ಈ ಪುಟವನ್ನು ಪ್ರಕಟಿಸಲಾಗಿದೆ
ಕೊನೆಯ ಅಂಕ ೨
೩೨೩

ಸಿತ್ತು. ವಾಂತಿಭೇದಿ ಅಥವ ಗಡ್ಡೆ ಪ್ಲೇಗಿನ ವ್ಯಾಧಿಯಂತ ಬೇಗ ಕೊಲ್ಲುವ ಯಾವುದಾದರೂ ಪ್ರತ್ಯಕ್ಷ ವ್ಯಾಧಿ ಉತ್ತಮವೆಂದು ನಮಗೆ ಒಂದೊಂದು ಬಾರಿ ತೋರಿತು. ಆದರೆ ಅದು ತಾತ್ಕಾಲಿಕ ಭಾವನೆ. ಹೆಚ್ಚು ಧೈರ್ಯದಿಂದ ಯಾವ ಸಾಧನೆಯೂ ಸಾಧ್ಯವಿಲ್ಲ. ಹಳೆಯ ರೋಗ ಹರಿಸಲು ಅಲ್ಪ ಮಾನವರಿಂದ ಸಾಧ್ಯವಿಲ್ಲ. ಭಾರತದ ರಾಜಕೀಯದಲ್ಲಿ ಗಾಂಧೀಜಿ ಪ್ರವೇಶವಾದುದು ಇದೆ ಸಮಯದಲ್ಲಿ, ನಿಕ್ಷೇತನ ದೇಹಕ್ಕೆ ಜೀವದುಸಿರು ಕೊಟ್ಟು, ಅಂಗಾಂಗಗಳಿಗೆ ಚಲನಶಕ್ತಿ ಕೊಡುವ ಶುಭ್ರಗಾಳಿಯಂತೆ ಕತ್ತಲೆ ಗಡಿ ಯೊಳಗೆ ತೂರಿ ಬಂದು ನಮ್ಮ ಕಣ್ಣ ಪೊರೆ ತೆಗೆದ ಬೆಳಕಿನ ಕಿರಣದಂತೆ, ಅನೇಕ ವಸ್ತುಗಳನ್ನು ರುಳಿಸಿ ಜನನುನವನ್ನೂ ಅಲ್ಲೋಲ ಕಲ್ಲೋಲ ಮಾಡಿದ ಬಿರುಗಾಳಿಯಂತೆ ಗಾಂಧಿಜಿ ಬಂದರು. ಮೇಲಿನಿಂದ ಕೆಳಗಿಳಿದು ಬಂದವರಲ್ಲಿ ಭಾರತದ ಜನಕೋಟಿಯ ಮಡಿಲಿನಿಂದ ಬಂದು ಅವರ ಭಾಷೆಯಲ್ಲೇ ಮಾತನಾಡಿ ಸದಾ ಅವರು ಮತ್ತು ಅವರ ದಾರುಣಸ್ಥಿತಿಯ ಕಡೆಗೆ ಬೆರಳು ತೋರಿಸಿ ದೃಷ್ಟಿ ಇಟ್ಟರು. ರೈತರ ಕೂಲಿ ಗಾರರ ರಕ್ತ ಹೀರಿ ಬಾಳುವ ನೀವು ಅವರ ಸವಾರಿ ಮಾಡಬೇಡಿ, ಈ ದಾರಿದ್ರ ಮತ್ತು ಸಂಕಟಕ್ಕೆ ಕಾರಣವಾದ, ಜೀವನ ರೀತಿ ಬಿಡಿ ಎಂದು ಸಾರಿದರು. ರಾಜಕೀಯ ಸ್ವಾತಂತ್ರಕ್ಕೆ ಆಗೊಂದು ಹೊಸ ರೂಪ ಬಂದಿತು. ಬೇರೆ ಅರ್ಥ ಬಂದಿತು. ಅವರು ಹೇಳಿದ ಎಲ್ಲ ವಿಷಯಗಳನ್ನೂ ನಾವು ಒಪ್ಪಲಿಲ್ಲ ಒಪ್ಪಿದುದು ಸ್ವಲ್ಪ ಭಾಗ ಮಾತ್ರ. ಆದರೆ ಇದೆಲ್ಲ ಮುಖ್ಯವಲ್ಲ. ಅವರ ಉಪದೇಶದ ಸಾರಸತ್ವ ಎಂದರೆ ನಿರ್ಭಯತೆ ಮತ್ತು ಸತ್ಯ ; ಮತ್ತು ನಿರ್ಭಯತೆ ಮತ್ತು ಸತ್ಯ ಮಾರ್ಗದಲ್ಲಿ ಕಲ್ಯಾಣವನ್ನೆ ಮುಖ್ಯ ಗುರಿ ಯಾಗಿಟ್ಟುಕೊಂಡ ಕಾರನೀತಿ. ನಮ್ಮ ಪ್ರಾಚೀನ ಸಾಹಿತ್ಯದಂತೆ ವ್ಯಕ್ತಿ ಅಥವ ರಾಷ್ಟ್ರದ ಮುಖ್ಯ ವೈಶಿಷ್ಟ್ಯವೆಂದರೆ ಅಭಯ ಅಥವ ನಿರ್ಭಯತೆ; ಕೇವಲ ಶಾರೀರಕ ಧೈರ್ಯ ಮಾತ್ರವಲ್ಲ, ಕನಸಿನಲ್ಲಿ ಸಹ ಅಧ್ಯೆರ್ಯಪಡದಿರುವುದು. ಜನನಾಯಕರ ಪ್ರಥಮ ಕರ್ತವ್ಯ ಜನರನ್ನು ನಿರ್ಭಯರನ್ನಾಗಿ ಮಾಡುವುದು ಎಂದು ಜನಕ ಮತ್ತು ಯಾಜ್ಞವಲ್ಕರು ನಮ್ಮ ಇತಿಹಾಸದ ಮುಂಬೆಳಗಿನಲ್ಲಿ ಸಂದೇಶ ಸಾರಿದ್ದರು. ಆದರೆ ಬ್ರಿಟಿಷ್ ಆಡಳಿತದ ಪರಿಣಾಮವಾಗಿ ಸೈನ್ಯದ ಭಯ, ಪೋಲಿಸರ ಭಯ, ದೇಶಾದ್ಯಂತ ಹರಡಿದ ಗುಪ್ತ ಚಾರರ ಭಯ, ಅಧಿಕಾರಿವರ್ಗದ ಭಯ, ಜನರನ್ನು ತುಳಿಯುವ ಶಾಸನದ ಭಯ, ಸೆರೆಮನೆಯ ಭಯ, ಜಮೀನುದಾರಿ ಆಡಳಿತಗಾರನ ಭಯ, ಸಾಹುಕಾರನ ಭಯ, ಸದಾ ಬಾಗಿಲಲ್ಲೆ ಕಾದಿದ್ದ ನಿರುದ್ಯೋಗ ಮತ್ತು ಉಪವಾಸದ ಭಯ ಈ ರೀತಿ ಜನಜೀವನವನ್ನೇ ಅದುಮಿ ಕತ್ತು ಹಿಸುಕುವ ಭಯವು ದೇಶವನ್ನೇ ಆವರಿಸಿತ್ತು. ಗಾಂಧೀಜಿಯ ಪ್ರಶಾಂತ, ಅಚ್ಚಲಿತವಾಣಿಯ ಮೊದಲ ಕೊಡಲಿ ಪೆಟ್ಟು ದೇಶವನ್ನೇ ಮುಸುಕಿದ್ದ ಈ ಭೀತಿಯ ಭೂತಕ್ಕೆ, ನಿರ್ಭಯರಾಗಿ ಎಂಬುದೇ ಆ ದಿವ್ಯ ಸಂದೇಶ, ಅದು ಅಷ್ಟು ಸುಲಭವೆ ? ಎಂದಿಗೂ ಅಲ್ಲ. ಆದರೆ ಭೀತಿಯೇ ವಾಸ್ತವತೆಗಿಂತಲೂ ಹೆಚ್ಚು ಭೀಕರ ಭೂತಗಳನ್ನು ಎಬ್ಬಿಸುತ್ತದೆ, ಮತ್ತು ವಾಸ್ತವತೆಯನ್ನು ಶಾಂತಚಿತ್ತರಾಗಿ ಅರ್ಥಮಾಡಿಕೊಂಡು ಒಪ್ಪಿ ಅದರ ಪರಿಣಾಮಗಳಿಗೆ ಸಿದ್ದರಾದರೆ ಭಯವು ಬಹುಮಟ್ಟಿಗೆ ಕಡಮೆಯಾಗುತ್ತದೆ.

