ಮುಟ್ಟಿ ಪುನಃ ಹಿಂದಿರುಗಲು ಸ್ವಲ್ಪ ಕಾಲ ಹಿಡಿಯುತ್ತಿತ್ತು. ಪ್ರತಿ ನಿಮಿಷಗಳನ್ನೂ ಎಣಿಕೆಮಾಡ ಬೇಕಾಗಿತ್ತು. ನಿಮಿಷಕ್ಕೆ ನಿಮಿಷಗಳು ಸೇರಿ ಗಂಟೆಗಳಾಗಿಬಿಡುತ್ತಿದ್ದುವು. ಸಂಜೆಯ ಹೊತ್ತಿಗೆ ಎಷ್ಟೋ ಗಂಟೆಗಳು ಹಿಂದೆ ಬೀಳುತ್ತ ಇದ್ದೆ. ಆದರೂ ಜನ ಅರೆಬಟ್ಟೆಯಲ್ಲಿ ಚಳಿಗಾಲವಾದರೂ ನಡುಗುತ್ತ ಕುಳಿತಿರುತ್ತಿದ್ದರು. ಈ ರೀತಿ ನನ್ನ ಕಾರ್ಯಕ್ರಮವು ದಿನಕ್ಕೆ ಹದಿನೆಂಟು ಗಂಟೆಯಾಗುತ್ತ, ಮಧ್ಯರಾತ್ರಿಯ ವೇಳೆಗೆ, ಅಥವ ಇನ್ನೂ ತಡವಾಗಿಯೋ ದಿನದ ಕಾರ್ಯವನ್ನು ಮುಗಿಸುತ್ತಿದ್ದೆವು. ಒಂದು ಬಾರಿ, ಕರ್ನಾಟಕದಲ್ಲಿ, ಫೆಬ್ರವರಿ ಮಧ್ಯಭಾಗದಲ್ಲಿ, ಎಲ್ಲ ಪೂರ್ವೇತಿಹಾಸವನ್ನೂ ಮೇರೆಯನ್ನೂ ಮಾರಿದೆವು. ಆ ದಿನ, ಕಾರ್ಯಕ್ರಮವನ್ನು ನೋಡಿದರೆ ಗಾಬರಿಯಾಗುವಂತೆ ಇತ್ತು. ದಟ್ಟ ಕಾಡಿನ ಪರ್ವತಶ್ರೇಣಿಯ ಕಣಿವೆಗಳ ಮಧ್ಯೆ ಡೊಂಕುಡೊಂಕಾಗಿ ಹಾದು ಹೋಗುವ ಘಾಟಿ ರಸ್ತೆಗಳಲ್ಲಿ ನಿಧಾನವಾಗಿ ಸಾಗಬೇಕಾಗಿತ್ತು. ದೊಡ್ಡ ಸಭೆಗಳು ಆರು, ಸಣ್ಣ ಸಭೆಗಳು ಅನೇಕ ಇದ್ದು ವು. ಬೆಳಗ್ಗೆ ಎಂಟು ಗಂಟೆಗೆ ಕಾಠ್ಯಕ್ರಮವನ್ನು ಆರಂಭಿಸಿ (ಏಳು ಗಂಟೆ ಮುಂಚೆಯೇ ನಡೆಯಬೇಕಿದ್ದ ಕೊನೆಯ ಸಭೆಯನ್ನು) ಬೆಳಗಿನ ಜಾವ ನಾಲ್ಕು ಗಂಟೆಗೆ ಮುಗಿಸಿದೆವು ; ಮತ್ತು ರಾತ್ರಿ ನಾವು ತಂಗಬೇಕಾಗಿದ್ದ ಸ್ಥಳಕ್ಕೆ ಹೋಗಲು ಇನ್ನೂ ಎಪ್ಪತ್ತು ಮೈಲಿ ಇತ್ತು. ಅದನ್ನು ಸೇರಿದಾಗ ಬೆಳಗ್ಗೆ ೭ ಗಂಟೆ. ಹಗಲು ರಾತ್ರಿ ಪ್ರಯಾಣಮಾಡುತ್ತ ಅನೇಕ ಸಭೆಗಳಲ್ಲಿ ಭಾಷಣಮಾಡಿ ೪೧೫ ಮೈಲಿ ಬಂದಿದ್ದೆವು. ಆ ದಿನ ೨೩ ಗಂಟೆಗಳು ಕೆಲಸಮಾಡಿ ಇನ್ನೊಂದು ಗಂಟೆ ಬಿಟ್ಟು ಮುಂದಿನ ದಿನದ ಕಾರ್ಯಕ್ರಮ ಆರಂಭಿಸಬೇಕಾಗಿತ್ತು.
