ವಿಜ್ಞಾನದ ಮುನ್ನಡೆಯಿಂದ ಉದ್ಭವಿಸಿದ ಈ ವಿಚಾರ ವಿಪ್ಲವದಿಂದ ವಿಜ್ಞಾನಿಗಳು ಅಧ್ಯಾತ್ಮ ಪ್ರಪಂಚಕ್ಕೆ ಅತಿ ಸಮೀಪದ ಇನ್ನೊಂದು ನೂತನ ಪ್ರಪಂಚದೊಳಕ್ಕೆ ಪ್ರವೇಶಿಸಿದ್ದಾರೆ. ಅವರು ಭಿನ್ನವಾದ, ಅನೇಕವೇಳೆ ಪರಸ್ಪರ ವಿರುದ್ದವಾದ ತೀರ್ಮಾನಕ್ಕೆ ಬರುತ್ತಾರೆ. ಇನ್ನು ಕೆಲವರು ಇದರಲ್ಲಿ ಆಕಸ್ಮಿಕಕ್ಕೆ ವಿರೋಧವಾದ ಒಂದು ಏಕತೆಯನ್ನು ಕಾಣುತ್ತಾರೆ. ಇನ್ನೂ ಕೆಲವರು, ಉದಾ :ಬರ್ಟಂಡ್ ರಸ್ಸೆಲ್, 'ಸಾಂಪ್ರದಾಯಿಕ ತಾತ್ವಿಕರು ಪಾರ್ಮನಿಡೀಸ್ ಕಾಲದಿಂದಲೂ ಪ್ರಪಂಚ ಅಖಂಡ ಎಂದು ನಂಬಿದ್ದಾರೆ. ನನ್ನ ಅತ್ಯಂತ ಪ್ರಧಾನ ನಂಬಿಕೆಯಲ್ಲಿ ಅದು ಶುದ್ಧ ಅವಿವೇಕ' ಎಂದು ಹೇಳು ತ್ತಾರೆ. ಅಥವ 'ಮನುಷ್ಯ ತಾನು ಸಾಧಿಸುವ ಪರಿಣಾಮವೇನು ಎಂದ ಪೂರ್ವ ದೃಷ್ಟಿ ಯಿಲ್ಲದ ಕಾರಣಗಳ ಫಲ; ಅವನ ಹುಟ್ಟು, ಬೆಳವಣಿಗೆ, ಆಶೆ, ಭಯ, ಪ್ರೇಮ, ನಂಬುಗೆ ಎಲ್ಲವೂ ಅಣುಗಳ ಆಕಸ್ಮಿಕ ಸಂಕೀ ರ್ಣದ ಫಲ' ಎನ್ನುತ್ತಾರೆ. ಆದಾಗ್ಯೂ ಭೌತಶಾಸ್ತ್ರದ ಇತ್ತೀಚಿನ ಸಂಶೋಧನೆಗಳಿಂದ ಪ್ರಕೃತಿಯಲ್ಲಿ ಮೂಲತಃ ಒಂದು ಏಕತ್ವವಿದೆ ಎಂಬಭಾವನೆಗೆ ಸಮರ್ಥನೆ ದೊರೆಯುತ್ತಿದೆ. “ಎಲ್ಲ ವಸ್ತುಗಳು ಒಂದೇ ಮೂಲವಸ್ತುವಿನಿಂದ ಆಗಿರತಕ್ಕವು ಎಂಬ ನಂಬಿಕೆ ಆಲೋಚನೆಯಷ್ಟೆ ಪುರಾತನವಾದುದು. ಆದರೆ ಪ್ರಕೃತಿಯ ಏಕತ್ವವನ್ನು ಬುಡವಿಲ್ಲದ ಸಿದ್ಧಾಂತ ಅಥವ ಸಾಧ್ಯವಿಲ್ಲದ ಅಭಿಲಾಷೆ ಎಂದಲ್ಲದೆ ನಮಗೆ ತಿಳಿದಿರ ತಕ್ಕ ಮಟ್ಟಿಗೆ ತೀಕ್ಷಣವೂ, ಸ್ಪಷ್ಟವೂ ಆದ ಸಾಕ್ಷದ ಆಧಾರವುಳ್ಳ ವಿಜ್ಞಾನದ ತತ್ವ ಎಂದು ನೋಡಲು ಶಕ್ತವಾದ ತಲೆಮಾರೆಂದರೆ ಇತಿಹಾಸದಲ್ಲೆಲ್ಲ ಮೊಟ್ಟ ಮೊದಲನೆಯದು ನಮ್ಮದು.” ಎಂದು ಕಾರ್ಲ್ ಕೆ ಡ್ಯಾರೊ * ಹೇಳಿದ್ದಾನೆ.
