ಈ ಪುಟವನ್ನು ಪ್ರಕಟಿಸಲಾಗಿದೆ
ಕೊನೆಯ ಅಂಕ
೩೦೫

“ನಾನೊಬ್ಬ ಸಮಾಜವಾದಿ, ಸಮಾಜವಾದವು ಸರ್ವಪರಿಪೂರ್ಣವೆಂದಲ್ಲ; ಆದರೆ ಕೂಳಿಲ್ಲದ ಸಾಯುವುದಕ್ಕಿಂತ ಅರಹಟ್ಟಿಲೇಸು ಇತರ ವಾದಗಳಲ್ಲಿ ಯಾವ ಹುರುಳೂ ಇಲ್ಲ. ಇದನ್ನಾ ದರೂ ನೋಡಿ ಪ್ರಯತ್ನ ಮಾಡೋಣ, ಏನು ಸಾಧನೆಯಾಗದಿದ್ದರೂ ಒಂದು ಹೊಸ ದಾರಿಯನ್ನಾ ದರೂ ನೋಡಿದಂತಾಗುತ್ತದೆ” ಎಂದಿದ್ದಾನೆ.

ವಿವೇಕಾನಂದನು ಅನೇಕ ವಿಷಯಗಳ ಮೇಲೆ ಮಾತನಾಡಿದ. ಆದರೆ ಅಭಯನಾಗಿರು, ನಿರ್ಭೀತನೂ ಬಲಶಾಲಿಯೂ ಆಗು' ಎನ್ನು ವುದೇ ಆತನ ಎಲ್ಲ ಸಂದೇಶಗಳ ಸಾರವಾಗಿತ್ತು. ಮಾನ ವನು ಆತನಿಗೆ ಒಬ್ಬ ಕರುಣಾ ಜನಕ ಪಾಪಿಯಾಗಲಿಲ್ಲ ; ದೇವಾಂಶಸಂಭೂತನಾಗಿದ್ದ. ಅವನು ಯಾವದಕ್ಕೆ ತಾನೇ ಏಕೆ ಹದರಬೇಕು? “ಪ್ರಪಂಚದಲ್ಲಿ ಪಾಪ ಎಂಬುದಿದ್ದರೆ ದೌರ್ಬಲ್ಯವೇ ಪಾಪ ದೌರ್ಬಲ್ಯವನ್ನು ದೂರಮಾಡು, ದೌರ್ಬಲ್ಯವೇ ಪಾಪ, ದೌರ್ಬಲ್ಯವೇ ಮೃತ್ಯು,” ಎಂದಿದ್ದಾನೆ. ಉಪನಿಷತ್ತುಗಳ ಮಹಾವಾಣಿಯೂ ಅದೇ ಇತ್ತು. ಭೀತಿಯಿಂದಲೇ ಎಲ್ಲ ಗೋಳು, ನೋವು, ಸಾವು. ಅದನ್ನು ಸಾಕಷ್ಟು ಅನುಭವಿಸಿ, ಮೆತ್ತಗಾಗಿದ್ದೇವೆ. “ ನಮ್ಮ ದೇಶಕ್ಕೆ ಬೇಕಾದುದು ಕಬ್ಬಿಣದ ಮಾಂಸಖಂಡಗಳು, ಉಕ್ಕಿನ ನರಗಳು, ಯಾವುದಕ್ಕೂ ಮಣಿಯದ ದೃಢಮನಸ್ಸು; ಪ್ರಪಂಚದ ರಹಸ್ಯಗಳನ್ನು, ಗುಟ್ಟುಗಳನ್ನು ರಟ್ಟು ಮಾಡುವ ತೀಕ್ಷ್ಮ ಮನಸ್ಸು; ಸಮುದ್ರ ತಳವನ್ನಾದರೂ ಭೇದಿಸಿ ಸಾವನ್ನಾ ದರೂ ಎದುರಿಸುವ ಕಠಿನ ಮನಸ್ಸು ”” ಎಂದಿದಾನೆ. ಯಂತ್ರ ತಂತ್ರಗಳನ್ನು ಪ್ರಬಲವಾಗಿ ಖಂಡಿಸಿದನು. “ಅವುಗಳಲ್ಲಿ ಮಹಾ ಸತ್ಯವು ಅಡಗಿರಬಹುದು. ಆದರೆ ಅವುಗಳ ಭಯ ನಮ್ಮನ್ನು ಸಂಪೂರ್ಣ ನಾಶಮಾಡಿದೆ, ದೈಹಿಕ, ಬೌದ್ಧಿಕ, ಧಾರ್ಮಿಕ, ದೌರ್ಬಲ್ಯ ಉಂಟುಮಾಡುವುದೆಲ್ಲ ವಿಷ; ನಿರ್ಜೀವ ವಸ್ತು; ಸತ್ಯ ಬಾಹಿರವಾದುದು. ಸತ್ಯವು ಪುಷ್ಟಿದಾಯಕ, ಸತ್ಯವೇ ನೈರ್ಮಲ್ಯ, ಸತ್ಯವೇ ಸರ್ವಜ್ಞ, ಸ್ವಲ್ಪ ತಥ್ಯವಿದ್ದರೂ ಯಂತ್ರ ತಂತ್ರಗಳ ದೌರ್ಬಲ್ಯ ವನ್ನುಂಟುಮಾಡುವುವು. ಜಾಜ್ವಲ್ಯವೂ, ಶಕ್ತಿದಾಯಕವೂ, ಪ್ರತಿಭಾವಂತವೂ ಆದ ನಿಮ್ಮ ಉಪ ನಿಷತ್ತುಗಳಿಗೆ ಹಿಂದಿರುಗಿ ಜೀವಸತ್ವವನ್ನು ಹೀರುವ ಈ ಯಂತ್ರತಂತ್ರಗಳನ್ನೆಲ್ಲ ಕಿತ್ತೊಗೆಯಿರಿ. ಈ ಉಪನಿಷದ್ದರ್ಶನವನ್ನು ಅವಲಂಬಿಸಿರಿ. ಜೀವನ ಎಷ್ಟು ಸುಲಭವೋ, ಹಾಗೆಯೇ ಮಹಾ ಸತ್ಯವೂ ಪ್ರಪಂಚದ ಅತ್ಯಂತ ಸುಲಭವಸ್ತುಗಳಲ್ಲಿ ಒಂದು. ” “ಮೂಢನಂಬಿಕೆಗೆ ಬಲಿಯಾಗಬೇಡಿ, ಮೂಢ ನಂ ಬಿ ಕೆ ಯಿ ೦ ದ ತಲೆಕೆಡಸಿಕೊಳ್ಳುವುದಕ್ಕಿಂತ ನೀವೆಲ್ಲ ನಿರೀಶ್ವರವಾದಿಗಳಾದರೂ ನನಗೆ ಸಂತೋಷ, ಏಕೆಂದರೆ ನಿರಿ ಶ ರ ನಾ ದಿ ಜೀವಂತನಿರುತ್ತಾನೆ. ಆತನಿಂದ ಏನಾದರೂ ಪ್ರಯೋಜನ ಪಡೆಯಬಹುದು; ಆದರೆ ಮೂಢನಂಬಿಕೆಯಿಂದ ತಲೆಕಟ್ಟು ಮೆದುಳು ಮಿದುವಾಗಿ, ಜೀವನದ ಅವನತಿಗೆ ಆರಂಭವಾಗುತ್ತದೆ. ಮಂತ್ರವಾದಿಯ ವಿದ್ಯೆ, ಮೂಢ ನಂಬಿಕ ಎರಡೂ ದೌರ್ಬಲ್ಯದ ಕುರುಹು ?” ಎಂದಿದಾನೆ.* ——————

* ಈ ಉಲ್ಲೇಖಗಳನ್ನೆಲ್ಲ ಸ್ವಾಮಿ ವಿವೇಕಾನಂದರ ಆ ಕೊಲಂಬೋದಿಂದ ಆಲೊರವರೆಗಿನ ಉಪನ್ಯಾಸ ಗಳು” (೧೯೩೩) ಎಂಬ ಗ್ರಂಥದಿಂದಲೂ, ಸ್ವಾಮಿ ವಿವೇಕಾನಂದರ ಪತ್ರಗಳು (೧೯೪೨) ಎಂಬ ಗ್ರಂಥದಿಂದಲೂ ತೆಗೆದುಕೊಳ್ಳಲಾಗಿದೆ. ಇವೆರಡನ್ನೂ ಹಿಮಾಲಯಪರ್ವತದಲ್ಲಿ ಆಿ ರದಲ್ಲಿನ ಮಾಯಾವತಿಯ ಅದ್ಭತ ಆಶ್ರಮದವರು ಪ್ರಕಟಿಸಿದ್ದಾರೆ. ಈ ವಿವೇಕಾನಂದರ ಪತ್ರಗಳ" ಎಂಬ ಗ್ರಂಥದ ೩೯೦ ನೆಯ ಪುಟದಲ್ಲಿ ವಿವೇಕಾನಂದರು ತಮ್ಮ ಮುಸ್ಲಿಂ ಸ್ನೇಹಿತನೊಬ್ಬನಿಗೆ ಬರೆದಿರುವ ಪತ್ರವು ಅತ್ಯದ್ಭುತವಿದೆ, ಅದು ಈ ರೀತಿ ಇದೆ "ವೇದಾಂತವೆನ್ನಲಿ ಅಥವ ಬೇರೆಯಾವ ಆಂತನನ್ನಲಿ, ದರ್ಶನ ವಿಕಾಸದಲ್ಲಿ ಭಾವನೆಯಲ್ಲಿ ಆದ್ರೆತ ದರ್ಶನವೇ ಅತ್ಯಂತ ಶ್ರೇಷ್ಠ ಎಂಬುದು ಸತ್ಯ.

ಎಲ್ಲ ಮತಗಳಲ್ಲಿ ಮತ್ತು ಧರ್ಮಗಳಲ್ಲಿ ಪ್ರೇಮ ಹುಟ್ಟಬೇಕಾದರೆ ಆ ಒಂದು ನಿಲುವಿನಿಂದ ಮಾತ್ರ ಸಾಧ್ಯ. ಮುಂದಿನ ಸುಸಂಸ್ಕೃತ ಮಾನವಕುಲವ ಧರ್ಮವಾಗಲು ಅದೊಂದರಿಂದ ಮಾತ್ರ ಸಾಧ್ಯ. ಹೀಬ್ರು ಮತ್ತು ಅರಬ್ಬ ಜನರಿಗಿಂತ ಪುರಾತನರಾದುದರಿಂದ ಇತರರಿಗಿಂತ ತಾವೇ ಮೊದಲು ಅದನ್ನು ಕಂಡುಹಿಡಿದವರೆಂದು ಹಿಂದೂಗಳಿಗೆ ಮನ್ನಣೆ ದೊರೆಯಬಹುದು, ಆದರೆ ಪ್ರತಿಯೊಬ್ಬ ಮಾನವನೂ ತನ್ನ ಆತ್ಮದಂತೆ ಎಂದು ನೋಡಿ ನಡೆಯುವ ಅದ್ವೈತ