ಹೊರಟ ಐದು ದಿನಗಳ ನಂತರ, ಅಲಹಾಬಾದ್‌ನಿಂದ ನಾಲ್ಕು ದಿನಗಳ ನಂತರ ಸೆಪ್ಟಂಬರ್ ಒಂಭತ್ತನೆ ಸಂಜೆ ಬೇಡನ್ ವೀಲರ್ ಮುಟ್ಟಿದೆ.
ಕಮಲಳನ್ನು ನಾನು ಕಂಡಾಗ ಆಕೆಯ ಮುಖದಲ್ಲಿ ಅದೇ ಹಳೆಯ ಧೈರ್ಯದ ಮುಗುಳ್ಳಗೆ ; ಆದರೆ ಬಹಳ ನಿಶ್ಯಕ್ತಳಾಗಿದ್ದಳು, ಹೆಚ್ಚು ಮಾತನಾಡಲು ಬಹಳ ಸಂಕಟಪಡುತ್ತಿದ್ದಳು. ಪ್ರಾಯಶಃ ನಾನು ಬಂದದ್ದರಿಂದ ಸ್ವಲ್ಪ ಉತ್ತಮ ಪರಿಣಾಮವಾಯಿತು. ಏನೊ, ಮಾರನೇ ದಿನ ಮತ್ತು ಅನಂತರವೂ ಆಕೆಯ ಸ್ಥಿತಿ ಸ್ವಲ್ಪ ಉತ್ತಮಗೊಂಡಿತು, ಆದರೆ ವಿಷಮತೆ ಇನ್ನೂ ಇದ್ದು ನಿದಾನವಾಗಿ ಆಕೆಯ ಜೀವವನ್ನೇ ಹೀರಿತು. ಅವಳ ಸಾವು ಸಮೀಪಿಸಿದೆ ಎಂದು ಯೋಚಿಸದೆ ಗುಣ ಹೊಂದುತಿದ್ದಾಳೆ, ಈ ವಿಷಗಳಿಗೆಯನ್ನು ಕಳೆದರೆ ಸರಿಹೋಗುತ್ತಾಳೆ ಎಂದು ಭಾವಿಸಿದೆ. ಡಾಕ್ಟರುಗಳು ಅವರ ಸ್ವಭಾವವೇ ಹಾಗೆ-ಭಯವಿಲ್ಲ ಎಂದು ಭರವಸೆ ಹೇಳುತ್ತಲೇ ಇದ್ದರು. ಸಧ್ಯದ ಗಂಡಾಂತರವೇನೋ ಕಳೆದ೦ತೆ ಕ೦ಡಿತು ; ಆಕೆಯೂ ಜಗ್ಗಲಿಲ್ಲ. ಮಿತವಾಗಿ ಮಾತನಾಡು ತಿದ್ದೆವು, ಸ್ವಲ್ಪ ಆಯಾಸ ಕಂಡೊಡನೆ ನಾನೇ ಮಾತು ನಿಲ್ಲಿಸುತ್ತಿದ್ದೆ. ಪರ್ಲಬಕ್ ಳ 'ದಿ ಗುಡ್ ಅರ್ತ್' ಎಂಬ ಕಾದಂಬರಿಯನ್ನು ಓದುತ್ತಿದ್ದಂತೆ ಜ್ಞಾಪಕ. ಇದರಿಂದ ಅವಳಿಗೆ ಸಂತೋಷವಾಗುತ್ತಿತ್ತು ; ಆದರೂ ಓದು ಮಾತ್ರ ಮುಂದೆ ಸಾಗುತ್ತಿರಲಿಲ್ಲ.
ಬೆಳಗ್ಗೆ ಮಧ್ಯಾಹ್ನ ಊರೊಳಗಿನ ನನ್ನ ಹೋಟಲಿನಿಂದ ಆ ವಿಶ್ರಾ೦ತಿ ಗೃಹಕ್ಕೆ ನಡೆದುಕೊಂಡು ಹೋಗಿ ಅವಳೊಡನೆ ಕೆಲವು ಗಂಟೆ ಕಾಲ ಕಳೆಯುತ್ತಿದ್ದೆ. ಆಕೆಗೆ ಹೇಳಬೇಕೆಂಬ ವಿಷಯಗಳು ಅನೇಕವಿದ್ದವು, ಆದರೂ ನಾನೇ ಬಾಯಿಬಿಗಿ ಹಿಡಿಯುತ್ತಿದ್ದೆ. ಸ್ವಲ್ಪ ಹೊತ್ತು ಹಳೆಯ ದಿನಗಳು, ಹಿಂದಿನ ನೆನಪುಗಳು, ನಮ್ಮಿರ್ವರ ಆಪ್ತರು, ಕೆಲವು ಸಾರಿ ವಿಚಾರಮಗ್ನರಾಗಿ ನಮ್ಮ ಭವಿಷ್ಯ ನಾವು ಮಾಡಬೇಕೆಂದಿರುವ ಕೆಲಸ ಇವುಗಳ ವಿಷಯ ಮಾತನಾಡುತ್ತಿದ್ದೆವು. ಅವಳು ವಿಷಮಸ್ಥಿತಿಯಲ್ಲಿ ಇದ್ದಾಗ್ಯೂ, ಭವಿಷ್ಯಕ್ಕೆ ಅಂಟಿಕೊಂಡೇ ಇದ್ದಳು. ಆಗಾಗ ಬರುತ್ತಿದ್ದ ಸ್ನೇಹಿತರು ಆಕೆಯ ಸ್ಥಿತಿಯು ತಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಉತ್ತಮಗೊಳ್ಳುತ್ತಿದೆ ಎಂದು ಆಶ್ಚರ್ಯ ಪಡುತ್ತಿದ್ದರು. ಆ ಜಾಜ್ವಲ್ಯ ಮಾನವಾದ ಕಣ್ಣುಗಳಿಂದ ಮತ್ತು ಮುಗಳ ಗೆಯಿಂದ ಮೋಸ ಹೋದರು.
