ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧ | ಮೈರಾವಣನ ಕಾಳೆಗ. ಮುನಿದು ಕೊಡಲಿಯ ಕಾವು ವಂಶದ | ವನವ ಕಡಿವಂತಾಯ್ತು ಮುನ್ನ ವೆ || ಮನಕೆ ಬಂದೊಡೆ ಮೇಘವರ್ಣಗೆ ಹರಿವ ನೆನೆಯೆಂದ ||೨|| ಎಂದು ಬುದ್ಧಿಯ ಹೇcತೆ ದಶಶಿರ | ನಂದು ಮೈರಾವಣನು ಕಳುಹಲು | ಒಂದು ಮುನ್ನಿನ ಪಥವ ಹಿಡಿದಾರಾಜಮಂದಿರಕೆ || ಅಂದಿನಾವೃತ್ತಾಂತವನು ಸಾ | ನಂದದಿಂ ಸತಿಗಳುಹೆ ದಿನಕರ | ಬಂದನು ದಯಾಚಲದ ಸುಂದರಸಿಂಹಪಿಷ್ಟರಕೆ |೮೩|| ಅರಳಿದುವು ಕಮಲಗಳು, ಮೋರೆಯ | ಮುರುಹಿದುವು ಕುಮುದಗಳು, ತಾರಕೆ | ತೆರಳಿದುವ ಗಗನದಲಿ ಹರೆದುವು ತಿಮಿರ ದೆಸೆದೆಸೆಗೆ || ಚರಿಸಿದುವು ಚಕ್ರಾಂಕವಗಲಕೆ | ಹರಿಯ ರವಿಕಿರಣಗಳು ರಘುಪತಿ | ಹರುಷದಲಿ ಮೊಗದೋಕಿ ನಿಜಭಕ್ತರಿಗೆ ಕರುಣದಲಿ ||೪|| ಅಂತು ಸಂಧಿ ೨ ಕ್ಯಂ ಪದ ೯೧ ಕ್ಯಂ ಮಂಗಳಂ - -- ಮೂನೆಯ ಸಂಧಿ. ಸೂಚನೆದೇವ ರಾಘವ ಲಕ್ಷ್ಮಣರ ಮೈ ! ರಾವಣನು ಕದ್ದೊ ಯೆ ವಿಭೀಷಣ | ದೇವ ಸೂಚಿಸೆ ಪೋದನಾತನ ಪುರಿಗೆ ಕಲಿ ಹನುಮ || ತರುಣ ಕೇಳ್ಮೆ ಬಂದು ರಾವಣ | ಹರುಷದಿಂದೋಲಗವನಿತ್ತನು | ಕರೆಸಿದನು ಮೆಝಾವಲಿನ ಬಹುದನುಜನಾಯಕರ ||