ಈ ಪುಟವನ್ನು ಪರಿಶೀಲಿಸಲಾಗಿಲ್ಲ.

2 M ಚಾರು ತರ ಕರ್ಣಾಟಕದ || ಸ್ವಾರ ರಾಮಾಯಣಕೆ ಕರ್ತೃ ಕು | ಮಾರ ವಾಲ್ಮೀಕಿಯ ಕಥಾ ಪತಿ ತೊರವೆಯಧಿನಾಥ || ವೀರನರಹರಿಯೆನಲು ಮೆಟ್ಟಿದ || ರಾರು | (ಸಂಧಿ, ೧-೧೦) ಕವಿಯು ತನ್ನ ಹೆಸರೂ ತನ್ನ ಇಷ್ಟ ದೈವದ ಹೆಸರೂ ಒಂದೇ ಆಗಿರಲಾಗಿ ಅವನ್ನು ತಿಳಿಸುವುದಕ್ಕೋಸ್ಕರ • ತೊರವೆಯಧಿನಾಥ ವೀರನರಹರಿ ” ಎಂದು ಒಟ್ಟಿಗೆ ಸೇರಿಸಿ ಹೇಳಿಕೊಂಡಿರುವಂತೆ ತೋರುತ್ತದೆ. ಹೆಸರೂ ಇಷ್ಟ ದೈವದ ಹೆಸರೂ ಒಂದೇಆಗಿರುವುದರಿಂದ ತನ್ನ ಡಭಾರತವನ್ನು ರಚಿಸಿದ ನಾರಣಪ್ಪನು 1'ದುಗಿನ ವೀರ ನಾರಾಯಣ ” ಎಂಬುದರಲ್ಲಿಯ, ಜೈಮಿನಿಭಾರತವನ್ನು ಬರೆದ ಲಕ್ಷ್ಮೀಶನು * ಸುರಪುರದ ಲಕ್ಷ್ಮೀರಮಣ ” ಎಂಬುದರಲ್ಲಿಯೂ ಅವೆರಡನ್ನು ಸೂಚಿಸಿಕೊ೦ ಡಿರುವಂತೆ, ಇವನೂ ಸೂಚಿಸಿರುತ್ತಾನೆ. ತೊರವೆಯ ರಾಮಾಯಣದಲ್ಲಿ ಶರಣಜನಪರಿಪಾಲನಾನತ | ಪರಿಧಿ ನಿರುಪಮತತ್ವವಿದ್ಯಾ ಶರಧಿ ಸಲುಹೆಗೆ ನಮ್ಮ ಭಾರದ್ವಾಜ ಗುರುರಾಯ || ಎಂದೂ ಈಗ್ರಂಥದಲ್ಲಿ ಪರಮಹಂಸಪರೇಶಪಾವನ | ಚರಿತವಿದ್ಯಾಶಂಕರೋತ್ತಮ || ಗುರು ಪದಾಂಬುಜಯುಗಳಕಾಂ ನಮಿಸುವೆನು ಭಕ್ತಿಯಲಿ || ಎಂದೂ ಗುರುಸ್ತುತಿಯನ್ನು ಮಾಡಿದ್ದಾನೆ. ವಿದ್ಯಾ ಶರಧಿ, ವಿದ್ಯಾಶಂಕರ ಎಂಬುವು ವಿದ್ಯೆಯಲ್ಲಿ ಪೂರ್ಣಪಾಂಡಿತ್ಯವನ್ನು ನಿರೂಪಿಸುವ ಪಠ್ಯಾಯಪದಗಳಾಗಿದ್ದಲ್ಲಿ ಈಯೆರಡು ಸ್ತುತಿಗಳೂ ಒಬ್ಬ ಗುರುವಿನ ವಿಷಯವಾಗಿಯೇ ಇರಬಹುದು. ವಿದ್ಯಾಶಂಕರನೆಂದು ಒಂದುವೇಳೆ ಅವನ ಹೆಸರಾಗಿದ್ದರೂ ಇರಬಹುದು. ಭಾರದ್ವಾಜ ಗುರುರಾಯ ಎಂಬುದರಿಂದ ಭಾರ ದ್ವಾಜ ಗೋತ್ರದಲ್ಲಿ ಹುಟ್ಟಿದವನು ಆ ಗುರು ಎಂದು ಅರ್ಥವಾಗುತ್ತದೆ. ರಾಮಾ ಯಣದಲ್ಲಿ ನಿಯತವಾಗಿ ತೊರವೆಯ * ನರಹರಿ ' ನರಕೇಸರಿ ” “ ವೃಕಂಠೀರವ' ಎಂಬ ವಿಶೇಷಣಗಳೇ ಇಷ್ಟದೈವವನ್ನು ನಿರೂಪಿಸುತ್ತದೆ, ಮೈರಾವಣನ ಕಾಳಗ