ಕಟ್ಟಿಕೊಂಡು ಒಗ್ಗಟ್ಟಿನಿಂದ ರಾಷ್ಟ್ರೀಯ ಭಾವನೆಯಿಂದ ಕೆಲಸ ಮಾಡುತ್ತಿದ್ದಾರೆ. ಭಾರತೀಯ ಕ್ರೈಸ್ತ ಯಾವ ದೇಶಕ್ಕೆ ಹೋದರೂ ಭಾರತೀಯನೆ. ಭಾರತೀಯ ಮುಸಲ್ಮಾನ ತುರ್ಕಿ, ಅರೇಬಿಯ, ಇರಾನ್, ಅಥವ ಇಸ್ಲಾಂ ಧರ್ಮವೇ ಪ್ರಧಾನ ಧರ್ಮವಾಗಿರುವ ಯಾವ ದೇಶಕ್ಕೆ ಹೋದರೂ ಭಾರತೀಯನೆ.
ನಮ್ಮ ತಾಯಿನಾಡಿನ ಕಲ್ಪನೆ ನಮ್ಮಲ್ಲಿ ಒಬ್ಬೊಬ್ಬರಿಗೆ ಒಂದೊಂದು ವಿಧ, ಯಾರಿಬ್ಬರ ಭಾವನೆಯೂ ಒಂದೇ ಇರುವುದಿಲ್ಲ. ಭಾರತದ ಯೋಚನೆ ಬಂದಾಗ ಅನೇಕ ಚಿತ್ರಗಳು ನನ್ನ ಮುಂದೆ ನಿಲ್ಲುತ್ತವೆ: ಅಸಂಖ್ಯಾತ ಹಳ್ಳಿಗಳಿಂದ ತುಂಬಿದ ಮೈದಾನಗಳು; ನಾನು ನೋಡಿದ ಪಟ್ಟಣಗಳು ನಗರಗಳು; ಬಾಡಿ ಬೆಂಡಾಗಿ ಒಣಗಿದ ಭೂಮಿಗೆ ಅಮೃತಧಾರೆಯಾಗಿ ಬಂದು ಅಚಿರಕಾಲಮಾತ್ರದಲ್ಲಿ ದಿಗಂತದವರೆಗೂ ಹಸುರುಡುಗೆಯನ್ನು ಡಿಸಿ ಆನಂದ ಸಾಗರದಲ್ಲಿ ಮುಳುಗಿಸುವ ಮಳೆಗಾಲದ ಮೋಹಿನೀ ವಿದ್ಯೆ, ಮಹಾನದಿಗಳು ಮತ್ತು ನಿರರ್ಗಳ ಜಲವಾಹಿನಿಗಳು ; ಬೈಬರ್ ಕಣಿವೆ ಮತ್ತು ಅದರ ಸುತ್ತಲ ಉತ್ಸಾಹ ಶೂನ್ಯ ಪ್ರದೇಶ; ದಕ್ಷಿಣದಲ್ಲಿ ಕನ್ಯಾಕುಮಾರಿಯ ರೋಮಾಂಚಕಾರಕ ದೃಶ್ಯ: ಜನ ತೆಯ ವ್ಯಕ್ತಿಚಿತ್ರ, ಸಾಮೂಹಿಕ ಚಿತ್ರ, ಎಲ್ಲಕ್ಕೂ ಮಿಗಿಲಾಗಿ ಮಂಜುಮುಚ್ಚಿದ ಹಿಮ ಪರ್ವತ ಮತ್ತು ಜುಳುಜುಳು ಮರ್ಮರ ನಿನಾದದೊಡನೆ ಹರಿದೋಡುವ ನದಿಗಳ ಮತ್ತು ವಸಂತಕಾಲದ ಸೊಬಗಿನ ಕಾಶ್ಮೀರ ಕಣಿವೆ-ಇವು ಕಣ್ಣಿಗೆ ಕಟ್ಟಿ ನಿಲ್ಲುತ್ತವೆ. ನಮ್ಮ ಮನ ಬಂದಂತೆ ನಮ್ಮ ಚಿತ್ರ ಚಿತ್ರಿಸಿ, ಆ ಚಿತ್ರವನ್ನು ಕಾಪಾಡುತ್ತೇವೆ. ಉಷ್ಣವಲಯದ ಸೆಕೆಯ ಪ್ರದೇಶದ ಸರ್ವಸಾಮಾನ್ಯ ಚಿತ್ರಕ್ಕಿಂತ ಪರ್ವತ ಶ್ರೇಣಿಯ ಹಿನ್ನೆಲೆ ಇರುವ ಕಾಶ್ಮೀರದ ಈ ಚಿತ್ರ ನನಗೆ ಬಹು ಮೆಚ್ಚು. ಭಾರತವು ಉಷ್ಣವಲಯದಿಂದ ಸಮಶೀತೋಷ್ಣ ವಲಯದವರೆಗೆ, ಭೂಮಧ್ಯರೇಖೆಯಿಂದ ಏಷ್ಯದ ಶೀತಲ ಹೃದಯದವರೆಗೆ ಹಬ್ಬಿರುವುದರಿಂದ ಎರಡು ಚಿತ್ರಗಳೂ ಅದಕ್ಕೆ ಒಪ್ಪುತ್ತವೆ.
