ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭. ಮೈರಾವಣನ ಕಾಳಗ ಹೊಳೆವ ಮುಖ ತಳತಳಿಪ ಕಾಯದ | ಯೆಳೆಯ ತುಲಸಿಯ ದಂಡೆ ದ್ವಾದಶ ! ಚೆಲುವ ನಾಮದ ಕಾಂತಿ ಕರುವಿಟ್ಟೆ ಕದಂದದಲಿ | ನಳಿನನಾಭನ ಶರಣರೂಪನು | ತಳೆದು ನಿಶ್ಚಲಭಕ್ತನಂತಾ | ಒಳರುಹಾಕ್ಷನ ನಾಮವನ್ನು ನೆನೆಯುತ್ತಲೈ ತಂದ ||೨೪!! ಕೇಳಿದನು ಹನುಮಂತನಾವನೋ | ಪಾಳೆಯದ ಹೊಏವಳಯದೊಳು ಬಹ | ಖಳನವನನು ಸೀತೆ, ಬರಲೆಂದೆನುತ ಗರ್ಜಿಸಲು | ಮೇಲುವಾಯದ ಮುನ್ನ ನುಡಿದನು | ಶ್ರೀಲತಾಂಗಿಯ ರಮಣ ರಘುಪತಿ | ಯಾಳು ನಾನೆ ವಿಭೀಷಣನೆನುತ್ತೆಯ್ಲಿ ಕೆಯ್ಯುಗಿದ ೨೫|| ದಿಬ್ಬನಹ ಹನುಮಂತ ನುಡಿದನು | ಸೃಷ್ಟಿಸುವ ಶ್ರೀರಾಮಚಂದ್ರನ || ಬಿಟ್ಟು ಬಂದೀಪಾಳೆಯವ ಹೊಗಬಹುದೆ ನೀನೆನಲು || ನಟ್ಟಿರುಳು ರಕ್ಕಸರು ಮಾಯವ | ಸೃಷ್ಟಿಸುತ ಕಗ್ಗೂಲೆಗೆ ಬಹರಂ | ದಟ್ಟಿಸುತಲಿಹೆನೆಂದನಾಮಾಯಾವಿಗಳು ಬರಲು ||೨೬|| ಆವಿಗಡ ಮಾಯಾವಿಭೀಷಣ | ತೀವಿ ರಚಿಸಿದ ಬಾಗಿಲನು ಸಂ | ಭಾವಿಸುತಲೊಳವೊಕ್ಕು ಕಂಡನು ಬಹಳ ಪಾಳೆಯವ || ಆವ ಕಪಿಗಳೊ ಇವರೆನುತ ಮಿಗೆ | ಭಾವದೊಳಗೀಕ್ಷಿಸುತ ಮನದೊಳ | ಗಾವ ತೆತದಿಂದಿವರ ಗೆಲಲಹುದೆಂದು ಚಿಂತಿಸಿದ ||೨೭|| ಉಗ್ರ ಸುಗ್ರೀವಾಂಗದಜಸುತ | ನಿಗ್ರಹರ ನಳ ನೀಲ ಕೇಸರಿ | ಯಗ್ನಿ ಶತಬಲಿ ಸುಮಖ ದುರ್ಮುಖ ಕಲಿಸುಷೇಣಕನು ||