ಈ ಪುಟವನ್ನು ಪ್ರಕಟಿಸಲಾಗಿದೆ
೧೮
ಭಾರತ ದರ್ಶನ

ಮುನ್ನಡೆಯೇ, ಇತರರ ಮೇಲೆ ಸ್ವಾಮ್ಯ ಪಡೆಯಬೇಕೆಂಬ ದುರಾಶೆಗೊಳಗಾದ ದುಷ್ಟ, ಸ್ವಾರ್ಥಪರ ಮನು ಪ್ಯರ ಕೈಯಲ್ಲಿ ತಾನೇ ಸಿದ್ಧಗೊಳಿಸಿದ ಭೀಕರ ವಿನಾಶಕಾರಕ ಪರಿಕರಣಗಳ ಮತ್ತು ಅಪಾರ ಶಕ್ತಿಯ ಕೇಂದ್ರೀಕರಣಕ್ಕೆ ಸಾಧಕವಾಗಿ, ತನ್ನ ನಾಶಕ್ಕೆ ತಾನೇ ಕಾರಣವಾಗುತ್ತದೆ. ಅದೇ ರೀತಿ ನಡೆಯು ತಿರುವುದನ್ನು ಕಣ್ಣಾರ ನೋಡುತ್ತಿದ್ದೇವೆ. ಈ ಯುದ್ದದ ಹಿನ್ನೆಲೆಯಲ್ಲಿ ಮಾನವನ ಆತ್ಮದ ಆಂತರಿಕ ಹೋರಾಟವಿದೆ,

ಮಾನವನ ಈ ಆತ್ಮ ಎಷ್ಟು ಆಶ್ಚರ್ಯಕರ, ಅಸಂಖ್ಯಾತ ದೌರ್ಬಲ್ಯಗಳಿದ್ದರೂ ಮನುಷ್ಯ ಯುಗಾಂತರದಿಂದ ಒಂದು ಆದರ್ಶಕ್ಕಾಗಿ, ಸತ್ಯಕ್ಕಾಗಿ, ಧರ್ಮಕ್ಕಾಗಿ, ತನ್ನ ದೇಶ ಮತ್ತು ಮಾನಕ್ಕಾಗಿ, ತನ್ನ ಸರ್ವಸ್ವವನ್ನು ತನ್ನ ಜೀವನವನ್ನೆ ಬಲಿದಾನಮಾಡಿದಾನೆ. ಆ ಆದರ್ಶ ಬೇರೆಯಾಗ ಬಹುದು, ಆದರೆ ಆ ಆತ್ಮಯಜ್ಞದ ಶಕ್ತಿ ಮಾತ್ರ ಬೆಳೆಯುತ್ತಿದೆ. ಅದೇ ಕಾರಣದಿಂದ ಮಾನವನ ಲೋಪಗಳು ಕ್ಷಮಾರ್ಹ ಮತ್ತು ಅವನಿಗಾಗಿ ನಿರಾಸೆಗೊಳ್ಳುವುದೂ ಸಾಧ್ಯವಿಲ್ಲ. ಅನಾಹುತದ ಮಧ್ಯೆ ಇದ್ದರೂ ತನ್ನ ಘನತೆಯನ್ನು ಕಳೆದುಕೊಂಡಿಲ್ಲ, ತಾನು ಬೆಲೆಕೊಟ್ಟ ವಸ್ತುಗಳಲ್ಲಿ ನಂಬಿಕೆ ಯನ್ನೂ ಕಳೆದುಕೊಂಡಿಲ್ಲ. ಪ್ರಕೃತಿಯ ಅದ್ಭುತ ಶಕ್ತಿಗಳ ಆಟದ ಬೊಂಬೆಯಾಗಿದ್ದರೂ, ಅನಂತ ವಿಶ್ವದಲ್ಲಿ ಒಂದು ಧೂಳಿನ ಕಣವಾಗಿದ್ದರೂ, ಭೌತಿಕ ಶಕ್ತಿಗಳನ್ನು ಧೈರ್ಯದಿಂದ ಅಣಕಿಸಿದ್ದಾನೆ. ಕ್ರಾಂತಿಯ ಮೆಟ್ಟಲಾದ ತನ್ನ ಮನಶ್ಯಕ್ತಿಯಿಂದ ಅವುಗಳನ್ನು ಜೈಸಲು ಪ್ರಯತ್ನಪಟ್ಟಿದ್ದಾನೆ. ದೇವರುಗಳು ಯಾರೇ ಇರಲಿ, ಮನುಷ್ಯನಲ್ಲಿ ಪೈಶಾಚಿಕ ಅ೦ಶವೊಂದಿರುವಂತೆ ಅವನಲ್ಲಿ ದೈವಾಂಶವೂ ಇದೆ.

