೨೬ ಕರ್ಣಾಟಕ ಕಾವ್ಯ ಕಲಾನಿಧಿ ಕಿಕ್ಕಿರಿದು ನುಸಿ ನುಸುಳಬಾರದು | ರಕ್ಕಸರಿಗಳವಡದು ರಾಮನ | ನೆಕ್ಕ ತುಳದಲಿ ನೆನೆಯುತಿರ್ದನು ವೀರ ಹನುಮಂತ ||೧೯|| ಬಂದು ಮೈರಾವಣನು ಕೋಟೆಯ | ನಿಂದು ನೋಡಲು ಬಾಲವತಿ ಬಲು | ಹಿಂದೆ ಬಳೆದುದು ನಭಕೆ ರವಿಶಶಿಮಂಡಲವ ತುಡುಕಿ | ನಂದಿವಾಹನನಂತೆ ಮೆರೆದನು ಚಂದ್ರ... - ಮನಕೋಟೆಯೆನಿಸಿರೆ | ಮಂದರಗೊಳಿಹ ವೀರಹನುಮನ ಕಂಡು ಬೆ “ಗಾದ ||೨೦|| ಲೋಕ ಮಹಿರೊಳೊಬ್ಬನೇ ತಾ | ನೇಕಮಯಶಿವನೆಂದು ತಾನೇ | ಯಾಕಪಟದಿಂದೊಲಿದು ಹನುಮನ ನಾಮವನ್ನು ಧರಿಸಿ || ಭೀಕರವ ತಾಳಿದನೊ ಭೂಮಿಯ || ಕಾಕುವೈತ್ಯರ ಬಾಧೆಗೋಸುಗ | ಲೋಕಕಂಟಕಶಿಕ್ಷ ಕನೋ ಇವನೆನುತ ಕೊಗಿ ದನು |೨೧|| ಒಳಹೊಗುವೆ ನಾನೆಂತು ಕಟಕವ | ಒಳಸಿ ನೋಡಿದೊಡೆಲ್ಲಿಯೆಲ್ಲಿಯು | ನಿಲುಕಲಸದಳವಿದು ಹರಿಹ ದಿದೇವರಿಗೆ || ಉಲುಕಬಾರದು ನುಸುಳು ವೊಡೆ ಮೇ | ಹೈಗೆ ಕಾಣೆನು ಪಥವನೆನುತಾ | ಖಳನು ಚಿಂತಿಸಿ ನೋಡಿದನು ಪಾಳೆಯದ ಹೊಗವಣೆಯ!|೨೨|| ಒಲುಮೆಯಿಂದಲಿ ಹೊಗುವ ಠಾವವು | ಗಳಿಗೆ ನೂಕದು ಮಾಯೆಯಿಂದವೆ || ಗೆಲಲು ಬೇಹುದು ಮಂತ್ರವಿದು ತಾನೆನುತ ನಿಶ್ಚಯಿಸಿ || ಖಳನು ತಾ ತಾಳಿದ ವಿಭೀಷಣ | ನೊಲಿದು ತೊಟ್ಟಿಹ ರೂಪ ಧರಿಸಿಯೆ | . ಗೆಲುವನಿವದಿರನೆಂದು ನೆನೆದನು ತನ್ನ ಮನದೊಳಗೆ || ೨೩|
ಪುಟ:ಮಹಿರಾವಣನ ಕಾಳಗ.djvu/೩೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.