೧೦ ಕರ್ಣಾಟಕ ಕಾವ್ಯಕಲಾನಿಧಿ ಚರಣಯುಗಳದ ನೇವುರಂಗಳ | ಕರದ ಕಂಕಣ ತೋಳ ಬಳೆಗಳ | ಬೆರಳ ಮುದ್ರಿಕೆ ಹಾರಪದಕದ ರತ್ನ ದೋಲೆಗಳ || ಶಿರದ ಸೀಸಕ ಮೂಗುತಿಯ ಹೊಸ | ಪರಿಯ ವೇಷವ ಧರಿಸಿದಂದದಿ | ತರುಣಿಯರು ಸುಳಿದಾಡುತಿರ್ದರು ಕೇರಿಕೇರಿಯಲಿ ||೩೨|| ಅಂದಣದ ಕರಿ ತುರಗ ರಥಗಳ | ಸಂದಣಿಯ ಕಾಲಾಳ ಸುಭಟರ | ಗೊಂದಣದ ಶುಭಕರದ ಮಂಗಳವಾದ್ಯರಭ ಗಳ || ಮಂದಿ ನೆರೆದಿಹ ವೀಧಿ ವೀಧಿಯೊ || ಳಂದ ಮಿಗೆ ಬರಬರಲು ಮೋದದಿ | ಮುಂದೆ ಕಂಡನು ಕಂಕಣಾದೇವಿಯರ ದೇಗುಲವ ||೩೩|| ಹೊಳೆವ ಮಣಿಮಾಡಗಳ ಚಿತ್ರಾ | ವಳಿಯ ಭಿತ್ತಿಯ ಭದ್ರಮಂಟಪ | ಕಳಸ ಕನ್ನಡಿ ತೋರಣಂಗಳ ಗುಡಿಗಳೊಗ್ಗಿನಲಿ || ಬಳಸಿ ನೋಡಲು ನವಿಲ ಕೊರಳಿನ | ಹಲವು ವರಗಳ ಕೊಡುವೆ ಬಾರೆಂ | ದೊಲಿದು ಕರೆವಂದದಲಿ ಪಾರ್ವರ ನಿಕರವೊಪ್ಪಿದುದು ||೩೪|| ಬಳಸಿ ಬೆಳೆದಿಹ ತೋಟದೊಳು ಸುಮ | ಫಲಗಳಿಂದಿಹ ಭೂರಿ ಭೋರುಹ | ದುಲಿವ ಖಗಸಂಕುಳದ ಹಗೆಯು ದಿಹ ಮೃಗಾವಳಿಯ || ನಳಿನ ಕುಮುದೋತ್ಕರದ ಕೊಳಗಳ | ಒಳದ ತಂಗಾಳಿಗಳ ತಂಪಿನ | ಸು* ಯುಎಂಪಿನ ಪರಿಮಳದ ಪೂರದಲಿ ರಂಜಿಸಿತು ||೩೫|| ಆಮಹಾದೇವಿಯರ ಮುಂಗಡೆ | ಕಾಮಿತವ ಬಯಸಿರ್ಪದಸುರ | ಸ್ತೋಮ ಹರಕೆಯನಿತ್ತು ವರಗಳ ಪಡೆದು ಮರಳುವರ ||
ಪುಟ:ಮಹಿರಾವಣನ ಕಾಳಗ.djvu/೨೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.