ಈ ಪುಟವನ್ನು ಪ್ರಕಟಿಸಲಾಗಿದೆ
೩೨೦
ಭಾರತ ದರ್ಶನ

ಸಂಖ್ಯೆ ಬೆಳೆದಂತೆ ಅದು ಸಾರ್ವಜನಿಕಜೀವನದ ಮತ್ತು ಸಮಾಜದ ಪ್ರತಿಯೊಂದು ಕಾರ್ಯ ಕ್ಷೇತ್ರ ವನ್ನೂ ವ್ಯಾಪಿಸಿ ಜನಜೀವನವನ್ನೇ ವಿಷಮಯವನ್ನಾಗಿ ಮಾಡಿತು. ಪೌರಸಭೆಗಳಲ್ಲಿ ಸ್ಥಳೀಯ ಸಂಸ್ಥೆ ಗಳಲ್ಲಿ ಸಹ ಈ ವಿಷವಾಹಿನಿ ಹರಡಿ ಕೊನೆಗೆ ಅತಿ ಘೋರರೂಪತಾಳಿತು. ವ್ಯಾಪಾರ ಸಂಸ್ಥೆಗಳು, ವಿದ್ಯಾರ್ಥಿ ಸಂಘಗಳು, ವಾಣಿಜ್ಯ ಸಂಘಗಳು ಯಾವುದನ್ನೂ ಬಿಡಲಿಲ್ಲ. ಈ ಎಲ್ಲ ಕಾರ್ಯ ಚಟುವಟಿಕೆ ಗಳಲ್ಲಿ ಮುಸ್ಲಿಮರು ಹಿಂದುಳಿದಿದ್ದುದರಿಂದ ಈ ಸಂಸ್ಥೆಗಳು ಸ್ವಾಭಾವಿಕವಾಗಿ ಬೆಳೆಯದೆ, ಮೇಲಿನವರ ಪ್ರೋತ್ಸಾಹದಿಂದ ಹುಟ್ಟಿದ ಕೃತಕ ಸಂಸ್ಥೆಗಳಾಗಿದ್ದವು. ಅವುಗಳ ಆಡಳಿತ ಸೂತ್ರಗಳೆಲ್ಲ ಹಳೆಯ ಶ್ರೀಮಂತರ ಕೈಸೇರಿತು. ಈ ರೀತಿ ಮುಸ್ಲಿಂ ಮಧ್ಯವರ್ಗ ಮತ್ತು ಸಾಮಾನ್ಯ ಜನತೆಯು ಸಹ ಉಳಿದ ಭಾರತದ ಪ್ರಗತಿವಾಹಿನಿಯ ಪ್ರವಾಹದಿಂದ ದೂರ ಸರಿದರು. ಬ್ರಿಟಿಷರ ರಕ್ಷಣೆಯನ್ನೇ ನಂಬಿ ಅಸ್ತಿತ್ವ ಪಡೆಯಲು ಹಾತೊರೆಯುತ್ತಿದ್ದ ಪ್ರತಿಗಾಮಿ ಪಕ್ಷದ ಜನರಿಗೆ ಭಾರತದಲ್ಲಿ ಕೊರತೆಯಿರಲಿಲ್ಲ. ಈ ಪ್ರತ್ಯೇಕ ಚುನಾವಣೆಗಳಿಂದ ಹೊಸದೊಂದು ಬಲಿಷ್ಠವಾದ ಹಕ್ಕು ದಾರಿ ಪಕ್ಷ ಉದ್ಭವವಾಯಿತು.

