ಈ ಪುಟವನ್ನು ಪ್ರಕಟಿಸಲಾಗಿದೆ
ಪುನಃ ಅಹಮದ್ ನಗರದ ಕೋಟೆಯಲ್ಲಿ
೪೬೭

ಬೆಳೆವಣಿಗೆಯ ಬೇರುಗಳನ್ನೇ ಕತ್ತರಿಸಿದಂತೆ, ಅದರ ಅಲಕ್ಷೆ ಎಂದರೆ ಜನತೆಯ ಮೇಲೆ ಮಹಾ ಪ್ರಭಾವಕಾರಿಯಾದ ಒಂದು ಅದ್ಭುತ ಶಕ್ತಿಯ ಅಲಕ್ಷೆ ರಾಷ್ಟ್ರೀಯ ಭಾವನೆ ಎಂದರೆ ಜನತೆಯ ಹಿಂದಿನ ಸಾಧನೆ ಸಂಪ್ರದಾಯ, ಮತ್ತು ಅನುಭವಗಳ ಸಾಮೂಹಿಕ ನೆನಹು; ಮತ್ತು ಹಿಂದೆ ಎಂದೂ ಇಲ್ಲದಕ್ಕಿಂತ ಹೆಚ್ಚು ಇಂದು ರಾಷ್ಟ್ರೀಯ ಭಾವನೆ ಬಲಗೊಂಡಿದೆ. ಅನೇಕರು ರಾಷ್ಟ್ರೀಯ ಭಾವನೆಯ ಕಾಲ ಮುಗಿದು ಹೋಯಿತು; ಆಧುನಿಕ ಪ್ರಪಂಚದಲ್ಲಿ ಬಲಗೊಳ್ಳುತ್ತಿರುವ ಅಂತರರಾಷ್ಟ್ರೀಯ ಭಾವನೆಗೇ ಇನ್ನು ಕಾಲ ಎಂದು ನಂಬಿದ್ದರು. ಜನ ಸಾಮಾನ್ಯದ ಹಿನ್ನೆಲೆಯಿಂದ ರಾಷ್ಟ್ರೀಯ ಸಂಸ್ಕೃತಿಯನ್ನು ಪಾಳುಬೀಳುತ್ತಿರುವ ಮಧ್ಯಮ ವರ್ಗದ ಕೆಲಸವೆಂದು ಸಮಾಜವಾದ ಹೀಯಾಳಿಸಿತು. ಬಂಡವಾಳಗಾರಿಕೆಯೇ ತನ್ನ ಸಂಘಟನೆಗಳಿಂದ ರಾಷ್ಟ್ರೀಯ ಮೇರೆ ಮೀರಿ ಕ್ರಮೇಣ ಅಂತರ ರಾಷ್ಟ್ರೀಯವಾಯಿತು. ವಾಣಿಜ್ಯ ಮತ್ತು ವ್ಯಾಪಾರ, ಸುಲಭ ವಾರ್ತಾ ಪ್ರಸಾರ ಮತ್ತು ವೇಗದ ವಾಹನ ಸೌಕರ್ಯ, ಆಕಾಶವಾಣಿ ಮತ್ತು ಚಲಚ್ಚಿತ್ರಗಳು ಒಂದು ಅಂತರ ರಾಷ್ಟ್ರೀಯ ವಾತಾವರಣ ರೂಪುಗೊಳ್ಳಲು ಪ್ರೋತ್ಸಾಹ ಕೊಟ್ಟವು ಮತ್ತು ರಾಷ್ಟ್ರೀಯ ಭಾವನೆಗೆ ಇನ್ನು ಅವಕಾಶವಿಲ್ಲವೆಂಬ ಭ್ರಮೆಗೆ ಅವಕಾಶಕೊಟ್ಟವು.

