ಈ ಪುಟವನ್ನು ಪ್ರಕಟಿಸಲಾಗಿದೆ
೪೨೪
ಭಾರತ ದರ್ಶನ

ಮೂರ್ಖತನವನ್ನು ದೂರದೃಷ್ಟಿ ಎಂದೂ, ಅಪಮಾನವನ್ನು ಸದ್ಗುಣವೆಂದೂ, ಜರ್ಮನರ ಆಕ್ರಮಣವನ್ನು ಫ್ರಾನ್ಸಿನ ನೈತಿಕ ಉನ್ನತಿ ಎಂದೂ ತಲೆ ಕೆರೆದುಕೊಂಡುಒಪ್ಪಿಕೊಳ್ಳಬೇಕಾಯಿತು.” ಉಗ್ರ ದೇಶಾಭಿಮಾನ ಮತ್ತು ಕ್ರಾಂತಿಗಳಿಗೆ ತೌರುಮನೆಯಾಗಿದ್ದ ಫ್ರಾನ್ಸಿನ ಗತಿಯೇ ಈ ರೀತಿಯಾದ ಮೇಲೆ ಬ್ರಿಟಿಷರ ಕೃಪಾಭಿಕ್ಷೆಯಲ್ಲಿಯೇ ಬೆಳೆದು ಅನೇಕ ರೀತಿ ಲಾಭ ಪಡೆದಿದ್ದ ಭಾರತದಲ್ಲಿನ ಅದೇ ಭಾವನೆಯ ಜನರು ಶತ್ರುವಿನೊಂದಿಗೆ ಸಹಕರಿಸುವುದರಲ್ಲಿ ಯಾವ ಅನುಮಾನವೂ ಇರಲಿಲ್ಲ. ಈಗ ಬ್ರಿಟಿಷ್ ಆಡಳಿತಗಾರರೊಂದಿಗೆ ಸಹಕರಿಸಿ ಬ್ರಿಟಿಷರ ರಾಜಭಕ್ತರೆಂದು ಕೂಗಿಕೊಳ್ಳುತ್ತಿದ್ದ ಜನರೇ ಮೊದಲು ಮುಂದೆ ಹೋಗಿ ಶತ್ರುವಿನೊಂದಿಗೆ ಸಹಕರಿಸುವರೆಂದೂ ನಮಗೆ ತಿಳಿದಿತ್ತು. ಈ ಸಹಕಾರ ಅವರಿಗೆ ಒಂದು ಕಲೆಯಾಗಿತ್ತು. ಮೇಲಿನ ಆಡಳಿತ ವರ್ಗ ಯಾವುದೇ ಇರಲಿ ಸ್ವಲ್ಪ ಇಂಬು ಮಾತ್ರ ತಮಗೆ ದೊರೆತರೆ ಸಹಕರಿಸಲು ಯಾವ ಕಷ್ಟವೂ ಅವರಿಗೆ ತೋರುತ್ತಿರಲಿಲ್ಲ. ಆಡಳಿತ ವರ್ಗದಲ್ಲಿ ಬದಲಾವಣೆಯಾದರೆ ಯೂರೋಪಿನಲ್ಲಿ ತಮ್ಮ ಜಾತಿಯವರು ಹೊಂದಿಕೊಂಡಂತೆ ಪುನಃ ಅವರನ್ನೂ ಸರಿಪಡಿಸಿಕೊಳ್ಳುತ್ತಿದ್ದರು. ಅವಶ್ಯಬಿದ್ದರೆ ಕ್ರಿಪ್ಸ್ ಸಂಧಾನಗಳನಂತರ ವಿರೋಧ ತಾಳಿ ಇನ್ನೂ ಕಹಿಯಾದ ಬ್ರಿಟಿಷರಿಂದ ಸಹ ಹೆಚ್ಚು ಉಪಯೋಗ ಪಡೆಯಲು ಸಿದ್ದರಿದ್ದರು. ಇನ್ನಿತರರು ಸ್ವಾರ್ಥಸಾಧನೆ ಅಥವ ಲಾಭ ಸಂಪಾದನೆಯ ಉದ್ದೇಶಗಳಿಗಾಗಿ ಅಲ್ಲದಿದ್ದರೂ ದೂರದೃಷ್ಟಿ ಇಲ್ಲದೆ ದೊಡ್ಡ ಪ್ರಶ್ನೆಗಳನ್ನೂ ಮರೆತು ಬೇರೆ ಕಾರಣಗಳಿಂದ ಸಹಕರಿಸುವ ಸಂಭವವೂ ಇತ್ತು. ಈ ಎಲ್ಲ ಸಂದರ್ಭಗಳು ನಮ್ಮನ್ನು ವಿಸ್ಮಯಗೊಳಿಸಿದವು. ಭಾರತ ದಲ್ಲಿ ಬಲಾತ್ಕಾರದಿಂದ ಬ್ರಿಟಿಷರ ನೀತಿಗೆ ಒಪ್ಪಿ ತಲೆಬಾಗಿದರೆ ಭಯಂಕರ ಪರಿಣಾಮಗಳಿಗೆ ಅವಕಾಶ ವಾಗುವುದೆಂದೂ, ಜನತೆಯ ಪೂರ್ಣ ನೈತಿಕ ಪತನ ಖಂಡಿತವೆಂದೂ ನಮಗೆ ತೋರಿತು.