ರಾಜಕೀಯ ಭಾವನೆ ಬೆಳೆದಂತೆ ಅದು ತಾನಾಗಿ ಅಡಗುವ ಒಂದು ತಾತ್ಕಾಲಿಕ ಪಿಡುಗಾಗಿರಲಿಲ್ಲ. ಅಧಿಕಾರಿಗಳ ಪ್ರೋತ್ಸಾಹವಿದ್ದುದರಿಂದ ಅದು ಬೆಳೆದು, ಹಬ್ಬಿ, ರಾಜಕೀಯ, ಸಾಮಾಜಿಕ ಆರ್ಥಿಕ ಏನೆ ಇರಲಿ ದೇಶದ ಎಲ್ಲ ನಿಜವಾದ ಸಮಸ್ಯೆಗಳನ್ನು ಕವಿದುಬಿಟ್ಟಿತು. ಹಿಂದೆಂದೂ ಇಲ್ಲದ ಅನೈಕ್ಯತೆಯನ್ನೂ ಪರಸ್ಪರ ವೈಷಮ್ಯವನ್ನೂ ತಂದು ಹಾಕಿತು. ಅಧಿಕಾರಿಗಳ ನೆರವಿಗಾಗಿ ಹಾತೊರೆದು ಕುಳಿತಿದ್ದ ಆ ಪಕ್ಷದ ಸ್ವಾವಲಂಬನ ಧೀಶಕ್ತಿಯನ್ನೇ ನಾಶಮಾಡಿ, ದಾಸ್ಯ ವೃತ್ತಿಯನ್ನು ಹೆಚ್ಚಿಸಿ ಅವರ ಬಲವನ್ನೇ ಕುಗ್ಗಿಸಿತು.

ಆರ್ಥಿಕ ಮಟ್ಟ ಮತ್ತು ವಿದ್ಯೆಯಲ್ಲಿ ಹಿಂದುಳಿದ ಅಲ್ಪಸಂಖ್ಯಾತ ಪಂಗಡಗಳಿಗೆ ಪ್ರತಿಯೊಂದು ವಿಧ ದಲ್ಲೂ ಸಹಾಯಮಾಡಿ ಅವರ ನ್ಯೂನತೆಗಳನ್ನು ಹೋಗಲಾಡಿಸಿ, ಮುಖ್ಯವಾಗಿ ವಿದ್ಯಾವಂತರನ್ನಾಗಿ ಮಾಡಿ ಮುಂದಕ್ಕೆ ತರಬೇಕಾದ್ದು ನ್ಯಾಯ ಮತ್ತು ಆವಶ್ಯಕ. ಮುಸ್ಲಿಮರು, ಹಿಂದುಳಿದ ಇತರ ದಲಿತ ಜನಾಂಗದವರು ಯಾರಿಗೂ ಈ ಅನುಕೂಲತೆಗಳ್ಯಾವುವನ್ನೂ ಒದಗಿಸಲಿಲ್ಲ. ಕೆಳದರ್ಜೆಯ ಸರಕಾರಿ ನೌಕರಿಗಳಲ್ಲಿ ಕೆಲವು ಸ್ಥಾನಗಳಿಗಾಗಿ ಈ ಎಲ್ಲ ವಿವಾದ ಹುಟ್ಟಿದವು. ಈ ಎಲ್ಲರ ಜೀವನ ಮಟ್ಟ ಉತ್ತಮ ಗೊಳಿಸುವದಕ್ಕೆ ಪ್ರತಿಯಾಗಿ ಯೋಗ್ಯತೆಗೆ ಇದ್ದ ಬೆಲೆಯೂ ಹೋಯಿತು.

ಈ ಪ್ರತ್ಯೇಕ ಚುನಾವಣೆಗಳಿಂದ ಮೊದಲೇ ಹಿಂದುಳಿದವರೂ, ದುರ್ಬಲರೂ ಇದ್ದವರು ಇನ್ನೂ ದುರ್ಬಲರಾದರು. ಪ್ರತ್ಯೇಕತಾ ಮನೋಭಾವನೆಗೆ ಪ್ರೋತ್ಸಾಹ ದೊರೆಯಿತು, ರಾಷ್ಟ್ರದ ಐಕ್ಯತೆಗೆ ನಿಮ್ಮ ಬಂದಿತು, ಪ್ರಜಾಪ್ರಭುತ್ವದ ಕೊಲೆಯಾಯಿತು. ವಿಶೇಷ ಪ್ರತಿಗಾಮಿ ಮನೋಭಾವನೆಯ ಹೊಸ ವಿರೋಧಪಕ್ಷದ ಅವತಾರವಾಯಿತು. ಜನಜೀವನದ ಮಟ್ಟ ಇನ್ನೂ ತಳಹತ್ತಿತು. ಮತ್ತು ದೇಶದ ಸರ್ವ ಸಾಮಾನ್ಯ ಆರ್ಥಿಕ ಸಮಸ್ಯೆಗಳಿಗೆ ಕೊಡಬೇಕಾದ ಲಕ್ಷ ದೊರೆಯದಂತೆ ಆಯಿತು. ಮೊದಲು ಮುಸ್ಲಿಮರಿಂದ ಆರಂಭವಾದ ಪ್ರತ್ಯೇಕ ಚುನಾವಣೆ ಕೊನೆಕೊನೆಗೆ ಎಲ್ಲ ಅಲ್ಪ ಸಂಖ್ಯಾತರಿಗೆ ಮತ್ತು ಪಂಗಡಗಳಿಗೆ ದೊರೆತು ಭಾರತವು ಒಂದು ಪಂಚರಂಗಿ ಚಿತ್ರವಾಯಿತು. ನನಗೆ ಏನೂ ಕಾಣದಿದ್ದರೂ ಆರಂಭ ದಲ್ಲಿ ಸ್ವಲ್ಪ ಪ್ರಯೋಜನ ಆಗಿರಬಹುದು. ಆದರೆ ಪ್ರತಿಯೊಂದು ಜೀವನಕ್ಷೇತ್ರದಲ್ಲಿ ಅದರಿಂದ ಆಗಿರುವ ಹಾನಿ ಅಪಾರ. ಎಲ್ಲ ಬಗೆಯ ಪ್ರತ್ಯೇಕ ಮನೋಭಾವನೆಗಳು ಬೆಳೆದಿವೆ ಮತ್ತು ಭಾರತದ ವಿಭಜನೆಗೂ ಕೊನೆಗೆ ಅವಕಾಶಮಾಡಿಕೊಟ್ಟಿದೆ.

ಈ ಪ್ರತ್ಯೇಕ ಚುನಾವಣೆಗಳು ಆಚರಣೆಗೆ ಬಂದಾಗ ಲಾರ್ಡ್ ಮಾಗ್ಗೆ ಇಂಗ್ಲೆಂಡಿನಲ್ಲಿ ಭಾರತ ಕಾರ್ಯದರ್ಶಿಯಾಗಿದ್ದ. ಮೊದಲು ಆತ ಇದನ್ನು ವಿರೋಧಿಸಿದರೂ ಕೊನೆಗೆ ವೈಸರಾಯನ ಬಲಾತ್ಕಾರಕ್ಕೆ ಬಲಿಯಾದ. ತನ್ನ ದಿನಚರಿಯಲ್ಲಿ ಈ ಕಾರ್ಯ ನೀತಿಯ ಅಪಾಯ ತೋರಿಸಿ, ಪ್ರಜಾಸತ್ತೆಯ ಸಂಸ್ಥೆಗಳ ಬೆಳೆವಣಿಗೆಗೆ ಅಡ್ಡಿಯಾಗುತ್ತದೆ ಎಂದು ಸ್ಪಷ್ಟ ಪಡಿಸಿದ್ದಾನೆ. ಪ್ರಾಯಶಃ ವೈಸರಾಯ್ ಮತ್ತು ಆತನ ಸಹೋದ್ಯೋಗಿಗಳಿಗೆ ಅದೇ ಬೇಕಾಗಿತ್ತು. ೧೯೧೮ರಲ್ಲಿ ಭಾರತದ ರಾಜಕೀಯ ಸುಧಾರಣೆಗಳಿಗೆಂದು ಹೊರಬಿದ್ದ ಮಾಂಟೆಗೂ ಚೆಮ್ಸ್ ಫರ್ಡ್ ವರದಿಯಲ್ಲಿ ಪ್ರತ್ಯೇಕ ಚುನಾವಣೆಗಳಿಂದ ಆಗುವ ಹಾನಿಯನ್ನು ಪುನಃ ವಿವರಿಸಿದ್ದಾರೆ. “ಜಾತಿ ಪಂಗಡಗಳಂತೆ ವಿಭಜಿಸುವುದೆಂದರೆ ಪರಸ್ಪರ ಕಾದಾಡುವ ರಾಜಕೀಯ