೧೮ ಕರ್ಣಾಟಕ ಕಾವ್ಯಕಲಾನಿಧಿ ತನ್ನನುಜೆ ದುರುದುಂಡಿಸುತವ ! ನೆನ್ನಳಿಯ ನವನೀಲವರ್ಣನು || ಉನ್ನತದ ತೇಜದಲಿ ಸಲಹಿದೆನತಿಪರಾಕ್ರಮಿಯ || ಎನ್ನ ಲಾಮಾತಿನಲಿ ರಾವಣ || ತನ್ನ ತಮ್ಮ ವಿಭೀಷಣನವೋ | ಲಿನ್ನು ನಿನಗಿವ ಮಾಡಲುಳ್ಳವನೆನುತೆ ನಸುನಕ್ಕ ||೬೯ ಎನಲು ಮೈರಾವಣನು ತನ್ನ ಯ | ಮನದೊಳಗೆ ದಶಕಂಠ ಹೇಳಿದ | ಘನತರದ ನೀತಿಯನ್ನು ನಿಶ್ಚಯಿಸಿದನು ತತ್‌ಕ್ಷಣದೆ | ಜನಿಸಿದುದು ವೈರಾಗ್ನಿಯಿನ್ನಿ || ದನುಜಪತಿಯ್ಕೆ ತಂದ ಕಾರಿಯ || ದನುವ ಕೇಳುವೆನೆಂದು ವಿನಯದಿ ನುಡಿಸಿದನು ಖಳನ ||೭o! ಬಿತ್ತರಿಸು ದಶಕಂಠ ಬರವಿನ | ತತ್ರ ಕಾರ್ಯವದೇನನಿತ್ತ ಸೆ | ನುತ್ತಮವಿದ್ಯೆ ಸಲೆ ಮಹಾಪ್ರಿಯತಮರ ದರುಶನವು || ಹೊತ್ತುಗಳೆಯದೆ ಹೇಟನಲು ತಲೆ | ಗುತ್ತಿ ರಾವಣ ನುಡಿಯೆ ತನ್ನ ಯ || 'ಕತ್ತಿಗೊಡ್ಡಿದ ಕದನದಿರವನು ಹೇಳಲೇನೆಂದ ||೭|| ಸೀತೆಯೆಂಬಳ ಕಂಡು ನಾ ಮನ || ಸೋತು ಸೆಂತೆಯನು ತಂದೆ ಕಪಟದೊ | ಳಾತಳೋದರಿಯರಸ ರಾಮನೆನಿಪ್ಪ ಭೂವರನು || ಕಾತರಿಸಿ ತನ್ನ ನುಜ ವಾನರ | ಯಧ ಸಹಿತೈ ತಂದು ಶರಧಿಗೆ | ಸೇತುವನು ಕಟ್ಟಿದನು ಮುತ್ತಿದನೇನ ಹೇಳುವೆನು ||೭೨|| ಕಾಳೆಗದೆ ಖಯಬೋಡಿಯಿಲ್ಲದೆ || ಕಾಳರಾಕ್ಷಸಸೇನೆ ಸಹಿತವೆ | ಹೇಳಲೇನೆನ್ನ ನುಜತನುಜರು ಬಿದ್ದರಗಣಿತವು ||
ಪುಟ:ಮಹಿರಾವಣನ ಕಾಳಗ.djvu/೩೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.