಸಗೊಳ್ಳಬೇಕು. ವಿವೇಕಾನಂದನು ತನ್ನ ಸರ್ವಶಕ್ತಿಯನ್ನೂ ಉಪಯೋಗಿಸಿ ಕರ್ಮಾಚರಣೆಯ ಬಗ್ಗೆ ನಡೆಯುತ್ತಿದ್ದ ತಾತ್ವಿಕ ಚರ್ಚೆ ಮತ್ತು ವಾದ ವಿವಾದ ವನ್ನೂ ಮತ್ತು ಉತ್ತಮ ಜಾತಿಯವರ ಮುಟ್ಟಿದರೆ-ಮೈಲಿಗೆ ಸ್ವಭಾವವನ್ನೂ, “ ನನ್ನ ಧರ್ಮ ಎಲ್ಲ ಅಡಿಗೆಯ ಮನೆಯಲ್ಲಿ ; ನಮ್ಮ ದೇವರು ಇರುವದು ಅನ್ನದ ಪಾತ್ರೆಯಲ್ಲಿ ; ನಮ್ಮ ಧರ್ಮ ನಾನು ಮಡಿ, ನನ್ನನ್ನು ಮುಟ್ಟಬೇಡ ” ಎನ್ನು ವ ಮಡಿವಂತಿಕೆಯನ್ನೂ ಉಗ್ರವಾಗಿ ಖಂಡಿಸಿದನು.

ಆತನು ರಾಜಕೀಯದಿಂದ ದೂರನಿಂತನು. ತನ್ನ ಸಮಕಾಲೀನ ರಾಜಕೀಯ ಮುಖಂಡರನ್ನು ಆತ ಒಪ್ಪಲಿಲ್ಲ. ಆದರೂ ಜನತೆಯ ಮಟ್ಟ ಮೇಲಕ್ಕೆ ಬರಬೇಕು, ಸ್ವಾತಂತ್ರ ಮತ್ತು ಸರ್ವ ಸಮಾನತೆ ಅತ್ಯವಶ್ಯಕವೆಂದು ಪದೇ ಪದೇ ಒತ್ತಾಯ ಮಾಡುತ್ತ ಬಂದನು. “ ಜೀವನದ ಇರವು, ಬೆಳವಣಿಗೆ ಮತ್ತು ಉನ್ನತಿಗೆ ಭಾವನಾಸ್ವಾತಂತ್ರ ಮತ್ತು ಕ್ರಿಯಾ ಸ್ವಾತಂತ್ರ ಅತ್ಯವಶ್ಯ. ಅನಿಲ್ಲದಿದ್ದರೆ ಮನುಷ್ಯ ಕುಲದ ಮತ್ತು ರಾಷ್ಟ್ರದ ವಿನಾಶ ಖಂಡಿತ.” ಭಾರತದ ಜನತೆಯೇ ಭಾರತ ವನ್ನು ರಕ್ಷಿಸಬೇಕು. ಉತ್ತಮ ಜಾತಿಯವರು ದೇಹಬಲದಲ್ಲಿ, ನೈತಿಕಬಲದಲ್ಲಿ ಜೀವಶವಗಳು. ಪಾಶ್ಚಾತ್ಯ ಪ್ರಗತಿಯನ್ನು ಭಾರತದ ಧಾರ್ಮಿಕ ಉನ್ನತಿಯ ಹಿನ್ನೆಲೆಯೊಂದಿಗೆ ಸಮನ್ವಯಗೊಳಿಸು ವುದು ಆತನ ಆಶಯವಾಗಿತ್ತು. * ಭಾರತದ ಧರ್ಮದೃಷ್ಟಿಯುಳ್ಳ ಯೂರೋಪಿರ್ಯ ಸಮಾಜ ವನ್ನು ಕಟ್ಟಿ ೦.” “ ಸಮತಾಭಾವ, ಸ್ವಾತಂತ್ರ, ಕಾರ್ಯತತ್ಪರತೆ ಮತ್ತು ಕಾರ್ಯಶಕ್ತಿ ಯಲ್ಲಿ ಪಾಶ್ಚಾತ್ಯರನ್ನೂ ಮೀರಿಸಿರಿ. ಆದರೆ ಧಾರ್ಮಿಕ ಸಂಸ್ಕೃತಿ ಮತ್ತು ಭಾವನೆಯಲ್ಲಿ ಹದಿ ನಾರಾಣೆಯ ಹಿಂದೂಗಳಾಗಿರಿ” ಎಂದನು. ಕ್ರಮೇಣ ವಿವೇಕಾನಂದನ ದೃಷ್ಟಿಯು ಅಂತರ ರಾಷ್ಟ್ರೀಯವಾಯಿತು. “ ಇಪ್ಪತ್ತು ವರ್ಷಗಳ ಹಿಂದೆ ಕೇವಲ ರಾಷ್ಟ್ರೀಯವಾಗಿದ್ದ ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಈಗ ಕೇವಲ ರಾಷ್ಟ್ರೀಯ ದೃಷ್ಟಿಯಿಂದ ಬಿಡಿಸಲು ಸಾಧ್ಯ ವಿಲ್ಲ. ಅವು ಬೃಹದಾಕಾರತಾಳಿ ಪೆಡಂಭೂತಗಳಾಗಿವೆ. ಅಂದರೆ ರಾಷ್ಟ್ರೀಯ ಹಿನ್ನೆಲೆಯಲ್ಲಿ ವಿಶಾಲ ದೃಷ್ಟಿಯಿಂದ ಪ್ರಯತ್ನ ಮಾಡಿದರೆ ಸಾಧ್ಯ, ಅಂತರ ರಾಷ್ಟ್ರೀಯ ಒಕ್ಕೂಟಗಳು, ಅಂತರ ರಾಷ್ಟ್ರೀಯ ಶಾಸನ ವಿಧಿಗಳು ಬೇಕೆಂಬುದೇ ಇಂದಿನ ಕೂಗು. ಇದರಿಂದ ಇಡೀ ಪ್ರಪಂಚವೇ ಒಂದು ಎನ್ನುವುದು ಎದ್ದು ತೋರುತ್ತದೆ. ಭೌತಿಕ ವಿಜ್ಞಾನದಲ್ಲಿ ಸಹ ಇದೇ ವಿಶಾಲ ದೃಷ್ಟಿಯು ಕಾಣುತ್ತದೆ.” ಎಂದು ಹೇಳಿದ್ದಾನೆ. ಈ ಇಡೀ ಪ್ರಪಂಚವೆಲ್ಲ ಹಿಂಬಾಲಿಸಿದ ಹೊರತು ಯಾವ ಪ್ರಗತಿಯ ಸಾಧ್ಯವಿಲ್ಲ. ಯಾವ ಸಮಸ್ಯೆಯನ್ನೂ ಸಂಕುಚಿತ ಕುಲ ಅಥವಾ ರಾಷ್ಟ್ರೀಯ ದೃಷ್ಟಿ ಯಿಂದ ಬಿಡಿಸಲು ಸಾಧ್ಯವಿಲ್ಲ. ಎಲ್ಲ ಭಾವನೆಯ ಪ್ರಪಂಚಕ್ಕೆ ಅನ್ವಯಿಸುವಷ್ಟು ವಿಶಾಲವುಳ್ಳು ದಾಗಿರಬೇಕು, ಎಲ್ಲ ಆಶೆಗಳೂ ಇಡೀ ಮಾನವ ಕುಲವನ್ನೇ ಆವರಿಸುವಷ್ಟು ವಿಶಾಲವುಳ್ಳದಾಗಿರ ಬೇಕು, ಎಲ್ಲ ಜೀವನವನ್ನು ತನ್ನೊಳಗೆ ತೆಗೆದುಕೊಳ್ಳಬೇಕು.” ಎಂದಿದ್ದಾನೆ. ವಿವೇಕಾನಂದನ ವೇದಾಂತ ದರ್ಶನದೃಷ್ಟಿಯಲ್ಲಿ ಇವೆಲ್ಲಕ್ಕೂ ಸ್ಥಾನವಿತ್ತು. ಭಾರತಾದ್ಯಂತ ಮೂಲೆಯಿಂದ ಮೂಲೆಗೆ ಈ ಸಂದೇಶ ಸಾರಿದನು. “ಯಾವ ವ್ಯಕ್ತಿಯೇ ಆಗಲಿ ಜನಾಂಗವೇ ಆಗಲಿ ಪರರ ಸಂಪರ್ಕವಿಲ್ಲದೆ ದೂರವಿದ್ದು ಬಾಳಲು ಸಾಧ್ಯವಿಲ್ಲ. ಯಾವ ಜನಾಂಗವೇ ಆಗಲಿ ತನ್ನ ಔನ್ನತ್ಯ, ಕಾರ್ಯ ನೀತಿ, ಅಥವ ಪವಿತ್ರತೆಗೆ ಸಮಾನವಿಲ್ಲವೆಂದು ದುರಭಿಮಾನದಿಂದ ಏಕಾಂಗಿಯಾಗಿ ಬಾಳಲು ಪ್ರಯತ್ನ ಪಟ್ಟಿದ್ದರೆ ಆ ಜನಾಂಗದ ವಿನಾಶವು ಶತಸ್ಸಿದ್ದ”, ಪ್ರಪಂಚದ ಇತರ ಜನಾಂಗಗಳಿಂದ ವಿಮುಖರಾದುದೇ ನನ್ನ ಅವನತಿಗೆ ಕಾರಣ. ಇತರರೊಂದಿಗೆ ಪ್ರಪಂಚದ ಸುಳಿಯಲ್ಲಿ ನುಗ್ಗಿ ಈಜುವುದೇ ಅದಕ್ಕೆ ಪರಮೌಷಧ, ಚಲನಶಕ್ತಿಯ ಜೀವನದ ಹೆಗ್ಗುರುತು” ಎಂದಿದ್ದಾನೆ.