ಶತ್ರುಗಳು ಪೂರ್ವ ಭಾಗದ ಕೆಲವು ಪ್ರಾಂತಗಳನ್ನು ಮುತ್ತಿಗೆ ಹಾಕಿ ಆಕ್ರಮಿಸಿದರೆ ದೇಶದ ಇತರ ಕಡೆಗಳಲ್ಲೆಲ್ಲ ಆಡಳಿತ ಯಂತ್ರ ಕುಸಿದು ಬೀಳುವುದೆಂದೂ, ಅರಾಜಕತೆ ಪ್ರಾಪ್ತವಾಗಬಹುದೆಂದೂ ಜನರಲ್ಲಿ ಭಯವಿತ್ತು. ಮಲಯ ಮತ್ತು ಬರಗಳ ಉದಾಹರಣೆ ನಮ್ಮ ಎದುರಿಗಿತ್ತು. ಯುದ್ಧ ಸನ್ನಿವೇಶವು ಶತ್ರುವಿಗೆ ಅನುಕೂಲವಿದ್ದರೂ ದೊಡ್ಡ ಪ್ರದೇಶ ಆಕ್ರಮಿಸಬಹುದೆಂದು ಯಾರೂ ಎಣಿಸಿರಲಿಲ್ಲ. ಭಾರತವು ಬಹು ವಿಶಾಲದೇಶ, ದೇಶ ವಿಸ್ತಾರದ ಉಪಯುಕ್ತತೆಯನ್ನು ಚೀನಾದ ಉದಾಹರಣೆಯಿಂದ ಅರಿತಿದ್ದೆವು. ಆದರೆ ಆ ವೈಶಾಲ್ಯವನ್ನು ಉಪಯೋಗಿಸಿಕೊಂಡು ಶತ್ರುವನ್ನು ಸದೆಬಡಿಯಬೇಕು, ಸೋತು ತಲೆಬಾಗ ಬಾರದು ಎಂಬ ಮನೋ ಸಂಕಲ್ಪ ಇದ್ದರೆ ಮಾತ್ರ ಅದರ ಪ್ರಯೋಜನ. ಪ್ರಾಯಶಃ ಮಿತ್ರ ರಾಷ್ಟ್ರಗಳ ಸೈನ್ಯಗಳು ಒಳಗೆ ಭದ್ರವಾದ ರಕ್ಷಣಾ ಸ್ಥಾನಗಳಿಗೆ ಹಿಮ್ಮೆಟ್ಟ ಶತ್ರುವಿನ ಆಕ್ರಮಣಕ್ಕೆ ದೊಡ್ಡ ಪ್ರದೇಶ ಬಿಟ್ಟುಕೊಡಬಹುದಾಗಿ ಆಧಾರ ಪೂರ್ಣ ಸುದ್ದಿಯೂ ಹರಡಿತ್ತು. ಆದರೆ ಚೀನಾದಲ್ಲಿ ಮಾಡಿದಂತೆ ಶತ್ರುವು ಆ ಎಲ್ಲ ಭಾಗ ಆಕ್ರಮಿಸದೆ ಇರುವ ಸಂಭವವೂ ಇತ್ತು. ಆದ್ದರಿಂದ ಈ ಆಕ್ರಮಿತ ಪ್ರದೇಶಗಳಲ್ಲಿ ಮತ್ತು ಆಡಳಿತ ಯಂತ್ರ ಕುಸಿದು ಬಿದ್ದ ಪ್ರದೇಶಗಳಲ್ಲಿ ನಾವು ಹೇಗೆ ವರ್ತಿಸಬೇಕೆಂಬ ಪ್ರಶ್ನೆ ಎದ್ದಿತು. ಸ್ಥಳೀಯ ಸಂಸ್ಥೆಗಳು ಆ ಪರಿಸ್ಥಿತಿಯಲ್ಲಿ ಯಾವ ರೀತಿ ವರ್ತಿಸಬೇಕು. ಜನರಲ್ಲಿ ಶಿಸ್ತನ್ನು ಹೇಗೆ ಕಾಪಾಡಬೇಕು ಮತ್ತು ಅದೇ ಕಾಲದಲ್ಲಿ ಏನೇ ಬರಲಿ ಶತ್ರುವನ್ನು ಯಾವ ರೀತಿ ಎದುರಿಸಬೇಕು ಎಂಬುದಕ್ಕೆ ನಮ್ಮ ಕೈಲಾದ ಮಾನಸಿಕ ಧೈರ್ಯವನ್ನೂ ಇತರ ಶಿಕ್ಷಣವನ್ನೂ ಒದಗಿಸಲು ಯತ್ನಿಸಿದೆವು.

ಚೀಣರು ಅನೇಕ ವರ್ಷ ಕಾಲ ಅಷ್ಟು ಧೈರ್ಯದಿಂದ ಹೋರಾಟ ನಡೆಸುತ್ತಿರುವುದರ ಗುಟ್ಟು ಏನು? ರಷ್ಯನರು, ಸೋವಿಯಟ್ ಯೂನಿಯನ್ನಿನ ಇತರ ಜನರು ಅಷ್ಟು ಸಾಹಸದಿಂದ, ಪೂರ್ಣ ಒಮ್ಮನಸ್ಸಿನಿಂದ ಹಲ್ಲುಕಚ್ಚಿ ಕಾದಾಡುತ್ತಿರುವುದರ ರಹಸ್ಯವೇನು? ಇತರ ಕಡೆಗಳಲ್ಲಿ ಸಹ ಅಸಂಖ್ಯಾತ ಜನರು ಧೈರ್ಯ ದಿಂದ ಕಾದಾಡಲು ಅವರ ದೇಶ ಪ್ರೇಮ, ಪರಾಕ್ರಮಣದ ಭಯ ಮತ್ತು ಜೀವನ ವೈಶಿಷ್ಟ ರಕ್ಷಣೆಯ ಸ್ಫೂರ್ತಿಗಳೇ ಮುಖ್ಯ ಕಾರಣಗಳಾಗಿದ್ದವು. ಆದರೂ ರಷ್ಯದ ಮತ್ತು ಇತರ ರಾಷ್ಟ್ರಗಳ ಯುದ್ಧ ಸಿದ್ಧತೆಯ ಪರಿಪೂರ್ಣತೆ ಮಟ್ಟದಲ್ಲಿ ವ್ಯತ್ಯಾಸವಿತ್ತು. ಇತರರೂ ಡಂಕರ್ಕ್ ಸಮಯದಲ್ಲಿ ಮತ್ತು ಅನಂತರ ಅನುಪಮ ಸಾಹಸದಿಂದ ಕಾದಾಡಿದ್ದರು. ಆದರೆ ಎದುರು ನಿಂತ ತಾತ್ಕಾಲಿಕ ಅಪಾಯ ದೂರವಾ ದೊಡನೆ ಒಂದು ಬಗೆಯ ನೈತಿಕ ಪತನವಾಗಿತ್ತು. ಏನೆ ಆಗಲಿ ಯುದ್ಧದಲ್ಲಿ ಜಯ ಪಡೆಯಬೇಕಾದ