ಈ ಪುಟವನ್ನು ಪರಿಶೀಲಿಸಲಾಗಿಲ್ಲ.

) ಮೈರಾವಣನ ಕಾಳೆಗೆ ಭೀಮವಿಕ್ರಮದೈತ್ಯರನು ಕಂ | ಡಾಮಹೋತ್ಸವದಿಂದೆ ಬರೆ ಬರೆ | ತಾಮಸದ ಕರ್ಕಶದ ಬಹುರೌದ್ರವನ್ನು ನೋಡಿದನು || ೩೬ ಪಿಡಿದ ಕಂಕರಿಕೆಗಳ ನೊಸಲಲಿ | ತೊಡೆದ ಕುಂಕುಮ ಗಂಧ ಕವಡೆಯ | ನಿಡು ಸರದ ಸೊಂಪಡಿಯ ಶಂಖದ ಮಣಿಯ ಭೂಷಣದ || - ಬಿಡದೆ ಬೀಸುವ ನವಿಲ ಚಾಮರ | ದಡಿಕೆಗಳ ಬಿಟ್ಟೋಲೆ ರಾಗಟೆ | ಗೆಡೆದ ಭೋರೆಂದೆಂಬ ನಿಡುನೆನವಿಗಳನೀಕ್ಷಿಸಿದ ||೩೭|| ಅರಿದ ಕೋರೆಯ ತಲೆಯ ರಾಸಿಯ || ಮುರಿದ ನವಿಲಿನ ಕೊರಲ ಒಂಬ? | ತರಿದ ಕುಸಿಯೊಟ್ಟಲಿನ ಬಂಡಿಗೆ ಬಿದ್ದ ಹೋತುಗಳ | ತರಿದ ಕೋಣನ ಹಿಂಡುಗಳನು | ಮೆರೆವ ಕೂಸಿನ ಬಲಿಯ ರಾಸಿಯ | ಹಿರಿಯ ಮದ್ಯದ ಘಟಗಳನ್ನು ನೋಡುತ್ತ ನಡೆತಂದ ||೩೮|| ಕೊಂಡದೋಕುಳಿಯಾಡುವರನುರಿ | ಗೆಂಡದೊಳು ಹೊರಟವರ ಮಿಗೆ ತರಿ | ಗೆಂಡದೊಳು ಮೂಾಯುವರನುರಿಯೊಳು ಹೊಕ್ಕು ಹೋಯಿಡುವರ|| ಕಂಡಗಳ ಕೊಯ್ಲಿಡುವ ಕರುಳಿನ | ದಂಡೆಗಳ ತಿಗೆತೆಗೆದು ಮುಡಿಸುವ | ಗಂಡುಗಲಿ ದಾನವರ ನೆರವಿಯ ನೋಡುತೈತಂದ ||೩೯|| ನೆತ್ತಿಗಳ ಕೊರೆಕೊರೆದು ಕರುಳಿನ | ಬತ್ತಿಗಳ ಹೊಸೆದಿಕ್ಕಿ ದೀಪವ || ಹೊತ್ತಿಸುವ ಹರಕೆಗಳವರು ಕೆಲರು ನಾಲಗೆಯ | ಕತ್ತರಿಸಿ ತೆಗೆವ ಕರುಳನು | ಕಿತ್ತು ಗುಡಿಗಳ ಕಟ್ಟಿ ಕುಣಿಯುತೆ | ಸುತ್ತಿ ಬಹ ದೈತ್ಯರ ಸಮೂಹವ ನೋಡುತೈದಿದನು 11೪೦||