ಈ ಪುಟವನ್ನು ಪ್ರಕಟಿಸಲಾಗಿದೆ
ಕೊನೆಯ ಅಂಕ ೨
೩೫೭

ಯಾವುದಾದರೂ ನಿರ್ದಿಷ್ಟ ಗುರಿ ಮತ್ತು ಸಾಮಾಜಿಕ ಧೈಯವಿಲ್ಲದೆ ಯಾವ ಪ್ರಶ್ನೆಯನ್ನೂ ಯೋಚಿಸುವಂತಿರಲಿಲ್ಲ, ಯೋಜನೆ ಸಿದ್ಧಗೊಳಿಸುವಂತೆಯೂ ಇರಲಿಲ್ಲ. ಜನ ಜೀವನದ ಮಟ್ಟವನ್ನು ಯೋಗ್ಯಮಟ್ಟಕ್ಕೆ ಏರಿಸಿ ಜನರ ಬಡತನವನ್ನು ನಿವಾರಿಸುವುದೇ ನಮ್ಮ ಗುರಿಯಾಯಿತು. ತಿಂಗಳಿಗೆ ಕನಿಷ್ಟ ಪಕ್ಷ ೧೫ರಿಂದ ೨೫ ರೂಪಾಯಿಯಾದರೂ ಜೀವನದ ವೆಚ್ಚಕ್ಕೆ ಬೇಕೆಂದು ಯುದ್ಧಕ್ಕೆ ಮುಂಚೆ ಅರ್ಥಶಾಸ್ತ್ರಜ್ಞರು ನಿರ್ಧರಿಸಿದ್ದರು. ಪಾಶ್ಚಾತ್ಯ ಜೀವನಮಟ್ಟದೊಂದಿಗೆ ಇದನ್ನು ಹೋಲಿಸಲು ಸಾಧ್ಯವೇ ಇಲ್ಲ; ಆದರೂ ಭಾರತದಲ್ಲಿನ ಜೀವನಮಟ್ಟಕ್ಕಿಂತ ಒಂದು ದೊಡ್ಡ ಹೆಜ್ಜೆ ಮುಂದೆ ಹೋದಂತೆ, ಭಾರತೀಯನ ಸರಾಸರಿ ವಾರ್ಷಿಕ ವರಮಾನ ತಲಾ ೬೫ ರೂಪಾಯಿ-ಇದು ಐಶ್ವರ್ಯವಂತರು, ಬ ಡ ವ ರು, ಪಟ್ಟಣಿಗರು, ಗ್ರಾಮಸ್ಥರು ಎಲ್ಲರನ್ನೂ ಸೇರಿಸಿಕೊಂಡು, ಶ್ರೀಮಂತರಿಗೂ ಬಡವರಿಗೂ ಇದ್ದ ಅಂತರ, ಶ್ರೀಮಂತರ ಅಲ್ಪಸಂಖ್ಯೆ ಗಮನಿಸಿದರೆ, ಸಾಮಾನ್ಯ ಗ್ರಾಮಸ್ಥನ ವಾರ್ಷಿಕವರಮಾನ ಸರಾಸರಿ ೩೦-೦-೦ ಎಂದೂ ಊಹಿಸಲಾಗಿತ್ತು. ಈ ಸಂಖ್ಯೆಗಳಿಂದ ಜನರ ಭೀಕರ ಬಡತನ ಮತ್ತು ದಾರುಣಸ್ಥಿತಿ ಎದ್ದು ಕಾಣುತ್ತವೆ. ಆಹಾರ, ಬಟ್ಟೆ, ವಾಸಕ್ಕೆ ಮನೆ, ಮಾನವಸಹಜ ಸಾಮಾನ್ಯ ಜೀವನಕ್ಕೆ ಬೇಕಾದ ಅವಶ್ಯಕತೆಗಳು ಎಲ್ಲದಕ್ಕೂ ಕೊರತೆ. ಈ ಕೊರತೆ ನಿವಾರಿಸಿ ಪ್ರತಿಯೊಬ್ಬ ಪ್ರಜೆಗೂ ಕನಿಷ್ಟ ಪ್ರಮಾಣದ ಜೀವನಮಟ್ಟ ಒದಗಿಸಬೇಕಾದರೆ ರಾಷ್ಟ್ರದ ವರಮಾನವು ಹೆಚ್ಚಬೇಕು ; ಅದರ ಜೊತೆಗೆ ಆ ಸಂಪತ್ತು ಹೆಚ್ಚು ನ್ಯಾಯಬದ್ಧವಾಗಿ ಎಲ್ಲರಲ್ಲೂ ಹಂಚಿರಬೇಕು. ನಿಜವಾದ ಪ್ರಗತಿಪರ ಜೀವನಮಟ್ಟ ಇರಬೇಕೆನ್ನುವುದಾದರೆ ರಾಷ್ಟ್ರದ ವರಮಾನವು ೫೦೦, ೬೦೦ ರಷ್ಟಾದರೂ ಹೆಚ್ಚಬೇಕೆಂದು ಲೆಕ್ಕ ಹಾಕಿದೆವು. ಅದು ಕಷ್ಟ ಸಾಧ್ಯ ಕಂಡು ಹತ್ತು ವರ್ಷಗಳಲ್ಲಿ ೨೦೦, ೩೦೦ ರಷ್ಟಾದರೂ ಹೆಚ್ಚಿಸಲು ತೀರ್ಮಾನಿಸಿದೆವು.

