ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೈರಾವಣನ ಕಾಳಗ ತಾಳುವವರಿಲ್ಲ ಒವರವ | ಮೇಳವಿಸುತೆನ್ನಾ ಳು ಸಹಿತವೆ || ಕೇಳು ಮೈರಾವಣನೆ ರಣವೃತ್ತಾಂತದೊಂದಿರವ ||೭೩|| ಇಂದು ಪರಿಯಂತದಲಿ ತನ್ನ ಯ | ನಂದನರು ಸಹ ತನ್ನ ಬಾಂಧವ | ವೃಂದ ಸೇನಾನಿಕರವೆಲ್ಲವು ರಾಮನೊಳು ಹಳಚಿ || ಹೊಂದಿಹೋಯಿತು ರಣದೊಳಗೆ ಖಳ | ಮಂದಿನರೆ ತಾನುಟಿಯೆ ಕೇಳ್ಳೆ | ಮುಂದೆ ನೀನೇ ಬಲ್ಲೆಯೆಂದನು ಮಿಡಿದು ಕಂಬನಿಯ ||೭೪ಲ್ಲಿ ಕೇಳಿ ಮೈರಾವಣನು ನುಡಿದನು | ಕಾಳುಮಾಡಿದೆ ರಾಜಕಾರ್ಯವ | ನಾಳು ಬೀದ ಮುನ್ನ ನೀ ಬಂದೆನಗೆ ಸೂಚಿಸದೆ || ಜಾಳು ಮಾಡಿದೆ ಬಲವ ಹಿಂದಣ | ಸೋಲವನು ನೆನೆದೇನು ಫಲ ದಿವಿ | ಚಾಳಿ ನಗುವಂತಾಯ್ಕೆನುತ ತಲೆದೂಗಿದನು ದನುಜ ||೭೫|| ಪರಸತಿಯ ಕದ್ದುಮೃ ದೋಷದೆ | ಧುರದ ಜಯಸಿರಿ ಹಿಂಗಿದಳು ಶಂ | ಕರನು ನಿನಗಿದಿರಿಲ್ಲ ಕೆಡಿಸಿದೆ ರಾಜಕಾರಿಯವ || ಗೆಲವು ಮುಂದೆಲ್ಲಿಯದು ತನ್ನ ನು || ತಿಳುಹಿ ಬುದ್ದಿಯ ಪೇಟತೆನುತೆ ಕಥೆ | ಹೊಲಬುದೊಂದು ಬುದ್ದಿ ಕಾಮುಕಗೆಂದನಸುರೇಂದ್ರ ||೭|| ಹಿಂದಣವಗುಣಗಳನ್ನು ನೆನೆದರೆ | ಚೆಂದವಲ್ಲ ದು ನಿಲಲಿ ಕೊರಳಿಗೆ | ಬಂದ ವೇಳೆಯನಿದು ಮಾಟ್ಟುದು ನಯವwಯೆ ತಿಳಿದು || ಇಂದು ಸೀತೆಯನಿತ್ತು ರಾಮನ | ಸಂಧಿಯನು ಮಾಡಿದಡೆ ಬದುಕುವೆ || ಯಿಂದು ನಾನಿದ ನುಡಿಯಲಾಗದು ತುದಿಗೆ ಹಿತವೆಂದ |೭೭||