೭. ಭಾರತ ಪ್ರವಾಸ
೧೯೩೬ನೆಯ ಕೊನೆ ಮತ್ತು ೧೯೩೭ನೆಯ ಆದಿಭಾಗದಲ್ಲಿ ನನ್ನ ಪ್ರವಾಸದ ವೇಗವೂ ಕ್ರಮೇಣ ಹೆಚ್ಚಿತು, ಮತ್ತು ಒತ್ತಡವೂ ಹೆಚ್ಚಿತು. ಹಗಲು ರಾತ್ರಿ ಎನ್ನದೆ ಸದಾ ತಿರುಗುತ್ತ ಎಲ್ಲಿಯೂ ನಿಲ್ಲದೆ, ಎಲ್ಲಿಯೂ ವಿಶ್ರಾಂತಿ ಪಡೆಯದೆ ಬಿರುಗಾಳಿಯಂತೆ ದೇಶವನ್ನೆಲ್ಲ ಸುತ್ತಿದೆ. ಎಲ್ಲ ಕಡೆಯಿಂದಲೂ ನನಗೆ ಕರೆ, ಸಾರ್ವತ್ರಿಕ ಚುನಾವಣೆಗಳು ತೀರ ಸಮೀಪ ಇದ್ದ ಕಾರಣ ಕಾಲ ಅತ್ಯಲ್ಪವಿತ್ತು. ನನ್ನ ಪ್ರಚಾರದಿಂದ ಚುನಾವಣೆಯಲ್ಲಿ ಜಯವಾಗುವುದೆಂಬ ಭಾವನೆ ಇತ್ತು. ನನ್ನ ಪ್ರಯಾಣವೆಲ್ಲ ಮೋಟಾರಿನಲ್ಲಿ, ಸ್ವಲ್ಪ ಮಟ್ಟಿಗೆ ವಿಮಾನ ಮತ್ತು ರೈಲಿನಲ್ಲಿ ಕೆಲವು ವೇಳೆ ಸ್ವಲ್ಪ ದೂರ ಆನೆ, ಒಂಟೆ, ಕುದುರೆ ಅಥವ ಹಡಗು, ಹುಟ್ಟು ಹಾಕುವ ದೋಣಿ, ತೋಡುದೋಣಿ ಅಥವ ಬೈಸಿಕಲ್ ಉಪಯೋಗಿಸುತ್ತಿದ್ದೆ. ಕೆಲವುವೇಳೆ ನಡೆದು ಸಹ ಹೋಗುತ್ತಿದ್ದೆ, ದೊಡ್ಡ ರಸ್ತೆಗಳಿಲ್ಲದ ಒಳನಾಡಿನಲ್ಲಿ ಈ ಎಲ್ಲ ವಾಹನಗಳ ಅವಶ್ಯಕತೆಯೂ ಇತ್ತು. ನನ್ನ ಜೊತೆಯಲ್ಲಿ ಯಾವಾಗಲೂ ಎರಡೆರಡು ಮೈಕ್ರೋಫೋನ್, ಧ್ವನಿ ವಾಹಕ ಯಂತ್ರಗಳೂ ಇರುತ್ತಿದ್ದು ವು. ಅವುಗಳ ಸಹಾಯವಿಲ್ಲದೆ ಅಷ್ಟು ದೊಡ್ಡ ಸಭೆಗಳಲ್ಲಿ ಮಾತ ನಾಡುವುದು ಸಾಧ್ಯವೇ ಆಗುತ್ತ ಇರಲಿಲ್ಲ ; ಮತ್ತು ನನ್ನ ಗಂಟಲೂ ಉಳಿಯುತ್ತಿರಲಿಲ್ಲ. ಧ್ವನಿ ವಾಹಕ ಯಂತ್ರಗಳನ್ನು ಎಂದೂ ಕಂಡೂ ಕೇಳದ ತಿಬೆಟ್ ಗಡಿಯಿಂದ ಬೆಲೂಚಿಸ್ಥಾನದ ಗಡಿಯವರೆಗೆ ಎಲ್ಲ ಅಪರಿಚಿತ ಸ್ಥಳಗಳಿಗೂ ಅವುಗಳನ್ನು ನನ್ನೊಂದಿಗೆ ತೆಗೆದುಕೊಂಡುಹೋದೆ,
ನಸುಬೆಳಕಿನಿಂದ ಮಧ್ಯರಾತ್ರಿಯವರೆಗೂ ಊರಿಂದೂರಿಗೆ ಪ್ರಯಾಣಮಾಡುತ್ತಿದ್ದೆ. ಎಲ್ಲ ಕಡೆಯಲ್ಲೂ ಅಸಾಧ್ಯ ಜನ ಕಾದಿರುತ್ತಿದ್ದರು; ಮಧ್ಯ, ಕಾದು ಕಾದು ನಿಂತಿದ್ದ ಹಳ್ಳಿಯ ರೈತರು ಅನೇಕ ಕಡೆ, ತಡೆದು ನಿಲ್ಲಿಸಿ ಆದರಿಸುತ್ತಿದ್ದರು. ಈ ಸ್ವಾಗತ ಯಾರೂ ಏರ್ಪಡಿಸಿದ್ದಲ್ಲ ; ಆದರೆ ನನ್ನ ಕಾರ್ಯಕ್ರಮವನ್ನೆಲ್ಲ ತಲೆಕೆಳಗೆಮಾಡಿ ಮುಂದಿನ ಕೆಲಸಕ್ಕೆ ನಿಮ್ಮ ಮಾಡುತ್ತಿತ್ತು. ಆದರೂ ಈ ಹಸುಗೂಸಿನಂಥ ಜನರನ್ನು ಅಲಕ್ಷ್ಯಮಾಡಿ ಕಂಡೂ ಕಾಣದಂತೆ ಓಡಿಹೋಗುವುದು ಹೇಗೆತಾನೆ ಸಾಧ್ಯ, ಅಡ್ಡಿ ಯಮೇಲೆ ಅಡ್ಡಿ. ಈ ಮಹಾ ಸಭೆಗಳಲ್ಲಿ ಜನರ ಮಧ್ಯೆ ಹಾದು, ಸಭಾವೇದಿಕೆಯನ್ನು