ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪುನಃ ಅಹಮದ್ ನಗರದ ಕೋಟೆಯಲ್ಲಿ ಬಹುದು ಅಥವ ನಿರಾಶಾವಾದಿಗಳಾಗಿ ನೋಡಬಹುದು. ಪ್ರಪಂಚವು ನೈತಿಕ ಬಲದಿಂದ ಮುಂದುವರಿಯು ಇದೆ, ಅಂತ್ಯದಲ್ಲಿ ಸತ್ಯಕ್ಕೆ ಜಯ ಎಂದು ನಂಬಿರುವವರು ನಿರ್ಲಿಪ್ತರಾಗಿ ನೋಡುತ್ತ ನಿಲ್ಲಬಹುದು ಅಥವ ಸಹಾಯಕರಾಗಬಹುದು ಮತ್ತು ದೇವರ ಮೇಲೆ ಭಾರ ಹಾಕಬಹುದು. ಇತರರು ತಮ್ಮ ಅಶಕ್ತ ಹೆಗಲ ಮೇಲೆ ಆ ಹೊರೆ ಹೊತ್ತು ಎಲ್ಲಕ್ಕೂ ಸಿದ್ಧರಿದ್ದು ಒಳ್ಳೆಯದನ್ನೇ ಆಶಿಸುತ್ತ ಮುಂದುವರಿಯಬಹುದು. ೯. ಧರ್ಮ, ದರ್ಶನ ಮತ್ತು ವಿಜ್ಞಾನ ಹಿಂದಿನ ಸಂಪ್ರದಾಯಗಳು ಇಂದಿನ ಸಮಸ್ಯೆಗಳನ್ನು ಮುಚ್ಚದಂತೆ ಭಾರತ ಅವುಗಳ ಬಹು ಭಾಗ ವನ್ನು ತ್ಯಜಿಸಬೇಕು. ಈ ಗತಕಾಲದ ಶುಷ್ಕ ಸೌದೆಯ ಹೊರೆಯ ಭಾರದಿಂದ ನಮ್ಮ ಜೀವನ ಕುಸಿಯು ತಿದೆ. ತನ್ನ ಕಾರ್ಯ ಪೂರೈಸಿದ ನಿರ್ಜಿವ ವಸ್ತು ಎಲ್ಲ ನಾಶವಾಗಬೇಕು. ಆದರೆ ಜೀವಂತವೂ ಸತ್ವ ಪೂರ್ಣವೂ ಇರುವುದನ್ನು ಸಹ ತೊರೆಯಬೇಕೆಂದಲ್ಲ. ನಮ್ಮ ಜನಾಂಗದ ಆದರ್ಶ ಧೈಯಗಳನ್ನು, ಯುಗಯುಗಾಂತರಗಳಲ್ಲಿ ನಮ್ಮ ಜನ ಕಂಡ ದಿವ್ಯ ಕನಸುಗಳನ್ನು, ನಮ್ಮ ಆರ್ಯ ಋಷಿಗಳ ಜ್ಞಾನ ಜ್ಯೋತಿಯನ್ನು, ಅವರ ಅನ್ವೇಷಣೆ ಕುತೂಹಲ ಮತ್ತು ಮಾನಸಿಕ ಸಾಹಸಗಳನ್ನು, ಅವರ ಕಲ್ಪನಾ ವೈಖರಿಯನ್ನು, ಸಾಹಿತ್ಯ, ಕಲೆ, ಸಂಸ್ಕೃತಿಗಳಲ್ಲಿ ಅವರ ಅದ್ಭುತ ಸಾಧನೆಯನ್ನು, ಸತ್ಯ, ಸೌಂದರ್ಯ, ಮತ್ತು