ಈ ಪುಟವನ್ನು ಪ್ರಕಟಿಸಲಾಗಿದೆ
೨೬
ಭಾರತ ದರ್ಶನ

ವರೆಗೆ ದೂರದ ಮೂಲೆಯ ಹಳ್ಳಿಗಳಲ್ಲಿ ಸಹ ಅದೇ ದಿನ ಅದೇ ಸಮಯಕ್ಕೆ ಅದೇ ನಿರ್ಣಯವನ್ನು ಜನ ತಮ್ಮ ತಮ್ಮ ಪ್ರಾಂತ್ಯ ಭಾಷೆಗಳಲ್ಲಿ ಅಂಗೀಕರಿಸಿದರು. ನಿರ್ಣಯವಾದ ಹತ್ತು ದಿನಗಳಲ್ಲಿ ನಮ್ಮ ತಂದೆಯವರು ತೀರಿಕೊಂಡರು.

ನಿರ್ಣಯ ದೊಡ್ಡದಿತ್ತು: ಅದರಲ್ಲಿ ಒಂದು ಭಾಗ ಮಹಿಳೆಯರಿಗೆ ಸಂಬಂಧಿಸಿದ್ದು. “ಮಾತೃ ಭೂಮಿಯ ಕಷ್ಟ ಸಮಯದಲ್ಲಿ ತಮ್ಮ ಮನೆ ಮಠಗಳನ್ನು ತೊರೆದು ಅ ಪ್ರತಿಹತವಾದ ಧೈರ್ಯ ಮತ್ತು ಸಹನಶಕ್ತಿಯಿಂದ ಗಂಡಸರೊಂದಿಗೆ ಭುಜಕ್ಕೆ ಭುಜಕೊಟ್ಟು ಭಾರತೀಯ ರಾಷ್ಟ್ರ ಯೋಧರ ಮೊದಲ ಹೋರಾಟದಲ್ಲಿ ಮುನ್ನುಗ್ಗಿ ಹೋರಾಟದ ಜಯಾಪಜಯಗಳಲ್ಲಿ ಭಾಗಿಗಳಾದ ಮಹಿಳೆ ಯರಿಗೆ ನಮ್ಮ ಹೃತೂರ್ವಕ ಅಭಿನಂದನೆಗಳನ್ನು ಮತ್ತು ಗೌರವವನ್ನು ಅರ್ಪಿಸುತ್ತೇನೆ” ಎಂದು ಇತ್ತು.

ಈ ಉತ್ಕ್ರಾಂತಿ ಸಮಯದಲ್ಲಿ ಕಮಲ ಒಳ್ಳೆಯ ಧೈರ್ಯದಿಂದ ಪ್ರಮುಖ ಪಾತ್ರವನ್ನು ವಹಿಸಿದ್ದಳು. ನಗರದ ಎಲ್ಲ ಬಲ್ಲ ಕೆಲಸಗಾರರೂ ಸೆರೆಮನೆಯಲ್ಲಿದ್ದಾಗ ಅಲಹಾಬಾದಿನ ಎಲ್ಲ ಕೆಲಸ ಗಳ ಸಂಘಟನ ಕಾರ್ಯದ ಹೊರೆಯೂ ಅನುಭವವಿಲ್ಲದ ಆಕೆಯ ಹೆಗಲಮೇಲೆ ಬಿದ್ದಿತು. ತನ್ನ ಕೆಚ್ಚಿನಿಂದ, ಕಾರ್ಯಶಕ್ತಿಯಿಂದ ಅನುಭವದ ಕೊರತೆಯನ್ನು ನಿವಾರಿಸಿ ಅಲಹಾಬಾದಿನ ಕಣ್ಮಣಿ ಯಾದಳು.

ನಮ್ಮ ತಂದೆಯ ಕಾಹಿಲೆ ಮತ್ತು ಸಾವಿನ ಸಮಯದಲ್ಲಿ ಪುನಃ ನಾವು ಒಂದುಗೂಡಿದೆವು. ಈಗ ಸಹೋದ್ಯೋಗಿಗಳಾಗಿ, ಪರಸ್ಪರ ಪೂರ್ಣ ಸಹ ಧರ್ಮಿಗಳಾಗಿ ಒಂದು ಹೊಸ ನಿಲುವಿನಲ್ಲಿ ನಮ್ಮ ಪುನರ್ಮಿಲನವಾಯಿತು. ಕೆಲವು ತಿಂಗಳ ನಂತರ ನಮ್ಮ ಮಗಳೊಂದಿಗೆ ಸಿಂಹಳಕ್ಕೆ ಸ್ವಲ್ಪ ವಿಶ್ರಾಂತಿಗಾಗಿ- ಅದೇ ನಮ್ಮ ಕೊನೆಯ ವಿಶ್ರಾ೦ತಿಯಾಯಿತು-ಹೊರಟಾಗ ನಮಗೆ ಪರಸ್ಪರ ಪುನ ರ್ದಶ್ರನವಾದಂತೆ ತೋರಿತು. ಹಿಂದೆ ನಾವು ಒಟ್ಟಿಗೆ ಕಳೆದ ವರ್ಷಗಳೆಲ್ಲ ಈ ಹೊಸ ಆತ್ಮೀಯ ಬಾಂಧವ್ಯಕ್ಕೆ ಸಿದ್ದತೆಯಂತೆ ಕಂಡಿತು,

