ಈ ಪುಟವನ್ನು ಪ್ರಕಟಿಸಲಾಗಿದೆ
ಕೊನೆಯ ಅ೦ಕ ೩
೪೨೩

ದೇಹಾಲಸ್ಯದಿಂದ ಮತ್ತು ಮನಸ್ಸಿನ ತಳಮಳದಿಂದ ನನ್ನ ಸುತ್ತಲಿನ ಸನ್ನಿವೇಶಗಳಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಹಿಮಾಲಯ ಮಧ್ಯದ ಕುಲು ಕಣಿವೆಗೆ ಪ್ರಯಾಣ ಮಾಡಿದೆ.

೧೦. ಪ್ರತಿಭಟನೆ-'ಭಾರತ ಬಿಡಿ' ನಿರ್ಣಯ

ಹದಿನೈದು ದಿನಗಳ ನಂತರ ಕುಲುದಿಂದ ನಾನು ಹಿಂದಿರುಗಿದಾಗ ದೇಶದ ಒಳಸ್ಥಿತಿ ಬಹು ಬೇಗ ಪ್ರಕುಬ್ಧಗೊಳ್ಳುತ್ತಿರುವುದು ಗೊತ್ತಾಯಿತು. ಸಂಧಾನಕ್ಕಾಗಿ ನಮ್ಮ ಕೊನೆಯ ಪ್ರಯತ್ನ ಸಹ ವಿಫಲವಾದುದನ್ನು ಕಂಡು ಬೇಸರ ಹುಟ್ಟಿ ಆ ಕಡೆ ಯಾವ ಆಶೆಯೂ ಇಲ್ಲವೆಂದೂ ನಿರ್ಧರಮಾಡಿಕೊಂಡೆವು. ಪಾರ್ಲಿಮೆಂಟ್ ಮತ್ತು ಇತರ ಕಡೆಗಳಲ್ಲಿ ಬ್ರಿಟಿಷ್ ಅಧಿಕಾರಿಗಳು ಮಾಡಿದ ಭಾಷಣಗಳಿಂದ ಇದಕ್ಕೆ ಇನ್ನೂ ಸಮರ್ಥನೆ ದೊರೆತು ಜನರ ಕೋಪವು ಅಧಿಕವಾಯಿತು. ಭಾರತದಲ್ಲಿ ನಮ್ಮ ಎಲ್ಲ ಸಾಮಾನ್ಯ ರಾಜಕೀಯ ಮತ್ತು ಸಾರ್ವಜನಿಕ ಕಾವ್ಯಗಳನ್ನು ವಿರೋಧಿಸುವುದೇ ಅಧಿಕಾರಿಗಳ ನಿರ್ದಿಷ್ಟ ನೀತಿಯಾಯಿತು; ಎಲ್ಲ ಕಡೆಯೂ ಬಂಧನವು ಬಿಗಿಯಾಯಿತು, ಕ್ರಿಪ್ಸ್ ಸಂಧಾನ ಕಾಲದಲ್ಲೇ ನಮ್ಮ ಅನೇಕ ಕೆಲಸಗಾರರು ಸೆರೆಮನೆಯಲ್ಲಿದ್ದರು. ಭಾರತ ರಕ್ಷಣಾ ಶಾಸನದ ಕೆಳಗೆ ನನ್ನ ತೀರ ಸಮಿಾಪದ ಆಪ್ತಮಿತ್ರರು ಬಂಧಿತರಾಗಿ ಸೆರೆಮನೆ ಸೇರಿದ್ದರು. ಮೇ ತಿಂಗಳ ಆದಿಭಾಗದಲ್ಲೇ ರಫಿ ಅಹಮದ್ ಕಿದ್ವಾಯ್ ಬಂಧನ ವಾಗಿತ್ತು. ಅನಂತರ ಸಂಯುಕ್ತ ಪ್ರಾಂತ್ಯದ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷ ಕೃಷ್ಣ ದತ್ತ ಪಲಿವಾಲ್ ಮತ್ತು ಇತರರ ದಸ್ತಗಿರಿಯಾಗಿತ್ತು. ಈ ರೀತಿ ನಮ್ಮಲ್ಲಿ ಅನೇಕರನ್ನು ಒಬ್ಬೊಬ್ಬರನ್ನಾಗಿ ಬಂಧಿಸಿ, ಸಾರ್ವಜನಿಕ ಜೀವನದಿಂದ ಹೊರದೂಡಿ, ನಮ್ಮ ರಾಷ್ಟ್ರೀಯ ಚಳವಳಿಯು ತಲೆ ಎತ್ತದಂತೆ ಮತ್ತು ಕ್ರಮೇಣ ಛಿದ್ರ ಛಿದ್ರವಾಗುವಂತೆ ಮಾಡುವ ಏರ್ಪಾಟನಲ್ಲಿ ಸರಕಾರವಿದ್ದಂತೆ ಕಂಡಿತು. ಇದನ್ನೆಲ್ಲ ಸುಮ್ಮನೆ ಕುಳಿತು ನೋಡುವುದೆ? ಆದರೆ ನಮ್ಮ ಶಿಕ್ಷಣ ಆರೀತಿ ಇರಲಿಲ್ಲ. ನಮ್ಮ ವೈಯಕ್ತಿಕ ಮತ್ತು ರಾಷ್ಟ್ರೀಯ ಗೌರವಕ್ಕೆ ಅಪಮಾನವಾಗಿ ಅಧಿಕಾರಿವರ್ಗದ ಈ ನಡತೆಯಿಂದ ನಾವು ಪ್ರಕೋಪಗೊಂಡಿದ್ದೆವು.