ಸ್ವಾತಂತ್ರದ ಅವರ ಅಪಾರ ಪ್ರೇಮವನ್ನು, ಅವರು ನಮ್ಮೆದುರು ಇಟ್ಟ ಮೂಲ ಮೌಲ್ಯಗಳನ್ನು, ಜೀವನದ ಗಾಢ ರಹಸ್ಯಗಳ ಅವರ ಜ್ಞಾನ ಸಂಪತ್ತನ್ನು, ಭಿನ್ನ ಮಾರ್ಗಾನುವರ್ತಿಗಳಲ್ಲಿ ಅವರು ತೋರಿದ ಸಹನ ಶೀಲತೆಯನ್ನು, ಭಿನ್ನ ಜನಾಂಗದವರನ್ನೂ ಅವರ ಸಂಸ್ಕೃತಿಯನ್ನೂ ತಮ್ಮದನ್ನಾಗಿ ಮಾಡಿ ಕೊಂಡು, ಜೀರ್ಣಿಸಿಕೊಂಡು, ಬೇರೊಂದು ಮಿಶ್ರ ಸಂಸ್ಕೃತಿಯನ್ನು ಸೃಜಿಸಬಲ್ಲ ಅವರ ಹೀರಿಕ ಶಕ್ತಿಯನ್ನು ಎಂದಿಗೂ ಮರೆಯುವಂತೆ ಇಲ್ಲ. ಈ ಪ್ರಾಚೀನ ಜನಾಂಗವನ್ನು ಭದ್ರವಾಗಿ ಬೆಸೆದು ಕಟ್ಟಲು ಸಹಾಯಕ ವಾಗಿ ಈಗಲೂ ನಮ್ಮ ಮನಸ್ಸಿನ ಉಪಪ್ರಜ್ಞೆಯಲ್ಲಿ ಅಡಗಿರುವ ಅನಂತ ಅನುಭವಗಳನ್ನು ಎಂದಿಗೂ ಮರೆಯಲಾರೆವು ; ಮರೆಯುವುದೂ ಇಲ್ಲ; ಆ ಪೂರ್ವಾರ್ಜಿತ ಯಶೋರಾಶಿಯಿಂದ ಹೆಮ್ಮೆ ಪಡದಿರಲು ಸಾಧ್ಯವೂ ಇಲ್ಲ. ಭಾರತ ಅದನ್ನು ಮರೆತರೆ ತಾನು ಭಾರತವಾಗಿ ಉಳಿಯುವುದಿಲ್ಲ; ಮತ್ತು ಅಂದೇ ನಮಗೊಂದು ಜೀವನ ಸೌಖ್ಯ ಮತ್ತು ಗೌರವ ಕೊಟ್ಟಿರುವುದು ಅಂದೇ ಮಣ್ಣು ಗೂಡುತ್ತದೆ. ಇದರಲ್ಲಿ ನಾವು ತ್ಯಜಿಸಬೇಕಾದುದು ಯಾವುದೂ ಇಲ್ಲ ; ಆದರೆ ತ್ಯಜಿಸಬೇಕಾದುದು ಭಾರತದ ಸೌಂದರ್ಯ ಮತ್ತು ಸಂದೇಶ ಮುಚ್ಚಿ ಮರೆಮಾಡಿರುವ ಯುಗಾಂತರಗಳ ಧೂಳು ಮತ್ತು ಕೊಳೆಯನ್ನು, ಭಾರತದ ಆತ್ಮವನ್ನು ಅದುಮಿ ಸಂಕುಚಿತ ಚೌಕಟ್ಟಿನಲ್ಲಿ ಬಂಧಿಸಿ, ಬೆಳೆವಣಿಗೆಗೆ ಅಡ್ಡ ಬಂದು ಶಿಲಾಮಯ ಮಾಡಿರುವ ದುರ್ಮಾಂಸ ಮತ್ತು ವಿಕಾರಗಳನ್ನು, ಈ ವಿಕಾರಗಳನ್ನೆಲ್ಲ ಕತ್ತರಿಸಿ ಎಸೆದು, ಆ ಪ್ರಾಚೀನ ಜ್ಞಾನ ಭಾಂಡಾರದ ತಿರುಳನ್ನು ಪುನಃ ಅರಿತುಕೊಂಡು, ಇಂದಿನ ನಮ್ಮ ಸ್ಥಿತಿಗತಿಗಳಿಗೆ ಹೊಂದಿಸಿಕೊಳ್ಳ ಬೇಕಾಗಿದೆ. ಸಾಂಪ್ರದಾಯಿಕ ಭಾವನೆ ಮತ್ತು ಜೀವನದಿಂದ ಇಂದು ಹೊರಬೀಳಬೇಕಾಗಿದೆ ; ಹಿಂದಿನ ಕಾಲದಲ್ಲಿ ಅವು ಎಷ್ಟೇ ಶ್ರೇಷ್ಠ ವಿದ್ದು ಪ್ರಯೋಜನಕಾರಿ ಇದ್ದರೂ ಇಂದು ಅವುಗಳಿಗೆ ಯಾವ ಅರ್ಥವೂ ಇಲ್ಲ. ಮಾನವ ಕುಲದ ಎಲ್ಲ ಸಾಧನೆಗಳು ನಮ್ಮದಾಗಬೇಕು ; ಪ್ರಗತಿ ಪರ ಮಾನವ ಸಾಹಸ ಕಾರ್ಯ ಗಳಿಗಿಂತ ಇಂದಿನವು ಹೆಚ್ಚು ಉತ್ಕೃಷ್ಟವೆಂದೂ ಹಳೆಯ ವಿಭಜನೆ ಅಥವ ರಾಷ್ಟ್ರೀಯ ಮೇರೆಗಳು ಇಂದು ನಿರುಪಯುಕ್ತವೆಂದೂ, ಪ್ರಪಂಚದಲ್ಲಿ ಮಾನವ ಕುಲಕ್ಕೆಲ್ಲ ಒಂದೇ ಮೇರೆ ಎಂದೂ ಅರಿಯಬೇಕು. ಜೀವನಕ್ಕೊಂದು ಅರ್ಥ ಕೊಡುವ ಸತ್ಯ, ಸೌಂದರ್ಯ ಮತ್ತು ಸ್ವಾತಂತ್ರದ ಹಿರಿಯಾಸೆಯನ್ನು ಪುನರು ಜೀವಿಸಬೇಕು ; ಮತ್ತು ಭದ್ರವೂ, ಚಿರಕಾಲ ಬಾಳತಕ್ಕದ್ದೂ ಆದ ಈ ತಳಹದಿಯ ಮೇಲೆ ಯುಗಾಂತರ ಗಳಲ್ಲಿ ನಮ್ಮ ಭವ್ಯ ಸುಂದರ ಭವನ ನಿರ್ಮಾಣಕ್ಕೆ ಕಾರಣವಾಗಿ ನಮ್ಮ ಜನತೆಯ ವೈಶಿಷ್ಟವಾದ ಉಜ್ವಲ ಕಾರ್ಯೊತ್ಸಾಹ ಮತ್ತು ಪ್ರೇಮವನ್ನು ಪುನಃ ಬೆಳೆಸಬೇಕು. ಮಾನವ ಕುಲದ ಇತಿಹಾಸ ಮತ್ತು ಸಾಹಸದ ಮುಂಬೆಳಗಿನವರೆಗೆ ಹೋಗುವ ಇತಿಹಾಸ ಪರಂಪರೆ ಇರುವ ಪ್ರಾಚೀನ ಜನಾಂಗ ನಾವು ಆಗಿದ್ದರೂ ಇಂದಿನ ಕಾಲಗತಿಗನುಗುಣವಾಗಿ ಪುನಃ ನಾವು ಯೌವನ ಪಡೆಯಬೇಕಾಗಿದೆ. ನಮ್ಮ ಭವಿಷ್ಯ