ಈ ರೀತಿ ಭಾರತದ ಜನತೆಯನ್ನು ಮುಸುಕಿದ್ದ ಈ ಭೀತಿಯ ಕಾರ್ಗತ್ತಲ ತೆರೆಯು ಏಕಾಏಕಿ ಸಂಪೂರ್ಣವಲ್ಲದಿದ್ದರೂ ಬಹುಮಟ್ಟಿಗೆ ಅತ್ಯಾಶ್ಚರ್ಯ ರೀತಿಯಲ್ಲಿ ಮಾಯವಾಯಿತು. ಭೀತಿಗೂ ಸುಳ್ಳಿಗೂ ನೆಂಟತನ ಸಮೀಪವಿರುವಂತೆ, ಅಭಯದ ಹಿಂದೆಯೇ ಸತ್ಯವಿದೆ. ಭಾರತೀಯರು ಮೊದಲಿಗಿಂತ ಹೆಚ್ಚು ಸತ್ಯ ನಿಷ್ಠರಾಗಲಿಲ್ಲ, ಏಕಾಏಕಿ ತಮ್ಮ ಸ್ವಭಾವ ಬದಲಾಯಿಸಲೂ ಇಲ್ಲ. ಆದರೆ ಅಸತ್ಯ ಮತ್ತು ಭಯಕ್ಕೆ ಅವಶ್ಯಕತೆ ಇಲ್ಲವೆಂದು ಮನಗಂಡೊಡನೆ ಒಂದು ಪ್ರಳಯಾಂತಕ ಪರಿವರ್ತನೆ ಆಯಿತು. ಆದರೆ ಮನಶ್ಯಾಸ್ತಜ್ಞ ವೈದ್ಯನು ರೋಗಿಯ ರೋಗಮೂಲಕ್ಕೇ ಹೋಗಿ ಅವನ ಮನೋವಿಕಲ್ಪದ ಮೂಲಕಾರಣ ಗಳನ್ನು ಕಂಡು ಹಿಡಿದು ರೋಗಿಗೆ ಮನದಟ್ಟು ಮಾಡಿ, ಸೆರೆಯಿಂದ ರೋಗಿಯನ್ನು ಬಿಡುಗಡೆ ಮಾಡಿದಂತೆ ಒಂದು ಮಾನಸಿಕ ಪರಿವರ್ತನೆಯೇ ಆಯಿತು.

ಈ ಪರಿವರ್ತನೆಯ ಫಲವಾಗಿ ಒಂದು ಮಾನಸಿಕ ಪರಿಣಾಮವೂ ಆಯಿತು. ನಮ್ಮನ್ನು ಅಧೋ ಗತಿಗೆ ತಳ್ಳಿ ಅಪಮಾನಕ್ಕೀಡುಮಾಡಿದ ಬಹುಕಾಲದ ದಾಸ್ಯ ಜೀವನಕ್ಕೆ ತಲೆಬಾಗಿದ್ದುದಕ್ಕೆ ಅಸಹ್ಯ ವಾಯಿತು. ಏನೇ ಆಗಲಿ ಇನ್ನು ಒಂದು ನಿಮಿಷವೂ ತಲೆಬಾಗಬಾರದೆಂಬ ಕೆಚ್ಚು ಮೂಡಿತು.