ನಮ್ಮ ದೇಶದ ವಿಷಯ ತೆಗೆದುಕೊಂಡರೆ ನಮ್ಮ ವೈಯಕ್ತಿಕ ಸಂಬಂಧಗಳನೇಕವಿವೆ. ಈ ಸಂಬಂಧದ ಫಲವಾಗಿ ನಮ್ಮ ಸ್ವದೇಶೀಯರ ವಿಷಯವಾಗಿ ಅನೇಕ ಚಿತ್ರಗಳು ಅಥವ ಯಾವುದೋ ಒಂದು ಮಿಶ್ರ ಚಿತ್ರ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಅದೇ ರೀತಿ ನನ್ನ ಮನಸ್ಸಿನಲ್ಲೂ ಚಿತ್ರಗಳನ್ನು ಕಲ್ಪಿಸಿಕೊಂಡಿದ್ದೇನೆ. ಕೆಲವು ಚಿತ್ರಗಳು ಸ್ಪಷ್ಟವಾಗಿ, ಜೀವಂತವಾಗಿ, ನನ್ನಲ್ಲೇ ತಮ್ಮ ದೃಷ್ಟಿ ಯನ್ನು ನೆಟ್ಟು, ಜೀವನದ ಉನ್ನತ ಶಿಖರಗಳನ್ನು ಜ್ಞಾಪಕಕ್ಕೆ ತರುತ್ತವೆ. ಆದರೂ ಅದೆಲ್ಲ ಎಷ್ಟೋ ಹಿಂದಿನ ಎಂದೋ ಓದಿದ ಯಾವುದೋ ಕಥೆಯಂತಿದೆ, ಇನ್ನು ಕೆಲವು ಅವುಗಳ ಸುತ್ತ ನಮ್ಮ ಜೀವನಕ್ಕೊಂದು ಸವಿಯನ್ನು ಕೊಡುವ ಹಳೆಯ ಸ್ನೇಹದ ನೆನಪುಗಳು ಸುತ್ತುಗಟ್ಟಿವೆ, ಇಂಡಿಯದ ಸ್ತ್ರೀಯರು, ಪುರುಷರು, ಮಕ್ಕಳು ಗುಂಪು ಕಟ್ಟಿ ನನ್ನನ್ನೇ ನೋಡುತ್ತಿರುವ ಮತ್ತು ಅವರ ಸಹ ಸ್ರಾರು ಕಣ್ಣು ಗಳ ನೋಟದ ಹಿಂದೆ ಏನಿದೆ ಎಂದು ಅಳೆಯಲು ಪ್ರಯತ್ನಿ ಸುವ ಜನಸ್ತೋಮದ ಚಿತ್ರಗಳು ಅನೇಕ ಇವೆ.
ಕೇವಲ ಒಂದು ವೈಯಕ್ತಿಕ ಚಿತ್ರದಿಂದ ನಾನು ಈ ಕಥೆಯನ್ನು ಆರಂಭಿಸುತ್ತೇನೆ, ಏಕೆಂದರೆ ನನ್ನ ಆತ್ಮಕಥೆಯ ಕೊನೆಯಲ್ಲಿ ನಾನು ಬರೆದ ಕಾಲದ ನಂತರದ ತಿಂಗಳಿನಲ್ಲಿ ನನ್ನ ಮನೋಭಾವನೆ ಹೇಗಿತ್ತು ಎಂದು ತಿಳಿಸಲು ಸಹಕಾರಿಯಾಗುತ್ತದೆ, ಆದರೆ ಅನೇಕ ವೇಳೆ ವೈಯಕ್ತಿಕ ಛಾಯೆ ಅನಿವಾರ್ಯವಾದರೂ ಇದು ಇನ್ನೊಂದು ಆತ್ಮಕಥೆಯಾಗುವುದಿಲ್ಲ.