ಯಾರೋ ಒಬ್ಬರು ಕಷ್ಟ ಪಟ್ಟು, ಆ ಕಾಲದಲ್ಲಿ ನಾನು ಮಾಡಿದ ಭಾಷಣಗಳನ್ನು ಸುಮಾರು ಒಂದು ಕೋಟಿ ಜನ ಕೇಳಿದರು ಎಂದು ಲೆಕ್ಕ ಹಾಕಿದ್ದರು ; ಇನ್ನೂ ಎಷ್ಟೋ ದಶಲಕ್ಷ ಜನರು ನನ್ನ ಪ್ರವಾಸದಲ್ಲಿ ಹೇಗೋ ನನ್ನ ಪರಿಚಯ ಪಡೆದರು. ದೊಡ್ಡ ದೊಡ್ಡ ಸಭೆಗಳಲ್ಲಿ ಒಂದು ಲಕ್ಷಜನ ಇರುತ್ತಿದ್ದರು ; ಇಪ್ಪತ್ತು ಸಾವಿರ ಜನರ ಸಭೆ ಸರ್ವಸಾಮಾನ್ಯವಾಗಿತ್ತು. ಎಷ್ಟೋ ಊರುಗಳ ಮಧ್ಯೆ ಹಾಯ್ದು ಹೋಗುತ್ತಿದ್ದಾಗ ಊರುಬಿಟ್ಟ೦ತೆ ಅ೦ಗಡಿ ಬಾಗಿಲು ಹಾಕಿದ್ದು ಕಾಣುತ್ತಿತ್ತು. ಕಾರಣ ಕೇಳಿದರೆ, ಊರಿನ ಜನರೆಲ್ಲ, ಗಂಡಸರು, ಹೆಂಗಸರು, ಹುಡುಗರು ಎಲ್ಲರೂ ಊರಿನ ಆಚೆ ಸಭೆ ಸೇರುವ ಸ್ಥಳದಲ್ಲಿ ನಾನು ಬರುವುದನ್ನೆ ಕಾದಿದ್ದಾರೆ ಎಂದು ಹೇಳುತ್ತಿದ್ದರು.
ನಾನು ಕಾಹಿಲೆ ಬೀಳದೆ ಈ ಅಸಾಧ್ಯ ದೇಹಶ್ರಮವನ್ನು ಸಹಿಸಲು ಹೇಗೆ ಶಕ್ತನಾದೆ ಎಂದು ಊಹಿಸಲಾರೆ. ಕ್ರಮೇಣ ನನ್ನ ದೇಹ ಪ್ರಕೃತಿಯೇ ಈ ಬಗೆಯ ಅಲೆದಾಟದ ಜೀವನಕ್ಕೆ ಹೊಂದಿಕೊಂಡಂತೆ ಕಾಣುತ್ತದೆ. ಎರಡು ಸಭೆಗಳ ಮಧ್ಯೆ ಅರ್ಧಗಂಟೆ ಮೋಟಾರಿನಲ್ಲಿಯೇ ನಿದ್ರೆ ಮಾಡಿ ಬಿಡುತ್ತಿದ್ದೆ; ಏಳುವುದಕ್ಕೆ ಕಷ್ಟವಾಗುತ್ತಿತ್ತು. ಆದರೆ ಏಳಬೇಕಾಗಿತ್ತು. ಹರ್ಷೋದ್ಧಾರಮಾಡುವ ಜನರ ದೃಶ್ಯ ನನ್ನನ್ನು ನಿದ್ರೆಯಿಂದ ಎಚ್ಚರಿಸುತ್ತ ಇತ್ತು. ಆಹಾರವನ್ನು ಬಹಳ ಕಡಿಮೆಮಾಡಿದೆ. ರಾತ್ರಿಯಂತೂ ಊಟವನ್ನೇ ಬಿಟ್ಟು ಬಿಡುತ್ತಿದ್ದೆ. ಆದರೆ ನನ್ನ ಈ ಅದ್ಭುತ ಶಕ್ತಿಗೆ ಜೀವನೋತ್ಸಾಹಕ್ಕೆ ಕಾರಣ ನಾನು ಎಲ್ಲಿಯೇ ಇರಲಿ ನನ್ನ ಸುತ್ತಲೂ ಹೊರಸೂಸುತ್ತಿದ್ದ ಪ್ರೇಮ ಮತ್ತು ಉತ್ಸಾಹ. ನನಗೆ ಇದು ಅಭ್ಯಾಸವಾಗಿತ್ತು, ಆದರೆ ಒಂದು ಪದ್ದತಿಯಾಗಲಿಲ್ಲ, ಏಕೆಂದರೆ ನಿತ್ಯವೂ ಹೊಸ ಹೊಸ ಅನುಭವವಾಗುತ್ತಿತ್ತು.
೮. ಸಾರ್ವತ್ರಿಕ ಚುನಾವಣೆಗಳು
ಭಾರತದಲ್ಲಿ ಬರಲಿದ್ದ ಚುನಾವಣೆಗಾಗಿಯೇ ನನ್ನ ಪ್ರವಾಸ ಏರ್ಪಾಟಾಗಿತ್ತು. ಆದರೆ ಸಾಮಾನ್ಯವಾಗಿ ಚುನಾವಣೆಗಳಲ್ಲಿ ನಡೆಯುವ ಅನೀತಿ ಮತ್ತು ಕುಯುಕ್ತಿಗಳು ನನಗೆ ಸರಿಬೀಳಲಿಲ್ಲ. ಪ್ರಜಾಸತ್ತೆಯಲ್ಲಿ ಚುನಾವಣೆಗಳು ಇರಲೇಬೇಕು ಮತ್ತು ಅದು ಅನಿವಾಯ್ಯ, ಆದರೆ ಅನೇಕವೇಳೆ ಚುನಾವಣೆಗಳಲ್ಲಿ ಮಾನವನ ಪಾಶವೀ ವೃತ್ತಿಯೇ ಎದ್ದು ಕಾಣುತ್ತಿತ್ತು ಮತ್ತು ಯೋಗ್ಯರಿಗೆ ಸೋಲಾಗುತ್ತಿತ್ತು. ಸೂಕ್ಷ್ಮಬುದ್ದಿ ಯವರಿಗೆ, ಸಮಯ ಕಾದು ಒರಟು ದಬಾವಣೆಯಿಂದ ಮುನ್ನುಗ್ಗಲು