ಈ ಪುಟವನ್ನು ಪ್ರಕಟಿಸಲಾಗಿದೆ
ಕೊನೆಯ ಅಂಕ
೩೨೧

ಪಂಗಡ ಸೃಷ್ಟಿಸಿದಂತ. ನಾಗರಿಕರಂತೆ ವರ್ತಿಸುವ ಬದಲು ವಿರೋಧಿಗಳೆಂಬ ಭಾವನೆ ಹುಟ್ಟುತ್ತದೆ. ಜಾತಿಯ ಆಧಾರದಮೇಲಿನ ಪ್ರತ್ಯೇಕ ಚುನಾವಣೆಗಳು ಪ್ರಜಾಪ್ರಭುತ್ವ ತತ್ವದ ಬೆಳೆವಣಿಗೆಗೆ ಅಡ್ಡಿ” ಎಂದು ಹೇಳಿದಾರೆ.

ಅಧ್ಯಾಯ ೮-ಕೊನೆಯ ಅಂಕ (೨): ರಾಷ್ಟ್ರೀಯತೆ ಮತ್ತು
ಸಾಮ್ರಾಜ್ಯತತ್ವಗಳ ಘರ್ಷಣೆ

೧, ಮಧ್ಯಮವರ್ಗದ ಅಸಹಾಯಕತೆ : ಗಾಂಧಿಯ ಪ್ರವೇಶ

ಮೊದಲನೆಯ ಪ್ರಪಂಚಯುದ್ಧ ಆರಂಭವಾಯಿತು. ಕಾಂಗ್ರೆಸ್ಸಿನಲ್ಲಿ ಉಗ್ರ ಪಕ್ಷದವರಿಗೂ ಮತ್ತು ಮಂದ ಪಕ್ಷದವರಿಗೂ ಇದ್ದ ಭಿನ್ನಾಭಿಪ್ರಾಯಗಳು, ಯುದ್ಧ ಕಾಲದ ನಿರ್ಬಂಧ ಮತ್ತು ನಿಷೇಧಗಳಿಂದ ರಾಜಕೀಯವು ತಣ್ಣಗಾಗಿತ್ತು. ಮುಸ್ಲಿಮರಲ್ಲಿ ತಲೆ ಎತ್ತುತ್ತಿದ್ದ ಮಧ್ಯಮ ವರ್ಗ ಹೆಚ್ಚು ರಾಷ್ಟ್ರೀಯ ಭಾವನೆ ತೋರುತ್ತ ಮುಸ್ಲಿಂ ಲೀಗ್ ಮತ್ತು ಕಾಂಗ್ರೆಸ್ ಎರಡೂ ಸಮೀಪವರ್ತಿಯಾಗಿ ಏಕೀಭವಿಸಿ ಕೆಲಸ ಮಾಡುವಂತೆ ಮಾಡಿದರು.

ಯುದ್ಧ ಕಾಲದಲ್ಲಿ ಕೈಗಾರಿಕಾ ಪ್ರಗತಿಯಾಗಿ, ಅಪಾರ ಲಾಭ ಸಂಪಾದನೆಯಾಯಿತು. ಬಂಗಾಲದ ಸೆಣಬಿನ ಕಾರ್ಖಾನೆಗಳಿಗೆ ಮತ್ತು ಮುಂಬೈ ಬಟ್ಟೆ ಕಾರ್ಖಾನೆಗಳಿಗೆ ಶೇಕಡ ೧೦೦-೨೦೦ ರಷ್ಟು ಲಾಭ ದೊರೆಯಿತು. ಇದರಲ್ಲಿ ಕೆಲವು ಭಾಗ ಡಂಡಿ ಮತ್ತು ಲಂಡನ್ ನಗರಗಳ ವಿದೇಶಿ ಬಂಡವಾಳಗಾರರಿಗೂ, ಉಳಿದುದು ಭಾರತೀಯ ಕೋಟ್ಯಾಧೀಶ್ವರರ ಸಂಪತ್ತನ್ನು ಹೆಚ್ಚಿಸುವುದಕ್ಕೂ ಹೋಯಿತು. ಆದರೂ ಈ ಸಂಪಾದಿಸಿಕೊಟ್ಟ ಶ್ರಮ ಜೀವಿಗಳ ಜೀವನಮಟ್ಟ ಅದೇ ಅಧೋಗತಿಯಲ್ಲಿತ್ತು. ಕಿಟಕಿ, ಹೊಗೆಯ ಗೂಡು, ಬೆಳಕು, ನೀರು ಮತ್ತು ಯಾವ ಆರೋಗ್ಯ ಸೌಕಯ್ಯವೂ ಇಲ್ಲದ 'ಕೊಳಕು ರೋಗ ಕೂಪ'ಗಳಲ್ಲೇ ವಾಸಮಾಡುತ್ತಿದ್ದರು. ಇದೂ ಬ್ರಿಟಿಷ್ ಬಂಡವಾಳಗಾರರ ಹಿಡಿತದಲ್ಲಿದ್ದ ಅರಮನೆಗಳ ನಗರವೆನ್ನುವ ಕಲ್ಕತ್ತೆಯ ಸಮೀಪವೇ, ಭಾರತೀಯ ಬಂಡವಾಳಗಾರರಿದ್ದ ಮುಂಬೈ ನಗರದಲ್ಲಿ ೧೫x೧೨ ಅಡಿ ಚದುರದ ಕೋಣೆಯೊಂದರಲ್ಲಿ ವಯಸ್ಕರು ಮತ್ತು ಮಕ್ಕಳೂ ೩೦ ಜನರ ಆರು ಸಂಸಾರಗಳು ವಾಸಮಾಡುತ್ತಿದ್ದರೆಂದ ವಿಚಾರಣಾ ಸಮಿತಿಯ ವರದಿಯೊಂದರಿಂದ ಗೊತ್ತಾಗುತ್ತದೆ. ಅವರಲ್ಲಿ ಮೂರು ಜನ ಗರ್ಭಿಣಿ ಸ್ತ್ರೀಯರು ! ಪ್ರತಿಯೊಂದು ಸಂಸಾರಕ್ಕೂ ಅಲ್ಲಿಯೇ ಒಂದೊಂದು ಒಲೆ. ಇದೆಲ್ಲ ವಿಶೇಷ ಪರಿಸ್ಥಿತಿಯಾ ದರೂ, ಅತಿ ಸಾಮಾನ್ಯವಿತ್ತು. ಸ್ವಲ್ಪ ಉತ್ತಮಗೊಳಿಸುವ ಪ್ರಯತ್ನ ನಡೆದಿದ್ದರೂ ೧೯೨೦ ರಿಂದು೧೯೪೦ರ ವರೆಗೆ ಇದ್ದ ಪರಿಸ್ಥಿತಿಯೇ ಹೀಗೆ. ಅದಕ್ಕೂ ಮುಂಚಿನ ಸ್ಥಿತಿಯನ್ನು ಊಹಿಸಲು ಸಹ ಸಾಧ್ಯವಿಲ್ಲ.*

