________________
೪೩೪ ಭಾರತ ದರ್ಶನ ನಿಮಿತ್ತ ಹೋಗಲು ಸಾಧ್ಯವಿಲ್ಲವೆಂದು ತೋರುತ್ತದೆ. ತನ್ನ ನಿಲುವಿಗೆ ನಿಲುಕದ ಇನ್ನೂ ಅನೇಕ ವಿಷಯ ಗಳು ಇವೆ ಎಂದು ಅರಿತುಕೊಳ್ಳುವುದೇ ದರ್ಶನ ಶಾಸ್ತ್ರದ ಕೊನೆಯ ಹಂತ; ಅಷ್ಟು ದೂರ ಅದು ಹೋಗ ಲಾರದಾದರೆ ಅದು ಸತ್ವಶೂನ್ಯ” ಎಂದು ಪ್ಯಾಸ್ಕಲ್ ಹೇಳುತ್ತಾನೆ. - ದರ್ಶನ ಮತ್ತು ವಿಜ್ಞಾನ ಮಾರ್ಗಗಳ ಈ ಮಿತಿ ನಾವು ಅರಿತೂ ಸಹ ಅವುಗಳಿಗೆ ಬಲವಾಗಿ ಅಂಟ ಕೊಳ್ಳಬೇಕಾಗಿದೆ. ಏಕೆಂದರೆ ಆ ಭದ್ರ ತಳಹದಿ ಮತ್ತು ಹಿನ್ನೆಲೆ ಇಲ್ಲದೆ ಸತ್ಯ ಅಥವ ನೈಜಭಯ ಯಾವ ಬಗೆಯ ಹಿಡಿತವೂ ನಮಗೆ ದೊರೆಯುವುದಿಲ್ಲ. ಯಾವ ಸತ್ಯವನ್ನೂ ಅರ್ಥಮಾಡಿಕೊಳ್ಳದೆ ಜೀವನದ ರಹಸ್ಯ ಅರಿತುಕೊಳ್ಳಲು ವ್ಯರ್ಥ ಪ್ರಯತ್ನ ಪಟ್ಟು ಅಸಹಾಯರಾಗಿ ಕುಸಿದು ಬೀಳುವ ಬದಲು ಸತ್ಯದ ಅಲ್ಪ ಭಾಗ ಆದರೂ ಅರಿತು ಅದನ್ನು ನಮ್ಮ ಜೀವನಕ್ಕೆ ಅನ್ವಯಿಸಿಕೊಳ್ಳುವುದು ಉತ್ತಮ. ಈ ಕಾಲ ದಲ್ಲಿ ಯಾವ ದೇಶ ಅಥವ ಜನಾಂಗವಾಗಲಿ ವಿಜ್ಞಾನ ಸಂಶೋಧನೆಗಳಿಂದ ಮತ್ತು ಪ್ರಯೋಗಗಳಿಂದ ದೂರವಿರಲು ಸಾಧ್ಯವಿಲ್ಲ. ಆದರೆ ಕೇವಲ ವೈಜ್ಞಾನಿಕ ಪ್ರಯೋಗಗಳ ಉಪಯೋಗ ಮಾತ್ರ ಸಾಲದು. ಸಾಹಸಯುಕ್ತ ವಿಜ್ಞಾನದ ವಿಮರ್ಶಾತ್ಮಕ ದೃಷ್ಟಿ, ಸತ್ಯ ಮತ್ತು ಹೊಸ ಜ್ಞಾನದ ಅನ್ವೇಷಣೆ, ಪ್ರಯೋಗ ಮಾಡಿ ಒರೆಗೆ ಹಚ್ಚದೆ ಏನನ್ನೂ ಒಪ್ಪಲಾಗದೆಂಬ ದೃಷ್ಟಿ, ಹೊಸ ಸಾಕ್ಷ ದೊರೆತಂತೆ ಹಿಂದಿನ ಸಿದ್ದಾಂತ ತ್ಯಜಿಸಲು ಸದಾ ಸಿದ್ಧತೆ, ಪೂರ್ವ ಸಿದ್ದಾಂತವನ್ನೇ ನಂಬದೆ ಪ್ರತ್ಯಕ್ಷ ಪ್ರಾಯೋಗಿಕ ಸಾಕ್ಷದ ಆಧಾರದಲ್ಲಿ ವಿಶ್ವಾಸ, ಕಠಿಣ ಮಾನಸಿಕ ಶಿಕ್ಷಣ-ಈ ಎಲ್ಲ ವೈಜ್ಞಾನಿಕ ಪ್ರದೇಶಗಳು ವೈಜ್ಞಾನಿಕ ಸಂಶೋಧನೆಗಳ ಉಪಯೋಗಕ್ಕೆ ಮಾತ್ರವಲ್ಲದೆ ನಮ್ಮ ಜೀವನಕ್ಕೂ ಮತ್ತು ಜೀವನದ ಅನೇಕ ಸಮಸ್ಯೆಗಳ ಪರಿಹಾರಕ್ಕೂ ಅತ್ಯವಶ್ಯಕ ಇವೆ. ಆದರೆ ವಿಜ್ಞಾನದ ಶ್ರೇಷ್ಠ ಆರಾಧಕರಾದ ಇಂದಿನ ಅನೇಕ ಪ್ರಸಿದ್ದ ವಿಜ್ಞಾನಿಗಳು ತಮ್ಮ ಅಲ್ಪ ವಿಜ್ಞಾನ ವಿಭಾಗದ ಆಚೆ ವಿಶಾಲಪ್ರಪಂಚ ಒಂದು ಇದೆ ಎನ್ನುವುದನ್ನು ಮರೆತಿದ್ದಾರೆ. ವೈಜ್ಞಾನಿಕ ಪ್ರವೇಶ ಮತ್ತು ಮಾರ್ಗಗಳು ಮಾನವ ಜೀವನದ ಗತಿಯೊಂದಿಗೆ ನಡೆಯಬೇಕು, ವಿಚಾರ ವಿನಿ ಮಯದ ಮಾರ್ಗವಾಗಬೇಕು; ಮಾನವ ಕುಲದ ಪರಸ್ಪರ ನಡೆನುಡಿಯ ಮತ್ತು ಸಹಕಾರದ ಮಾರ್ಗವಾಗ ಬೇಕು. ಆದರೆ ಇದು ಬಹು ದೊಡ್ಡ ಆಜ್ಞೆ. ಅದರಲ್ಲೂ, ಬಹು ಸ್ವಲ್ಪ ಜನರಿಗೆ ಅರೆಬರೆ ಆ ರೀತಿ ವರ್ತಿಸಲು ಸಾಧ್ಯವಾದೀತು. ಆದರೆ ದರ್ಶನ ಶಾಸ್ತ್ರ ಮತ್ತು ಧರಗಳು ನಮ್ಮ ಮೇಲೆ ವಿಧಿಸಿರುವ ಎಲ್ಲ ನಿರ್ಬಂಧಗಳನ್ನು ಈ ವಿಮರ್ಶೆಯ ಒರೆಗಲ್ಲಿಗೆ ಹಚ್ಚುವುದು ಅವಶ್ಯವಿದೆ. ಮಾನವನ ಪ್ರಗತಿಮಾರ್ಗ ವನ್ನು ವೈಜ್ಞಾನಿಕ ಭಾವನೆ ತೋರಿಸಿ ಕೊಡುತ್ತದೆ. ಅದು ಸ್ವತಂತ್ರ ಜೀವಿಯ ಭಾವನೆ. ನಾವು ವೈಜ್ಞಾ ನಿಕ ಯುಗದಲ್ಲಿದ್ದೇವೆ ಎಂದು ಎಲ್ಲರೂ ಹೇಳುತ್ತಿದ್ದೇವೆ. ಆದರೆ ಆ ದೃಷ್ಟಿ ತಮ್ಮ ನಾಯಕ ವರ್ಗದಲ್ಲಾ ಗಲಿ, ಬೇರೆ ಜನರಲ್ಲಾಗಲಿ ಎಲ್ಲೂ ಕಾಣುವುದಿಲ್ಲ. ವಿಜ್ಞಾನದ ವ್ಯವಹಾರವೆಲ್ಲ ವಾಸ್ತವಿಕ ಜ್ಞಾನ ಪ್ರಪಂಚದಲ್ಲಿ ; ಆದರೆ ಅದರಿಂದ ದೊರೆಯುವ ಮನೋಪರಿಪಾಕವು ಈ ಮೇರೆ ಮಾರಿ ಹೋಗುತ್ತದೆ. ಜ್ಞಾನಸಂಪಾದನೆ, ಸತ್ಯದ ಸಾಕ್ಷಾತ್ಕಾರ, ಸದ್ಗುಣ ಮತ್ತು ಸೌಂದರ್ಯದ ಉಪಾಸನೆ ಮಾನವನ ಅಂತಿಮ ಧೈಯಗಳಾಗಿರಬೇಕು. ವಿಜ್ಞಾನ ಮಾರ್ಗದ ವಾಸ್ತವಿಕ ವಿಚಾರ ಸರಣಿ ಇವು ಯಾವುದಕ್ಕೂ ಅನ್ವಯಿಸುವುದಿಲ್ಲ. ಜೀವನದ ಅನೇಕ ಬಹು ಮುಖ್ಯ ವಿಷಯಗಳು ಅದರ ಪರಿಮಿತಿಯ ಆಚೆ ಇವೆ. ಕಲೆ ಮತ್ತು ಕಾವ್ಯ ಪ್ರೇಮ, ಸೌಂದರ್ಯಾನುಭವದಿಂದ ಒದಗುವ ಭಾವಪರವಶತೆ, ಸಾತ್ವಿಕ ಜೀವನದಿಂದೊದಗುವ ಆತ್ಮತೃಪ್ತಿ ಇವೆಲ್ಲ ವಿಜ್ಞಾನ ಮಾರ್ಗಕೆ ಎಟುಕದವು. ಸಸ್ಯ ಶಾಸ್ತ್ರಜ್ಞನಾಗಲಿ, ಪ್ರಾಣಿಶಾಸ್ತ್ರಜ್ಞನಾಗಲಿ ಪ್ರಕೃತಿಯ ಸೌಂದರ್ಯ ಮತ್ತು ಸೊಬ್ಬ ಗನ್ನು ಎಂದಿಗೂ ಅನುಭವಿಸದಿರಬಹುದು ; ಸಮಾಜ ಶಾಸ್ತ್ರಜ್ಞನಲ್ಲಿ ಮಾನವ ಪ್ರೇಮ ಸ್ವಲ್ಪವೂ ಇಲ್ಲದಿರ ಬಹುದು, ಆದರೆ ವಿಜ್ಞಾನ ಮಾರ್ಗಕ್ಕೆ ಎಟುಕದ ಈ ಪ್ರಪಂಚಕ್ಕೆ ನಾವು ಹೋದಾಗ, ಉನ್ನತ ಗಿರಿ ಶಿಖರ ಏರಿ, ದರ್ಶನ ಮಗ್ನರಾಗಿ, ಭಾವಪರವಶರಾಗಿ, ದಿಗಂತದಾಚೆಯ ಅನಂತ ವಿಶ್ವ ರಹಸ್ಯದೆಡೆಗೆ ದೃಷ್ಟಿ ನೆಟ್ಟಾಗ ಸಹ ಆ ವೈಜ್ಞಾನಿಕ ಪ್ರವೇಶ ಮತ್ತು ಮನಃ ಪರಿಪಾಕ ಅತ್ಯವಶ್ಯ ಇವೆ.
- ಧನ್ಮದ ಮಾರ್ಗ ಇದಕ್ಕೆ ತೀರ ಭಿನ್ನವಾದುದು. ವಾಸ್ತವಿಕ ಪ್ರಪಂಚದ ವಿಚಾರಕ್ಕೆ ಮಾರಿದ ವಿಷಯಗಳೇ ಅದರ ವಿಚಾರ ವಿಷಯಗಳಾದ್ದರಿಂದ ಅದು ಭಾವಪರವಶತೆ ಮತ್ತು ಅಂತರ್ಜ್ಞಾನವನ್ನು