ಕಾಲಕ್ಕೂ ಇಂದಿನ ಕಾಲಕ್ಕೂ ನಿಜವಾದ ಸಂಬಂಧ ಏನಾದರೂ ಇದೆಯೇ ಎನ್ನುವುದು ನನಗೆ ಬೇಕಾಗಿತ್ತು. ನನಗೆ ಮತ್ತು ನನ್ನಂತಹ ಅನೇಕರಿಗೆ ಇಂದಿನ ಕಾಲವೆಂದರೆ ಪುರಾತನ ಸಂಪ್ರದಾಯಗಳು, ಕಡುಬಡತನ, ನಿರಂತರ ಗೋಳು ಮತ್ತು ಮಧ್ಯಮ ವರ್ಗದ ಜನರ ಆಧುನಿಕ ಬಾಹ್ಯ ಜೀವನ ಇವು ಗಳಒಂದು ವಿಚಿತ್ರ ಮಿಶ್ರಣವಾಗಿತ್ತು. ನನ್ನ ವರ್ಗ ಅಥವ ಪಂಗಡದ ಜನರ ವಿಚಾರದಲ್ಲಿ ಹೆಮ್ಮೆ ಪಡುತ್ತ ಇರಲಿಲ್ಲ; ಆದರೂ ಭಾರತದ ಬಿಡುಗಡೆಯ ಹೋರಾಟದಲ್ಲಿ ನಾಯಕರಾಗಲು ಅವರೇ ಸರಿ ಎಂದು ಭಾವಿಸಿದ್ದೆ. ಈ ಮಧ್ಯಮವರ್ಗದ ಜನ ಪಂಜರದ ಗಿಳಿಗಳಂತೆ ಬಂಧನದಲ್ಲಿ ಜೀವಿಸುತ್ತ ಇದ್ದರು. ತಮ್ಮ ಕಟ್ಟನ್ನು ಕಿತ್ತೊಗೆದು ಉನ್ನತವಾದ ಹಿರಿದಾದ ಬಾಳಿಗಾಗಿ ಹಾತೊರೆಯುತ್ತಿದ್ದರು. ಬ್ರಿಟಿಷರ ಆಳ್ವಿಕೆಯ ಚೌಕಟ್ಟಿನಲ್ಲಿ ಆ ಬೆಳವಣಿಗೆಗೆ ಅವಕಾಶವಿಲ್ಲದೆ ಆ ಆಳ್ವಿಕೆಯ ಮೇಲೆ ದಂಗೆಯ ಮನೋ ಭಾವ ಹುಟ್ಟಿತು. ಆದರೂ ನಮ್ಮನ್ನು ಅವನತಿಗೆ ತುಳಿದ ಆಡಳಿತ ಕ್ರಮದ ಮೇಲೆ ಆ ದ್ವೇಷವು ಹುಟ್ಟಲಿಲ್ಲ. ಬ್ರಿಟಿಷರ ಬದಲು ನಮ್ಮ ಜನರನ್ನು ತಂದು ಆ ಪದ್ದತಿಯನ್ನು ಸುಧಾರಿಸಬಹುದೆಂದರು. ಮಧ್ಯಮವರ್ಗದ ಜನರೆಲ್ಲ ಅದೇ ಭಾವನೆಯ ಜನರಾದ್ದರಿಂದ ಅದನ್ನು ಎದುರಿಸುವ ಅಥವ ಬುಡ ಮಟ್ಟ ಕಿತ್ತೊಗೆಯುವ ಮನೋಭಾವ ಅವರಲ್ಲಿ ಹುಟ್ಟಲು ಸಾಧ್ಯವಿರಲಿಲ್ಲ,
ಹಳ್ಳಿಗಳ ಜನಕೋಟಿಯ ಕಡೆ ನಮ್ಮನ್ನು ಹೊಡೆದೋಡಿಸಿದ ಹೊಸ ಶಕ್ತಿಗಳು ಹುಟ್ಟಿದವು. ಹಳ್ಳಿಗಳ ಅಸ್ತಿತ್ವವನ್ನೇ ಮರೆತು, ಅವುಗಳಿಗೆ ಯಾವ ಪ್ರಾಮುಖ್ಯತೆಯನ್ನೂ ಕೊಡದ ವಿದ್ಯಾವಂತ ಯುವಕರ ಮುಂದೆ ಮೊಟ್ಟ ಮೊದಲನೆಯ ಬಾರಿ ಒಂದು ಹೊಸ ಭಾರತ, ವ್ಯತ್ಯಸ್ತ ಭಾರತ, ಬಡತನದ ನಗ್ನ ತೆಯ ಜೀವನ ಎದುರುನಿಂತಿತ್ತು, ಅದರ ಅಸಂಖ್ಯಾತ ಸಮಸ್ಯೆಗಳು ನಮ್ಮ ಹೃದಯವನ್ನೆ ತಲ್ಲಣಿಸಿದವು. ಅದು ಮಾತ್ರವಲ್ಲದೆ ನಮ್ಮ ನಿರ್ಧಾರಗಳು, ಮೂಲ ಉದ್ದೇಶಗಳನ್ನೆ ತಲೆಕೆಳಗೆ ಮಾಡಲಾರಂಭಿಸಿತು. ಈ ರೀತಿ ಭಾರತದರ್ಶನದ ವಾಸ್ತವ ಚಿತ್ರ ನಮಗೆ ದೊರೆಯಿತು. ಅದರಿಂದ ಜ್ಞಾನವೂ ದೊರೆಯಿತು. ಮನಸ್ಸಿನ ಕಳವಳವೂ ಹೆಚ್ಚಿತು. ನಮ್ಮ ಹಿಂದಿನ ಸನ್ನಿವೇಶ ಮತ್ತು ಅನುಭವಗಳಿಗೆ ಅನುಗುಣವಾಗಿ ನಮ್ಮ ಪ್ರತಿಕ್ರಿಯೆಗಳೂ ಭಿನ್ನ ಭಿನ್ನವಾಗಿದ್ದವು. ಕೆಲವರಿಗೆ ಈ ಹಳ್ಳಿಗಾಡಿನ ಜನರ ಸವಿಾಪ ಪರಿಚಯವಿದ್ದುದರಿಂದ ಅವರಿಗೆ ಹೊಸ ಅನುಭವವೇನೂ ಆಗಲಿಲ್ಲ ; ಅದೆಲ್ಲ ಅನಿವಾರ್ಯ ಎಂದರು. ಆದರೆ ಅದು ನನಗೊಂದು ಹೊಸದರ್ಶನ ಯಾತ್ರೆಯೇ ಆಯಿತು. ನಮ್ಮ ಪಂಗಡದ ನ್ಯೂನತೆ, ದೌರ್ಬಲ್ಯಗಳು ನನಗೆ ಪೂರ್ಣ ತಿಳಿದಿದ್ದರೂ ಭಾರತದ ಲಕ್ಷಾಂತರ ಹಳ್ಳಿಗಳ ಜನತೆಯ ದರ್ಶನದಿಂದ ಮಧ್ಯಮ ವರ್ಗದ ಜನರಲ್ಲಿ ನಾನು ಕಾಣದ ಯಾವುದೊ ಅನಿರ್ವಚ ನೀಯ ವಸ್ತುವನ್ನು ಅವರಲ್ಲಿ ಕಂಡೆ.
ಈ ಜನತಾಭಾವನೆಗೆ ನಾನು ಒಂದು ದೈವವನ್ನು ಕಲ್ಪಿಸುವುದಿಲ್ಲ, ಅದು ನನಗೆ ಒಂದು ಅವ್ಯವಹಾರಿಕ ಕಲ್ಪನೆಯೂ ಅಲ್ಲ ; ವೈವಿಧ್ಯಯುತವೂ ಅಸಂಖ್ಯಾತವೂ ಆಗಿದ್ದರೂ ಭಾರತದ ಜನ ಕೋಟಿ ನನಗೊಂದು ಸತ್ಯ. ಬಾಯಿ ಇಲ್ಲದ ಜನಜಂಗುಳಿ ಎಂದು ಭಾವಿಸದೆ ಅವರನ್ನು ವ್ಯಕ್ತಿಗಳೆಂದು ಪರಿಗಣಿಸುತ್ತೇನೆ. ನಾವು ಅವರಿಂದ ಹೆಚ್ಚಿನದೇನನ್ನೂ ನಿರೀಕ್ಷಿಸಿರಲಿಲ್ಲ. ಆದ್ದರಿ೦ದ ಪ್ರಾಯಶಃ ಆ ಭಾವನೆ ನಮ್ಮಲ್ಲಿದ್ದಿರಬಹುದು. ಆದರೆ ಅವರಲ್ಲಿ ನಾನು ಕಂಡ ವ್ಯಕ್ತಿತ್ವ ನನ್ನ ನಿರೀಕ್ಷೆಯನ್ನು ಮಾಡಿತ್ತು. ಆ ವ್ಯಕ್ತಿತ್ವ, ಅವರ ದಾರ್ಢ ಮತ್ತು ಅಂತಶ್ಯಕ್ತಿಗೆ ಕಾರಣ ಅವರಲ್ಲಿ ಇನ್ನೂ ಅಲ್ಪ ಪ್ರಮಾಣದಲ್ಲಿ ಉಳಿದಿರುವ ಸನಾತನ ಭಾರತೀಯ ಸಂಸ್ಕೃತಿಯ ಸಂಪ್ರದಾಯವೇ ಇರಬೇಕೆಂದು ಹೊಳೆಯಿತು. ಕಳೆದ ಎರಡುನೂರು ವರ್ಷಗಳ ನೂಕುನುಗ್ಗಲಿನಲ್ಲಿ ಆ ಸಂಸ್ಕೃತಿ ಎಷ್ಟೋ ಮಾಸಿತ್ತು. ಆದರೂ ನಿಷ್ಪ ಯೋಜಕವೂ, ವಿನಾಶಕಾರಕವೂ ಆದುದು ಎಷ್ಟೋ ಇದ್ದರೂ, ಉಳಿಸಿ ಕೊಳ್ಳಬೇಕಾದ್ದು ಇನ್ನೂ ಸ್ವಲ್ಪ ಉಳಿದಿತ್ತು.
೧೯೨೦ ರಿಂದ ೩೦ ರ ವರೆಗೆ ನನ್ನ ಕೆಲಸವೆಲ್ಲ ನನ್ನ ಪ್ರಾಂತ್ಯದಲ್ಲಿ ಮಾತ್ರ, ಆಗ್ರ ಮತ್ತು ಅಯೋಧ್ಯೆಯ ಸಂಯುಕ್ತ ಪ್ರಾಂತ್ಯದ ನಲವತ್ತೆಂಟು ಜಿಲ್ಲೆ ಗಳ ನಗರಗಳು ಮತ್ತೂ ಹಳ್ಳಿಗಳಲ್ಲಿ ಮೇಲಿಂದ ಮೇಲೆ ಅನೇಕ ಕಡೆ ಸಂಚಾರಮಾಡಿದೆ, ಬಹು ದಿನಗಳಿಂದ ನನ್ನ ಪ್ರಾಂತ್ಯವನ್ನು ಹಿಂದೂ