ಈ ಶ್ರಮಜೀವಿಗಳ ಕೇರಿಗಳಿಗೂ, ಗುಡಿಸಲುಗಳಿಗೂ ಹೋಗಿ ಮೂಗು ಮುಚ್ಚಿಕೊಂಡು, ಅಸಹ್ಯ ಪಟ್ಟು ಕೋಪದಿಂದ ದಿಗ್ಗಾಂತನಾಗಿ ನಾನು ಬಂದುದು ಇನ್ನೂ ನನಗೆ ಜ್ಞಾಪಕವಿದೆ. ಝರಿಯ ಕಲ್ಲಿದ್ದಲು ಗಣಿಯೊಳಗೆ ನಮ್ಮ ಹೆಂಗಸರು ಯಾವ ರೀತಿ ದುಡಿಯುತ್ತಾರೆಂಬುದನ್ನು ನೋಡಿದ್ದೇನೆ. ಮನುಷ್ಯರು ಈ ರೀತಿ ಕೆಲಸಮಾಡುವುದು ನೋಡಿ ನನಗಾದ ನೋವನ್ನು ನಾನೆಂದೂ ಮರೆಯಲಾರೆ. ಗಣಿಗಳ ಒಳಗೆ ಹೆಂಗಸರ ಕೆಲಸ ನಿಷೇಧಿಸಿದ್ದು ಅನಂತರವಲ್ಲ. ಯುದ್ದಕ್ಕಾಗಿ ಹೆಚ್ಚು ಶ್ರಮಜೀವಿಗಳು ಬೇಕಾದ್ದರಿಂದ ಪುನಃ ಅವರನ್ನು ಕೆಲಸಕ್ಕೆ ನೇಮಿಸಿರುವಂತೆ ಕೇಳಿದ್ದೇನೆ. ಆದರೂ ಕೋಟ್ಯಾಂತರ ಜನ ಗಂಡಸರು ನಿರುದ್ಯೋಗಿಗಳಾಗಿ ಹಸಿವಿನಿಂದ ನರಳುತ್ತಿದ್ದಾರೆ. ಗಂಡಸರಿಗೆ ಕೊರತೆ ಇಲ್ಲ. ಕೂಲಿ ಬಹಳ ಕಡಿಮೆಯಾಗಿ ಕೆಲಸ ಬಹುಕಷ್ಟತಮವಾದ್ದರಿಂದ ಜನರು ಹೋಗುವುದಿಲ್ಲ.

ಬ್ರಿಟಿಷ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ಕಳುಹಿಸಿದ ನಿಯೋಗಗೋಷ್ಠಿ ಯೊಂದು ೧೯೨೮ರಲ್ಲಿ ಭಾರತಕ್ಕೆ ಬಂದಿತು. "ಅಸ್ಸಾಮ್ ಚಹಾದಲ್ಲಿ ಹತ್ತು ಲಕ್ಷ ಜನರ ಬೆವರು, ಹಸಿವು ಮತ್ತು ನಿರಾಶೆಗಳ ಕಣ್ಣೀರನ್ನು ವರ್ಷವೂ ವರ್ಷವೂ ಕುಡಿಯುತ್ತಿದೇವೆ” ಎಂದು ಅವರ ವರದಿಯಲ್ಲಿ ಹೇಳಿದ್ದಾರೆ. ೧೯೨೭-
——————
* ಬಿ. ಶಿವರಾಯರ 'ಭಾರತದ ಕೈಗಾರಿಕಾ ಶ್ರಮಜೀವಿಗಳು' ಎಂಬ ಗ್ರಂಥದಿಂದ.