ಮೊದಲಿಗಿಂತ ನಮ್ಮ ಸತ್ಯನಿಷ್ಠ ಹೆಚ್ಚಲಿಲ್ಲ. ಆದರೆ ಅಡ್ಡ ದಾರಿ ಹಿಡಿದಾಗ ನಮಗೆ ಎಚ್ಚರಕೊಟ್ಟು, ನಾಚುವಂತೆಮಾಡಿ, ಸತ್ಯದ ಕಡೆಗೆ ಎಳೆಯುವುದಕ್ಕೆ ತಾವು ಮಾತ್ರ ಸತ್ಯದಿಂದ ಕೂದಲೆಳೆಯಷ್ಟು ಕದಲದೆ ಸ್ವತಃ ಸತ್ಯಮೂರ್ತಿಯಾಗಿ ಗಾಂಧಿಜಿ ಸದಾ ನಮ್ಮ ಹಿಂದೆ ಇರುತ್ತಿದ್ದರು. ಸತ್ಯ ಎಂದರೇನು ? ನನಗಂತೂ ಸ್ಪಷ್ಟ ತಿಳಿಯದು, ಪ್ರಾಯಶಃ ನಮ್ಮ ಸತ್ಯದ ಕಲ್ಪನೆಗಳೆಲ್ಲ ಸಾಪೇಕ್ಷ ಮತ್ತು ನಿಜವಾದ ಸತ್ಯವು ನಮ್ಮ ಅರಿವಿಗೆ ದೂರವೋ ಏನೋ ; ಬೇರೆ ಬೇರೆ ಜನರು ಸತ್ಯಕ್ಕೆ ಬೇರೆ ಬೇರೆ ಅರ್ಥಮಾಡುತ್ತಾರೆ ; ಪ್ರತಿ ಯೊಬ್ಬ ವ್ಯಕ್ತಿಯ ಹಿನ್ನೆಲೆ, ಶಿಕ್ಷಣ ಮತ್ತು ಮನಸ್ಸಿನ ಆವೇಗ ಆತನ ಮೇಲೆ ಮಹತ್ಪರಿಣಾಮ ಮಾಡು ಇವೆ. ಗಾಂಧೀಜಿಗೂ ಅಷ್ಟೆ. ಯಾವ ವ್ಯಕ್ತಿಗೇ ಆಗಲಿ ತಾನು ಯಾವುದನ್ನು ಸತ್ಯವೆಂದು ತಿಳಿದು ಕೊಳ್ಳುತ್ತಾನೆಯೋ ಅದೇ ಅವನಿಗೆ ಸತ್ಯ. ಈ ದೃಷ್ಟಿಯಿಂದ ಗಾಂಧಿಜಿ ಸತ್ಯಕ್ಕೆ ಅಂಟಿಕೊಂಡಂತೆ ಇನ್ನೊಬ್ಬರನ್ನು ನಾನು ಕಾಣೆ. ರಾಜಕಾರಣಿಯಾದವನಿಗೆ ಇದು ಬಹಳ ಅಪಾಯಕರ, ಏಕೆಂದರೆ ಆತನು ತನ್ನ ಮನಸ್ಸಿನಲ್ಲಿರುವದನ್ನೆಲ್ಲ ಬಿಚ್ಚಿ ಹೇಳಬೇಕಾಗುತ್ತದೆ; ಮನಸ್ಸಿನ ಪ್ರತಿಯೊಂದು ಪರಿವರ್ತನೆಯೂ ಜನರಿಗೆ ಗೊತ್ತಾಗುತ್ತದೆ.
ಗಾಂಧೀಜಿ ಭಾರತದ ಲಕ್ಷಾಂತರ ಜನರ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮ ಮಾಡಿದರು. ಕೆಲವರು ತಮ್ಮ ಜೀವನ ರೀತಿಯನ್ನೇ ಪೂರ್ಣ ಮಾರ್ಪಡಿಸಿಕೊಂಡರು, ಇನ್ನು ಕೆಲವರ ಮೇಲೆ ಅಷ್ಟು ಪರಿಣಾಮ ಆಗಲಿಲ್ಲ. ಅಥವ ಕೆಲವು ದಿನಗಳನಂತರ ಆದ ಪರಿಣಾಮ ಮಾಸಿರಬಹುದು, ಆದರೂ ಪೂರ್ಣ ಮಾಸಲು ಸಾಧ್ಯವೇ ಇಲ್ಲ. ಬೇರೆಬೇರೆ ಜನರ ಮೇಲೆ ಬೇರೆ ಬೇರೆ ಪ್ರತಿಕ್ರಿಯೆ ಆಯಿತು. ಪ್ರತಿಯೊಬ್ಬರೂ ಈ ಪ್ರಶ್ನೆಗೆ ತನ್ನ ದೇ ಬೇರೆ ಉತ್ತರ ಕೊಡುತ್ತಾನೆ. ಕೆಲವರಂತೂ ಪ್ಲೇಟೋ ಸಂಭಾಷಣೆಗಳಲ್ಲಿ ಕಂಡುಬರುವ ಆಿಬಿಯಾಡೀಸನ (ಬೇರೆ ಮಾತನಾಡುವವನು ಎಷ್ಟೇ ವಾಗಿ ಇದ್ದರೂ ಆತನ ಮಾತಿಗೆ ಸ್ವಲ್ಪವೂ ಬೆಲ್ವೆ ಕೊಡುವುದಿಲ್ಲ. ಆದರೆ ನಿನ್ನ ಮಾತು ಕೇಳಿದರೆ ಅಥವ ನೀನು ಹೇಳಿದ ಮಾತು ಎಂದು ಯಾರಾದರೂ ಪುನರುಕ್ತಿಮಾಡಿದರೆ ಅದು ಎಷ್ಟೇ ವ್ಯತ್ಯಾಸವಾಗಿರಲಿ, ಮತ್ತು ತಿಳಿಸುವವರು