ಏಷ್ಯ ಮತ್ತು ಯೂರೋಪ್ಗಳ ಈ ನಂಬಿಕೆ ಬಹು ಪುರಾತನವಾದುದಾದರೂ ವಿಜ್ಞಾನದ ಇತ್ತೀಚಿನ ಸಿದ್ದಾಂತಗಳ ಮತ್ತು ಅದೈತ ವೇದಾಂತದ ತಳಹದಿಯಾದ ಮೂಲ ತತ್ವಗಳ ಹೋಲಿಕೆ ಆಶ್ಚರ್ಯವನ್ನು೦ಟುಮಾಡುತ್ತದೆ. ವಿಶ್ವವೆಲ್ಲ ಒಂದು ಮೂಲವಸ್ತುವಿನಿಂದ ಆದುದು, ಆ ಮೂಲವಸ್ತುವಿನ ರೂಪ ಸದಾ ಬದಲಾವಣೆಯಾಗುತ್ತಿರುತ್ತ ಇರುತ್ತದೆ, ಆದರೆ ಅದರ ಶಕ್ತಿಯ ಮೊತ್ತ ಎಂದೂ ವ್ಯತ್ಯಾಸಗೊಳ್ಳುವುದಿಲ್ಲ, ಇವೇ ಆ ತತ್ವಗಳು: ಅಲ್ಲದೆ ವಸ್ತು ವಿವರಣೆಯನ್ನು ಅವುಗಳ ಸ್ವಭಾವದಲ್ಲಿಯೇ ಕಾಣಬೇಕು. ಮತ್ತು ವಿಶ್ವದಲ್ಲಾಗುವ ವ್ಯಾಪಾರಗಳ ವಿವರಣೆಗೆ ಬಾಹ್ಯ ಜೀವನಗಳು ಅಥವ ಅಸ್ತಿತ್ವಗಳು ಅನವಶ್ಯಕ, ಆದ್ದರಿಂದ ವಿಶ್ವವು ಸ್ವಯಂ ವಿಕಸಿತ.
ಈ ಅವ್ಯಕ್ತ ಮಿಮಾ೦ಸೆ ನಮ್ಮನ್ನೆಲ್ಲಿಗೆ ಒಯ್ಯುತ್ತದೆ ಎಂಬುದು ವಿಜ್ಞಾನ ದೃಷ್ಟಿಗೆ ಬಹು ಮುಖ್ಯವಲ್ಲ. ಏಕೆಂದರೆ ಅದು ತನ್ನದೇ ಆದ ನಿಕರವಾದ ಪ್ರತ್ಯಕ್ಷ ಪ್ರಮಾಣದ ಪ್ರಯೋಗಮಾರ್ಗ ದಿಂದ ಗೊತ್ತಾದ ಜ್ಞಾನದ ಮೇರೆಯನ್ನು ವಿಶಾಲಗೊಳಿಸುತ್ತ, ಆ ಕಾರ್ಯದಲ್ಲಿ ಮಾನವ ಜೀವನ ವನ್ನು ಮಾರ್ಪಡಿಸುತ್ತ ನೂರು ಮಾರ್ಗಗಳಲ್ಲಿ ಮುಂದುವರಿಯುತ್ತದೆ. ಅತಿ ಮುಖ್ಯ ರಹಸ್ಯಗಳ ಭೇದನ ವಿಜ್ಞಾನಕ್ಕೆ ಅನತಿ ದೂರದಲ್ಲಿರಬಹುದು, ಆದರೂ ಅವು ಹಸ್ತಗತವಾಗದಿರಬಹುದು. ಆದರೂ ವಿಜ್ಞಾನ ತನ್ನ ನಿಯೋಜಿತ ಮಾರ್ಗದಲ್ಲಿ ನಡೆದೇ ನಡೆಯುತ್ತದೆ; ಏಕೆಂದರೆ ಅದರ ಪಯಣ ಅ೦ತ್ಯವರಿಯದ್ದು, ಸಧ್ಯದಲ್ಲಿ ತತ್ವಶಾಸ್ತ್ರದ 'ಏಕೆ' ಎಂಬುದನ್ನು ಮರೆತು 'ಹೇಗೆ' ಎಂದು ಪ್ರಶ್ನಿಸುತ್ತ ಮುಂದುವರಿಯುತ್ತದೆ. ಅದನ್ನು ಕಂಡು ಹಿಡಿದಂತೆ ಜೀವನಕ್ಕೆ ಹೆಚ್ಚು ಪೂರ್ಣತೆಯನ್ನೂ ಅರ್ಥವನ್ನೂ ಕೊಡುತ್ತದೆ. ಪ್ರಾಯಶಃ 'ಏಕೆ' ಎಂಬುದಕ್ಕೆ ಉತ್ತರ ಹೇಳುವಷ್ಟು ಸ್ವಲ್ಪ ಹತ್ತಿರವಾದರೂ ಕರೆದೊಯ್ಯುತ್ತದೆ.
ಪ್ರಾಯಶಃ ಅಡ್ಡ ಗೋಡೆಯನ್ನು ನಾವು ದಾಟಲಾರೆವು. ರಹಸ್ಯ ರಹಸ್ಯವಾಗಿಯೇ ಉಳಿಯುತ್ತದೆ. ಎಷ್ಟು ವ್ಯತ್ಯಾಸಹೊಂದಿದರೂ, ಜೀವನ ಒಂದಕ್ಕೊಂದಕ್ಕೆ ಸರಿಬೀಳದ, ಪರಸ್ಪರ ವಿರೋಧ ಪ್ರಕೃತಿಯ ವಿಚಿತ್ರ ಸಂಘಟನೆಯಾಗಿ, ನಿರಂತರ ಹೋರಾಟಗಳ ರಂಗವಾಗಿ, ಗುಣಾವಗುಣಗಳ ಕಂತೆಯಾಗಿಯೇ ಉಳಿಯುತ್ತದೆ.
ಅಥವಾ ಧಾರ್ಮಿಕ ಕಟ್ಟು ಮತ್ತು ನೈತಿಕ ಭಾವನೆಗಳಿಂದ ದೂರವಾದ ವಿಜ್ಞಾನದ ಮುನ್ನ
Karl K. Darrow : The Renaissance of physics (New York, 1936), P. 301.