ಭವಿಷ್ಯ ಕತ್ತಲುಗವಿದಿದೆ, ಅನಿಶ್ಚಿತವಿದೆ. ಆದರೆ ಅದಕ್ಕೆ ಕರೆದೊಯ್ಯುವ ದಾರಿಯನ್ನು ಸ್ವಲ್ಪ ದೂರ ಕಾಣಬಹುದು. ಎಷ್ಟೋ ಗಂಡಾಂತರಗಳಿಂದ ಪಾರಾದ ಮನುಷ್ಯ ಆತ್ಮವನ್ನು ನಾಶಮಾಡುವ ಯಾವ ವಸ್ತುವೂ ಇಲ್ಲವೆಂದು ಮನಸ್ಸಿನಲ್ಲಿಟ್ಟು ಕೊಂಡು ಭದ್ರವಾಗಿ ಕಾಲೂರಿ ನಡೆಯಲೂಬಹುದು. ಜೀವನದಲ್ಲಿ ಎಷ್ಟೇ ಸಂಕಟವಿದ್ದರೂ ಸಂತೋಷವಿದೆ ಸೌಂದರ್ಯವಿದೆ ಎಂದು ಜ್ಞಾಪಕದಲ್ಲಿಟ್ಟು ಕೊಂಡು, ಪ್ರಕೃತಿಯ ಮನಮೋಹಕ ವನಗಳಲ್ಲಿ ವಿಹರಿಸುವುದು ಹೇಗೆಂದು ಗೊತ್ತಿದ್ದರೆ ಸದಾ ವಿಹರಿಸಲೂಬಹುದು.

ಮನುಜ ಪ್ರಯತ್ನದ ಫಲವಿನ್ನೇನು, ಸುಂದರ ಮಹಿಮೆಯ ಉನ್ನತ ಕರುಣೆಯ
ದೈವ ಸಹಾಯವು ತಾನಿನ್ನೇನು, ನಿಲ್ವುದು ಭಯದಿಂ ಬಿಡುಗಡೆ ಹೊಂದಿ, ಕಾಯ್ಯುದು ಜೀವಿಪುದು;
ದ್ವೇಷವನ್ನು ಮೂಾರಿ ಅಭಯ ಹಸ್ತವನೆತ್ತಿ ಹಿಡಿವುದು ;
ಒಲುಮೆಯ ಬಾಳ್ವೆಯೆ ಚಿರ ಸೌಂದರ್ವದೆಂದು;-
ವಿವೇಕವೆಂಬುದು ತಾನಿನ್ನೇನು ?

ಯುರಿಪಿಡೀಸನ 'ಬ್ಯಾಕಿ'ಯ ಮೇಳಗೀತ.

೭. ಗತಕಾಲದ ಹೊರೆ

ನನ್ನ ಸೆರೆಮನೆ ವಾಸದ ಇಪ್ಪತ್ತೊಂದನೆಯ ತಿಂಗಳೂ ಕಳೆಯುತ್ತಿದೆ, ಚಂದ್ರನು ಏರುತ್ತ ಇಳಿಯುತ್ತ ಎರಡು ವರ್ಷವೂ ಕಳೆದು ಹೋಗುತ್ತದೆ. ನನಗೆ ವಯಸ್ಸಾಗುತ್ತಿದೆ ಎಂದು ಜ್ಞಾಪಕ ಕೊಡಲು ಇನ್ನೊಂದು ಹುಟ್ಟಿದ ದಿನವೂ ಬರುತ್ತದೆ. ಈಗಾಗಲೇ ನಾಲ್ಕು ಜನ್ಮದಿನಗಳು(ವರ್ಷ) ಸೆರೆಮನೆ ಯಲ್ಲೇ ಕಳೆದಿವೆ, ಇಲ್ಲಿ ಮತ್ತು ಡೆಹ್ರಡೂನ್‌ನಲ್ಲಿ; ಇನ್ನೂ ಅನೇಕ ನನ್ನ ಹಿಂದಿನ ಸೆರೆಮನೆ ವಾಸಗಳಲ್ಲಿ ಕಳೆದವು ಎಷ್ಟಾಗಿವೆಯೋ ಲೆಕ್ಕವೂ ಇಲ್ಲ.

ಈ ಎಲ್ಲ ಕಾಲದಲ್ಲಿ ನನಗೆ ಬರೆಯಬೇಕೆಂಬ ಆಶೆ ಮತ್ತು ಉತ್ಸಾಹ ಜೊತೆಯಲ್ಲಿ ಬೇಡವೆಂಬ ಸಂಕೋಚ, ನಾನು ನನ್ನ ಹಿಂದಿನ ಸೆರೆಮನೆ ವಾಸಗಳಲ್ಲಿ ಮಾಡಿದಂತೆ ಈಗಲೂ ಒಂದು ಗ್ರಂಥ ಬರೆಯುತ್ತೇನೆಂದು ನನ್ನ ಅನೇಕ ಜನ ಸ್ನೇಹಿತರು ಊಹಿಸಿದರು. ಅದು ಒಂದು ಎರಡನೆಯ ಸ್ವಭಾವವಾಗಿ ಹೋಗಿತ್ತು.