ಹೆಂಗಸೋ, ಗಂಡಸೋ, ಮಗುವೋ ಯಾರೇ ಇರಲಿ ಆ ಮಾತಿನಿಂದ ನಾವು ಚಕಿತರಾಗಿ ಮುಗ್ಧರಾಗುತ್ತೇವೆ. ನನ್ನ ಮಾತನ್ನೇ ಹೇಳುವುದಾದರೆ-ನನ್ನ ಅವಸ್ಥೆ ಮುಗಿದರೂ ಭಯವಿಲ್ಲ-ಆತನ ಮಾತಿನಿಂದ ನನ್ನ ಮೇಲೆ ಒಂದು ವಿಚಿತ್ರ ಪರಿಣಾಮವಾಗುತ್ತಿತ್ತು ಮತ್ತು ಈಗಲೂ ಆಗುತ್ತಿದೆ ಎಂದು ಪ್ರಮಾಣಮಾಡುತ್ತೇನೆ. ಆತನ ಮಾತನ್ನು ಕೇಳಿದೊಡನೆ ಯಾವ ಆರಾಧಕನಿಗೂ ಆಗದ ಒಂದು ಪವಿತ್ರ ಕೋಪಾವೇಶ ನನ್ನನ್ನು ಕೆರಳಿಸು ಇದೆ; ನನ್ನ ಗಂಟಲು ಕಟ್ಟಿದಂತಾಗುತ್ತದೆ; ಕಣ್ಣೀರಿನಿಂದ ನನ್ನ ದೃಷ್ಟಿ ಮಬ್ಬಾಗುತ್ತದೆ.-ಓ, ನಾನೊ ಬನೇ ಅಲ್ಲ, ನನ್ನಂತೆ ಸಹಸ್ರಾರು ಜನರಿದ್ದಾರೆ.
“ನಿಜ, ಪೆರಿಕ್ಲಿಸ್ ಮುಂತಾದ ಅನೇಕ ಪ್ರಸಿದ್ದ ವಾಗ್ರಿಗಳನ್ನು ಕೇಳಿದ್ದೇನೆ. ಶ್ರೇಷ್ಠ ಭಾಷಣಕಾರ ರಾದರೂ ಯಾರೂ ನನ್ನ ಮೇಲೆ ಈ ಪರಿಣಾಮ ಮಾಡಲಿಲ್ಲ. ನನ್ನ ಅಂತರಂಗವನ್ನೇ ಕಲಕಿ ದೀನರಲ್ಲಿ ನಾನು ಅತಿ ದೀನ ಎಂಬ ಭಾವನೆಯನ್ನು ಯಾರೂ ನನ್ನಲ್ಲಿ ಮಾಡಲಿಲ್ಲ. ಆದರೆ ಈಚೆಗೆ ಈ ಮರಿಯಾಸ ನಿಂದ ನನ್ನಲ್ಲಿ ಆ ಭಾವನೆಯುಂಟಾಗಿದೆ. ನನ್ನ ಇದುವರೆಗಿನ ಜೀವನ ಇನ್ನು ಮುಂದೆ ನಡೆಸುವಂತಿಲ್ಲ...
"ಬೇರೆ ಯಾರೊಂದಿಗೂ ನಾನು ಅನುಭವಿಸದ ಮತ್ತು ನನ್ನಲ್ಲಿ ನೀವು ಎಂದೂ ಕಾಣದ ಇನ್ನೊಂದು ವಿಷಯವೆಂದರೆ ನಾಚಿಕೆಯ ಭಾವನೆ. ಪ್ರಪಂಚದಲ್ಲಿ ನನ್ನನ್ನು ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಬಲ್ಲ ವ್ಯಕ್ತಿ ಎಂದರೆ ಸಾಕ್ರೆಟೀಸ್ ಒಬ್ಬನೇ, ಏಕೆಂದರೆ ಆತನ ಮಾತಿನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ; ಅದರಂತೆ ಮಾಡಲೇಬೇಕೆಂದು ನನಗೆ ಗೊತ್ತು. ಆದರೆ ಆತನು ಸ್ವಲ್ಪ ಕಣ್ಮರೆ ಯಾದೊಡನೆ ಜನ ಮೆಚ್ಚುವಂತೆ ಏನು ಮಾಡುವುದಕ್ಕೂ ನಾನು ಹಿಂಜರಿಯುವುದಿಲ್ಲ. ಆದ್ದರಿಂದ ಕಳ್ಳ ತಪ್ಪಿಸಿಕೊಂಡ ಗುಲಾಮನಂತೆ ದೂರ ಓಡಿಹೋಗುತ್ತೇನೆ ಮತ್ತು ಆದಷ್ಟು ಕಾಲ ಆತನಿಂದ ಮುಖ ತಪ್ಪಿಸಿಕೊಂಡಿರುತ್ತೇನೆ. ಪುನಃ ಆತನನನ್ನು ಕಂಡಾಗ ಮುಂಚೆ ಒಪ್ಪಿದ ತಪ್ಪುಗಳೆಲ್ಲ ಜ್ಞಾಪಕ ಬರುತ್ತವೆ; ಸ್ವಾಭಾವಿಕವಾಗಿ ತಲೆ ತಗ್ಗಿಸುವಂತಾಗುತ್ತದೆ ....
"ಹಾವಿಗಿಂತ ಹೆಚ್ಚು ವಿಷದ ಜಂತು ಯಾವುದೋ ನನ್ನನ್ನು ಕಡಿದಿದೆ; ಆ ವಿಷದ ಕುಟುಕಿನ ನನ್ನ