ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

قاب ಭಾರತ ದರ್ಶನ ದಲ್ಲಿ ಅಚಲ ವಿಶ್ವಾಸವನ್ನೂ, ಇಂದು ಮತ್ತೊಮ್ಮೆ ಅದುಮಲಾಗದ ಯೌವನ ಸಾಹಸ ಮತ್ತು ಸಂತೋಷ ವನ್ನೂ ತಾಳಬೇಕಾಗಿದೆ. ಅಂತಿಮ ಸತ್ಯ ಒಂದು ಇದೆಯಾದರೆ ಆ ಸತ್ಯ ಶಾಶ್ವತವೂ, ನಾಶರಹಿತವೂ, ಅಪರಿವರ್ತಿತವೂ ಇರ ಬೇಕು. ಆದರೆ ಆ ಅನಂತ, ಶಾಶ್ವತ, ಅಪರಿವರ್ತಿತ ಸತ್ಯವು ಮಾನವನ ಪರಿಮಿತ ಮನಸ್ಸಿಗೆ ಪೂರ್ಣ ಗೋಚರವಾಗುವುದು ಕಷ್ಟ ; ಕಾಲದೇಶಗಳ ಮಿತಿಗೆ ಅನುಗುಣವಾಗಿ, ಆ ಮನಸ್ಸಿನ ಪರಿಪಕ್ವತೆಯ ಮಟ್ಟಕ್ಕನುಗುಣವಾಗಿ ಮತ್ತು ಪ್ರಚಲಿತ ಯುಗ ಧರ್ಮಕ್ಕನುಗುಣವಾಗಿ ಎಲ್ಲೋ ಅದರ ಒಂದು ಅಲ್ಪ ಭಾಗ ಮಾತ್ರ ಗೋಚರವಾಗಬಹುದು, ಮನಸ್ಸು ವಿಕಾರಗೊಂಡು ಸೀಮೋಲ್ಲಂಘನ ಮಾಡುತ್ತ ಹೋದಂತೆ, ಭಾವನೆಗಳು ಬದಲಾಯಿಸಿ ಹೊಸ ಪ್ರತೀಕಗಳಿಂದ ಅದೇ ಸತ್ಯ ಕಾಣುತ್ತ ಬಂದಂತೆ ಒಳಗಿನ ತಿರುಳು ಅದೇ ಇದ್ದರೂ ಅದರ ಹೊಸ ನೋಟ ಕಣ್ಣಿಗೆ ಗೋಚರವಾಗುತ್ತದೆ. ಈ ರೀತಿ ಸತ್ಯಾನ್ವೇಷಣೆ, ಅದರ ಪುನರುಜೀವನ, ಪ್ರದರ್ಶನ ಮತ್ತು ಪುಷ್ಟಿಕರಣ ಪಡೆಯುತ್ತಲೇ ಇರಬೇಕು ; ಆಗ ಮಾತ್ರ ನಿಜವಾದ ಸತ್ಯ ಮಾನವ ಕಲ್ಪನೆಗೆ ಸಾಧ್ಯವಾಗಿ ಮಾನವನ ಜೀವನ ಮತ್ತು ಭಾವನಾ ಪ್ರಗತಿಗಳ ಜೊತೆಗೆ ಓಡಬಲ್ಲುದು. ಆಗ ಮಾತ್ರ ಮಾನವ ಕುಲದ ಹಸಿವನ್ನು ನಿವಾರಿಸುತ್ತ, ಇಂದಿನ ಮತ್ತು ಮುಂದಿನ ಬಾಳಿಗೆ ಮಾರ್ಗದರ್ಶಿಯಾಗಿ ಮಾನವ ಕುಲಕ್ಕೆ ಅದು ಜೀವಂತ ಸತ್ಯವಾಗುತ್ತದೆ. ಆದರೆ ಪ್ರಾಚೀನ ಕಾಲದ ಉದ್ಧತ ತತ್ತ್ವದಿಂದ ಸತ್ಯದ ಯಾವುದಾದರೂ ಒಂದು ಮುಖ ನಿಸ್ಸತ್ವ ವಾಗಿ ಜಡವಾದರೆ ಅದರ ಪ್ರಗತಿ ನಿಂತು ಹೋಗುತ್ತದೆ ಮತ್ತು ಪರಿವರ್ತನಗೊಳ್ಳುತ್ತಿರುವ ಮಾನವನ ಆವಶ್ಯಕತೆಗಳಿಗೆ ಹೊಂದಿಕೊಳ್ಳಲಾರದೆ ಅದರ ವಿಚಾರ ನಿಂತು ಹೋಗುತ್ತದೆ. ಅದರ ಇತರ ಮುಖಗಳೂ ಮರೆಯಾಗಿ ಮುಂದಿನ ಯುಗಗಳ ಸಮಸ್ಯೆಗಳನ್ನು ಬಿಡಿಸಲು ಅಶಕ್ತವಾಗುತ್ತದೆ. ಅದರ ಕಾರ್ ಪಟುತ್ವ ಅಡಗಿ ಹೋಗಿ ಅದು ನಿಕ್ಷೇತನವಾಗುತ್ತದೆ; ಅದರ ಜೀವಕಾರ ಶಕ್ತಿ ನಾಶವಾಗಿ, ಜಡಭಾವನೆ, ಮತ್ತು ಬಾಹ್ಯ ಶೃಂಗಾರದ ಆಡಂಬರ ಬೆಳೆಯುತ್ತವೆ, ಆಗ ಮನೋವಿಕಾಸಕ್ಕೆ ಮತ್ತು ಮಾನವ ಕುಲದ ಪ್ರಗತಿಗೆ ಅಡ್ಡಿಯಾಗುತ್ತದೆ. ಹಿಂದಿನ ಕಾಲದ ಅದರ ಬೆಳೆವಣಿಗೆ, ಅಲಂಕಾರ ಮತ್ತು ಅದರ ಸಂಕೇತವನ್ನು ಹಿಂದಿನವರು ಅರ್ಥಮಾಡಿಕೊಂಡಷ್ಟು ಸಹ ಪ್ರಾಯಶಃ ನಾವು ಈಗ ಅರ್ಥಮಾಡಿಕೊಂಡು ಇಲ್ಲ, ಏಕೆಂದರೆ ಮುಂದಿನ ಯುಗದ ಸಂದರ್ಭವೇ ಹೊರೆಯಾಗುತ್ತ; ಅದರ ಮಾನಸಿಕ ಪರಿಸ್ಥಿತಿಯೇ ಬೇರೆ ಇರುತ್ತದೆ ; ಸಮಾಜದಲ್ಲಿ ಅಭ್ಯಾಸಗಳು ಸಂಪ್ರದಾಯಗಳು ಬೆಳೆದಿರುತ್ತವೆ ; ಆದ್ದರಿಂದ ಪ್ರಾಚೀನ ಸಾಹಿತ್ಯದ ಭಾವನೆ ಮತ್ತು ಗೂಢಾರ್ಥ ಅರ್ಥ ಮಾಡಿಕೊಳ್ಳುವುದು ಸಹ ಕಷ್ಟ. ಇದೂ ಅಲ್ಲದೆ ಅರವಿಂದರು ಹೇಳಿರುವಂತೆ ಪ್ರತಿಯೊಂದು ಸತ್ಯವೂ ತನ್ನ ಪಾಡಿಗೆ ತಾನು ಸತ್ಯವಾದರೂ ಅದಕ್ಕೊಂದು ಪೂರ್ಣತೆ ಕೊಡುವ ಸುತ್ತಲಿನ ಇತರ ಸತ್ಯಗಳಿಂದ ಬೇರ್ಪಡಿಸಿದರೆ ಆಗ ಅದು ನಮ್ಮ ಧೀಶಕ್ತಿಯನ್ನೇ ಹಿಸುಕುವ ಉರುಲಾಗುತ್ತದೆ ; ಮತ್ತು ನಮ್ಮನ್ನು ಅಡ್ಡದಾರಿಗೆಳೆಯುವ ಒಂದು ಶುಷ್ಕ ತತ್ತ್ವವಾಗುತ್ತದೆ; ಏಕೆಂದರೆ, ಪ್ರತಿಯೊಂದೂ ನೆಯ್ದೆ ಯ ಹಾಸುಹೊಕ್ಕಿನ ಒಂದೊಂದು ಎಳೆಯಂತೆ, ನೆಯ್ದೆ ಯ ಯಾವ ಒಂದು ಎಳೆಯನ್ನೂ ಪ್ರತ್ಯೇಕಿಸಿ ಇದೇ ಸತ್ಯವೆಂದು ಹೇಳಲು ಸಾಧ್ಯವಿಲ್ಲ. ಮಾನವನ ಪ್ರಗತಿಗೆ ಧರ್ಮಗಳು ಬಹಳ ಸಹಾಯಕವಾಗಿವೆ. ಮಾನವನ ಜೀವನಕ್ಕೆ ಕೆಲವು ಮೌಲ್ಯಗಳನ್ನೂ ಆದರ್ಶಗಳನ್ನೂ ಕೊಟ್ಟು, ಮಾನವ ಜೀವನದ ಮಾರ್ಗಾನುಸರಣೆಗಾಗಿ ಕೆಲವು ತತ್ರ್ಯ ಗಳನ್ನು ಹಾಕಿಕೊಟ್ಟಿವೆ. ಇಷ್ಟು ಶ್ರೇಷ್ಠ ಉಪಕಾರ ಮಾಡಿದಾಗ್ಯೂ ಅವು ಜಡ ತತ್ತ್ವಗಳಿಂದ, ಸಂಕು ಚಿತ ಆಯಕಟ್ಟುಗಳಿಂದ ಸತ್ಯವನ್ನು ಸಾಧಿಸಲು ಯತ್ನಿಸಿವೆ. ಬಹುಬೇಗ ತಮ್ಮ ಮೂಲ ಅರ್ಥ ಕಳೆದ್ದು ಕೊಂಡು ಸಾಂಪ್ರದಾಯಕ ಕರ್ಮಾಚರಣೆಗಳು ಮತ್ತು ಶಿಷ್ಟಾಚಾರಗಳಿಗೆ ಪ್ರೋತ್ಸಾಹಕೊಟ್ಟಿವೆ. ಮಾನ ವನ ಸುತ್ತಲೂ ಕವಿದು ಇರುವ ಅವ್ಯಕ್ತದ ಘೋರ ರಹಸ್ಯದ ಕಲ್ಪನೆ ಮಾನವನ ಮನಸ್ಸಿನ ಮೇಲೆ ನಾಟು ವಂತ ಮಾಡಿದೆಯೇ ಹೊರತು ಆ ಅವ್ಯಕ್ತ ಅರ್ಥ ಮಾಡಿಕೊಳ್ಳಲು ಮಾಡಿದ ಮಾನವ ಪ್ರಯತ್ನಕ್ಕೆ ಅಡಿ ಬಂದವು. ಅಲ್ಲದೆ ಸಾಮಾಜಿಕ ಪ್ರಗತಿಗೂ ಅಡ್ಡ ಬಂದವು. ಭಾವನಾ ಸ್ವಾತಂತ್ರ್ಯ ಮತ್ತು ಉತ್ಸಾಹಕ್ಕೆ ಪ್ರೋತ್ಸಾಹಕೊಡುವ ಬದಲು ಪ್ರಕೃತಿಗೆ, ಪ್ರತಿಷ್ಠಿತ ಮಠಗಳಿಗೆ, ಪ್ರಚಲಿತ ಸಮಾಜದ ಚೌಕಟ್ಟಿಗೆ, ಪ್ರತಿ