________________
ಹಿಮಖಾನ ಗಾರದಿ ಎಂಬ ಸರದಾರನು ತನ್ನ ತೋಫ ಖಾನೆಯೊಡನೆ ಇದ್ದನು. ಬಾಜಾರ ಬುನುಗಿನವರ ಮೇಲೆ ದಮಾಜಿ ಗಾಯಕವಾಡನು ನೇಮಿಸಲ್ಪಟ್ಟನು. ಸೈನ್ಯವು ಆದಷ್ಟು ಬೇಗನೆ ಕುಂಜಪುರವನ್ನು ಮುಟ್ಟಬೇಕಾದ್ದರಿ೦ದ ಮಾರ್ಗ ದಲ್ಲಿ ಎಲ್ಲಿಯೂ ದಿನಗಳೆಯಲಿಕ್ಕೆ ಆಸ್ಪದವಿದ್ದಿಲ್ಲ; ೩|೪ ದಿನಗಳಲ್ಲಿ ಸಿಂಧೆ ಹೋಳಕರರು ಕುಂಜವುರವನ್ನು ಮುಟ್ಟಿದರು: ಹೀಗೆ ಅಕಸ್ಮಾತ್ತಾಗಿ ಮರಾ ಟರ ದಂಡು ಬಂದು ತಮ್ಮನ್ನು ಮುತ್ತಿದ್ದನ್ನು ನೋಡಿ ಕುಂಜವುರದೊಳಗಿನ ಅಫಗಾನರು ಗಾಬರಿಯಾದರು. ಅವರು ಗುಪ್ತಚಾರರ ಮುಖಾಂತರವಾಗಿ ಆಬ್ದಾ ಲಿಗೆ ಈ ಸುದ್ದಿಯನ್ನು ಹಚ್ಚಿದರು. ಕೂಡಲೆ ಅಬ್ದಾಲಿಯು ತನ ದಂಡನ್ನು ಸಾವರಿಸಿಕೊಂಡು ಕುಂಜಪುರದ ಕಡೆಗೆ ಹೊರಟನು. ಅವನು ಕುಂಜಪುರದ ಪಠಾಣರಿಗೆ ಬರೆದ ಪತ್ರವು ಕರ್ಮ ಧರ್ಮ-ಸಂಯೋಗದಿಂದ ಮರಾಟರ ಕೈಗೆ ಸಿಕ್ಕಿತು; ಅದರಲ್ಲಿ ಆಬ್ದಾಲಿಯು ಕುಂಜಪುರದವರಿಗೆ ಅಭಯವನ್ನು ಕೊಟ್ಟು ತನ್ನ, ದಂಡು ಇನ್ನು ಎರಡೇದಿನಗಳಲ್ಲಿ ನಿಮ್ಮ ಸಹಾಯಕ್ಕೆ ಬರುವದೆಂದು ಉಲ್ಲೇಖಿಸಿದ್ದನು. ಈ ಸಂಗತಿಯು ಭಾವೂಸಾಹೇಬನಿಗೆ ತಿಳಿಯಲು ಅವನು ಅಬ್ಬಾ ಲಿಯು ಬರುವಷ್ಟರಲ್ಲಿ ಕೋಟಿಯನ್ನು ತಕೊಳ್ಳಬೇಕೆಂದು ಸೈನಿಕರಿಗೆ ಅಪ್ಪಣೆಯನ್ನು ಮಾಡಿದನು. ಅಬದುಲ್ ಸಮದಖಾನ ಹಾಗು ಕುತುಬಶಹಾ ಅವರಿಬ್ಬರಿಗೆ ಎಲ್ಲಿಯ ತಪ್ಪಿಸಿಕೊಂಡು ಹೋಗಲಿಕ್ಕೆ ಸಹ ಮಾರ್ಗವಿಲ್ಲದಾಯಿತು. ಅವರು ತಮ್ಮ ಗುಪ್ತಹೇರನ ಮುಖಾಂತರವಾಗಿ ತಿಳಿದ ಸುದ್ದಿಯಿಂದ ಒಂದೆರಡು ದಿನಗಳನ್ನುಹ್ಯಗಾದರೂ ಕಳೆಯಬೇಕೆಂದು ಪ್ರಯತ್ನಮಾಡಿದರು. ಆದರೆ ಆದುಸಿದ್ದಿಗೆ ಹೋಗಲಿಲ್ಲ.
ಹೀಗೆ ಮರಾಟರ ದಂಡಿನಲ್ಲಿ ಸೇರಿ ಅಫಗಾನ ಗುಪ್ತಹೇರನ ಕೆಲಸವನ್ನು ಮಾಡುವ ಮಹಾನೀಚನು ಯಾರೆಂದು ವಾಚಕರು ವಿಚಾರಮಾಡ ಬಹುದು; ಆತ ನೇನು ವಾಚಕರಿಗೆ ಅಪರಿಚಿತನಲ್ಲ; ಭೇಲಶಾದ ತ್ರ್ಯಂಬಕ ಶಾಸ್ತ್ರೀಯ ಭಾವೂ ಸಾಹೇಬನ ಸಂಗಡ ಇದ್ದನಷ್ಟೇ; ಆ ಪುಣ್ಯವಂತನೇ ಭಾವೂಸಾಹೇಬನಿಗೆ ಮಂಕು ಬೊದಿಯನ್ನು ಹಚ್ಚಿ ಅಫಗಾನರನ್ನು ಉಳಿಸಬೇಕೆಂದು ಸಾಹಸಮಾಡಿದನು. ಆದರೆ ಅದು ಯಾಕೋ ಸಿದ್ಧಿಗೆಮುಟಲಿಲ್ಲ. ಭಾವೂಸಾಹೇಬನು ತ್ರ್ಯಂಬಕ ಶಾಸ್ತ್ರಿಯ ಕಾರಸ್ಥಾನವನ್ನು ಕಂಡು ಹಿಡಿದಿದ್ದರೂ ಅವನ ಜ್ಯೋತಿಷಜ್ಞಾನಕ್ಕೆ ಮೆಚ್ಚಿ ಪುನಃ ಪುನಃ ಅವನ ಮೇಲೆ ವಿಶ್ವಾಸವಿಡುತ್ತಿದ್ದನು. ಈ ವಿಶ್ವಾಸವೇ ಮುಂದೆ ಮರಾಟರ ಅವನತಿಗೆ ಕಾರಣವಾಯಿತು. ಇಬ್ರಾಹಿಮಖಾನ ಗಾರದಿಯು ತ್ರ್ಯಂಬಕ ಶಾಸ್ತ್ರಿಯ ಮುಹೂರ್ತವನ್ನು ಲೆಕ್ಕಿಸದೆ ಕೋಟೆ