ಪ್ರಪಂಚದ ಯುದ್ಧ ಮುಂದುವರಿಯುತ್ತಿದೆ. ಒಂದು ಭೀಕರ ವಿಪ್ಲವ ಪ್ರಪಂಚವನ್ನು ದಹಿ ಸುತ್ತಿರುವಾಗ, ಬೇರೆ ಉಪಾಯವಿಲ್ಲದೆ ನಿಸ್ತೇಜನಾಗಿ ಬಂದಿಯಾಗಿ ಅಹಮದ್ ನಗರ ಕೋಟೆಯಲ್ಲಿ ಕುಳಿತು ಒಂದೊಂದು ಬಾರಿ ಸ್ವಲ್ಪ ಸಿಟ್ಟಿಗೇಳುತ್ತೇನೆ. ಈ ಅನೇಕ ವರ್ಷಗಳು ನನ್ನ ಮನಸ್ಸನ್ನು ಆವರಿಸಿದ್ದ ಅನೇಕ ಮಹದಾಸೆಗಳ ಸಾಹಸಕಾರ್ಯಗಳ ವಿಷಯ ಯೋಚಿಸುತ್ತೇನೆ. ಪ್ರಕೃತಿ ವ್ಯಾಪಾರಗಳನ್ನು ನೋಡುವಂತೆ ಈ ಯುದ್ದವೂ ಒ೦ದು ಅಮಾನುಷ ಘಟನೆ, ಪ್ರಕೃತಿನಿಯಾಮಕ ಪ್ರಳಯ, ಒಂದು ಭೂಕಂಪ, ಪ್ರವಾಹದ ಅನಾಹುತ ಎಂದು ನೋಡಲು ಯತ್ನಿಸುತ್ತಿದ್ದೇನೆ. ಆದರೆ ಅದು ಸಾಧ್ಯವಾಗುವುದಿಲ್ಲ. ಆದರೆ ವಿಶೇಷ ನೋವು, ದ್ವೇಷ ಮತ್ತು ಉದ್ವೇಗದಿಂದ ಪಾರಾಗಲು ನನಗೆ ಬೇರೆ ಮಾರ್ಗ ಯಾವುದೂ ಕಾಣುವುದಿಲ್ಲ. ಈ ಪೈಶಾಚಿಕ ವಿನಾಶಕಾರಕ ವೃತ್ತಿಯ ಬೃಹದ್ ವ್ಯಾಪ್ತಿಯಲ್ಲಿ ನನ್ನ ವೈಯಕ್ತಿಕ ಸಂಕಟಗಳು ಮತ್ತು ನಾನು ತೃಣಮಾತ್ರರಾಗುತ್ತೇವೆ.
೧೯೪೨ ನೇ ಆಗಸ್ಟ್ ಎಂಟನೇದಿನದ ಭಯಂಕರ ಸಂಜೆಯಲ್ಲಿ ಗಾಂಧೀಜಿ ಹೇಳಿದ “ ಪ್ರಪಂಚದ ಕಣ್ಣು ಇಂದು ರಕ್ತರಂಜಿತವಿದ್ದರೂ ನಾವು ಮಾತ್ರ ಪ್ರಪಂಚವನ್ನು ಸ್ವಚ್ಛ, ಸಮಾಧಾನಯುಕ್ತ ಕಣ್ಣುಗಳಿಂದ ನೇರ ನೋಡಬೇಕು ?” ಎಂದು ಹೇಳಿದ್ದು ಜ್ಞಾಪಕಕ್ಕೆ ಬರುತ್ತದೆ.
ಅಧ್ಯಾಯ ೨: ಬೇಡನ್ ವೀಲರ್ : ಲಾಸನ್
೧. ಕಮಲ
ನನ್ನ ಹೆಂಡತಿಗೆ ಕಾಹಿಲೆ ವಿಷಮಿಸಿದೆ ಎಂದು ವರ್ತಮಾನ ಬಂದ ಕಾರಣ ೧೯೩೫ ನೇ ಸೆಪ್ಟೆಂಬರ್ ನಾಲ್ಕನೆಯ ದಿನ ಆಲ್ಕೂರ ಬೆಟ್ಟದ ಬಂದಿಖಾನೆಯಿಂದ ನನಗೆ ಆಕಸ್ಮಿಕ ಬಿಡುಗಡೆ ಆಯಿತು. ಆಕೆ ಜರ್ಮನಿಯ ಬ್ಲಾಕ್ ಫಾರಸ್ಸಿನ ಬೇಡನ್ ವೀಲರ್ ನಲ್ಲಿ ಒಂದು ವಿಶ್ರಾಂತಿಗೃಹದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಮೋಟಾರಿನಲ್ಲಿ ಹೊರಟು ರೈಲಿನಲ್ಲಿ ಪ್ರಯಾಣಮಾಡಿ ಮಾರನೆ ದಿನವೇ ಅಲಹಾಬಾದ್ ಸೇರಿ ಅದೇ ಮಧ್ಯಾಹ್ನ ವೇ ವಿಮಾನದಲ್ಲಿ ಯೂರೋಪಿಗೆ ಹೊರಟೆ. ಕರಾಚಿ, ಬಾಗ್ದಾದ್ ಮೂಲಕ ಕೈರೋ ಪಟ್ಟಣವನ್ನು ಸೇರಿ, ಸಮುದ್ರ ವಿಮಾನದಲ್ಲಿ ಅಲೆಕ್ಸಾಂಡ್ರಿಯದಿಂದ ಬ್ರಿಂಡ್ಸಿಗೆ ತಲ್ಪಿದೆ. ಬ್ರಿಂಡ್ಸಿಯಿಂದ ರೈಲಿನಲ್ಲಿ ಸ್ವಿಜರ್ಲ್ಯೆಂಡಿನ ಬಾಸ್ಲೆ ಪಟ್ಟಣಕ್ಕೆ ಹೋದೆ. ಆಲ್ಮೋರ ಜೈಲಿನಿಂದ