ಆದರೂ ಸಂಕಟ ಸಮಯ ಒದಗಿದಾಗಲೆಲ್ಲ ರಾಷ್ಟ್ರೀಯ ಭಾವನೆ ಪುನರುಜ್ಜೀವನಗೊಂಡು ಪ್ರಬಲಗೊಂಡಿದೆ. ತಮ್ಮ ಹಳೆಯ ಸಂಪ್ರದಾಯಗಳಿಂದ ಜನರಿಗೆ ತೃಪ್ತಿಯೂ, ಶಕ್ತಿಯೂ ದೊರೆತಿವೆ. ಇಂದಿನ ಯುಗದ ಒಂದು ಮುಖ್ಯ ಅದ್ಭುತ ಸಾಧನೆ ಎಂದರೆ ಪ್ರಾಚೀನ ಯುಗದ ಮತ್ತು ರಾಷ್ಟ್ರೀಯತ್ವದ ಪುನರು ತಾನ, ರಾಷ್ಟ್ರೀಯ ಪಾರಂಪರ್ಯದ ಕಡೆಗಿನ ಈ ಹಿನ್ನಡೆಯ ಅಂತರ ರಾಷ್ಟ್ರೀಯ ಕಾರ್ಯಾಚರಣೆಯ ಪ್ರಮುಖ ಮುಂದಾಳುಗಳೆಂಬ ಶ್ರಮಜೀವಿಗಳಲ್ಲಿ ಮತ್ತು ಜನಸಾಮಾನ್ಯರಲ್ಲೇ ಹೆಚ್ಚಾಗಿದೆ. ಯುದ್ಧ ಮುಂತಾದ ವಿಷಮ ಸನ್ನಿವೇಶಗಳಲ್ಲಿ ಅವರ ಅಂತರ ರಾಷ್ಟ್ರೀಯ ಭಾವನೆ ಎಲ್ಲ ಕರಗಿ ನೀರಾಗುತ್ತಿದೆ. ಇತರ ಪಂಗಡಗಳಿಗಿಂತ ರಾಷ್ಟ್ರೀಯ ದ್ವೇಷ ಮತ್ತು ಭಯ ಅವರಲ್ಲೇ ಹೆಚ್ಚುತ್ತಿದೆ. ಇದಕ್ಕೆ ಶ್ರೇಷ್ಠ ನಿದರ್ಶನವೆಂದರೆ ಸೋವಿಯಟ್ ರಷ್ಯದಲ್ಲಿ ಈಚೆಗೆ ನಡೆದ ಘಟನೆ. ತನ್ನ ಸಾಮಾಜಿಕ ಮತ್ತು ಆರ್ಥಿಕ ರಚನೆಯಲ್ಲಿ ಮುಖ್ಯ ಯಾವುದನ್ನೂ ಬಿಡದೆ ಉನ್ನತ ರಾಷ್ಟ್ರೀಯ ಭಾವನೆ ಬೆಳಸಿಕೊಂಡಿದೆ. ಅಂತರ ರಾಷ್ಟ್ರೀಯ ಜನಸಾಮಾನ್ಯರ ಉದ್ಧಾರ ಎಂಬುದಕ್ಕಿಂತ ಪಿತೃಭೂಮಿಯ ರಕ್ಷಣೆ ಎಂಬ ಉದ್ಗಾರಕ್ಕೆ ಪ್ರಾಮುಖ್ಯತೆ ದೊರೆತಿದೆ. ರಾಷ್ಟ್ರ ಇತಿಹಾಸದ ಪ್ರಮುಖ ವ್ಯಕ್ತಿಗಳ ಪೂಜೆಗೆ ಪುನಃ ಪ್ರಾಶಸ್ತ್ಯ ಬಂದಿದೆ; ಮತ್ತೊಮ್ಮೆ ಅವರು ಸೋವಿಯಟ್ ಜನರ ಆರಾಧಕರಾಗಿದ್ದಾರೆ. ಈ ಯುದ್ಧದಲ್ಲಿ ಸೋವಿಯಟ್ ತೋರಿಸಿದ ಅದ್ಭುತ ಪರಾಕ್ರಮ, ಶಕ್ತಿ ಮತ್ತು ಸಂಘಟನೆಗಳು ಬಹು ವಿಶಾಲ ಕ್ಷೇತ್ರದಲ್ಲಿ ದೊಡ್ಡ ಪ್ರಗತಿಗೆ ಕಾರಣವಾದ ಅವರ ಸಾಮಾಜಿಕ ಮತ್ತು ಆರ್ಥಿಕ ರಚನೆ, ಯೋಜಿತ ಕ್ರಮದಿಂದ ವಸ್ತು ನಿರ್ಮಾಣ ಮತ್ತು ವಿನಿಯೋಗ, ವಿಜ್ಞಾನ ಮತ್ತು ಅದರ ಪ್ರಯೋಗದಲ್ಲಿ ಪ್ರಗತಿ, ನಾಯಕತ್ವ ವಹಿಸಲು ಅವಕಾಶ ದೊರೆತು ಮುಂದೆ ಬಂದ ಜನ ಸಂಪತ್ತಿನ ಹೊಸ ಬುದ್ಧಿ ಶಕ್ತಿ ಕಾರ್ಯಶಕ್ತಿ ಮತ್ತು ಅಪ್ರತಿಮ ನಾಯಕತ್ವ ಇವು ಮುಖ್ಯ ಕಾರಣ ನಿಜ, ಆದರೆ ರಾಷ್ಟ್ರೀಯ ಇತಿಹಾಸ ಪರಂಪರೆಯ ಮತ್ತು ಸಂಪ್ರದಾಯಗಳ ಸ್ಮರಣೆ, ಇಂದಿನ ಬಾಳಿಗೆ ಜನ್ಮದಾಯಕವಾದ ಹಿಂದಿನ ಇತಿಹಾಸದ ಅರಿವು ಸಹ ಸ್ವಲ್ಪಮಟ್ಟಿಗೆ ಕಾರಣ ವಾಗಿರಬಹುದು. ರಷ್ಯದ ಇಂದಿನ ರಾಷ್ಟ್ರೀಯ ದೃಷ್ಟಿಯು ಹಿಂದಿನ ರಾಷ್ಟ್ರೀಯ ಭಾವನೆಯ ಪುನರವ ತಾರವೆಂದು ಭಾವಿಸುವುದು ತಪ್ಪು, ಅದು ಖಂಡಿತ ಅಲ್ಲ. ಕ್ರಾಂತಿಯ ಅದ್ಭುತ ಅನುಭವಗಳನ್ನು ಮತ್ತು ಅನಂತರದ ಘಟನೆಗಳನ್ನು ಎಂದೂ ಅವರು ಮರೆಯುವಂತಿಲ್ಲ; ಸಮಾಜ ರಚನೆಯಲ್ಲಿ ಮಾನಸಿಕ ಸ್ಥಿತಿಯಲ್ಲಿ ಆದ ಪರಿವರ್ತನೆಗಳು ಉಳಿಯಲೇ ಬೇಕು. ಆ ಸಮಾಜ ರಚನೆಯಲ್ಲಿ ಅಂತರ ರಾಷ್ಟ್ರೀಯ ಭಾವನೆ ಅನಿವಾರ್ಯ, ಆದರೂ ಈ ಹೊಸ ವಾತಾವರಣಕ್ಕೆ ಹೊಂದಿಕೊಂಡು, ಜನರ ಶಕ್ತಿ ಹೆಚ್ಚಿಸಿದ ರಾಷ್ಟ್ರೀಯ ಭಾವನೆ ಬೆಳೆಯಲು ಅಲ್ಲಿ ಅವಕಾಶ ದೊರೆತಿದೆ.

ಸೋವಿಯಟ್ ರಾಷ್ಟ್ರದ ಪ್ರಗತಿಯನ್ನು ಇತರ ದೇಶಗಳ ಸಾಮ್ಯವಾದಿ ಪಕ್ಷಗಳ ಏರಿಳಿತಗಳೊಡನೆ ಹೋಲಿಸಿ ನೋಡುವುದು ಉತ್ತಮ. ಸೋವಿಯಟ್ ಕ್ರಾಂತಿಯ ನಂತರ ಆರಂಭದ ದಿನಗಳಲ್ಲಿ ಎಲ್ಲ ರಾಷ್ಟ್ರಗಳ ಜನರಲ್ಲಿ ಅದರಲ್ಲೂ ಸಾಮಾನ್ಯ ಜನರಲ್ಲಿ ಅದ್ಭುತ ಉತ್ಸಾಹ ಉಕ್ಕೇರಿತು. ಆ ಉತ್ಸಾಹದ