ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪೀಠಿಕೆ ಈ ಗ್ರಂಥವನ್ನು ಬರೆದವನು ನರಹುಯೆಂದೂ ಈತನ ಗುರುವು ವಿದ್ಯಾ ಶಂಕರೋತ್ತಮನೆಂದೂ ಪೀಠಿಕಾಸಂಧಿಯಿಂದ ತಿಳಿಯಬರುತ್ತದೆ. ಕವಿಯು ತಾನು 6 ಬುಧವಂಶಜನು ಎಂದು ಹೇಳಿಕೊಂಡಿರುವುದರಿಂದ ಬ್ರಾಹ್ಮಣನಾಗಿಯೂ, ತನ್ನ ಗುರುವಿಗೆ “ ಪರಮಹಂಸ' ಎಂಬ ವಿಶೇಷಣವನ್ನು ಕೊಟ್ಟಿರುವುದರಿಂದ ಆ ಗುರುವು ಸನ್ಯಾಸಿಯಾಗಿ, “ ತೊರವೆಯ ಹರಿ ' * ತೊರವೆಯ ರಾಯ ರಘು ನಾಥ' ಎಂಬುದಾಗಿ ರಾಮಚಂದ್ರನಿಗೆ ವಿಶೇಷಿಸಿ ಹೇಳಿರುವುದರಿಂದ ಈತನು ಹುಟ್ಟಿದ ಸ್ಥಳವು ಸೋಲಾಪರ ಡಿಸ್ಟಿಕ್ಕಿನಲ್ಲಿರುವ ತೊರವೆಯೆಂಬ ಗ್ರಾಮವಾ ಗಿಯ, ಆವೂರಿನ ದೇವರು ಅವನ ಇಷ್ಟದೈವವಾಗಿಯೂ ಇರಬೇಕು. ಇಷ್ಟೇ ಈಗ್ರಂಥದಿಂದ ಕವಿಯ ವಿಷಯವಾಗಿ ತಿಳಿಯಬರುವುದು. ತೊರವೆ ರಾಮಾಯಣವನ್ನು ಬರೆದ ಕುಮಾರವಾಲ್ಮೀಕಿಯೇ ಈ ಮೈರಾವಣನ ಕಾಳೆಗವನ್ನೂ ಬರೆದನು ಎಂದು ಪ್ರವಾದವಿದೆ. ಈಪ್ರವಾದವು ಆಧಾರವಿಲ್ಲದೆ ಹುಟ್ಟಿರಲಾರದೆಂದು ಹೇಳಬಹುದು. ತೊರವೆಯ ರಾಮಾಯಣದಲ್ಲಿ ಮೊದಲು ತ್ರಿಮೂರ್ತಿಗಳನ್ನು ಸ್ತುತಿಸಿರುವಂತೆ ಈಗ್ರಂಥದಲ್ಲಿಯ ತ್ರಿಮೂರ್ತಿಗ ಳನ್ನು ಸ್ತುತಿಸಿರುವನು. ತೊರವೆಯ ರಾಮಾಯಣದಲ್ಲಿ ರಾಮನಾಮಕ್ಕೆ ಪ್ರತಿ ಯಾಗಿ ತನ್ನ ಇಷ್ಟದೈವವಾದ ತೊರವೆಯಧಿನಾಥನ ಹೆಸರನ್ನು ಹೇಳಿರುವಂತೆ ಈ ಗ್ರಂಥದಲ್ಲಿಯ ಹೇಳಿರುವನು. ಎರಡು ಗ್ರಂಥಗಳ ಶೈಲಿಯ ಒಂದೇಮಾದರಿ ಯಾಗಿದೆ. ಕುಮಾರವಾಲ್ಮೀಕಿಯೆಂಬುದು ಬಿರುದೇ ಹೊರತು ಆತನ ಹೆಸರಲ್ಲ. ಈ ಗ್ರಂಥದ ಪೀಠಿಕಾ ಸಂಧಿಯಲ್ಲಿ - ವಿರಚಿಸಿದ ಬುಧವಂಶಜನು ನರಹರಿಯೆನಿಪನಿಳೆಯೊ ಳಗೆ ಮೈರಾವಣನ ಕಾಳೆಗವ' ಎಂದು ಹೇಳಿಕೊಂಡಿದ್ದಾನೆ. ತೊರವೆಯರಾಮಾಯಣ ಗ್ರಂಥಕರ್ತನು ಈ ನರಹರಿಯೇ ಎಂದು ಊಹಿ ಸುವದಕ್ಕೆ ಬಲುಮಟ್ಟಿಗೆ ತೊರವೆಯರಾಮಾಯಣದ ಪೀಠಿಕಾ ಸಂಧಿಯ ಹತ್ತನೆಯ ಪಜ್ಯವು ಅವಕಾಶವನ್ನು ಕೊಡುತ್ತದೆ :-