vಮಾಗಿಯ ಕಾಲದ ದೀರ್ಘ ಸಂಧ್ಯಾಕಾಲದಲ್ಲಿ ನಾನು ಉಳಿದಿದ್ದ ಭೋಜನಾಲಯದ ಕೊಠಡಿ ಯಲ್ಲಿ ಏಕಾಂಗಿಯಾಗಿ ಕುಳಿತು ಕಾಲ ಕಳೆಯುತ್ತಿದ್ದೆ. ಅಥವಾ ಹೊಲಗಳ ಮಧ್ಯೆ ಅಥವ ಕಾಡಿ, ನೊಳಗೆ ತಿರುಗಾಡುತ್ತಿದ್ದೆ. ಆಗ ಕಮಲಳ ನೂರಾರು ಚಿತ್ರಗಳು ಆಕೆಯ ಅಗಾಧ ಆತ್ಮಶ್ರೀಯ ನೂರಾರು ರೂಪಗಳು ಒಂದರ ಮೇಲೊಂದು ನನ್ನ ಮನಸ್ಸಿನ ಸ್ಮತಿ ಪಥದಲ್ಲಿ ಸುಳಿದು ಹೋಗುತಿ ದ್ದವು. ನಮ್ಮ ಮದುವೆಯಾಗಿ ಸುಮಾರು ಇಪ್ಪತ್ತು ವರ್ಷಗಳಾಗಿದ್ದವು. ಆದರೂ ಎಷ್ಟು ಸಲ ಆಕೆಯ ಮಾನಸಿಕ ಆಧ್ಯಾತ್ಮಿಕ ಚಿರನೂತನ ದೃಷ್ಟಿ ಯು ನನ್ನನ್ನು ವಿಸ್ಮಯಗೊಳಿಸುತ್ತಿತ್ತು. ಎಷ್ಟೋ ವಿವಿಧ ರೀತಿಗಳಲ್ಲಿ ಆಕೆಯನ್ನು ಅರಿತಿದ್ದೆ. ಈಚೆಗೆ ಆಕೆಯನ್ನು ಅರ್ಥಮಾಡಿಕೊಳ್ಳಲು ಬಹಳ ಪ್ರಯತ್ನ ಪಟ್ಟೆ. ಅರ್ಥಮಾಡಿಕೊಳ್ಳಲು ಸಾಧ್ಯವಿರಲಿಲ್ಲವೆಂದಲ್ಲ; ಅನೇಕ ವೇಳೆ ಅವಳನ್ನು ಅರಿತಿದ್ದೇನೆಯೆ, ಅರ್ಥಮಾಡಿಕೊಂಡಿದ್ದೇನೆಯೇ ಎಂದು ನಾನೇ ಆಶ್ಚರ್ಯ ಪಡುತ್ತಿದ್ದೆ. ನಿಜವಾಗಿಯೂ ಅಸ್ತಿತ್ವವೇ ಇಲ್ಲದ ಗ್ರಹಿಸಲು ಸಹ ಅತಿ ಕಷ್ಟವಾದ ಮೋಹಿನಿಯಂತೆ ಕಂಡೂ ಕಾಣದ ಯಾವುದೋ ಮೋಹಕ ಶಕ್ತಿ ಅವಳಲ್ಲಿತ್ತು. ಒಂದೊಂದು ವೇಳೆ ನೆಟ್ಟ ನೋಟದಿಂದ ಆಕೆಯ ಕಣ್ಣುಗಳನ್ನು ದೃಷ್ಟಿಸಿದರೆ ಯಾವುದೋ ಹೊಸವ್ಯಕ್ಕೆ ನನ್ನನ್ನು ನೋಡುತ್ತಿದ್ದಂತೆ ಭಾಸವಾಗುತ್ತಿತ್ತು,
ಎಲ್ಲೋ ಸ್ವಲ್ಪ ದಿನ ಶಾಲೆಗೆ ಹೋಗಿದ್ದಳೇ ಹೊರತು, ಸರಿಯಾದ ವಿದ್ಯಾಭ್ಯಾಸ ಯಾವುದೂ ಅವಳಿಗಿರಲಿಲ್ಲ. ಆಕೆಯ ಮನಸ್ಸು ಶಿಕ್ಷಣ ವಿಧಾನದ ಪಡಿಯಚ್ಚಿನ ಎರಕವಾಗಿರಲಿಲ್ಲ. ಈಗ ಸರ್ವ ಸಾಮಾನ್ಯವಾಗಿರುವ ಭಾವನೆಗಳಾವುವೂ ಇಲ್ಲದ ಸರಳ ಸ್ವಭಾವದ ಹುಡುಗಿಯಾಗಿ ನಮ್ಮ ಮನೆಗೆ ಬಂದಳು. ಆ ಹುಡುಗ ದೃಷ್ಟಿ ಕೊನೆಯವರೆಗೂ ಇತ್ತು ; ಆದರೆ ಹೆಂಗಸಾಗುತ್ತ ಬಂದಂತೆ ಪ್ರಚಂಡ ಬಿರುಗಾಳಿಗೆ ಮುಂಚೆ ಕಾಣುವ ನಿರ್ಮಲಗಂಭೀರ ಜಲದಂತೆ ಆಕೆಯ ಕಣ್ಣುಗಳ ಆಳವೂ ಮತ್ತು