ಭಯಂಕರ ಯುದ್ಧ ಪರಿಸ್ಥಿತಿಯಲ್ಲಿ, ಮುತ್ತಿಗೆಯ ಭಯದ ಎದುರು ನಾವು ಮಾಡಬಹುದಾದ್ದು ಏನು? ಆದರೆ ನಿಶ್ಚತನರಾಗಿ ಕುಳಿತುಕೊಳ್ಳುವದರಿಂದ ನಮ್ಮ ಧೈಯ ಸಾಧನೆಗೆ ಯಾವ ಸೇವೆಯನ್ನು ಸಲ್ಲಿಸಿದಂತಾಗಲಿಲ್ಲ. ಈ ಅಶಕ್ತತೆಯ ಪರಿಣಾಮವಾಗಿ ಬೆಳೆಯುತ್ತಿದ್ದ ಭಾವನೆಗಳು ಬಹಳ ಚಿಂತಾ ಜನಕವೂ ಭಯಂಕರವೂ ಇದ್ದವು. ಇಷ್ಟು ದೊಡ್ಡ ವಿಶಾಲ ರಾಷ್ಟ್ರದಲ್ಲಿ, ಮತ್ತು ವಿಷಮ ಸನ್ನಿವೇಶದಲ್ಲಿ ಸಾರ್ವಜನಿಕ ಅಭಿಪ್ರಾಯಗಳಲ್ಲಿ ಭಿನ್ನತೆ ಬರುವುದು ಸ್ವಾಭಾವಿಕವಿತ್ತು . ಯಾರ ಒಲವೂ ಜಪಾನರ ಪರ ಇರಲಿಲ್ಲ, ಏಕೆಂದರೆ ಕೇವಲ ಯಾಜಮಾನ್ಯದ ಬದಲಾವಣೆ ಯಾರಿಗೂ ಬೇಕಿರಲಿಲ್ಲ. ಚೀಣರ ಮೇಲೆ ವಿಶೇಷ ಸಹಾನುಭೂತಿ ಎಲ್ಲರಲ್ಲೂ ಬೇರೂರಿತ್ತು, ಒಂದು ವರ್ಷದ ಹಿಂದೆ ಭಾರತದಿಂದ ತಪ್ಪಿಸಿಕೊಂಡು ಹೋಗಿದ್ದ ಸುಭಾಷ್ ಚಂದ್ರಬೋಸ್ರ ಆಕಾಶವಾಣಿಯ ಭಾಷಣಗಳು ಜನರ ಮೇಲೆ ವಿಶೇಷ ಪರಿಣಾಮ ಮಾಡುತ್ತಿದ್ದವು. ಅನೇಕರು ಯಾವ ಕಡೆಯೂ ಒಲವು ತೋರಿಸದೆ ಮುಂದೇನಾಗುವುದೊ ನೋಡೋಣವೆಂದು ಸುಮ್ಮನೆ ಕಾಯುತ್ತಿದ್ದರು. ದುರದೃಷ್ಟವಶಾತ್ ಭಾರತದ ಯಾವ ಪ್ರದೇಶವಾದರೂ ಶತ್ರುವಿನ ಅಧೀನಕ್ಕೆ ಒಳಗಾದರೆ ಅವರೊಂದಿಗೆ ಸಹಕರಿಸುವವರೂ ಇದ್ದರು. ಏಕೆಂದರೆ ವಿಶೇಷ ಉತ್ಪನ್ನ ಉಳ್ಳವರಿಗೆ ತಾವೂ ತಮ್ಮ ಆಸ್ತಿಯೂ ನಾಶವಾಗದಂತೆ ಉಳಿಯುವುದೇ ಬೇಕಾಗಿತ್ತು. ಬ್ರಿಟಿಷ್ ಸರಕಾರ ಹಿಂದಿನಿಂದಲೂ ತಮ್ಮ ಸಮರ್ಥನೆಗಾಗಿ ಈ ಬಗೆಯ ಸ್ವಭಾವ ಮತ್ತು ಮನೋವೃತ್ತಿಯ ಹೌದಪ್ಪಗಳ ಗುಂಪು ಒಂದನ್ನು ತಯಾರಿಸಿದ್ದರು. ಸದಾ ಸ್ವಾರ್ಥದೃಷ್ಟಿಯಿಂದ ಕೆಲಸ ಮಾಡುತ್ತಿದ್ದ ಈ ಗುಂಪಿಗೆ ಹೊಸ ಯಜಮಾನರಿಗೆ ಹಾರ ಹಾಕುವುದು ಸುಲಭವಿತ್ತು. ಫ್ರಾನ್ಸ್, ಬೆಲ್ಜಿಯಮ್, ನಾರ್ವೆ ಮತ್ತು ಇತರ ಯೂರೋಪಿನ ರಾಷ್ಟ್ರಗಳಲ್ಲಿ ವಿರುದ್ಧ ಚಳವಳಿ ಬೆಳೆಯುತ್ತಿದ್ದರೂ ಈ ಬಗೆಯ ಪೂರ್ಣ ಸಹಕಾರ ದೊರೆತ ನಿದರ್ಶನ ನಮ್ಮ ಎದುರು ನಿಂತಿತ್ತು. ಪರ್ಟನಾ ಹೇಳಿರುವಂತ "ವೀಚಿಯ ಜನರು ನಾಚಿಕೆಯನ್ನೆ ಗೌರವವೆಂದೂ, ಹೇಡಿತನವನ್ನು ಧೈರ್ಯವೆಂದೂ, ಕ್ಲೀಬತನ ಮತ್ತು