ನಮ್ಮ ಯೋಜನೆಗೆ ಹತ್ತು ವರ್ಷದ ಕಾಲ ಕ್ಲು ಪ್ರಮಾಡಿ ಯಾವ ಕಾಲಕ್ಕೆ ಯಾವ ಆರ್ಥಿಕಮಟ್ಟವನ್ನು ಎಷ್ಟು ಪ್ರಗತಿ ಸಾಧಿಸಬೇಕೆಂದು ನಿರ್ಧರಿಸಿದೆವು. ಅದಕ್ಕೆ ಒರೆಗಲ್ಲುಗಳನ್ನೂ ಸೂಚಿಸಿದೆವು.

(೧) ಉತ್ತಮ ಆಹಾರ- ಪ್ರತಿಯೊಬ್ಬ ವಯಸ್ಕ ಕೆಲಸಗಾರನಿಗೂ ೨೪೦೦-೨೫೦ರವರೆಗೆ ಉಷ್ಣಾಂಶ ಶಕ್ತಿಯ ಆಹಾರವಿರಬೇಕು.

(೨) ಪ್ರತಿಯೊಬ್ಬನಿಗೂ ವರ್ಷಕ್ಕೆ ೩೦ಗಜ ಬಟ್ಟೆ ಯಾದರೂ ದೊರೆಯಬೇಕು. (ಆಗ ಇದ್ದುದು ೧೫ ಗಜ).
(೩) ಪ್ರತಿಯೊಬ್ಬನಿಗೂ ವಾಸಕ್ಕೆ ೧೦೦ಚದರ ಅಡಿ ಇರುವ ಮನೆಯಾದರೂ ಇರಬೇಕು. ಇವಲ್ಲದೆ ಈ ಕೆಳಗಿನ ಅಂಶಗಳನ್ನು ದೃಷ್ಟಿಯಲ್ಲಿಟ್ಟು ಕೊಳ್ಳಬೇಕು
(೧) ವ್ಯವಸಾಯದ ಉತ್ಪತ್ತಿ ಹೆಚ್ಚಬೇಕು.
(೨) ಕೈಗಾರಿಕಾವಸ್ತು ನಿರ್ಮಾಣ ಹೆಚ್ಚಬೇಕು.
(೩) ನಿರುದ್ಯೋಗ ಕಡಮೆಯಾಗಬೇಕು.
(೪) ಪ್ರತಿಯೊಬ್ಬನ ವಾರ್ಷಿಕ ಆದಾಯ ಹೆಚ್ಚಬೇಕು.
(೫) ನಿರಕ್ಷರತೆ ನಿರ್ಮೂಲನಾಗಬೇಕು.
(೬) ಸಾರ್ವಜನಿಕೋಪಯುಕ್ತ ಕಾರ್ಯಗಳು ಹೆಚ್ಚಬೇಕು.
(೭) ಪ್ರತಿ ೧೦೦೦ ಪ್ರಜೆಗಳಿಗೆ ಒಂದು ವೈದ್ಯಶಾಲೆ ಇರಬೇಕು.
(೮) ಸರಾಸರಿ ಜೀವನದ ವಯೋಮಾನ ಹೆಚ್ಚಬೇಕು.

ದೇಶದ ಮುಖ್ಯ ಗುರಿ ಆದಷ್ಟು ಮಟ್ಟಿಗೆ ರಾಷ್ಟ್ರವು ಸ್ವಯಂ ಸಂಪೂರ್ಣ ಇರಬೇಕೆಂದು ಇತ್ತು. ವಿದೇಶ ವ್ಯಾಪಾರವನ್ನು ಅಲಕ್ಷ್ಯಮಾಡಲಿಲ್ಲ. ಆದರೆ ಆರ್ಥಿಕ ಸಾಮ್ರಾಜ್ಯನೀತಿಯ ಸುಳಿಗೆ ಬಲಿಯಾಗಲು ಇಷ್ಟ ಪಡಲಿಲ್ಲ. ಯಾವ ಸಾಮ್ರಾಜ್ಯಶಕ್ತಿಗೂ ಅಡಿಯಾಳಾಗಲು ಇಷ್ಟ ಪಡಲಿಲ್ಲ. ಆ ಬಗೆಯ ಶಕ್ತಿ ಬೆಳೆಸುವುದು ನಮಗೂ ಇಷ್ಟವಿರಲಿಲ್ಲ. ದೇಶದ ಉತ್ಪತ್ತಿಯಿಂದ ದೇಶಕ್ಕೆ ಬೇಕಾದ ಆಹಾರ, ಕಚ್ಚಾ ಮಾಲು, ನಯಮಾಲು ಎಲ್ಲವನ್ನೂ ಪೂರೈಸುವುದು ಮೊದಲ ಕರ್ತವ್ಯವಾಗಿರಬೇಕು. ಉಳಿದ ಹೆಚ್ಚು ಮಾಲನ್ನು ಹೊರಗೆ ಯಾರಮೇಲೂ ಬಲಾತ್ಕರಿಸಿ ಹೇರುವುದು ನಮಗೆ ಬೇಕಿರಲಿಲ್ಲ. ಆ