ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪುನಃ ಅಹಮದ್ ನಗರದ ಕೋಟೆಯಲ್ಲಿ ೪೬೫ ಅವಲಂಬಿಸಿವೆ. ಅಲ್ಲದೆ ಈ ಮಾರ್ಗವನ್ನು ಜೀವನದ ಎಲ್ಲ ವಿಷಯಗಳಿಗೆ, ಬುದ್ಧಿ ಶಕ್ತಿಯಿಂದ ವಿಚಾರ ಮಾಡಿ ತಿಳಿದುಕೊಳ್ಳಬಹುದಾದ ವಿಷಯಗಳಿಗೆ ಸಹ ಅನ್ವಯಿಸುತ್ತದೆ. ವ್ಯವಸ್ಥಿತ ಧರವು ದೇವತಾ ಶಾಸ್ತ್ರದೊಂದಿಗೆ ಸೇರಿಕೊಂಡು ಧಮ್ಮ ವಿಚಾರಗಳಿಗಿಂತ ಹೆಚ್ಚಾಗಿ ಹಕ್ಕುದಾರಿ ರಕ್ಷಣೆಯನ್ನೇ ಮುಖ್ಯ ಮಾಡಿ ಕೊಂಡು ವಿಜ್ಞಾನಕ್ಕಿಂತ ಒಂದು ತೀರ ಭಿನ್ನ ಮನೋಭಾವ ಉಂಟುಮಾಡುತ್ತದೆ, ಸಂಕುಚಿತ ದೃಷ್ಟಿ, ಅಸಹನೆ, ಅಂಧಶ್ರದ್ಧೆ ಮತ್ತು ಮೂಢಕಲ್ಪನೆ, ಭಾವಪರವಶತೆ ಮತ್ತು ತರ್ಕಶೂನ್ಯತೆಗಳಿಗೆ ಅವಕಾಶ ಕೊಡುತ್ತದೆ. ಮಾನವನ ಮನಸ್ಸಿಗೆ ಒಂದು ಬಂಧನ ಬಿಗಿದು ನಿಶ್ಚತನಗೊಳಿಸಿ ಅಸ್ವತಂತ್ರ ದಾಸ್ಯ ಮನೋಭಾವಕ್ಕೆ ಅವಕಾಶ ಕೊಡುತ್ತದೆ. “ ದೇವರು ಇಲ್ಲದಿದ್ದರೂ ಆತನನ್ನು ಸೃಷ್ಟಿಸುವುದು ಅವಶ್ಯಕ” ಎಂದು ವೋಲ್ವೇರ್‌ ಹೇಳಿದ್ದು ಅದು ನಿಜವೆಂದು ತೋರುತ್ತದೆ. ಮಾನವನ ಮನಸ್ಸು ಬೆಳೆದಂತೆಲ್ಲ ಆಬಗೆಯ ಒಂದು ಮನೋಚಿತ್ರ ಅಥವ ವಿಗ್ರಹ ಕಲ್ಪಿಸಲು ಸದಾ ಯತ್ನ ಮಾಡಿದರೆ ಅದರ ವಿರೋಧ ಪ್ರಮೇಯದಲ್ಲ ಒಂದು ಸತ್ಯವಿದೆ. ದೇವರು ಇದ್ದರೂ ಸಹ ಆತನನ್ನೇ ಅವಲಂಬಿಸುವುದು, ಶರಣು ಹೋಗುವುದು ಒಳ್ಳೆಯದಲ್ಲ. ನೈಸರ್ಗಾ ತಿರಿಕ್ತ ಶಕ್ತಿಗಳನ್ನೇ ಸದಾ ನಂಬುವುದರಿಂದ ಮಾನವನ ಆತ್ಮಾವಲಂಬನ ಶಕ್ತಿ ನಾಶವಾಗುತ್ತದೆ ; ನಾಶ ವಾಗಿಯೂ ಇದೆ. ಅಲ್ಲದೆ ಆತನ ಆತ್ಮಶಕ್ತಿಯೂ, ಉತ್ಪಾದಕ ಶಕ್ತಿಯೂ ಕಡಮೆಯಾಗುತ್ತವೆ. ಆದರೂ ನಮ್ಮ ಭೌತಪ್ರಪಂಚದಾಚೆಯ ಆಧ್ಯಾತ್ಮಿಕ ವಿಷಯಗಳಲ್ಲಿ ಒಂದು ಬಗೆಯ ಶ್ರದ್ದೆ ಅತ್ಯಾವಶ್ಯಕ ತೋರು ಇದೆ; ಯಾವುದೋ ನೈತಿಕ ಆದರ್ಶದಲ್ಲಿ ಶ್ರದ್ದೆ ಅವಶ್ಯವೆಂದು ತೋರುತ್ತದೆ. ಅದಿಲ್ಲದಿದ್ದರೆ ಬಂಗರಿಲ್ಲದ ನಾವೆಯಂತೆ ನಮ್ಮ ಜೀವನಕ್ಕೂ ಯಾವ ಒಂದು ಗುರಿ ಅಥವ ಧೈಯ ಇಲ್ಲವಾಗುತ್ತದೆ. ದೇಶದಲ್ಲಿ ನಮಗೆ ನಂಬಿಕೆ ಇರಲಿ ಇಲ್ಲದಿರಲಿ, ಏನನ್ನಾದರೂ ನಂಬದೆ ಇರಲು ಅಸಾಧ್ಯ ; ಅದನ್ನು ಜೀವದಾಯಕ ಸೃಷ್ಟಿ ಶಕ್ತಿ ಎಂದು ಕರೆಯಲಿ, ಭೌತವಸ್ತುವಿಗೆ ಚಲನೆ, ಪರಿವರ್ತನ ಮತ್ತು ವಿಕಾಸನ ಶಕ್ತಿಗಳನ್ನು ಕೊಡುವ ಅಂತರ್ಗತ ಜೀವನ ಶಕ್ತಿ ಎಂದು ಕರೆಯಲಿ ಅಥವ ಬೇರೆ ಯಾವ ಹೆಸರಿನಿಂದೇ ಕರೆಯಲಿ ಸಾವಿನೆದುರು ಜೀವನ ಸತ್ಯವಿರುವಂತೆ ಅದು ನಮಗೆ ಎಷ್ಟೇ ಅಗ್ರಾಹ್ಯವಿರಲಿ ಅದು ಮಾತ್ರ ಸತ್ಯ. ತಿಳಿದೋ ತಿಳಿಯದೆಯೋ ನಮ್ಮಲ್ಲಿ ಅನೇಕರು ನಮ್ಮ ಜ್ಞಾನಕ್ಕೆ ನಿಲುಕದ ಯಾವುದೋ ಒಬ್ಬ ದೇವನ ಅಗೋಚರ ಪವಿತ್ರ ಪಾದಾರವಿಂದಗಳಲ್ಲಿ ಪೂಜೆ ಸಲ್ಲಿಸುತ್ತಿದೇವೆ, ಯಜ್ಞಸಲ್ಲಿಸುತ್ತಿದ್ದೇವೆ. ಆ ಯಜ್ಞವು ಯಾವುದೋ ಒಂದು ಆದರ್ಶಕ್ಕಾಗಿರಬಹುದು, ವೈಯಕ್ತಿಕವಿರಬಹುದು, ರಾಷ್ಟ್ರೀಯವಿರಬಹುದು ಅಥವ ಅಂತರ ರಾಷ್ಟ್ರೀಯವಿರಬಹುದು; ಯಾವುದೋ ಒಂದು ದೂರದ ಧೈಯ ನಮ್ಮನ್ನು ಸೆಳೆಯುತ್ತಿದೆ; ಅದರಲ್ಲಿ ತರ್ಕಕ್ಕೆ ಎಡೆ ಇಲ್ಲದಿರಬಹುದು, ಆದರೂ ಶ್ರೇಷ್ಠ ಮಾನವ ಜೀವನದ ಮತ್ತು ಉತ್ತಮ ಪ್ರಪಂಚದ ಅದೃಷ್ಟ ಕಲ್ಪನೆ ಅದರಲ್ಲಿ ಅಡಗಿದೆ. ಪೂರ್ಣತೆ ಪಡೆಯಲು ಅಸಾಧ್ಯವಿರಬಹುದು ; ಆದರೂ ನಮ್ಮಲ್ಲಿ ಅಡಗಿರುವ ಯಾವುದೋ ಒಂದು ಅದ್ಭುತ ಶಕ್ತಿ, ಯಾವುದೋ ಜೀವನ ಶಕ್ತಿ ನಮ್ಮನ್ನು ಮುನ್ನೂ ಕು ತಲೇ ಇದೆ, ಪೀಳಿಗೆಯಿಂದ ಪೀಳಿಗೆಗೆ ಅದೇ ಮಾರ್ಗದಲ್ಲಿ ನಡೆಯುತ್ತಿದೇವೆ. ಜ್ಞಾನ ಭಾಂಡಾರ ವಿಶಾಲಗೊಂಡಂತೆ ಸಂಕುಚಿತ ದೃಷ್ಟಿಯ ಧರದ ಹಿಡಿತ ಸಡಿಲವಾಗುತ್ತದೆ. ಪ್ರಕೃತಿ ಮತ್ತು ಜೀವನ ಹೆಚ್ಚು ಹೆಚ್ಚು ಅರ್ಥವಾದಂತೆ ಪರಶಕ್ತಿಗಳ ಮೇಲಿನ ಅವಲಂಬನೆ ಕಡಮೆ ಯಾಗುತ್ತದೆ. ಅರ್ಥ ನಮ್ಮ ಅಂಕೆಯಲ್ಲಿ ಇರಬಹುದಾದ ವಿಷಯಗಳ ರಹಸ್ಯವೆಲ್ಲ ಬಯಲಾಗುತ್ತದೆ. ವ್ಯವಸಾಯ ಕ್ರಮಗಳು, ನಾವು ತಿನ್ನುವ ಆಹಾರ, ಉಡುವ ಬಟ್ಟೆ, ಸಾಮಾಜಿಕ ವ್ಯವಹಾರ ಎಲ್ಲವೂ ಒಂದಾನೊಂದು ಕಾಲದಲ್ಲಿ ಧಮ್ಮ ಮತ್ತು ಧರಗುರುಗಳ ನಿರ್ಬಂಧಕ್ಕೆ ಒಳಗಾಗಿದ್ದವು. ಕ್ರಮೇಣ ಅವೆಲ್ಲ ಅವರ ಕೈತಪ್ಪಿ ಈಗ ವಿಜ್ಞಾನ ಸಂಶೋಧನೆಯ ವಿಷಯಗಳಾಗಿವೆ. ಆದರೂ ಈಗಲೂ ಈ ಎಷ್ಟೋ ಕೆಲಸಗಳು ಧರ ಶ್ರದ್ಧೆ ಮತ್ತು ಅದರ ಜೊತೆ ಬರುವ ಕುರುಡು ನಂಬಿಕೆಗಳ ಬಲವತ್ತರ ಪ್ರಭಾವಕ್ಕೆ ಒಳಗಾಗಿವೆ. ಅಂತಿಮ ರಹಸ್ಯವು ಮಾನವನ ಮನಸ್ಸಿನ ಹಿಡಿತಕ್ಕೆ ಸಿಲುಕದೆ ಬಹುದೂರ ಇರುವಂತೆ ಇದೆ ; ಸಧ್ಯ ಸಿಲುಕುವಂತೆಯೂ ತೋರುವುದಿಲ್ಲ. ಜೀವನದ ಅನೇಕ ರಹಸ್ಯ ಸಮಸ್ಯೆಗಳ ಪರಿಹಾರ ಸುಲಭವಾದರೂ ಇನ್ನೂ ಪರಿಹಾರವಾಗಿಲ್ಲ. ಅವುಗಳ ಪರಿಹಾರದಲ್ಲಿ ತೊಡಗುವುದರ ಬದಲು ಅಂತ್ಯ ರಹಸ್ಯದ 36