ನಾವು ಬಹುಬೇಗ ಹಿಂದಿರುಗಿದೆವು ; ಕೆಲಸ ಕಾದಿತ್ತು; ಸೆರೆಮನೆ ಕರೆಯುತ್ತಿತ್ತು; ವಿಶ್ರಾಂತಿ ಎಂಬುದು ಇನ್ನಿಲ್ಲ, ಕಲೆತು ಕೆಲಸ ಮಾಡಲು ಅವಕಾಶವೂ ಇಲ್ಲ, ಎರಡೆರಡು ವರ್ಷಗಳ ಎರಡು ಸೆರೆನುನೆವಾಸಗಳ ಮಧ್ಯೆ ಕೆಲವು ದಿನಗಳ ಹೊರತು ಒಟ್ಟಿಗೆ ಇರುವ ಸಂಭವವೂ ಇರಲಿಲ್ಲ. ಈ ಎರಡನೆಯ ಸೆರೆಮನೆಯ ವಾಸ ಮುಗಿಯುವ ಮುಂಚೆಯೇ ಕಮಲ ಮರಣೋನ್ಮುಖಳಾದಳು.

೧೯೩೪ ನೆಯ ಫೆಬ್ರವರಿ ತಿಂಗಳಲ್ಲಿ ಕಲ್ಕತ್ತದಿಂದ ಹೊರಟ ವಾರಂಟಿನಿಂದ ನನ್ನ ಬಂಧನ ವಾದಾಗ ನನಗೆ ಕೆಲವು ಬಟ್ಟೆಗಳನ್ನು ತರಲು ಕಮಲ ನಮ್ಮ ಕೊಠಡಿಗೆ ಹೋದಳು. ಆಕೆಯಿಂದ ಬೀಳ್ಕೊಳ್ಳಲು ಹಿಂದೆಯೇ ಹೋದೆ, ಇದ್ದಕ್ಕಿದ್ದ ಹಾಗೆ ನನ್ನನ್ನು ಬಿಗಿದಪ್ಪಿ, ಪ್ರಜ್ಞೆ ತಪ್ಪಿ ಮರ್ಧೆ ಹೋದಳು. ಆಕೆ ಈ ರೀತಿ ಎಂದೂ ಮಾಡಿರಲಿಲ್ಲ. ಸೆರೆಮನೆಗೆ ಹೋಗುವುದು ನಮಗೆ ಆಟವಾಗಿ, ಹೋಗಿತ್ತು. ಎಲ್ಲರೂ ಯಾವ ಗೊಂದಲವನ್ನೂ ಎಬ್ಬಿ ಸದೆ ಸಂತೋಷದಿಂದ ಕಳುಹಿಸಿಕೊಡು ತಿದ್ದರು, ಆದರೆ ಅದೇ ನಮ್ಮ ಕೊನೆಯ ಸಂದರ್ಶನ ಎಂದು ಆಕೆಗೆ ಏನಾದರೂ ಮುಂಬರಿವು

ಪರಸ್ಪರ ಅವಶ್ಯಕತೆ ಅತ್ಯಧಿಕವಿದ್ದಾಗ, ಆಗತಾನೆ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡಿದ್ದಾಗ ಎರಡೆರಡು ವರ್ಷಗಳ ಎರಡು ಸೆರೆಮನೆ ವಾಸಗಳುನಮ್ಮ ನಡುವೆ ಬಂದವು. ದೀರ್ಘ ಸೆರೆಮನೆ ವಾಸದಲ್ಲಿ ಇದೇ ನನ್ನ ಯೋಚನೆಯಾಗಿತ್ತು. ಆದರೂ ನಮ್ಮಿಬ್ಬರ ಪುನರ್ಮಿಲನ ಬಂದೇ ಬರುತ್ತದೆ ಎಂದು ಆಶಿಸಿದ್ದೆ. ಈ ವರ್ಷಗಳನ್ನು ಆಕೆ ಹೇಗೆ ಕಳೆದಳು ? ಊಹೆ ಮಾಡಬಲ್ಲೆ ನಾದರೂ, ತಿಳಿಯದು, ನಮ್ಮ ಸೆರೆಮನೆಯ ಭೇಟಿಗಳಲ್ಲಿ, ಅಥವ ಹೊರಗೆ ಬಂದ ಸ್ವಲ್ಪ ಕಾಲದಲ್ಲಿ ಸ್ವಾಭಾವಿಕತೆಯೇ ಇರುತ್ತಿರಲಿಲ್ಲ. ನಮ್ಮ ಸಂಕಟವನ್ನು ಇನ್ನೊಬ್ಬರಿಗೆ ತೋರಿಸಿ ಮನಸ್ಸಿಗೆ ನೋವು ಮಾಡಬಾರದೆಂದು ಯಾವಾಗಲೂ ಹಸನ್ಮುಖಿಗಳಾಗಿಯೇ ಕಾಣಿಸಿಕೊಳ್ಳುತ್ತಿದ್ದವು. ಆದರೂ ಅನೇಕ ವಿಷಯಗಳಲ್ಲಿ ಆಕೆಯ ಮನಸ್ಸಿಗೆ